- Home
- Entertainment
- TV Talk
- ತಮಗೆ ಕಾರ್ ತೆಗೆದುಕೊಳ್ಳುವ ನಟಿಯರ ನಡುವೆ, ತಮ್ಮನಿಗೆ ಹೊಸ ಕಾರು ಕೊಡಿಸಿದ ನಟಿ ಸ್ಪಂದನಾ ಸೋಮಣ್ಣ!
ತಮಗೆ ಕಾರ್ ತೆಗೆದುಕೊಳ್ಳುವ ನಟಿಯರ ನಡುವೆ, ತಮ್ಮನಿಗೆ ಹೊಸ ಕಾರು ಕೊಡಿಸಿದ ನಟಿ ಸ್ಪಂದನಾ ಸೋಮಣ್ಣ!
ಕಿರುತೆರೆ ನಟಿ ಸ್ಪಂದನಾ ಸೋಮಣ್ಣ ರಕ್ಷಾಬಂಧನವನ್ನು ವಿಶೇಷವಾಗಿ ಆಚರಿಸಿದ್ದಾರೆ. ತಮ್ಮ ಪ್ರೀತಿಯ ಸಹೋದರನಿಗೆ ಹೊಚ್ಚ ಹೊಸ ಹ್ಯುಂಡೈ ವೆನ್ಯೂ ಕಾರನ್ನು ಉಡುಗೊರೆಯಾಗಿ ನೀಡಿ, ಬಾಲ್ಯದ ನೆನಪುಗಳೊಂದಿಗೆ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.

ಅಕ್ಕ-ತಮ್ಮನ ಬಾಂಧವ್ಯದ ಪವಿತ್ರ ಹಬ್ಬ ರಕ್ಷಾಬಂಧನವನ್ನು ಕಿರುತೆರೆ ನಟಿ, ಬಿಗ್ ಬಾಸ್ ಖ್ಯಾತಿಯ ಸ್ಪಂದನಾ ಸೋಮಣ್ಣ (Spandana Somanna) ಅತ್ಯಂತ ವಿಶೇಷವಾಗಿ ಆಚರಿಸಿದ್ದಾರೆ. ತಮ್ಮ ಪ್ರೀತಿಯ ಸಹೋದರ ‘ಚಿಂಟು’ಗೆ ರಾಖಿ ಕಟ್ಟಿ, ಹೊಚ್ಚ ಹೊಸ ‘ಹ್ಯುಂಡೈ ವೆನ್ಯೂ’ (Hyundai Venue) ಕಾರನ್ನು ಉಡುಗೊರೆಯಾಗಿ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ತಮ್ಮನಿಗೆ ಕಾರು ಗಿಫ್ಟ್ ನೀಡಿದ ಸಂತಸದ ಕ್ಷಣಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಸ್ಪಂದನಾ, ಬಾಲ್ಯದ ದಿನಗಳನ್ನು ನೆನಪಿಸಿಕೊಂಡು ಅತ್ಯಂತ ಭಾವುಕ ಸಾಲುಗಳನ್ನು ಬರೆದುಕೊಂಡಿದ್ದಾರೆ.
ಪ್ರತಿ ಜನ್ಮದಲ್ಲೂ ನೀನೇ ನನ್ನ ತಮ್ಮನಾಗಬೇಕು:
ತಮ್ಮನಿಗೆ ಕಾರು ಉಡುಗೊರೆ ನೀಡಿದ ಕುರಿತು ಬರೆದುಕೊಂಡಿರುವ ನಟಿ, 'ನನ್ನ ತಮ್ಮ ಖಂಡಿತವಾಗಿಯೂ ಈ ಉಡುಗೊರೆಗೆ ಅರ್ಹನಾಗಿದ್ದ. ನಿನಗೆ ಕಾರನ್ನು ಗಿಫ್ಟ್ ಮಾಡಲು ನನಗೆ ತುಂಬಾ ಹೆಮ್ಮೆ ಮತ್ತು ಸಂತೋಷವಾಗುತ್ತಿದೆ ಚಿಂಟು. ಬಾಲ್ಯದಲ್ಲಿ ನೀನು ನನಗೆ ನೀಡಿದ ಪ್ರತಿಯೊಂದು ಸಣ್ಣ ಪುಟ್ಟ ಉಡುಗೊರೆಗಳೂ ನನಗಿನ್ನೂ ನೆನಪಿವೆ. ನೀನು ಬಿಡಿಸಿದ ಚಿತ್ರಗಳು, ಬರೆದ ಪ್ರೀತಿಯ ಪತ್ರಗಳು, ಆ ಪುಟಾಣಿ ಕಿವಿ ಓಲೆಗಳು ಮತ್ತು ನೀನು ಕೊಟ್ಟ ಅದೆಷ್ಟೋ ಸುಂದರ ನೆನಪುಗಳು ಇಂದಿಗೂ ಹಸಿರಾಗಿವೆ' ಎಂದಿದ್ದಾರೆ.
