- Home
- Entertainment
- TV Talk
- ಗಿಲ್ಲಿಯಂತ ಕ್ರಿಮಿಯನ್ನು ಯಾರ್ ಮದುವೆ ಆಗ್ತಾರೆ, ಫಸ್ಟ್‌ನೈಟ್‌ನಲ್ಲೇ ವಿ*ಷ ಹಾಕಿ ಸಾ*ಯಿಸ್ತೀನಿ ಎಂದಿದ್ದ ನಟಿ!
ಗಿಲ್ಲಿಯಂತ ಕ್ರಿಮಿಯನ್ನು ಯಾರ್ ಮದುವೆ ಆಗ್ತಾರೆ, ಫಸ್ಟ್‌ನೈಟ್‌ನಲ್ಲೇ ವಿ*ಷ ಹಾಕಿ ಸಾ*ಯಿಸ್ತೀನಿ ಎಂದಿದ್ದ ನಟಿ!
Bigg Boss Gilli Nata: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಒನ್ ಮ್ಯಾನ್ ಶೋ ಎನ್ನುವಂತೆ ಮಾತಿನಲ್ಲಿಯೇ ಎಲ್ಲರ ಮನಸ್ಸು ಗೆದ್ದಿರುವ ಗಿಲ್ಲಿ ನಟ ಅವರಿಗೆ ಮದುವೆ ಆಗೋದು ಕಷ್ಟ ಇದೆಯಂತೆ, ಹೀಗೆಂದು ಕಾಮಿಡಿ ಕಿಲಾಡಿಗಳು ಶೋ ಸ್ಪರ್ಧಿಗಳು ಮಾತನಾಡಿದ್ದಾರೆ.

ಸಂದರ್ಶನದಲ್ಲಿ ಹೇಳಿದ್ರು
ನಿರೂಪಕಿ ಅನುಶ್ರೀ ಅವರು ಕಾಮಿಡಿ ಕಿಲಾಡಿಗಳು ಖ್ಯಾತಿಯ ಗಿಲ್ಲಿ ನಟ, ಸೂರಜ್, ನಯನಾ ಜೊತೆ ಅವರ ಯುಟ್ಯೂಬ್ ಚಾನೆಲ್‌ಗೆ ಒಂದು ಫನ್ ಇಂಟರ್‌ವ್ಯೂ ಮಾಡಿದ್ದರು. ಆ ವೇಳೆ ಗಿಲ್ಲಿ ನಟನಿಗೆ ಕೇಳಿದ ಪ್ರಶ್ನೆ, ನಯನಾ ನೀಡಿದ ಉತ್ತರ, ಆಮೇಲೆ ಗಿಲ್ಲಿ ಕೌಂಟರ್ ಕೊಟ್ಟಿರುವ ವಿಡಿಯೋ ಈಗ ವೈರಲ್ ಆಗ್ತಿದೆ.
ಅನುಶ್ರೀ ಪ್ರಶ್ನೆ ಮಾಡ್ತಾರೆ
ಫನ್ ಇಂಟರ್‌ವ್ಯೂನಲ್ಲಿ ಅನುಶ್ರೀ ಅವರು, “ಗಿಲ್ಲಿ ನಟನಿಗೆ ಮದುವೆ ಆಗೋದು ಕಷ್ಟ” ಎನ್ನುತ್ತಾರೆ. ಆಗ ಅಲ್ಲಿದ್ದವರು ಹೌದು ಎನ್ನುತ್ತಾರೆ. ಇದಕ್ಕೂ ಕಾರಣವಿದೆ. ಅದೇನು ಎಂದು ನೋಡೋಣ.
ಗಿಲ್ಲಿ ಸಹಿಸಿಕೊಳ್ಳೋದು ಕಷ್ಟ
“ನಾವು ಬೆಳಗ್ಗೆಯಿಂದ ರಾತ್ರಿಯವರೆಗೂ ಶೂಟಿಂಗ್ ಮಾಡ್ತೀವಿ. ಗಿಲ್ಲಿಯನ್ನು ಒಂದು ದಿನ ತಡೆದುಕೊಳ್ಳೋದು ಕಷ್ಟ, ಆ ಹುಡುಗಿ ಜೀವನಪೂರ್ತಿ ಹೇಗೆ ಸಹಿಸಿಕೊಳ್ತಾಳೆ?” ಎಂದು ನಯನಾ ಹೇಳಿದ್ದಾರೆ.
ವಿ*ಷ ಹಾಕಿ ಸಾ*ಯಸ್ತೀನಿ
“ನಾನೇ ಆಗಿದ್ರೆ ಫಸ್ಟ್‌ನೈಟ್‌ನಲ್ಲಿ ವಿ*ಷ ಹಾಕಿ ಸಾ*ಯಸ್ತೀನಿ” ಎಂದು ನಯನಾ ಹೇಳುತ್ತಾರೆ. ಆಗ ಗಿಲ್ಲಿ ನಟ, ನಿನ್ನನ್ನು ಮದುವೆ ಆಗೋದಾಗಿದ್ರೆ ನಾನೇ ಮೊದಲು ಸಾಯ್ತೀನಿ ಎಂದು ಹೇಳುತ್ತಾರೆ.
ಕಾಮಿಡಿಯಿಂದ ಕೂಡಿದ ಸಂಭಾಷಣೆ
ಒಟ್ಟಿನಲ್ಲಿ ಇವರ ಸಂಭಾಷಣೆ ಬಹಳ ಕಾಮಿಡಿಯಾಗಿ ನಡೆದಿದೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಈ ಹಿಂದೆ ‘ಭರ್ಜರಿ ಬ್ಯಾಚುಲರ್ಸ್’, ಡ್ಯಾನ್ಸಿಂಗ್ ಶೋ ಎಂದು ಕೆಲ ಶೋಗಳಲ್ಲಿ ಗಿಲ್ಲಿ ನಟ ಮಾಡಿದ ಕಾಮಿಡಿಗಳು ಈಗ ವೈರಲ್ ಆಗ್ತಿವೆ.
ಗಿಲ್ಲಿ ನಟನ ಕಾಮಿಡಿ ಅತಿರೇಕ ಆಯ್ತಾ?
ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ ಅವರ ಕಾಮಿಡಿ ಅತಿರೇಕ ಆಯ್ತು, ಲಿಮಿಟ್ ಮೀರಿದೆ ಎಂದು ಕೆಲ ಸ್ಪರ್ಧಿಗಳು ಅಭಿಪ್ರಾಯಪಟ್ಟಿದ್ದಾರೆ.
ಅಂದಹಾಗೆ ಗಿಲ್ಲಿಯನ್ನು ಇಷ್ಟಪಡುವ ದೊಡ್ಡ ಬಳಗವೇ ಇದೆ. ಇನ್ನೂ ಕೆಲವರು ಇದನ್ನು ವಿರೋಧಿಸುವುದು ಇದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

