ರಘು ಹಾಸನ್‌ ನಿರ್ದೇಶಿಸಿ, ನಿರ್ಮಿಸಿರುವ ‘ನಾನು ಮತ್ತು ಗುಂಡ 2’ ಚಿತ್ರದ ಟೀಸರ್‌ ಅನ್ನು ನಿರ್ಮಾಪಕ ವಿಜಯ್‌ ಕಿರಗಂದೂರ್‌ ಅವರ ಪತ್ನಿ ಶೈಲಜಾ ಕಿರಗಂದೂರ್‌ ಬಿಡುಗಡೆ ಮಾಡಿದರು. 

ರಘು ಹಾಸನ್‌ ನಿರ್ದೇಶಿಸಿ, ನಿರ್ಮಿಸಿರುವ ‘ನಾನು ಮತ್ತು ಗುಂಡ 2’ ಚಿತ್ರದ ಟೀಸರ್‌ ಅನ್ನು ನಿರ್ಮಾಪಕ ವಿಜಯ್‌ ಕಿರಗಂದೂರ್‌ ಅವರ ಪತ್ನಿ ಶೈಲಜಾ ಕಿರಗಂದೂರ್‌ ಬಿಡುಗಡೆ ಮಾಡಿದರು. ರಾಕೇಶ್‌ ಅಡಿಗ, ರಚನಾ ಇಂದರ್‌ ಜೋಡಿಯಾಗಿ ನಟಿಸಿರುವ ಈ ಚಿತ್ರಕ್ಕೆ ಆರ್‌ ಪಿ ಪಟ್ನಾಯಕ್‌ ಸಂಗೀತ ನೀಡಿದ್ದಾರೆ. ನಿರ್ದೇಶಕ ರಘು ಹಾಸನ್‌, ಮೊದಲ ಪಾರ್ಟ್‌ಗಿಂತಲೂ ಎರಡನೇ ಪಾರ್ಟ್‌ ಕತೆಯನ್ನು ತುಂಬಾ ಅದ್ದೂರಿಯಾಗಿ ಮಾಡಿದ್ದೇನೆ. ಮೊದಲ ಭಾಗದ ಕತೆಗೆ ಎರಡನೇ ಭಾಗದ ಕತೆ ಲಿಂಕ್‌ ಇದೆ. ಅಂದರೆ ಮೊದಲ ಭಾಗದಲ್ಲಿ ಶಿವರಾಜ್‌ ಕೆ ಆರ್‌ ಪೇಟೆಗೆ ಒಬ್ಬ ಮಗ ಆಗುತ್ತಾನೆ. ಅದೇ ರೀತಿ ನಾಯಿ ಸಿಂಬಾಗೂ ಮರಿ ಆಗುತ್ತದೆ. 

ಆ ಇಬ್ಬರ ಕತೆ ಪಾರ್ಟ್‌ 2ನಲ್ಲಿ ಮುಂದುವರಿದಿದೆ. 5 ಭಾಷೆಗಳಲ್ಲಿ ಸಿನಿಮಾ ಬರುತ್ತಿದೆ ಎಂದರು. ರಾಕೇಶ್‌ ಅಡಿಗ, ‘ನಾನು ಇಲ್ಲಿ ಶಿವರಾಜ್‌ ಕೆ ಆರ್‌ ಪೇಟೆ ಅವರ ಮಗನ ಪಾತ್ರವನ್ನು ಮಾಡಿದ್ದೇನೆ. ಸಾಮಾನ್ಯ ಹಳ‍್ಳಿ ಹುಡುಗ ಮತ್ತು ಒಂದು ನಾಯಿ ಸುತ್ತಾ ಕತೆ ಸಾಗುತ್ತದೆ. ಸೆಂಟಿಮೆಂಟ್‌ ಜಾಸ್ತಿ ಇರುವ ಸಿನಿಮಾ ಇದು’ ಎಂದರು. ನಾಯಕಿ ರಚನಾ ಇಂದರ್‌, ‘ಈ ಚಿತ್ರದ ನಂತರ ನನ್ನನ್ನು ಪುಟ್ಟ ಮಕ್ಕಳು ಹೆಚ್ಚು ಇಷ್ಟಪಡುತ್ತಾರೆ. ಅಷ್ಟರ ಮಟ್ಟಿಗೆ ನನ್ನ ಪಾತ್ರ ಮೂಡಿ ಬಂದಿದೆ. ನಾಯಿ ಮರಿ ಜತೆಗೆ ನನ್ನ ಪಾತ್ರ ತುಂಬಾ ಮುದ್ದಾಗಿದೆ’ ಎಂದರು. ಸದ್ಯದಲ್ಲೇ ಸಿನಿಮಾ ತೆರೆಗೆ ಬರಲಿದೆ.

