- Home
- Entertainment
- TV Talk
- ಮಾಡರ್ನ್ ಹುಡುಗಿಯರು ಹಳ್ಳಿಗೆ ಬರೋಕೆ ರೆಡಿನಾ? ಹೈ ವೋಲ್ಟೇಜ್ ರಿಯಾಲಿಟಿ ಶೋ 'ಹಳ್ಳಿ ಪವರ್'ಗೆ ಆಹ್ವಾನ
ಮಾಡರ್ನ್ ಹುಡುಗಿಯರು ಹಳ್ಳಿಗೆ ಬರೋಕೆ ರೆಡಿನಾ? ಹೈ ವೋಲ್ಟೇಜ್ ರಿಯಾಲಿಟಿ ಶೋ 'ಹಳ್ಳಿ ಪವರ್'ಗೆ ಆಹ್ವಾನ
ಜೀ ಕನ್ನಡ ವಾಹಿನಿಯು 'ಹಳ್ಳಿ ಪವರ್' ಎಂಬ ಹೊಸ ಹೈ ವೋಲ್ಟೇಜ್ ರಿಯಾಲಿಟಿ ಷೋವನ್ನು ಆರಂಭಿಸುತ್ತಿದೆ. ಈ ಷೋ ಮಾಡರ್ನ್ ಸಿಟಿ ಹುಡುಗಿಯರಿಗಾಗಿ ಮೀಸಲಾಗಿದ್ದು, ಇದಕ್ಕಾಗಿ ಆಡಿಷನ್ ಕರೆಯಲಾಗಿದೆ. ಆಸಕ್ತರು ವಾಟ್ಸಾಪ್ ಮೂಲಕ ತಮ್ಮ ವಿವರಗಳನ್ನು ಕಳುಹಿಸಿ, ಬೆಂಗಳೂರಿನಲ್ಲಿ ನಡೆಯುವ ಆಡಿಷನ್‌ನಲ್ಲಿ ಭಾಗವಹಿಸಬಹುದು

ರಿಯಾಲಿಟಿ ಷೋಗಳ ಅಬ್ಬರ
ಜೀ ಮತ್ತು ಕಲರ್ಸ್ ಕನ್ನಡ ಸೇರಿದಂತೆ ವಿವಿಧ ಚಾನೆಲ್ಗಳಲ್ಲಿ ರಿಯಾಲಿಟಿ ಷೋಗಳ ಅಬ್ಬರ. ಬಹುತೇಕ ಷೋಗಳು ಸೆಲೆಬ್ರಿಟಿಗಳಿಗೆ ಸೀಮಿತ ಇದ್ದರೆ, ಮತ್ತೆ ಕೆಲವಕ್ಕೆ ಜನಸಾಮಾನ್ಯರಿಗೂ ಅವಕಾಶ ಕಲ್ಪಿಸಲಾಗುತ್ತಿದೆ. ಇದರಿಂದಾಗಿ ಎಷ್ಟೋ ಮಂದಿ ಪ್ರತಿಭೆಗಳು ಬೆಳಕಿಗೆ ಬಂದದ್ದು ಇದೆ.
ಜೀ ಕನ್ನಡದಲ್ಲಿ ಆರಂಭ
ಇದೀಗ ಅಂಥದ್ದೇ ಒಂದು ರಿಯಾಲಿಟಿ ಷೋ ಜೀ ಕನ್ನಡದಲ್ಲಿ ಆರಂಭವಾಗಲಿದೆ. ಇದರ ಹೆಸರು ಹಳ್ಳಿ ಪವರ್. ಈ ಕುರಿತು ವಾಹಿನಿ ಪ್ರೊಮೋ ಬಿಡುಗಡೆ ಮಾಡಿದೆ.
ಹಳ್ಳಿಗೆ ಬರಲು ರೆಡಿನಾ
ಹೈ ವೋಲ್ಟೇಜ್ ರಿಯಾಲಿಟಿ ಶೋ 'ಹಳ್ಳಿ ಪವರ್'ಗೆ ಬರಲು ರೆಡಿನಾ? ಮಾಡರ್ನ್ ಸಿಟಿ ಹುಡುಗಿಯರು ಹಳ್ಳಿಗೆ ಬರಲು ರೆಡಿನಾ? ಆಡಿಷನ್‌ಗೆ ನೀವು ರೆಡೀನಾ ಎಂದು ವಾಹಿನಿ ಕೇಳಿದೆ. ಜೂನ್ 28 ಭಾನುವಾರ ಬೆಳಿಗ್ಗೆ 9ರಿಂದ ಆಡಿಷನ್ ನಡೆಯಲಿದೆ. ನಿಮ್ಮ ವಿವರಗಳನ್ನು 9513134434 ಸಂಖ್ಯೆಯ ವಾಟ್ಸಾಪ್‌ಗೆ ಕಳುಹಿಸಬೇಕು.
ಹಳ್ಳಿ ಪವರ್ ರೀ ಲೋಡೆಡ್
ಹಳ್ಳಿ ಪವರ್ ರೀ ಲೋಡೆಡ್ ಆಡಿಷನ್ಸ್ಗೆ ಕರೆಯಲಾಗಿದೆ. ವಯಸ್ಸಿನ ಮಿತಿ 18 ರಿಂದ 28 ವರ್ಷ ವಯಸ್ಸು. ಭಾವಚಿತ್ರ ಹಾಗೂ ಸಂಪೂರ್ಣ ವಿವರಗಳನ್ನು ವಾಟ್ಸ್ಆ್ಯಪ್ನಲ್ಲಿ ಕಳುಹಿಸಬೇಕು.
ಆಡಿಷನ್ ನಡೆಯುವ ಸ್ಥಳ
ಯಾವುದೇ ಕರೆ ಸ್ವೀಕರಿಸುವುದಿಲ್ಲ ಎಂದು ವಾಹಿನಿ ಹೇಳಿದೆ. ಆಡಿಷನ್ ನಡೆಯುವ ಸ್ಥಳ: ಅಬ್ಬಯ್ಯ ನಾಯ್ಡು ಸ್ಟುಡಿಯೋ, 7ನೇ ಅಡ್ಡರಸ್ತೆ, ಚಿಕ್ಕಲ್ಲಂದ್ರ, ಬೆಂಗಳೂರು-560061
ಏನು ಬೇಕು?
ಭಾಗವಹಿಸಲು ನಿಮ್ಮ ಪಾಸ್ಪೋರ್ಟ್ ಸೈಜ್ ಫೋಟೋ ಹಾಗೂ ಅಡ್ರೆಸ್ ಪ್ರೂಫ್ ಜೆರಾಕ್ಸ್ ಜೊತೆಗೆ ಬನ್ನಿ ಎಂದು ಇದರಲ್ಲಿ ತಿಳಿಸಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

