ಪವಿತ್ರ ಮತ್ತು ದೇವ್ ನಡುವೆ ಶುರುವಾಗಿರುವ ಹೊಸ ಪ್ರೇಮಕತೆಯ ಸೀರಿಯಲ್ ‘ಪವಿತ್ರ ಬಂಧನ’ 4.3 TRP ಪಡೆದು 10ನೇ ಸ್ಥಾನದಲ್ಲಿದೆ.
ಅಕ್ಕ ಮದುವೆಯಾಗಬೇಕಿದ್ದ ಹುಡುಗನನ್ನು ತಂಗಿ ಮದುವೆಯಾಗಿ ಅನುಭವಿಸುತ್ತಿರುವ ಸಮಸ್ಯೆಯ ಕಥೆಯನ್ನು ಹೊಂದಿರುವ ‘ಗೌರಿ ಕಲ್ಯಾಣ’, 4.5 TRP ಪಡೆದು 9ನೇ ಸ್ಥಾನದಲ್ಲಿದೆ.
ಶರತ್ ಮತ್ತು ದುರ್ಗಾ ರೊಮ್ಯಾನ್ಸ್, ದುರ್ಗಾ ಮತ್ತು ಅಂಬಿಕಾ ಸತ್ಯ ದರ್ಶನದ ಕತೆ ಹೇಳುವ ‘ನಾ ನಿನ್ನ ಬಿಡಲಾರೆ’ ಸೀರಿಯಲ್ ಈ ವಾರ 4.6 TRP ಪಡೆದು 8ನೇ ಸ್ಥಾನದಲ್ಲಿದೆ.
ಕಲರ್ಸ್ ಕನ್ನಡ ವಾಹಿನಿಯ ನಂದ ಕುಮಾರ್ ಮತ್ತು ಗಿರಿಜಾ ದಂಪತಿಯ ತುಂಬು ಕುಟುಂಬದ ಕಥೆ ‘ನಂದಗೋಕುಲ’ 4.8 TRP ಪಡೆದು 7ನೇ ಸ್ಥಾನದಲ್ಲಿದೆ.
ಕೋರ್ಟ್ ಮೆಟ್ಟಿಲೇರಿರುವ ವಿದ್ಯಾ ಮತ್ತು ಭದ್ರನ ವಿಚ್ಚೇದನ ಕಥೆಯನ್ನು ಸದ್ಯ ಪ್ರಸಾರ ಮಾಡುತ್ತಿರುವ ‘ಮುದ್ದು ಸೊಸೆ’ ಈಗ 5.0 TRP ಪಡೆದು 5ನೇ ಸ್ಥಾನದಲ್ಲಿದೆ.
ನಾಲ್ಕು ಜನ ಗಂಡು ಮಕ್ಕಳ ಕುಟುಂಬಕ್ಕೆ ದೊಡ್ಡ ಮನೆ ಹುಡುಗಿ ಸೊಸೆಯಾಗಿ ಬಂದರೆ ಏನೆಲ್ಲಾ ಆಗುತ್ತೆ ಎಂದು ತೋರಿಸುವ ‘ಶ್ರೀಗಂಧದ ಗುಡಿ’ 5.2TRP ಪಡೆದಿದೆ.
ಇನ್ನು 4ನೇ ಸ್ಥಾನದಲ್ಲಿ ಎರಡು ಧಾರಾವಾಹಿಗಳು ಸ್ಥಾನಪಡೆದಿವೆ. ಮಹಾ ಸಂಗಮ ನಡೆಯುತ್ತಿರುವ ‘ಲಕ್ಷ್ಮೀ ನಿವಾಸ’ ಮತ್ತು ‘ಆದಿ ಲಕ್ಷ್ಮೀ ಪುರಾಣ’ 5.3 TRP ಪಡೆದಿದೆ.
ಸದ್ಯ ಮಗಳ ಹುಡುಕಾಟದಲ್ಲಿರುವ ಗೌತಮ್ ಮತ್ತು ಭೂಮಿಕಾ ಕಥೆಯನ್ನು ಹೊಂದಿರುವ ‘ಅಮೃತಧಾರೆ’ ಸೀರಿಯಲ್ 5.5 TRP ಪಡೆದು 3ನೇ ಸ್ಥಾನದಲ್ಲಿದೆ.
ರಶ್ಮಿಯ ಸಂಸಾರವನ್ನು ಸರಿಮಾಡುವ ಗುರಿ ಹೊತ್ತು ಸಾಗುತ್ತಿರುವ ಶಿವಣ್ಣದ ಫ್ಯಾಮಿಲಿ ಕಥೆಯ ‘ಅಣ್ಣಯ್ಯ’ ಸೀರಿಯಲ್ 6.3 TRP ಪಡೆದು ನಂಬರ್ 2 ಸ್ಥಾನದಲ್ಲಿದೆ.
ಇನ್ನು ಕೊನೆಯದಾಗಿ ವೀಕ್ಷಕರು ಅಂದುಕೊಂಡಂತೆ, ನಿಧಿ ಮತ್ತು ಕರ್ಣನ ಮದುವೆ ನಡೆದುದರಿಂದ ‘ಕರ್ಣ’ ಸೀರಿಯಲ್ 6.9 TRP ಪಡೆದು ನಂಬರ್ 1 ಪಟ್ಟಕ್ಕೇರಿದೆ.
ಅಮೃತಧಾರೆ ಧಾರಾವಾಹಿ ನಟನ ಅಳಿಯ IPL ಕ್ರಿಕೆಟ್ ಕಾಮೆಂಟರಿ ಕೊಡ್ತಾರೆ; ಯಾರದು?
ಮಾಲ್ಡೀವ್ಸ್’ನಲ್ಲಿ ‘ಕರ್ಣ’ ಸೀರಿಯಲ್ ಬ್ಯೂಟಿ ನಮೃತಾ ಗೌಡ… ಸೀರೆಯಲ್ಲಿ ಮಿಂಚಿಂಗ್
‘ಮೂಗುತಿ ಮಲ್ಲಿಗೆ’ 50ರ ಸಂಭ್ರಮ…. ಹೈದ್ರಾಬಾದಲ್ಲಿ ಔಟಿಂಗ್ ಮಾಡ್ತಾ ಎಂಜಾಯ್ ಮಾಡ್ತಿದೆ ಟೀಮ್
ನಟನೆಗೆ ಗುಡ್ ಬೈ ಹೇಳಿ…. ಆಫ್ರಿಕಾದಲ್ಲಿ ಗಂಡನ ಜೊತೆ ಜಾಲಿ ಮೂಡಲ್ಲಿ ನಟಿ ಸಂಜನಾ ಬುರ್ಲಿ