MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಸಿನಿಮಾ ಹೀರೋ ಆದ ಗಿಲ್ಲಿ ನಟ, ಶ್ರೀಲೀಲಾ ಹೀರೋಯಿನ್; ಕೆವಿಎನ್ ಪ್ರೊಡಕ್ಷನ್ ಸಿನಿಮಾಗೆ ಜೂ.21ರಂದು ಮುಹೂರ್ತ!

ಸಿನಿಮಾ ಹೀರೋ ಆದ ಗಿಲ್ಲಿ ನಟ, ಶ್ರೀಲೀಲಾ ಹೀರೋಯಿನ್; ಕೆವಿಎನ್ ಪ್ರೊಡಕ್ಷನ್ ಸಿನಿಮಾಗೆ ಜೂ.21ರಂದು ಮುಹೂರ್ತ!

ಬಿಗ್ ಬಾಸ್ ಖ್ಯಾತಿಯ ಹಾಸ್ಯನಟ ಗಿಲ್ಲಿ ನಟ ಇದೀಗ ನಾಯಕನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಪ್ರತಿಷ್ಠಿತ ಕೆವಿಎನ್ ಪ್ರೊಡಕ್ಷನ್ ಸಂಸ್ಥೆಯು ಈ ಚಿತ್ರವನ್ನು ನಿರ್ಮಿಸುತ್ತಿದ್ದು, ವಿಡಿಯೋ ಮೂಲಕ ಘೋಷಣೆ ಮಾಡಲಾಗಿದೆ. ಚಿತ್ರದ ಮುಹೂರ್ತವು ಜೂನ್ 21 ರಂದು ನಡೆಯಲಿದೆ.

3 Min read
Author : Sathish Kumar KH
Published : Jun 16 2026, 08:16 PM IST
Share this Photo Gallery
  • FB
  • TW
  • Linkdin
  • Whatsapp
112
Image Credit : Instagram

ಬಿಗ್ ಬಾಸ್ ಸೀಸನ್ 12ರ ವಿಜೇತ ಹಾಸ್ಯನಟ ನಟರಾಜ್ ಅಲಿಯಾಸ್ ಗಿಲ್ಲಿ ನಟ ಅವರು ಇದೀಗ ತಾವು ಬೆಂಗಳೂರಿಗೆ ಬಂದಿದ್ದ ಕನಸನ್ನು ಈಡೇರಿಸಿಕೊಳ್ಳಲು ಮುಂದಾಗಿದ್ದಾರೆ. ಸಿನಿಮಾದಲ್ಲಿ ನಾಯಕ ನಟನಾಗಿ ಅವಕಾಶ ಸಿಕ್ಕಿದ್ದು, ಇದೇ ಜೂ.21ರಂದು ಗಿಲ್ಲಿ ಟವರ ಜನ್ಮದಿನದಂದೇ ಸಿನಿಮಾ ಮುಹೂರ್ತ ಇಟ್ಟುಕೊಳ್ಳಲಾಗಿದೆ. 

ಯಶ್ ನಟನೆಯ ಟಾಕ್ಸಿಕ್ ಸಿನಿಮಾ ಪ್ರೊಡಕ್ಷನ್ ಸಂಸ್ಥೆಯಾದ ಹಾಗೂ ವಿವಿಧ ಭಾಷೆಗಳಲ್ಲಿ ನೂರಾರು ಕೋಟಿ ಬಜೆಟ್ ಹಾಕಿ ಸಿನಿಮಾ ನಿರ್ಮಾಣ ಮಾಡುವ ಕೆವಿಎನ್ ಪ್ರೊಡಕ್ಷನ್ ಗಿಲ್ಲಿ ನಟನೆಯ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
212
Image Credit : Asianet News

