- Home
- Entertainment
- TV Talk
- Bigg Boss ಮನೆಯಲ್ಲಿ ರಕ್ಷಿತಾ ಶೆಟ್ಟಿ ಒಂಥರಾ ಲಕ್ಕಿ; ನಾಲ್ಕರಲ್ಲಿ ಮೂರು ಸತ್ಯ ಆಯ್ತು! ಇದು ಕಾಕತಾಳೀಯನಾ?
Bigg Boss ಮನೆಯಲ್ಲಿ ರಕ್ಷಿತಾ ಶೆಟ್ಟಿ ಒಂಥರಾ ಲಕ್ಕಿ; ನಾಲ್ಕರಲ್ಲಿ ಮೂರು ಸತ್ಯ ಆಯ್ತು! ಇದು ಕಾಕತಾಳೀಯನಾ?
ಬಿಗ್‌ಬಾಸ್ ಮನೆಯಲ್ಲಿರುವ ಸ್ಪರ್ಧಿ ರಕ್ಷಿತಾ ಶೆಟ್ಟಿ ಅವರನ್ನು ಅದೃಷ್ಟವಂತೆ ಎಂದು ಕರೆಯಲಾಗುತ್ತಿದೆ. ಅವರು ಅಂದುಕೊಂಡ ಹಲವು ವಿಷಯಗಳು ಮನೆಯಲ್ಲಿ ನಿಜವಾಗಿದ್ದು, ಈಗಾಗಲೇ ಮೂರು ಘಟನೆಗಳು ಸತ್ಯವಾಗಿವೆ ಮತ್ತು ನಾಲ್ಕನೆಯದು ಸತ್ಯವಾಗುವುದೇ ಎಂದು ಕಾದು ನೋಡಲಾಗುತ್ತಿದೆ.

ರಕ್ಷಿತಾ ಶೆಟ್ಟಿ ಒಂಥರಾ ಲಕ್ಕಿ
ಬಿಗ್‌ಬಾಸ್ ಮನೆಯಲ್ಲಿರುವ ರಕ್ಷಿತಾ ಶೆಟ್ಟಿ ಅವರನ್ನು ವೀಕ್ಷಕರು ಅದೃಷ್ಟವಂತೆ ಎಂದು ಕರೆಯುತ್ತಿದ್ದಾರೆ. ರಕ್ಷಿತಾ ಶೆಟ್ಟಿ ಅಂದುಕೊಂಡಿದೆಲ್ಲಾ ಬಿಗ್‌ಬಾಸ್ ಮನೆಯಲ್ಲಿ ಸತ್ಯವಾಗುತ್ತಿದೆ. ತುಳುನಾಡಿನ ಪುಟ್ಟಿ ಅಂದುಕೊಂಡಿದ್ದ ನಾಲ್ಕು ವಿಷಯಗಳ ಪೈಕಿ ಮೂರು ಮಾತುಗಳು ಸತ್ಯವಾಗಿದೆ.
ರಕ್ಷಿತಾ ಶೆಟ್ಟಿ
ರಕ್ಷಿತಾ ಶೆಟ್ಟಿ ಲಕ್ಕಿ, ಇವ್ಳು ಅಂದುಕೊಂಡಿದ್ದು ಆಗ್ತಾನೆ ಇದೆ. ಇವಳು ತಗೋಳೋ ತಪ್ಪು ನಿರ್ಧಾರನೂ ಒಳ್ಳೇದೇ ಆಗುತ್ತೆ ಎಷ್ಟೋ ಸಲ ಎಂದು ಶ್ವೇತಾ ಎಂಬವರು ಬರೆದುಕೊಂಡು ಪೋಸ್ಟ್ ಮಾಡಿಕೊಂಡಿದ್ದಾರೆ. ರಘು ಜೊತೆ ಮಗಳಾಗಿ ನಟನೆ ಮಾಡಿದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಸತ್ಯವಾದ ಮೂರು ಮಾತುಗಳು ಯಾವವು ಎಂದು ನೋಡೋಣ ಬನ್ನಿ.
ಮಾತು 2
ಸುದೀಪ್ ಅವರು ಮನೆಯಿಂದ ಯಾರನ್ನು ಹೊರಗೆ ಕಳುಹಿಸುತ್ತೀರಿ ಎಂದು ಕೇಳಿದಾಗ, ರಕ್ಷಿತಾ ಶೆಟ್ಟಿ ಎಲ್ಲರನ್ನು ಅಂತಾ ಹೇಳಿದ್ದರೆ. ಜಾಲಿವುಡ್ ಸ್ಟುಡಿಯೋ ನಿಯಮ ಉಲ್ಲಂಘನೆ ಹಿನ್ನೆಲೆ ಬಿಗ್‌ಬಾಸ್ ಮನೆಗೆ ಬೀಗ ಬಿದ್ದಿತ್ತು. ಸುಮಾರು 24 ಗಂಟೆಗೂ ಅಧಿಕ ಕಾಲ ಸ್ಪರ್ಧಿಗಳೆಲ್ಲರೂ ಮನೆಯಿಂದ ಹೊರಗಡೆ ಇರುವಂತಾಗಿತ್ತು.
