- Home
- Entertainment
- TV Talk
- ಇದೇನಿದು ಟ್ವಿಸ್ಟ್? Amruthadhaare ಗೌತಮ್-ಭೂಮಿಕಾ ಒಂದಾಗಿಬಿಟ್ರಾ? ಜಾಲಿಮೂಡ್ನಲ್ಲಿ ಕ್ಯೂಟ್ ಜೋಡಿ
ಇದೇನಿದು ಟ್ವಿಸ್ಟ್? Amruthadhaare ಗೌತಮ್-ಭೂಮಿಕಾ ಒಂದಾಗಿಬಿಟ್ರಾ? ಜಾಲಿಮೂಡ್ನಲ್ಲಿ ಕ್ಯೂಟ್ ಜೋಡಿ
ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಮತ್ತು ಭೂಮಿಕಾ ದೂರವಿದ್ದರೂ, ನಟರಾದ ರಾಜೇಶ್ ನಟರಂಗ ಮತ್ತು ಛಾಯಾ ಸಿಂಗ್ ಅವರ ರೀಲ್ಸ್ ಒಂದು ಕುತೂಹಲ ಮೂಡಿಸಿದೆ. ಈ ಲೇಖನವು ಆ ರೀಲ್ಸ್‌ನ ಹಿಂದಿನ ಸತ್ಯವನ್ನು ಬಹಿರಂಗಪಡಿಸುವುದೆ.

ಹತ್ತಿರವಿದ್ದರೂ ದೂರ ದೂರ...
ಅಮೃತಧಾರೆಯಲ್ಲಿ (Amruthadhaare) ಭೂಮಿಕಾ ಮತ್ತು ಗೌತಮ್ ಒಂದೇ ಕಡೆ ಇದ್ದರೂ ಇಬ್ಬರೂ ಒಂದಾಗುವ ಲಕ್ಷಣ ಸದ್ಯ ಕಾಣಿಸುತ್ತಿಲ್ಲ. ಆಕಾಶ್ ಮತ್ತು ಮಿಂಚು ಅಕ್ಕ ತಮ್ಮ ಎಂದು ಒಪ್ಪಿಕೊಂಡಿದ್ದಾರೆ, ಆಕಾಶ್ಗೆ ಗೌತಮ್ನೇ ಅಪ್ಪ ಎನ್ನೋ ವಿಷಯನೂ ತಿಳಿದಿದೆ. ಇಷ್ಟಿದ್ದರೂ ಗಂಡ-ಹೆಂಡತಿ ಮಾತ್ರ ದೂರ ದೂರ.
ಜಾಲಿ ಮೂಡ್ನಲ್ಲಿ ಕಪಲ್!
ಇದರ ನಡುವೆಯೇ ಭೂಮಿಕಾ ಮತ್ತು ಗೌತಮ್ ಒಟ್ಟಿಗೇ ಜಾಲಿಮೂಡ್ನಲ್ಲಿ ಕಾಣಿಸಿಕೊಂಡಿದ್ದಾರೆ. ಗೌತಮ್ ಸೋಪಿನ ನೊರೆಯಲ್ಲಿ ಗುಳ್ಳೆ ಬಿಡುತ್ತಿದ್ದರೆ, ಭೂಮಿಕಾ ಅದನ್ನು ಒಡೆಯುತ್ತಿದ್ದಾಳೆ. ಹಾಗಿದ್ರೆ ಇಬ್ಬರೂ ಒಂದಾಗಿಬಿಟ್ರಾ?
ಸಾಧ್ಯನೇ ಇಲ್ಲ
ಸಾಧ್ಯನೇ ಇಲ್ಲ. ಸೀರಿಯಲ್ ಇನ್ನಷ್ಟು ಎಳೆಯಬೇಕು ಎಂದ್ರೆ, ಇವರಿಬ್ಬರು ಇಷ್ಟು ಬೇಗ ಒಂದಾಗೋದಿಲ್ಲ. ಆದರೆ ಈ ವಿಡಿಯೋ ಫ್ರೀ ಟೈಮ್ನಲ್ಲಿ ಇಬ್ಬರೂ ಮಾಡಿರುವ ರೀಲ್ಸ್ ಅಷ್ಟೇ.
ಜೋಡಿಯ ರೀಲ್ಸ್
ಭೂಮಿಕಾ ಪಾತ್ರಧಾರಿ ಛಾಯಾ ಸಿಂಗ್ ಮತ್ತು ಗೌತಮ್ ಪಾತ್ರಧಾರಿ ರಾಜೇಶ್ ನಟರಂಗ (Rajesh Nataranga) ಇಬ್ಬರೂ ಸೀರಿಯಲ್ ಶೂಟಿಂಗ್ನ ಬಿಡುವಿನ ವೇಳೆಯಲ್ಲಿ ಇಂಥದ್ದೊಂದು ರೀಲ್ಸ್ ಮಾಡಿದ್ದಾರೆ ಅಷ್ಟೇ. ಅದನ್ನು ಭೂಮಿಕಾ ಅರ್ಥಾತ್ ಛಾಯಾ ಅವರು ಶೇರ್ ಮಾಡಿಕೊಂಡಿದ್ದಾರೆ.