ನಿನ್ನೆಯೇ ನಾಳೆ ಸಂಜೆ ಒಂದು ದೊಡ್ಡ ಘೋಷಣೆ ಮಾಡುವುದಾಗಿ ಗಿಲ್ಲಿನಟ ಮುನ್ಸೂಚನೆ ನೀಡಿದ್ದರು. ಅದರಂತೆ ಇಂದು ಸಂಜೆ ಒಂದು ಹಾಸ್ಯ ವಿಡಿಯೋ ಗಿಲ್ಲಿ ನಟ ಸಿನಿಮಾಗೆ ನಾಯಕನಾಗಿ ಆಯ್ಕೆಯಾಗಿದ್ದು, ಸದ್ಯಕ್ಕೆ ಪ್ಯಾನ್ ಇಂಡಿಯಾ ನಟಿ ಶ್ರೀಲೀಲಾ ಅವರನ್ನು ಹೀರೋಯಿನ್ ಆಗಿ ಸೆಲೆಕ್ಟ್ ಮಾಡಲಾಗಿದೆ. ಈ ಬಗ್ಗೆ ವಿಡಿಯೋದಲ್ಲಿ ನಡೆದ ಸಂಭಾಷಣೆಯ ವಿವರ ಇಲ್ಲಿದೆ.

Related Articles

Related image1
Bigg Boss ಗಿಲ್ಲಿ ನಟ ಜಿಮ್​ನಲ್ಲಿ ವರ್ಕ್​ ಔಟ್​: ಏಕಾಏಕಿ ಫಿಟ್ನೆಸ್​ ಮನಸ್ಸು ಮಾಡಿದ ಹಿಂದಿರೋ ರಹಸ್ಯವೇನು
Related image2
Bigg Boss ಕಾವ್ಯಾ ಜೊತೆ ಗಿಲ್ಲಿ ನಟ ಫೋನ್​ನಲ್ಲೇ ರೊಮಾನ್ಸ್​: ಅವ್ರು ಬಿಟ್ಟರೂ ಇವ್ರು ಬಿಡಲ್ಲ ನೋಡಿ!
312
Image Credit : Asianet News

ನನಗೆ 2028ರವರೆಗೆ ಬಿಟ್ಟುಬಿಡಿ ಸರ್. ಆಲ್‌ ದಿ ಬೆಸ್ಟ್ ಎಂದು ಪ್ರೊಡೂಸರ್ ಅವರು ಹೇಳುತ್ತಾರೆ. ನೀವು ಪದೇಪದೆ ಫೋನ್‌ ಮಾಡಿ ತೊಂದರೆ ಕೊಡ್ತಿದ್ದರೆ ನಾನು ಫೋನ್ ಸ್ವಿಚ್ ಆಫ್ ಮಾಡಿಕೊಂಡು ಫಾರಿನ್‌ಗೆ ಹೋಗಿ ಬಿಡ್ತೀನಿ. ಊಟಿ, ಕೊಡೈಕೆನಾಲ್‌ಗೆ ಹೋಗ್ತೇನೆ ಎಂದು ಸಿಟ್ಟಿನಿಂದಲೇ ಗಿಲ್ಲಿನಟ ಫೋನ್ ಕಟ್ ಮಾಡ್ತಾರೆ. ಆಗ ಎಲ್ಲಿಗೆ ಬಂದ ಡೈರೆಕ್ಟರ್, ಪ್ರೊಡೂಸರ್ ಅವರು ಗಿಲ್ಲಿ ನಟ ಅವರಿಗೆ ಕಂಗ್ರಾಟ್ಸ್ ಹೇಳುತ್ತಾ ನೀವು ಹೀರೋ ಎಂದು ಮಾತು ಆರಂಭಿಸುತ್ತಾರೆ.

412
Image Credit : Asianet News

ಆಗ ಗಿಲ್ಲಿಗೆ ಆಶ್ಚರ್ಯವಾಗಿ ನೀವು ತಪ್ಪಾದ ಅಡ್ರೆಸ್‌ಗೆ ಬಂದಿಲ್ಲವಲ್ಲಾ ಎಂದು ಕೇಳುತ್ತಾರೆ. ಆಗ ನಾವೆಲ್ಲರೂ ಮಾತನಾಡಿಕೊಂಡೇ ನಿಮ್ಮನ್ನ ಹೀರೋ ಮಾಡುವುದಕ್ಕೆ ಸಿದ್ಧವಾಗಿ ಬಂದಿದ್ದೇವೆ ಎಂದು ಹೇಳುತ್ತಾರೆ. ಆಗ ಮನಸ್ಸಿನಲ್ಲಿ ಗಿಲ್ಲಿನಟ ಖುಷಿಪಡುತ್ತಾ, ಹೌದು, ನಾನು ಇತ್ತೀಚೆಗೆ ಜಿಮ್‌ಗೆಲ್ಲಾ ಹೋಗಿ ಫಿಟ್ ಆಗಿದ್ದೀನಿ ಎಂದು ಮನಸ್ಸಿನಲ್ಲಿ ಹೇಳಿಕೊಳ್ಳುತ್ತಾರೆ. 