ಮಾತು 3
ಕೆಲ ದಿನಗಳ ಹಿಂದೆಯಷ್ಟೇ ಮಾಳು ಅವರಿಗೆ ಅಲ್ಬಂನಲ್ಲಿ ತಮಗೆ ನಾಯಕಿಯ ಪಾತ್ರ ನೀಡುವಂತೆ ಕೇಳಿಕೊಂಡಿದ್ದರು. ಇದೇ ವೇಳೆ ರಘು ಅವರನ್ನು ತೋರಿಸಿ ಇವರು ನಾಯಕಿಯ ಅಪ್ಪನ ಪಾತ್ರ ಮಾಡಲಿ ಅಂದಿದ್ರು. ಕಾಕತಾಳೀಯ ಎಂಬಂತೆ ರಘು ಮತ್ತು ರಕ್ಷಿತಾ ತಂದೆ-ಮಗಳಾಗಿ ನಟನೆ ಮಾಡಿದ್ದಾರೆ.
ಮಾತು 4
ಮುಖಕ್ಕೆ ಕಪ್ಪು ಮಸಿ ಬಳಿಯುವ ಪ್ರಕ್ರಿಯೆ ವೇಳೆ ಅಶ್ವಿನಿ ಗೌಡ ಅವರನ್ನೇ ಮೊದಲು ಕಳುಹಿಸಿ ನಾನು ಬಿಗ್‌ಬಾಸ್ ಮನೆಯಿಂದ ಹೋಗುತ್ತೇನೆ ಎಂದು ರಕ್ಷಿತಾ ಶೆಟ್ಟಿ ಹೇಳಿದ್ದಾರೆ. ಸದ್ಯ ಮನೆಯಲ್ಲಿ ಅಶ್ವಿನಿ ಗೌಡ ಸಹ ಪ್ರಬಲ ಅಭ್ಯರ್ಥಿಯಾಗಿದ್ದು, ಸುದೀಪ್ ಸಲಹೆ ಮೇರೆಗೆ ತಮ್ಮ ಆಟದ ವೈಖರಿಯನ್ನು ಬದಲಿಸಿಕೊಂಡಿದ್ದಾರೆ. ಹಾಗಾಗಿ ರಕ್ಷಿತಾ ಶೆಟ್ಟಿ ಅವರ ಈ ಮಾತು ಸತ್ಯವಾಗುತ್ತಾ ಎಂಬುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.
ಇದನ್ನೂ ಓದಿ: Bigg Boss ಗಿಲ್ಲಿ ನಟನ ಬಗ್ಗೆ ರಜನಿಕಾಂತ್ ಮಾತಾಡಿದ್ದು ಸತ್ಯವೇ? ಅವ್ರ ಪತ್ನಿ ವಿಡಿಯೋ ತೋರಸ್ತಾರಾ?
ನೆಟ್ಟಿಗರಿಂದ ಮೆಚ್ಚುಗೆ
ಶ್ವೇತಾ ಅವರ ಪೋಸ್ಟ್‌ಗೆ ಕಮೆಂಟ್ ಮಾಡಿರುವ ನೆಟ್ಟಿಗರು, ಮೇಲಿನ ನಿಮ್ಮ ಅನಿಸಿಕೆ ನಿಜ. ಅವಳು ಒಂಥರಾ lucky ಚಾರ್ಮ್. ಎಂತ ಕೇಳಿದ್ರು ಆಗ್ತದೆ, ಯಾವುದೇ ಟೀಂಗೆ ಹೋಗಲಿ ಅಲ್ಲಿ ಗೆಲುವು ಸಿಗಲಿದೆ. ನನ್ನ ಅಪ್ಪನ ಮಾಡಿ ರಘು ಅವರನ್ನು ಎಂದು ಮಾಳು ಹತ್ತಿರ ಹೇಳಿದಾಗ ರಘು ಅವರು ಸಿಟ್ಟು ಮಾಡಿಕೊಂಡು ಸ್ವಿಮ್ಮಿಂಗ್ ಪೂಲ್ ಗೆ ಹಾಕ್ತೀನಿ ಎಂದು ಹೇಳಿದ್ದರು. ಆದರೆ ನಿನ್ನೆ ಈ ಅಪ್ಪ-ಮಗಳ ನಟನೆ ಕಣ್ಣೀರು ತರಿಸಿತು ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ಇದನ್ನೂ ಓದಿ: ಅತಿಥಿಗಳ ಮುಂದೆ ಬಿಗ್‌ಬಾಸ್ ಮನೆಯಲ್ಲಿರೋ ರಹಸ್ಯ ಬಾಗಿಲು ಹೇಳಿದ ಗಿಲ್ಲಿ ನಟ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