ಛಾಯಾ ಸಿಂಗ್ ಕುರಿತು...
ನಟಿ ಛಾಯಾ ಸಿಂಗ್ ಸ್ಯಾಂಡಲ್‌ವುಡ್ ನಟಿ. 2000ರಲ್ಲಿ ತೆರೆಕಂಡ 'ಮುನ್ನುಡಿ' ಅವರ ಮೊದಲ ಸಿನಿಮಾ. ವಿಶೇಷವೆಂದರೆ, ಆ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಲಭಿಸಿತ್ತು. ಪ್ರಾರಂಭದ ಮೂರು ವರ್ಷ ಕನ್ನಡದಲ್ಲೇ ಗುರುತಿಸಿಕೊಂಡಿದ್ದ ಅವರು, ಆನಂತರ ತಮಿಳಿಗೆ ಕಾಲಿಟ್ಟರು. ನಂತರ ಮಲಯಾಳಂ, ತೆಲುಗು, ಬೆಂಗಾಲಿ ಸಿನಿಮಾಗಳಲ್ಲೂ ಗುರುತಿಸಿಕೊಂಡಿದ್ದಾರೆ. ಮದುವೆಯಾದ ಬಳಿಕ ತಮ್ಮ 20 ವರ್ಷಗಳ ಬಣ್ಣದ ಲೋಕಕ್ಕೆ ಸ್ವಲ್ಪ ಬ್ರೇಕ್ ಕೊಟ್ಟಿದ್ದರು. ಈಗ ಪುನಃ ಅಮೃತಧಾರೆ ಮೂಲಕ ಕಿರುತೆರೆಗೆ ಮರಳಿದ್ದಾರೆ.
ಮದುವೆಯಾಗಿ 13 ವರ್ಷಗಳು
ರಿಯಲ್ ಲೈಫ್‌ನಲ್ಲಿ ಛಾಯಾ ಅವರಿಗೆ ಮದುವೆಯಾಗಿ 13 ವರ್ಷವಾಗಿದೆ. ಕೃಷ್ಣ ಎನ್ನುವವರ ಜೊತೆ ಛಾಯಾ ಅವರ ಮದುವೆಯಾಗಿದೆ. ಕೃಷ್ಣ ಅವರೂ ಸಿನಿಮಾರಂಗದಲ್ಲೇ ಇದ್ದು, ತಮಿಳು ಕಿರುತೆರೆಯ ಜನಪ್ರಿಯ ತಮಿಳು ನಟ. 2010ರಲ್ಲಿ 'ಆನಂದಪುರತು ವೀಡ್' (Anandhapurathu Veedu) ಎಂಬ ಸಿನಿಮಾದ ವೇಳೆ ಭೇಟಿಯಾದ ಇವರು ಪರಸ್ಪರ ಇಷ್ಟಪಟ್ಟು ನಂತರ ಹಿರಿಯರ ಒಪ್ಪಿಸಿ, ಅವರ ಆಶೀರ್ವಾದ ಪಡೆದು 2012ರಲ್ಲಿ ಮದುವೆಯಾಗಿದ್ದಾರೆ.
ರಾಜೇಶ್ ನಟರಂಗ ಕುರಿತು
ರಾಜೇಶ್ ನಟರಂಗ ಕುರಿತು ಹೇಳುವುದಾದರೆ, ಅವರು 'ಸ್ಮಶಾನ' ಮತ್ತು 'ಕುರುಕ್ಷೇತ್ರ' ಧಾರಾವಾಹಿಯ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಗುರುತಿಸಿಕೊಳ್ಳುವ ಮೂಲಕ ಕಿರುತೆರೆಗೆ ಕಾಲಿಟ್ಟವರು. 'ಮಾಯಾಮೃಗ' ಧಾರಾವಾಹಿಯಲ್ಲಿ ಮೊದಲ ಬಾರಿ ಬಣ್ಣ ಹಚ್ಚಿದ ರಾಜೇಶ್ ನಟರಂಗ ಮುಂದೆ 'ಮುಕ್ತ', 'ಬದುಕು', 'ಶಕ್ತಿ', 'ಗುಪ್ತಗಾಮಿನಿ', 'ನಾನೂ ನನ್ನ ಕನಸು' ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಗೌತಮ್ ಪಾತ್ರಕ್ಕೆ ಜೀವ ತುಂಬಿರುವ ರಾಜೇಶ್, ಪೋಷಕನಟನಾಗಿ, ಖಳನಟನಾಗಿ ಕನ್ನಡ ಕಿರುತೆರೆ ಮತ್ತು ಹಿರಿತೆರೆ ಎರಡರಲ್ಲೂ ಕೂಡ ತಮ್ಮದೇ ಆದ ಛಾಪನ್ನ ಮೂಡಿಸಿದ್ದಾರೆ. ಅವರ ಅಭಿನಯಕ್ಕೆ ನಿಬ್ಬೆರಗಾಗದವರೇ ಇಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