512
Image Credit : Asianet News

ಮುಂದುವರೆದು, ನನಗೆ ಹೀರೋಯಿನ್ ಯಾರು ಸರ್ ಎಂದು ಗಿಲ್ಲಿ ಕೇಳಿದಾಗ ನಿರ್ದೇಶಕರು ಹಾಗೂ ಪ್ರೊಡೂಸರ್ ಅವರು ಶ್ರೀಲೀಲಾ ಅವರ ಫೋಟೋ ತೋರಿಸುತ್ತಾರೆ. ಆಗ ಡೈರೆಕ್ಟರ್ ನಿಮಗೆ ಆಸೆ ಪಡುವುದಕ್ಕೂ ಒಂದು ಮಿತಿ ಇಲ್ಲವೇ ಬೇರೆ ಫೋಟೋ ಇದೆ ಎಂದು ಹೇಳುತ್ತಾರೆ. ಆದರೆ ಅದನ್ನು ನೋಡಲಾಗುವುದಿಲ್ಲ. ಇದರ ಅರ್ಥ ಸದ್ಯಕ್ಕೆ ಶ್ರೀಲೀಲಾ ಹೀರೋಯಿನ್ ಅನ್ನುವುದು ಖಚಿತವಾಗುತ್ತಿದೆ.

612
Image Credit : Asianet News

ನಿರ್ದೇಶಕರು ನಾವು ಪ್ಯಾನ್ ಇಂಡಿಯಾ ಸಿನಿಮಾ ಮಾಡೋಣ ಎಂದು ಹೇಳುತ್ತಾರೆ. ಆಗ ಗಿಲ್ಲಿ ನಟ ಪ್ಯಾನ್ ಇಂಡಿಯಾ ಸಿನಿಮಾ ಬೇಡ, ಪ್ಯಾನ್ ಕರ್ನಾಟಕ ಸಿನಿಮಾ ಮಾಡೋಣ 4 ಭಾಷೆಗಳಲ್ಲಿ ಎಂದು ಗಿಲ್ಲಿ ನಟ ನಿರ್ದೆಶಕರಿಗೆ ಸಲಹೆ ನೀಡುತ್ತಾರೆ. ಆಗ ಕರ್ನಾಟಕದಲ್ಲಿ ಯಾವ ನಾಲ್ಕು ಭಾಷೆಗಳಿವೆ ಎಂದು ಕೇಳಿದಾಗ ಮಂಡ್ಯ, ಮಂಗಳೂರು, ಬೆಂಗಳೂರು ಮತ್ತು ಉತ್ತರ ಕರ್ನಾಟಕ ಭಾಷೆಗಳನ್ನು ಹೇಳುತ್ತಾರೆ.

712
Image Credit : Asianet News

ಮುಂದುವರೆದು, ಪಾರ್ಟ್‌ 2ಕ್ಕೆ ಪ್ಯಾನ್ ಡಿಸ್ಟ್ರಿಕ್ಟ್, ಪ್ಯಾನ್ ತಾಲೂಕು ಮತ್ತು ಪ್ಯಾನ್ ಪಂಚಾಯಿತಿ ಮಟ್ಟದಲ್ಲಿ ಸಿನಿಮಾ ಮಾಡೋಣ ಎಂದು ಗಿಲ್ಲಿನಟ ಸಲಹೆ ಕೊಡುತ್ತಾರೆ. ಆಗ ಪ್ರೊಡೂಸರ್ ನೀವು ಸೂಪರ್ ಟ್ಯಾಲೆಂಟ್ ಸರ್ ಎಂದು ಹೇಳುತ್ತಾರೆ. ಆದರೆ, ನಿರ್ದೇಶಕರು ಯಾಕಾದರೂ ಇವರು ಇಂತಹ ಕೆಟ್ಟ ಸಲಹೆ ಕೊಡ್ತಾರೆ ಎಂದು ಪೇಚಾಡುತ್ತಾರೆ.