ರಚನಾ ಇಂದರ್‌ ನಾಯಕಿ: ರಘು ಹಾಸನ್‌ ನಿರ್ದೇಶನದ ‘ನಾನು ಮತ್ತು ಗುಂಡ 2’ ಸಿನಿಮಾಗೆ ರಚನಾ ಇಂದರ್‌ ನಾಯಕಿ. ಪ್ರಧಾನ ಪಾತ್ರದಲ್ಲಿ ನಾಯಿ ಕಾಣಿಸಿಕೊಳ್ಳುತ್ತಿದ್ದು, ಮುಖ್ಯಪಾತ್ರದಲ್ಲಿ ರಚನಾ ಇಂದರ್‌ ನಟಿಸುತ್ತಿದ್ದಾರೆ. ಚಿತ್ರದಲ್ಲಿನ ರಚನಾ ಪಾತ್ರದ ಬಗ್ಗೆ ಮಾಹಿತಿ ನೀಡಿದ ನಿರ್ದೇಶಕ ರಘು ಹಾಸನ್‌, ಈವರೆಗೆ ಕಾಣಿಸದ ವಿಭಿನ್ನ ಪಾತ್ರದಲ್ಲಿ ರಚನಾ ಇಂದರ್‌ ನಟಿಸುತ್ತಿದ್ದಾರೆ. ಶ್ರೀಮಂತ ಮಾಡರ್ನ್‌ ಹುಡುಗಿ ಗೆಟಪ್‌ನಲ್ಲಿ ಅವರು ಮಿಂಚಲಿದ್ದಾರೆ. ಆಗಸ್ಟ್‌ನಿಂದ ಅವರ ಭಾಗದ ಶೂಟಿಂಗ್‌ ಶುರುವಾಗಲಿದೆ. ಈ ಚಿತ್ರ ನಾನು ಮತ್ತು ಗುಂಡ ಸಿನಿಮಾದ ಮುಂದುವರಿದ ಭಾಗ. ಅದೇ ಕಥೆ ಮುಂದುವರಿಯುತ್ತದೆ. ಮೊದಲ ಭಾಗದಲ್ಲಿದ್ದ ನಾಯಿಯೇ ಈ ಭಾಗದಲ್ಲೂ ನಟಿಸುತ್ತಿದೆ. ಈಗಾಗಲೇ ಶಿವಮೊಗ್ಗ, ತೀರ್ಥಹಳ್ಳಿ, ಸಕಲೇಶಪುರಗಳಲ್ಲಿ ಶೂಟಿಂಗ್‌ ನಡೆದಿದೆ. 

ರಮೇಶ್‌-ಗಣೇಶ್‌ ಚಿತ್ರಕ್ಕೆ ನಾಯಕಿಯಾಗಿ ಭಾವನಾ: ಹಾಗಿದ್ರೆ ಸಿಕ್ಸ್ ಪ್ಯಾಕ್ ಸುಂದರಿ ಕತೆಯೇನು?

ಸಿಂಬ ನಾಯಿ ಡಬ್ಬಿಂಗ್‌: ರಘು ಹಾಸನ್‌ ನಿರ್ದೇಶನದ ‘ನಾನು ಮತ್ತು ಗುಂಡ 2’ ಚಿತ್ರದಲ್ಲಿ ನಟಿಸಿರುವ ಸಿಂಬ ಹೆಸರಿನ ನಾಯಿ ತನ್ನ ಪಾತ್ರಕ್ಕೆ ಡಬ್ಬಿಂಗ್ ಮಾಡಿದೆ. ಆ ಮೂಲಕ ಚಿತ್ರತಂಡ ಮತ್ತೊಂದು ವಿಶೇಷ ಸಾಹಸ ಮಾಡಿದೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಸಿಂಬ ಕಾಣಿಸಿಕೊಂಡಿದೆ. ರಾಕೇಶ್‌ ಅಡಿಗ ಚಿತ್ರದ ನಾಯಕ. ಚಿತ್ರಕ್ಕೆ ಶೂಟಿಂಗ್ ಮುಗಿದೆ. ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಮುಗಿದ ಕೂಡಲೇ ಸದ್ಯದಲ್ಲೇ ಚಿತ್ರತಂಡ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ ಮಾಡಲಿದೆ.