- Home
- Entertainment
- TV Talk
- BBK 12: ಇದ್ದಕ್ಕಿದ್ದಂತೆ ಗಿಲ್ಲಿ ನಟನನ್ನು ಕಂಡ್ರೆ ರಕ್ಷಿತಾಗೆ ಯಾಕೆ ಆಗ್ತಿಲ್ಲ? ಸತ್ಯ ಹೇಳಿದ Risha Gowda!
BBK 12: ಇದ್ದಕ್ಕಿದ್ದಂತೆ ಗಿಲ್ಲಿ ನಟನನ್ನು ಕಂಡ್ರೆ ರಕ್ಷಿತಾಗೆ ಯಾಕೆ ಆಗ್ತಿಲ್ಲ? ಸತ್ಯ ಹೇಳಿದ Risha Gowda!
Bigg Boss Kannada Season 12 Episode Update: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ರಕ್ಷಿತಾ ಶೆಟ್ಟಿ ಹಾಗೂ ಗಿಲ್ಲಿ ನಟ ನಡುವೆ ಒಳ್ಳೆಯ ಬಾಂಧವ್ಯ ಇತ್ತು. ಈಗ ಇವರಿಬ್ಬರು ಬೇರೆ ಬೇರೆ ಎನ್ನೋ ಥರ ಆಗಿದೆ. ಗಿಲ್ಲಿಯನ್ನು ರಕ್ಷಿತಾ ವಿರೋಧಿಸುತ್ತಿರೋದು ಯಾಕೆ ಎಂದು ರಿಷಾ ಗೌಡ ಹೇಳಿದ್ದಾರೆ.

ರಕ್ಷಿತಾ ಸ್ಮಾರ್ಟ್ ಇದ್ದಾಳೆ
“ರಕ್ಷಿತಾ ಸ್ಮಾರ್ಟ್ ಇದ್ದಾಳೆ, ತುಂಬಾನೇ ಸ್ಮಾರ್ಟ್ ಇರೋ ಹುಡುಗಿ. ಬಿಗ್ ಬಾಸ್ ಮನೆಯಲ್ಲಿ ತುಂಬ ಯಂಗ್, ಚಿಕ್ಕ ಹುಡುಗಿ. ಅವಳು ಎಷ್ಟೊಂದು ವಿಷಯದಲ್ಲಿ ಸೆನ್ಸಿಬಲ್ ಆಗಿ ಮಾತಾಡಿಸ್ತಾಳೆ. ಅವಳಿಗೆ ಯಾರಾದರೂ ನೋವಲ್ಲಿದ್ರೆ, ಅದನ್ನು ತಡ್ಕೊಳ್ಳಕೆ ಆಗಲ್ಲ” ಎಂದು ರಿಷಾ ಗೌಡ ಅವರು ಎಷಿಯಾನೆಟ್ ಸುವರ್ಣ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಏಕಾಂಗಿತನ ಫೀಲ್ ಮಾಡ್ತಿದೀನಿ
“ನಾನೇನೋ ಏಕಾಂಗಿತನ ಫೀಲ್ ಮಾಡ್ತಿದೀನಿ ಅಂದಾಗ ಅವಳು ಬಂದು, ಲೈಫ್ ಆರಾಮಾಗಿ ತಗೋಬೇಕು, ತಲೆ ಕೆಡಿಸ್ಕೊಬಾರದು ಅಂತೆಲ್ಲ ಹೇಳುತ್ತಾಳೆ. ಆಗ ಅವಳು ಪ್ರಪಂಚ ನೋಡಿರೋ ದೃಷ್ಟಿ ಬೇರೆ, ಅವಳು ಒಬ್ಬಳೇ ಬೆಳೆದಿದ್ದಾಳೆ ಅಂತ ನನಗೆ ಫೀಲ್ ಆಗುವುದು. ತುಂಬ ಸಮಯದಿಂದ ಒಬ್ಬಳೇ ಬೆಳೆದಿದ್ದಾಳೆ, ಅದಕ್ಕೋಸ್ಕರ ಮನೆಯಲ್ಲಿ ಎಷ್ಟೊಂದು ಜನಕ್ಕೆ ಇಲ್ಲದಿರುವ ಮೆಚುರಿಟಿ ಆ ಹುಡುಗಿಗೆ ಇದೆ ಅಂತ ನನಗೆ ಪರ್ಸನಲಿ ಫೀಲ್ ಆಗಿದೆ” ಎಂದು ರಿಷಾ ಗೌಡ ಹೇಳಿದ್ದಾರೆ.