812
Image Credit : Asianet News

ಶೂಟಿಂಗ್ ಎಲ್ಲಿ ಎಂದು ಕೇಳಿದಾಗ ನಿರ್ದೇಶಕರು, ರಾಮನಗರ, ಚನ್ನಪಟ್ಟಣದಲ್ಲಿ ಸಿನಿಮಾ ಶೂಟಿಂಗ್ ಮಾಡೋಣ ಎಂದು ಹೇಳುತ್ತಾರೆ. ಆಗ ಗಿಲ್ಲಿನಟ ಫಾರಿನ್‌ಗೆ ಹೋಗೋಣ ಎನ್ನುತ್ತಾರೆ. ಡೈರೆಕ್ಟರ್ ಅವರು ಬೇರೆ ದೇಶದವರಿಗೆ ನಮ್ಮ ದೇಶ ಫಾರಿನ್ ಆಗುತ್ತಲ್ವಾ ಸರ್, ಇಲ್ಲಿಯೇ ಶೂಟಿಂಗ್ ಮಾಡೋಣ ಎಂದು ಗಿಲ್ಲಿ ಹೇಳಿದ ಪಾಯಿಂಟ್‌ ಅನ್ನು ವಾಪಸ್ ಹೇಳಿ ಟಾಂಗ್ ಕೊಡ್ತಾರೆ. ಆಗ ಎಷ್ಟು ಸಂಭಾವನೆ ಕೊಡಬೇಕು ಎಂದು ಕೇಳುತ್ತಾರೆ.

912
Image Credit : Asianet News

ಆಗ ದನಗಳ ವ್ಯಾಪಾರವನ್ನು ಮಾಡುವಾಗ ದಲ್ಲಾಳಿಗಳು ಕೈ ಮೇಲೆ ಸೋಫಾ ಕವರ್ ಮುಚ್ಚಿಕೊಂಡು ಹಾಕಿಕೊಂಡು ರೇಟ್ ಕುದುರಿಸುವ ರೀತಿಯಲ್ಲಿ ಗಿಲ್ಲಿಗೆ ಕೊಡುವ ಸಂಭಾವನೆ ಹಣದ ಬಗ್ಗೆ ಮಾತನಾಡುತ್ತಿರುತ್ತಾರೆ.

1012
Image Credit : Asianet News

ಇನ್ನೇನು ಚರ್ಚೆ ಜೋರಾಗಿ ನಡೆಯುತ್ತಿದೆ ಎನ್ನುವಾಗ ಗಿಲ್ಲಿಯ ಮನೆಯವರು ಬಂದು ಅವರ ಕೈಮೇಲಿದ್ದ ಸೋಫಾ ಕವರ್ ಅನ್ನು ತೆಗದು, ಗಾಳಿಗೆ ಬಂದು ಇಲ್ಲಿಗೆ ಬಿದ್ದಿರಬೇಕು ಎಂದು ತೆಗೆದು ಪಕ್ಕಕ್ಕೆ ಇಡುತ್ತಾರೆ. ಕೊನೆಗೆ, ಗಿಲ್ಲಿನಟ ಒಂದಷ್ಟು ಸಂಭಾವನೆಗೆ ಸಿನಿಮಾ ಮಾಡಲು ಒಪ್ಪಿಕೊಳ್ಳುತ್ತಾರೆ.

1112
Image Credit : Asianet News

ಇದಾದ ನಂತರ ನಾನು ಹೀರೋ ಆಗ್ತೀನಿ ಎನ್ನೋದನ್ನು ಹೊರಗೆ ಯಾರಿಗೂ ಹೇಳಬೇಡಿ ಎಂದು ಡೈರೆಕ್ಟರ್‌ಗೆ ಹೇಳುತ್ತಾರೆ. ಯಾವಾಗ ಮುಹೂರ್ತ ಎಂದು ಚರ್ಚೆ ಮಾಡುವಾಗ ಇದೇ ವೇಳೆ ಜೂ.21 ಗಿಲ್ಲಿನಟ ನನ್ನ ಬರ್ತಡೇ ಎಂದು ಹೇಳುತ್ತಾರೆ. ಆಗ ಅದೇ ದಿನಾಂಕಕ್ಕೆ ಸಿನಿಮಾ ಮುಹೂರ್ತ ಇಟ್ಟುಕೊಳ್ಳೋಣ ಎಂದು ಎಲ್ಲರೂ ಒಪ್ಪಿಕೊಳ್ಳುತ್ತಾರೆ.

