Bhagyalakshmi ಯಾರೂ ಊಹಿಸದ ಟ್ವಿಸ್ಟ್: ಬಹು ದೊಡ್ಡ ತೀರ್ಮಾನ ತೆಗೆದುಕೊಂಡ ಆದಿ- ಏನದು?
ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ, ಭಾಗ್ಯಳಿಂದ ಸ್ಫೂರ್ತಿ ಪಡೆದ ಆದಿ ತನ್ನ ಸಾವಿರಾರು ಕೋಟಿ ರೂಪಾಯಿ ಕಂಪನಿಯನ್ನು ತಂಗಿ ಕನ್ನಿಕಾಗೆ ಬಿಟ್ಟುಕೊಟ್ಟು ಸ್ವಾವಲಂಬಿ ಬದುಕು ಆರಂಭಿಸಿದ್ದಾನೆ. ಭಾಗ್ಯಳಲ್ಲಿ ತನ್ನ ತಾಯಿಯನ್ನು ಕಾಣುವ ಆದಿ, ಆಕೆಯ ಜೊತೆ ಹೊಸ ಸ್ನೇಹದ ಅಧ್ಯಾಯವನ್ನು ಪ್ರಾರಂಭಿಸುತ್ತಿದ್ದಾರೆ.

ರೋಲ್ ಮಾಡೆಲ್
ಭಾಗ್ಯಲಕ್ಷ್ಮಿ (Bhagyalakshmi) ಸೀರಿಯಲ್‌ನಲ್ಲಿ ಸದ್ಯ ಆದಿ ತನ್ನ ಹಿಂದಿನ ನೋವನ್ನೆಲ್ಲಾ ಮರೆತು ಮುಂದುವರೆಯಲು ಇಷ್ಟಪಡುತ್ತಿದ್ದಾನೆ. ಭಾಗ್ಯಳೇ ಆತನಿಗೆ ರೋಲ್ ಮಾಡೆಲ್. ಆಕೆಯಂತೆಯೇ ಬದುಕುವ ಪಣ ತೊಟ್ಟಿದ್ದಾನೆ ಆದಿ!
ಅಮ್ಮನ ಪ್ರೀತಿ
ಭಾಗ್ಯಳಲ್ಲಿ ತನ್ನ ಸತ್ತುಹೋಗಿರುವ ಅಮ್ಮನ ಪ್ರೀತಿ ಕಾಣುತ್ತಿದ್ದಾನೆ ಆದಿ. ಆಕೆಯಂತೆಯೇ ಸ್ವಾವಲಂಬನೆಯ ಬದುಕು ನಡೆಸುವ ಇಚ್ಛೆ ವ್ಯಕ್ತಪಡಿಸಿದ್ದಾನೆ. ಇದೇ ಕಾರಣಕ್ಕೆ ಇದೀಗ ಬಹುದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾನೆ.
ತಂಗಿಗೆ ಕಂಪೆನಿ
ತನ್ನ ಸಾವಿರಾರು ಕೋಟಿ ರೂಪಾಯಿಗಳ ಕಂಪೆನಿಯನ್ನು ತಂಗಿ ಕನ್ನಿಕಾಗೆ ಬಿಟ್ಟುಕೊಟ್ಟು ಜೀರೋದಿಂದ ಹೀರೋ ಆಗುತ್ತೇನೆ ಎಂದು ಹೊರಟೇ ಬಿಟ್ಟಿದ್ದಾನೆ ಆದಿ.
ಸ್ವಾವಲಂಬಿ ಬದುಕು
ನನಗೆ ಭಾಗ್ಯಳೇ ಇನ್ಸ್ಪಿರೇಷನ್. ಯಾರ ಸಹಾಯವೂ ಇಲ್ಲದೇ ಆಕೆ ಹೇಗೆ ಬದುಕುತ್ತಿದ್ದಾರೆ, ಅದೇ ರೀತಿ ನಾನೂ ಸ್ವಾವಲಂಬಿಯಾಗಿ ಬದುಕಬೇಕು ಎಂದಿದ್ದಾನೆ ಆದಿ.
ಕನ್ನಿಕಾ ಖುಷಿ
ಕಂಪೆನಿಯನ್ನು ತನ್ನ ಹೆಸರಿಗೆ ಬಿಟ್ಟುಕೊಟ್ಟಿದ್ದಕ್ಕೆ ಕನ್ನಿಕಾ ಖುಷಿಯಿಂದ ಕುಣಿದಾಡುತ್ತಿದ್ದಾಳೆ. ಇನ್ನು ಆಕೆಯ ಕಂಪೆನಿಯ ಒಡತಿ ಎಂದು ತಿಳಿದರೆ ಶ್ರೇಷ್ಠಾ ಮತ್ತು ತಾಂಡವ್ ಕಂಪೆನಿಗೆ ವಾಪಸ್ ಆಗುವ ಸಾಧ್ಯತೆಯೂ ಇದೆ. ಆದರೆ ಭಾಗ್ಯನೇ ಇಲ್ಲ ಎಂದ ಮೇಲೆ ಕನ್ನಿಕಾ ಯಾವ ರೀತಿಯ ತೀರ್ಮಾನ ತೆಗೆದುಕೊಳ್ಳುತ್ತಾಳೋ ಕಾದು ನೋಡಬೇಕಿದೆ.
ಭಾಗ್ಯಳ ಹಿಂದೆ ಆದಿ
ಅದೇ ಇನ್ನೊಂದೆಡೆ, ವಾಹಿನಿ ಶೇರ್ ಮಾಡಿರುವ ಪ್ರೊಮೋದಲ್ಲಿ ಭಾಗ್ಯ ಟೂ ವ್ಹೀಲರ್ ಓಡಿಸಿಕೊಂಡು ಹೋಗುತ್ತಿದ್ದರೆ, ಆದಿ ಹಿಂದೆ ಕುಳಿತಿದ್ದಾನೆ. ಅಲ್ಲಿಗೆ ಅವರಿಬ್ಬರ ಹೊಸ ಅಧ್ಯಾಯ ಆರಂಭವಾಗಲಿದೆ.
ಮದುವೆ ಬೇಡ
ಅಷ್ಟಕ್ಕೂ ಇವರಿಬ್ಬರೂ ಹೀಗೆ ಸ್ನೇಹಿತರಾಗಿದ್ದರೆ ಚೆನ್ನ. ಅವರನ್ನು ಮದುವೆ ಮಾಡಬೇಡಿ ಎಂದು ಇದಾಗಲೇ ವೀಕ್ಷಕರು ಕೂಡ ಅಭಿಪ್ರಾಯ ಪಡುತ್ತಿದ್ದಾರೆ. ಇವರ ಸ್ನೇಹ ನೋಡುವುದಕ್ಕೆ ಖುಷಿಯಾಗುತ್ತದೆ. ಮದುವೆ ಎನ್ನುವ ಬಂಧದಲ್ಲಿ ಕಟ್ಟಿಹಾಕಿ ಸಂಬಂಧ ಹಾಳು ಮಾಡಬೇಡಿ ಎನ್ನುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

