- Home
- Entertainment
- TV Talk
- Bigg Boss ಗಿಲ್ಲಿ ನಟನ ಬಗ್ಗೆ ಪ್ರಶ್ನೆ ಮಾಡಿದ್ರೆ ಹಾರಿಕೆ ಉತ್ತರ ಕೊಟ್ಟಿದ್ದೇಕೆ 'ಮಹಾನಟಿ' ಗಗನಾ?
Bigg Boss ಗಿಲ್ಲಿ ನಟನ ಬಗ್ಗೆ ಪ್ರಶ್ನೆ ಮಾಡಿದ್ರೆ ಹಾರಿಕೆ ಉತ್ತರ ಕೊಟ್ಟಿದ್ದೇಕೆ 'ಮಹಾನಟಿ' ಗಗನಾ?
Mahanati Gagana on Bigg Boss Gilli Nata: ಬಿಗ್ ಬಾಸ್ ಕನ್ನಡ ಸೀಸನ್ 12 ಎಂದರೆ ಗಿಲ್ಲಿ ನಟ ಎನ್ನುವ ಮಟ್ಟಕ್ಕೆ ಗಿಲ್ಲಿ ನಟ ಅವರು ಆಟ ಆಡುತ್ತಿದ್ದಾರೆ. ಪ್ರತಿ ದಿನವೂ 50% ಅವರ ಫುಟೇಜ್ ಪ್ರಸಾರ ಆಗುವುದು. ಪಕ್ಕಾ ಮನರಂಜನೆ ಕೊಡುವ ಸ್ಪರ್ಧಿ ಬಗ್ಗೆ ಗಗನಾ ಮಾತನಾಡಿಲ್ಲ.

ಗಗನಾ ಬಗ್ಗೆ ಗಿಲ್ಲಿ ನಟ ಕಾಮಿಡಿ
ಹೌದು, ಮಹಾನಟಿ ಶೋನಲ್ಲಿ ಮುಗ್ಧ ಮಾತುಗಳಿಂದ ಮನಸ್ಸು ಗೆದ್ದಿದ್ದ ಗಗನಾ ಭಾರಿ ಅವರು ‘ಭರ್ಜರಿ ಬ್ಯಾಚುಲರ್ಸ್’, ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಶೋನಲ್ಲಿ ಭಾಗವಹಿಸಿದ್ದರು. ಆ ವೇಳೆ ಗಿಲ್ಲಿ ನಟ ಅವರ ಜೊತೆ ವೇದಿಕೆ ಮೇಲೆ ಒಂದಿಷ್ಟು ಮಾತುಕತೆ ನಡೆಯುತ್ತಿತ್ತು. ನಾನು ಗಗನಾಳನ್ನು ಪ್ರೀತಿಸುತ್ತಿದ್ದೇನೆ ಎಂದು ಗಿಲ್ಲಿ ಅವರು ಕಾಮಿಡಿ ಮಾಡುತ್ತಿದ್ದರು. ಇವರಿಬ್ಬರ ಫನ್ ವಿಡಿಯೋಗಳು ಈಗಲೂ ಸೋಶಿಯಲ್ ಮೀಡಿಯಾದಲ್ಲಿ ಸೌಂಡ್ ಮಾಡುತ್ತಿರುತ್ತವೆ.
ಗಗನಾ ಮಾತನಾಡಿಲ್ಲ
ಈಗ ಯುಟ್ಯೂಬರ್ಸ್ ಗಗನಾ ಭಾರಿ ಜೊತೆ ಮಾತನಾಡುವಾಗ ಗಿಲ್ಲಿ ನಟನ ಬಗ್ಗೆ ಮಾತನಾಡಿದ್ದಾರೆ. ಆದರೆ ಗಗನಾ ಮಾತ್ರ ಗಿಲ್ಲಿ ಬಗ್ಗೆ ಮಾತನಾಡಿಲ್ಲ, ವಿಶ್ ಕೂಡ ಮಾಡಿಲ್ಲ. ಗೌತಮಿ ಜಾಧವ್, ಕಾರುಣ್ಯಾ ರಾಮ್‌ರಿಂದ ಹಿಡಿದು ಅನೇಕರು ಗಿಲ್ಲಿ ಬಗ್ಗೆ ಮಾತನಾಡಿದ್ದುಂಟು. ಆದರೆ ಗಗನಾ ಮಾತ್ರ ಏನೂ ಹೇಳಿಲ್ಲ, ಇದು ವೀಕ್ಷಕರಿಗೆ ಸಿಟ್ಟು ತಂದಿದೆ.
ಹಾರಿಕೆ ಉತ್ತರ ಕೊಟ್ಟರು
ಯಾರು ಚೆನ್ನಾಗಿ ಆಡುತ್ತಾರೋ ಅವರೇ ಗೆಲ್ಲಬೇಕು, ನಾನು ಬಿಗ್ ಬಾಸ್ ಶೋವನ್ನು ಅಷ್ಟಾಗಿ ನೋಡುತ್ತಿಲ್ಲ, ಕ್ಲಿಪ್ಪಿಂಗ್ಸ್ ನೋಡಿದ್ದೇನೆ. ಅಷ್ಟೇ ಎಂದು ಯುಟ್ಯೂಬರ್ಸ್ ಪ್ರಶ್ನೆಗೆ ಗಗನಾ ಬಾರಿ ಅವರು ಉತ್ತರ ನೀಡಿದ್ದಾರೆ.
ಗಿಲ್ಲಿ ನಟನಿಗೆ ವಿಶ್ ಮಾಡ್ತೀರಾ?
ಗಿಲ್ಲಿ ನಟ ಅವರು ನಿಮಗೆ ಪರಿಚಯ ಇದ್ದಾರೆ ಅಲ್ವಾ? ಅವರಿಗೆ ನೀವು ವಿಶ್ ಮಾಡ್ತೀರಾ ಎಂದು ಪ್ರಶ್ನೆ ಕೇಳಲಾಗಿತ್ತು. ಆಗ ಗಗನಾ ಅವರು ಎಲ್ಲರಿಗೂ ವಿಶ್ ಮಾಡ್ತೀನಿ ಎಂದು ಹೇಳಿದ್ದಾರೆ.
ಕಾಮೆಂಟ್ ಮಾಡ್ತಿರೋ ವೀಕ್ಷಕರು
ಗಗನಾ ಮಾತು ಕೇಳಿ ನೂರಾರು ಜನರು ಕಾಮೆಂಟ್ ಮಾಡುತ್ತಿದ್ದಾರೆ. ಗಗನಾ ಅವರಿಗೆ ಸೊಕ್ಕು, ಗಿಲ್ಲಿ ನಟನಿಗೆ ವಿಶ್ ಮಾಡಬಹುದಿತ್ತು. ಸೆಲೆಬ್ರಿಟಿ ಆಗಿದ್ದೀನಿ ಎನ್ನೋ ಅಹಂಕಾರ ಬಂದಿದೆ ಎಂದೆಲ್ಲ ಕಾಮೆಂಟ್ ಮಾಡುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