1212
Image Credit : Asianet News

ಈ ಚರ್ಚೆ ಮುಗಿದ ನಂತರ ಕೆವಿಎನ್ ಪ್ರೊಡಕ್ಷನ್ ಸಂಸ್ಥೆಗೆ ಹೋಗಿ ಸಿನಿಮಾ ಮಾಡುವುದಕ್ಕೆ ಹಾಗೂ ಮುಹೂರ್ತಕ್ಕೆ ಎಲ್ಲರೂ ಚರ್ಚೆ ಮಾಡಿ ಶುಭಾಶಯ ಕೋರುತ್ತಾರೆ. ಕೆವಿಎನ್ ಪ್ರೊಡಕ್ಷನ್ ಸಂಸ್ಥೆ ಈಗಾಗಲೇ ಸಿನಿಮಾಗಳಿಗೆ ನೂರಾರು ಕೋಟಿಬಂಡವಾಳವನ್ನು ಹೂಡಿಕೆ ಮಾಡಿ ಪ್ಯಾನ್ ಇಂಡಿಯಾ ಮತ್ತು ಪ್ಯಾನ್ ವರ್ಲ್ಡ್‌ ಲೆವೆಲ್‌ನಲ್ಲಿ ಹೆಸರು ಮಾಡಿದೆ. ಇದೀಗ ಗಿಲ್ಲಿ ನಟನಿಗೆ ಪ್ರೊಡಕ್ಷನ್ ಒಪ್ಪಿಕೊಂಡಿರುವುದು ಗಿಲ್ಲಿಯ ಟ್ಯಾಲೆಂಟ್‌ಗೆ ಹಿಡಿದ ಕನ್ನಡಿಯಾಗಿದೆ.

ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಗಿಲ್ಲಿ ನಟ
ಬಿಗ್ ಬಾಸ್ ಕನ್ನಡ
ಬಿಗ್ ಬಾಸ್
ಸ್ಯಾಂಡಲ್‌ವುಡ್

Latest Videos
Recommended Stories
Recommended image1
Bigg Boss ರಕ್ಷಿತಾ ಶೆಟ್ಟಿ ಈಗ ಸಾಫ್ಟ್​ವೇರ್​ ಎಂಜಿನಿಯರ್​: ಉದ್ಯೋಗ ಸಿಕ್ಕಿದ್ದು ಹೇಗೆ
Recommended image2
ಪಿಂಕ್ ಸೀರೆಯಲ್ಲಿ ಮಿಂಚಿದ ಕರ್ಣ ಸೀರಿಯಲ್ ನಟಿಗೆ ಫ್ಯಾನ್ಸ್ ಏನಂದ್ರು ಗೊತ್ತಾ?
Recommended image3
Tiffany Gaurika: ಕ್ಯಾಲಿಫೋರ್ನಿಯಾ ವಿವಿಯಿಂದ ಡಿಸ್ಟಿಂಕ್ಷನ್‌ನಲ್ಲಿ MBA ಪದವಿ ಪಡೆದ ಡಾ.ರಾಜ್‌ಕುಮಾರ್‌ ಹೀರೋಯಿನ್‌ ಪುತ್ರಿ!
Related Stories
Recommended image1
Bigg Boss ಗಿಲ್ಲಿ ನಟ ಜಿಮ್​ನಲ್ಲಿ ವರ್ಕ್​ ಔಟ್​: ಏಕಾಏಕಿ ಫಿಟ್ನೆಸ್​ ಮನಸ್ಸು ಮಾಡಿದ ಹಿಂದಿರೋ ರಹಸ್ಯವೇನು
Recommended image2
Bigg Boss ಕಾವ್ಯಾ ಜೊತೆ ಗಿಲ್ಲಿ ನಟ ಫೋನ್​ನಲ್ಲೇ ರೊಮಾನ್ಸ್​: ಅವ್ರು ಬಿಟ್ಟರೂ ಇವ್ರು ಬಿಡಲ್ಲ ನೋಡಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved