- Home
- Entertainment
- TV Talk
- ಸಾವಿಗೂ ಕೆಲ ಗಂಟೆ ಮುನ್ನ ಇನ್‌ಸ್ಟಾಗ್ರಾಮ್ ಪೋಸ್ಟ್ ಹಂಚಿಕೊಂಡಿದ್ದ ಕಾಮಿಡಿ ಕಿಲಾಡಿ ರಾಕೇಶ್ ಪೂಜಾರಿ!
ಸಾವಿಗೂ ಕೆಲ ಗಂಟೆ ಮುನ್ನ ಇನ್‌ಸ್ಟಾಗ್ರಾಮ್ ಪೋಸ್ಟ್ ಹಂಚಿಕೊಂಡಿದ್ದ ಕಾಮಿಡಿ ಕಿಲಾಡಿ ರಾಕೇಶ್ ಪೂಜಾರಿ!
ಕಾಮಿಡಿ ಕಿಲಾಡಿಗಳು ಶೋನಲ್ಲಿ ಭಾಗವಹಿಸಿ, ಜನರನ್ನು ನಕ್ಕು ನಗಿಸಿದ್ದ ರಾಕೇಶ್ ಪೂಜಾರಿ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಲವಲವಿಕೆಯಿಂದ ಇರುತ್ತಿದ್ದ ರಾಕೇಶ್ ಬದುಕಲ್ಲಿ ವಿಧಿ ಅಟ ಆಡಿದೆ. ಈಗ ಇವರ ಇನ್‌ಸ್ಟಾಗ್ರಾಮ್ ಪೋಸ್ಟ್ ಮಾತ್ರ ಇನ್ನಷ್ಟು ದುಃಖ ಬರುವ ಹಾಗೆ ಮಾಡಿದೆ. ಏನದು?

ʼಕಾಮಿಡಿ ಕಿಲಾಡಿಗಳುʼ ಹಾಗೂ ʼಹಿಟ್ಲರ್ ಕಲ್ಯಾಣʼ ಧಾರಾವಾಹಿ ಖ್ಯಾತಿಯ ನಟ ರಾಕೇಶ್ ಪೂಜಾರಿ ಅವರು ಮೇ 12 ರ ಬೆಳಗ್ಗಿನ ಜಾವ 1.30ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಬ್ಯುಸಿಯಾಗುತ್ತಿದ್ದ ಈ ನಟ ನಿನ್ನೆ ರಾತ್ರಿ ಸ್ನೇಹಿತರ ಮನೆಯ ಆರತಕ್ಷತೆಯಲ್ಲಿ ಭಾಗಿಯಾಗಿದ್ದರು.
ʼಹಿಟ್ಲರ್ ಕಲ್ಯಾಣʼ ಧಾರಾವಾಹಿಯಲ್ಲಿ ಹೀರೋ ದಿಲೀಪ್ ರಾಜ್ ಅವರ ಪಿಎ ಪಾತ್ರದಲ್ಲಿ ನಟಿಸುತ್ತಿದ್ದರು. ತೆರೆ ಮೇಲೆ ಬಂದರೆ ಸಾಕು, ಅವರು ನಗುವಿನ ಹೊಳೆ ಹರಿಸುತ್ತಿದ್ದರು. ರಾಕೇಶ್ ಪೂಜಾರಿ ಸಾವು ಎಲ್ಲರಿಗೂ ಶಾಕ್ ಉಂಟು ಮಾಡಿದೆ.
ಕಾಮಿಡಿ ಕಿಲಾಡಿಗಳು ಶೋ ಖ್ಯಾತಿಯ ಶಿವರಾಜ್ ಕೆ ಆರ್ ಪೇಟೆ, ಗೋವಿಂದೇ ಗೌಡ, ಹಿತೇಶ್ ಮುಂತಾದವರು “ನಂಬಲು ಆಗುತ್ತಿಲ್ಲ” ಎಂದು ಹೇಳಿದ್ದಾರೆ.
ರಾಕೇಶ್ ಪೂಜಾರಿ ಅವರು ಕಳೆದ ರಾತ್ರಿ ಸ್ನೇಹಿತರ ಮದುವೆಯಲ್ಲಿ ಭಾಗಿಯಾಗಿದ್ದರು. ಆರತಕ್ಷತೆಯಲ್ಲಿ ಭಾಗಿಯಾಗಿ ನವಜೋಡಿಗೆ ಶುಭ ಹಾರೈಸಿದ್ದಾರೆ. ಅಷ್ಟೇ ಅಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಕೂಡ ಈ ಸ್ಟೋರಿ ಶೇರ್ ಮಾಡಿದ್ದರು.
ಇನ್ನು ಸ್ನೇಹಿತರ ಜೊತೆ ಅವರು ಕೆಫೆಯೊಂದರಲ್ಲಿ ಒಂದಷ್ಟು ಸಮಯವನ್ನು ಕಳೆದಿದ್ದಾರೆ. ಈ ಫೋಟೋವನ್ನು ಕೂಡ ಅವರು ಶೇರ್ ಮಾಡಿದ್ದರು.
ರಾಕೇಶ್ ಪೂಜಾರಿ ಅವರು ಸುಷ್ಮಿತಾ ಎನ್ನುವವರಿಗೆ “ಜನ್ಮದಿನದ ಶುಭಾಶಯ ಸಹೋದರಿ” ಎಂದು ಕೂಡ ಪೋಸ್ಟ್ ಹಂಚಿಕೊಂಡಿದ್ದರು. ಇಷ್ಟು ಆಕ್ಟಿವ್ ಆಗಿದ್ದ ರಾಕೇಶ್ ಪೂಜಾರಿ ಹೃದಯಾಘಾತದಿಂದ ನಿಧನರಾಗ್ತಾರೆ ಎಂದರೆ ಏನು ಹೇಳೋಣ?