- Home
- Entertainment
- TV Talk
- ಧಾರಾವಾಹಿಯಲ್ಲಿ ನಮ್ರತಾ ಗೌಡ ನಾಪತ್ತೆ…. TRPಯಲ್ಲಿ ನಂ 1ರಿಂದ 4ನೇ ಸ್ಥಾನಕ್ಕಿಳಿದ ‘ಕರ್ಣ’ ‘
ಧಾರಾವಾಹಿಯಲ್ಲಿ ನಮ್ರತಾ ಗೌಡ ನಾಪತ್ತೆ…. TRPಯಲ್ಲಿ ನಂ 1ರಿಂದ 4ನೇ ಸ್ಥಾನಕ್ಕಿಳಿದ ‘ಕರ್ಣ’ ‘
ಕನ್ನಡ ಕಿರುತೆರೆ ವಾಹಿನಿಗಳ TRP ಪ್ರಕಟವಾಗಿದೆ. ಈ ವರ್ಷದ 22ನೇ ವಾರದ ಟಿವಿ ಆರ್ ಡಾಟಾ ಹೊರಬಂದಿದೆ. ನಂ 1 ಸ್ಥಾನದಲ್ಲಿದ್ದ ‘ಕರ್ಣ’ಧಾರಾವಾಹಿ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಹಾಗಿದ್ರೆ ಈ ವಾರ ಟ್ವಿಸ್ಟ್ ಮತ್ತು ಟರ್ನ್ ಗಳ ಜೊತೆ ನಂ1 ಸ್ಥಾನದಲ್ಲಿರುವ ಧಾರಾವಾಹಿ ಯಾವುದು ಗೊತ್ತಾ?

ಕನ್ನಡ ಧಾರಾವಾಹಿಗಳು
ಕನ್ನಡ ಕಿರುತೆರೆಯ ಧಾರಾವಾಹಿಗಳು TRP ಕಿಂಗ್ ಆಗಲು ಸತತವಾಗಿ ಪ್ರಯತ್ನಿಸುತ್ತಲೇ ಇರುತ್ತವೆ. ಅದಕ್ಕಾಗಿ ಕಥೆಯಲ್ಲಿ ಟ್ವಿಸ್ಟ್ ಹಾಗೂ ಟರ್ನ್ ಗಳು ಬರುತ್ತಲೇ ಇರುತ್ತವೆ. ಇಲ್ಲಿವರೆಗೆ ನಂ 1 ಸ್ಥಾನದಲ್ಲಿದ್ದ ಕರ್ಣ ಧಾರಾವಾಹಿಯ TRP ಕುಸಿದಿದ್ದರೆ, ಟಾಪ್ 1 ಸ್ಥಾನಕ್ಕೆ ಏರಿರುವವರು ಯಾರು ಗೊತ್ತಾ?
ನಂ 1 ಸ್ಥಾನದಿಂದ ದಿಢೀರ್ ಕುಸಿದ ‘ಕರ್ಣ’
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಾರದ ಕಿರುತೆರೆಯ TRP ಮಾಹಿತಿ ವೈರಲ್ ಆಗುತ್ತಿದ್ದು, ಆ ಪ್ರಕಾರ ಇಲ್ಲಿವರೆಗೂ ನಂ 1 ಸ್ಥಾನದಲ್ಲಿ ಮೆರೆಯುತ್ತಿದ್ದ, ಕರುನಾಡ ಮನೆಮಗನ ಕಥೆಯಾದ ‘ಕರ್ಣ’ ಧಾರಾವಾಹಿ ಈ ವಾರ ಸಪ್ಪೆ ಪ್ರದರ್ಶನ ನೀಡಿದ್ದು, TRP ಯಲ್ಲಿ ತೀರಾ ಕುಸಿತ ಕಂಡಿದೆ.
ನಮ್ರತಾ ಗೌಡ ನಾಪತ್ತೆಯಾಗುತ್ತಿದ್ದಂತೆ ಕುಸಿದ TRP
ಇಲ್ಲಿವರೆಗೆ ನಿತ್ಯಾ, ನಿಧಿ ಹಾಗೂ ಕರ್ಣನ ನಡುವಿನ ಪ್ರೀತಿ, ತ್ಯಾಗ ಹೋರಾಟದ ಕಥೆ ನಡೆಯುತ್ತಿತ್ತು. ಆದರೆ ನಿಧಿ-ಕರ್ಣ ಮದುವೆಯ ಬಳಿಕ, ನಿತ್ಯಾ ಪಾತ್ರ ಕೊನೆಗೊಂಡಂತೆ ಕಾಣುತ್ತಿದೆ. ಕಥೆಯಲ್ಲಿ ಯಾವುದೇ ಟ್ವಿಸ್ಟ್, ಹೊಸತನ ಇಲ್ಲದ ಕಾರಣ TRP ಯಲ್ಲಿ ಒಮ್ಮಿಂದೊಮ್ಮೆಲೆ ಇಳಿಕೆ ಕಂಡಿದೆ.