ಮುಂದುವರಿದು, 'ಸಣ್ಣಪುಟ್ಟ ವಿಷಯಗಳಿಗೂ ಜಗಳವಾಡುತ್ತಿದ್ದ ಬಾಲ್ಯದ ದಿನಗಳಿಂದ ಹಿಡಿದು, ಪ್ರತಿಯೊಂದನ್ನೂ ಹಂಚಿಕೊಂಡು ಬೆಳೆದಿದ್ದೇವೆ. ಈಗ ನೀನು ನಿನ್ನ ಮೊದಲ ಕಾರನ್ನು ಪಡೆಯುತ್ತಿರುವುದನ್ನು ನೋಡಿದರೆ ಬದುಕು ಒಂದು ಪೂರ್ಣ ವೃತ್ತದಂತೆ (Full Circle) ಭಾಸವಾಗುತ್ತಿದೆ. ಪ್ರತಿ ಜನ್ಮದಲ್ಲೂ ನೀನೇ ನನ್ನ ತಮ್ಮನಾಗಿ ಹುಟ್ಟಬೇಕು. ನಿನ್ನ ಏಳಿಗೆ ನೋಡಿ ನನಗೆ ಹೆಮ್ಮೆಯಾಗುತ್ತಿದೆ. ನಿನ್ನ 'ಚಿನ್ನು ಅಕ್ಕ' ಸದಾ ನಿನ್ನ ಬೆನ್ನಿಗಿರುತ್ತಾಳೆ. ಹ್ಯಾಪಿ ರಕ್ಷಾಬಂಧನ್ ಚಿಂಟು' ಎಂದು ಪ್ರೀತಿ ವ್ಯಕ್ತಪಡಿಸಿದ್ದಾರೆ.
‘ಕರಿಮಣಿ’ ಮೂಲಕ ಮನೆಮಾತಾಗಿದ್ದ ಚೆಲುವೆ:
ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ‘ಕರಿಮಣಿ’ ಧಾರಾವಾಹಿಯ ಸಾಹಿತ್ಯ ಪಾತ್ರದ ಮೂಲಕ ಅಪಾರ ಕನ್ನಡಿಗರ ಮನೆಮಾತಾಗಿದ್ದ ಸ್ಪಂದನಾ ಸೋಮಣ್ಣ, ತಮ್ಮ ಮುದ್ದಾದ ಅಭಿನಯದಿಂದಲೇ ದೊಡ್ಡ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡವರು. ಬಳಿಕ ‘ಬಿಗ್ ಬಾಸ್ ಕನ್ನಡ’ ರಿಯಾಲಿಟಿ ಶೋನಲ್ಲೂ ಸ್ಪರ್ಧಿಯಾಗಿ ಭಾಗವಹಿಸಿ ಸದ್ದು ಮಾಡಿದ್ದರು.
ಇದೀಗ ತಮ್ಮನಿಗೆ ಬ್ರ್ಯಾಂಡ್ ನ್ಯೂ ಕಾರು ಗಿಫ್ಟ್ ನೀಡಿರುವ ಅಕ್ಕನ ಈ ಪ್ರೀತಿಗೆ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಮತ್ತು ಕಿರುತೆರೆ ಸೆಲೆಬ್ರಿಟಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಪ್ರೇಮಿಯನ್ನ ಪರಿಚಯ ಮಾಡಿದ್ದ ಸ್ಪಂದನಾ
ಇತ್ತೀಚೆಗೆ ಪ್ಯಾರೀಸ್ ನ ಐಫೆಲ್ ಟವರ್ ಹಿನ್ನೆಲೆಯಲ್ಲಿ, ಹುಡುಗನೊಬ್ಬನ ಕೈಹಿಡಿದು ಸಂತೋಷದಿಂದ ನಡೆಯುತ್ತಿರುವ ಫೋಟೊ ಎರಡನ್ನು ಶೇರ್ ಮಾಡಿದ್ದು, ಅದರ ಜೊತೆಗೆ Plot Twist : Paris was not the Main Character! ಎಂದು ಬರೆದಿದ್ದರು. ಅಂದರೆ, ಪ್ಯಾರೀಸ್ ಇಲ್ಲಿ ಮುಖ್ಯ ಪಾತ್ರ ಅಲ್ಲ, ನಾಯಕ ಬೇರೆಯವರೇ ಇದ್ದಾರೆ ಎನ್ನುವಂತಿದೆ ಈ ಮಾತು. ಅಂದ್ರೆ, ಈ ಫೋಟೊ ಮೂಲಕ ಕಳ್ಳ ಪುಟ್ಟಿ ತಮ್ಮ ಬಾಯ್ ಫ್ರೆಂಡ್ ನ್ನು ಪರಿಚಯಿಸಿದ್ದರು. ಆದರೆ ನಟಿ ಪೋಸ್ಟ್ ನೋಡಿದ್ರೆ, ತಮ್ಮ ಜೀವನದ ಮುಖ್ಯ ಪಾತ್ರವನ್ನು ರಿವೀಲ್ ಮಾಡಿದಂತಿದೆ. ಆದರೆ ಫೋಟೊದಲ್ಲಿ ಇರುವವರು ಯಾರು ಎಂಬುದನ್ನು ನಟಿ ರಿವೀಲ್ ಮಾಡಿಲ್ಲ, ಕೇವಲ ಬ್ಯಾಕ್ ಸೈಡ್ ಫೋಟೊ ಹಂಚಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