ಕನ್ನಡದ ಬಗ್ಗೆ ವಿರೋಧ ಇತ್ತು
“ರಕ್ಷಿತಾ ಅವರ ಕನ್ನಡದ ಬಗ್ಗೆ ನನಗೆ ವಿರೋಧ ಇತ್ತು, ಫೇಕ್ ಆಗಿ ಮಾತಾಡ್ತಾರೆ ಅಂತ ಅನಿಸಿತ್ತು. ಆ ಹುಡುಗಿಗೆ ಕನ್ನಡ ಬರುತ್ತದೆ. ರಕ್ಷಿತಾ ಕನ್ನಡ ಮಾತಾಡಬೇಕಾದ್ರೆ ಸ್ಪಷ್ಟತೆ ಇರುತ್ತದೆ. ಫುಲ್ ಚೆನ್ನಾಗಿ ಕನ್ನಡ ಮಾತಾಡ್ತಾರೆ. ಕಂಟೆಂಟ್‌ಗೋಸ್ಕರನೇ ವೀಕೆಂಡ್ ಬಂದಾಗ ತೊದಲುವ ಥರ ಮಾತಾಡ್ತಿದ್ದಾರಾ ಅನ್ನೋದು ಒಂದು ಫೀಲ್ ಆಯ್ತು. ಈಗ ಚೆನ್ನಾಗಿ ಮಾತಾಡ್ತಾ ಇದ್ದಾರೆ, ಆಮೇಲೆ ಕಲ್ತಿದ್ದಾರೆ ಎಂದು ನಾನು ಹೇಳಬಹುದು” ಎಂದಿದ್ದಾರೆ.
ಹೊರಗಡೆ ಬಂದಿರೋದಿಕ್ಕೆ ಬೇಸರ ಇಲ್ಲ
“ಫೇಕ್ ಆಗಿ ಇದ್ದಿದ್ರೆ ಇನ್ನೊಂದು ಮೂರು ವಾರ ಇರ್ತಾ ಇದ್ನೇನೋ ಅಂತ ಅನಿಸಿದೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ನೀವು ಈ ವಾರ ಬರಬಾರದಿತ್ತು ಎಂದು ಹೇಳಿದರು. ನನಗೆ ಹೊರಗಡೆ ಬಂದಿರೋದಿಕ್ಕೆ ಬೇಸರ ಇಲ್ಲ. ಈಗ ಖುಷಿಯಾಗಿ, ಪಾಸಿಟಿವ್ ಆಗಿದೀನಿ” ಎಂದಿದ್ದಾರೆ.
ಏಕಾಗ್ರತೆ ಹಾಳು ಮಾಡಬೇಕಿತ್ತು
“ಅಶ್ವಿನಿ ಗೌಡ, ಅಭಿಷೇಕ್ ಅವರ ಏಕಾಗ್ರತೆ ಹಾಳು ಮಾಡಬೇಕಿತ್ತು. ಆಗ ಗಿಲ್ಲಿ ನಟ ಮಾತಾಡಿದ್ದು ನೋಡಿ ನಾವೆಲ್ಲ ನಕ್ಕಿದ್ದೇವೆ, ಆದರೆ ಇದು ತೀರ ಪರ್ಸನಲ್ ಆಯ್ತು ಎಂದು ರಕ್ಷಿತಾ ಹೇಳಿದ್ದಾಳೆ. ಇದೇ ವಿಚಾರಕ್ಕೆ ಅವಳಿಗೆ ಬೇಸರ ಆಗಿದೆ. ರಕ್ಷಿತಾಗೆ ಇದು ಆಟ ಎಂದು ಗಿಲ್ಲಿ ನಟ ಹೇಳಿದರೂ ಕೂಡ ಅವಳು ಕೇಳಲಿಲ್ಲ” ಎಂದಿದ್ದಾರೆ ರಿಷಾ ಗೌಡ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