TRP ಯಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿದ ಕರ್ಣ
ಕಿರಣ್ ರಾಜ್, ನಮ್ರತಾ ಗೌಡ ಮತ್ತು ಭವ್ಯಾ ಗೌಡ ಅಭಿನಯದ ಈ ಜನಪ್ರಿಯ ಧಾರಾವಾಹಿ ಕರ್ಣ, ಇದೀಗ ನಂ 1 ಸ್ಥಾನದಿಂದ ನಂ 4 ಸ್ಥಾನಕ್ಕೆ ಕುಸಿದಿದೆ. ಸೋಶಿಯಲ್ ಮೀಡಿಯಾದಲ್ಲಿ ಪ್ರೊಮೋ ಬಿಡುತ್ತಿಲ್ಲ, ಕರ್ಣ ಧಾರಾವಾಹಿಗೆ ಹೆಚ್ಚಿನ ಮಹತ್ವ ನೀಡುತ್ತಿಲ್ಲ, ಹೀಗಾಗಿಯೇ ಧಾರಾವಾಹಿಯ TRP ಕಡಿಮೆಯಾಗಿದೆ ಎಂದು ವೀಕ್ಷಕರು ದೂರುತ್ತಿದ್ದಾರೆ.
ನಂ 1 ಸ್ಥಾನದಲ್ಲಿರುವ ಧಾರಾವಾಹಿ ಯಾವುದು?
ಈ ವಾರದ TRP ಮಾಹಿತಿ ಪ್ರಕಾರ ನಂ 1 ಸ್ಥಾನದಲ್ಲಿ ಜೀ ಕನ್ನಡ ವಾಹಿನಿಯ ‘ಅಣ್ಣಯ್ಯ’ ಧಾರಾವಾಹಿ ಇದೆ. ರಶ್ಮಿ ಜೀವನದ ಟರ್ನಿಂಗ್ ಪಾಯಿಂಟ್, ರತ್ನ ಬಾಳಲ್ಲಿ ಬೆಂಕಿ, ರಾಣಿಯ ಹೊಸ ಅಧ್ಯಾಯ ಶುರುವಾಗುವ ಮೂಲಕ ಧಾರಾವಾಹಿಯಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಬಂದಿರೋದರಿಂದ ಧಾರಾವಾಹಿ ನಂ 1 ಸ್ಥಾನದಲ್ಲಿದೆ.
ಟಾಪ್ 5 ರಲ್ಲಿ ಕಲರ್ಸ್ ಕನ್ನಡದ ಧಾರಾವಾಹಿಗಳು
ಟಾಪ್ 1ರಲ್ಲಿ ಅಣ್ಣಯ್ಯ, ನಂ 2 ಸ್ಥಾನದಲ್ಲಿ ನಾಲ್ಕು ಜನ ಅಣ್ಣ ತಮ್ಮಂದಿರ ಕಥೆ ಶ್ರೀಗಂಧದ ಗುಡಿ, ಟಾಪ್ 3ರಲ್ಲಿ ಗೌರಿ ಕಲ್ಯಾಣ, ಟಾಪ್ 4 ಕರ್ಣ ಹಾಗೂ ಟಾಪ್ 5ರಲ್ಲಿ ತುಂಬು ಕುಟುಂಬದ ಕಥೆಯನ್ನು ಹೊಂದಿರುವ ನಂದಗೋಕುಲ ಧಾರಾವಾಹಿ.
ಇವು ಟಾಪ್ 10 ಧಾರಾವಾಹಿಗಳು
ಇನ್ನು ಟಾಪ್ 6ರಲ್ಲಿ ಲಕ್ಷ್ಮೀ ನಿವಾಸ ಧಾರಾವಾಹಿ, ಟಾಪ್ 7ರಲ್ಲಿ ಪವಿತ್ರ ಬಂಧನ, ನಂತರದ ಸ್ಥಾನವನ್ನು ಮುದ್ದು ಸೊಸೆ, ಬಳಿಕ ನಾನಿನ್ನ ಬಿಡಲಾರೆ ಹಾಗೂ ಟಾಪ್ 10ರಲ್ಲಿ ಆದಿ ಲಕ್ಷ್ಮಿ ಪುರಾಣ ಧಾರಾವಾಹಿಗಳು ಸ್ಥಾನ ಪಡೆದಿವೆ. ಆದರೆ ಒಂದು ಕಾಲದಲ್ಲಿ ಟಾಪ್ ನಲ್ಲಿ ಅಮೃತಧಾರೆ ಮತ್ತೆ TRP ಹೆಚ್ಚಿಸಿಕೊಳ್ಳುವಲ್ಲಿ ಎಡವಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

