- Home
- Entertainment
- TV Talk
- BBK 12: ಸುದೀಪ್ ಲೆಕ್ಕಾಚಾರವೇ ತಪ್ಪು: ಕಾವ್ಯಾ ಮುಂದೆ ಗಿಲ್ಲಿ ನಟನ ಹೊಸ ಸತ್ಯ ಹೇಳಿದ ಧನುಷ್!
BBK 12: ಸುದೀಪ್ ಲೆಕ್ಕಾಚಾರವೇ ತಪ್ಪು: ಕಾವ್ಯಾ ಮುಂದೆ ಗಿಲ್ಲಿ ನಟನ ಹೊಸ ಸತ್ಯ ಹೇಳಿದ ಧನುಷ್!
ಬಿಗ್‌ಬಾಸ್ ಮನೆಯಲ್ಲಿ, ಗಿಲ್ಲಿಯಿಂದ ರಘು ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದೀಪ್ ಅವರ ಹೇಳಿಕೆಯನ್ನು ಧನುಷ್ ಪ್ರಶ್ನಿಸಿದ್ದಾರೆ. ಅಶ್ವಿನಿ ಗೌಡ ಮತ್ತು ಜಾನ್ವಿ ಅವರ ಮೌನದಿಂದಾಗಿ ಗಿಲ್ಲಿಗೆ ಕಂಟೆಂಟ್ ಸಿಗುತ್ತಿದ್ದು, ಅವರಿಂದಲೇ ಗಿಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಧನುಷ್ ಅಭಿಪ್ರಾಯಪಟ್ಟಿದ್ದಾರೆ.

ಧನುಷ್
ಬಿಗ್‌ಬಾಸ್ ಮನೆಯಲ್ಲಿರುವ ಧನುಷ್ ಎಲ್ಲಾ ಸ್ಪರ್ಧಿಗಳ ಆಟವನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ಕಾವ್ಯಾ ಜೊತೆ ಮಾತನಾಡುತ್ತಿರುವ ಸಂದರ್ಭದಲ್ಲಿ ಸುದೀಪ್ ಸರ್ ಹೇಳಿಕೆಯೊಂದನ್ನು ಬದಲಿಸಿಕೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಶ್ವಿನಿ ಗೌಡ ಮತ್ತು ಜಾನ್ವಿ
ಶನಿವಾರದ ಸಂಚಿಕೆ ಬಳಿಕ ಅಶ್ವಿನಿ ಗೌಡ ಮತ್ತು ಜಾನ್ವಿ ತಮ್ಮ ಆಟದ ವೈಖರಿಯನ್ನು ಬದಲಿಸಿಕೊಂಡಿದ್ದಾರೆ. ವೀಕೆಂಡ್ ಸಂಚಿಕೆ ವೇಳೆ ಸುದೀಪ್, ಗಿಲ್ಲಿಯಿಂದ ರಘು ಕಾಣಿಸಿಕೊಳ್ತಿದ್ದೀರಾ ಎಂದು ಕೇಳಿದ್ದರು. ಇದೀಗ ಈ ಹೇಳಿಕೆ ಬಗ್ಗೆ ಧನುಷ್ ಮಾತನಾಡಿದ್ದಾರೆ. ಧನುಷ್ ಹೀಗ್ಯಾಕೆ ಹೇಳಿದ್ರು ಎಂಬುದರ ಮಾಹಿತಿ ಇಲ್ಲಿದೆ.
ಗಿಲ್ಲಿಗೆ ಇದು ಸಮಸ್ಯೆ
ಅಶ್ವಿನಿ ಮತ್ತು ಜಾನ್ವಿ ಮೇಡಮ್ ಸೈಲೆಂಟ್ ಆಗಿರೋದು ಅವರಿಗೆ ಸಮಸ್ಯೆಯಾಗುತ್ತಿಲ್ಲ. ಅವರೊಂದಿಗೆ ಜಗಳಕ್ಕಿಳಿಯುವ ಗಿಲ್ಲಿಗೆ ಇದು ಸಮಸ್ಯೆಯಾಗುತ್ತಿದೆ. ಯಾವುದಕ್ಕೂ ಅಶ್ವಿನಿ ಮೇಡಮ್ ಮೊದಲಿನಂತೆ ರಿಯಾಕ್ಟ್ ಮಾಡುತ್ತಿಲ್ಲ. ಇದರಿಂದ ಕಂಟೆಂಟ್ ಸಿಗ್ತಿಲ್ಲ ಎಂದು ಗಿಲ್ಲಿ ತಲೆಕೆಡಿಸಿಕೊಳ್ಳುತ್ತಿದ್ದಾನೆ ಎಂದು ಧನುಷ್ ಹೇಳುತ್ತಾರೆ.
ಗಿಲ್ಲಿ
ಈ ಕಾರಣದಿಂದ ಅಶ್ವಿನಿ ಗೌಡ ಮತ್ತು ಜಾನ್ವಿ ಅವರಿಂದಾಗಿ ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಗಿಲ್ಲಿಯಿಂದ ರಘು ಅಲ್ಲ, ಅಶ್ವಿನಿ ಮೇಡಮ್ ಇರೋದರಿಂದಲೇ ಗಿಲ್ಲಿ ಕಾಣುತ್ತಿರೋದು ಎಂದು ಹೇಳಿದ್ದಾರೆ. ಧನುಷ್ ಮಾತುಗಳೆಲ್ಲವನ್ನು ಕಾವ್ಯಾ ಕೇಳಿಸಿಕೊಂಡಿದ್ದು, ಎಲ್ಲದಕ್ಕೂ ತಲೆಯಾಡಿಸಿದ್ದಾರೆ.
ಇದನ್ನೂ ಓದಿ: BBK 12: ಕಾವ್ಯ ಶೈವ PR ಟೀಂಗೆ ಎಷ್ಟು ಭಯ ಹುಟ್ಟಿಸಿರಬಹುದು, ಹೀಗೆ ಆಗತ್ತೆ ಬರ್ಕೊಳ್ಳಿ: ಸಹೋದರ ಕಾರ್ತಿಕ್
ಕಾಮಿಡಿ ಕಿರಿಕಿರಿ
ಮನೆಗೆ ಬಂದಿರುವ ಅತಿಥಿಗಳಿಗೆ ಗಿಲ್ಲಿ ನಟ ಮಾಡುತ್ತಿರುವ ಕಾಮಿಡಿ ಕಿರಿಕಿರಿಯನ್ನುಂಟು ಮಾಡುತ್ತಿದೆ. ವೈಯಕ್ತಿಕ ವಿಷಯ ಮಾತಾಡಿದ್ದಕ್ಕೆ ಉಗ್ರಂ ಮಂಜು ಎಚ್ಚರಿಕೆ ನೀಡಿದ್ದಾರೆ. ಬಿಟ್ಟಿ ಊಟ ಅಂದಾಗ ರಜತ್ ವಾರ್ನ್ ಮಾಡಿದ್ದರು. ರೋಸ್ಟ್ ಮಾಡುವ ಸಂದರ್ಭದಲ್ಲಿಯೂ ಗಿಲ್ಲಿ ನಟ ಮತ್ತು ರಜತ್ ನಡುವೆ ಜಗಳವಾಗಿದೆ.
ಇದನ್ನೂ ಓದಿ: BBK 12: ನನ್ನ ಮದುವೆ ಆಗ್ತೀಯಾ? Trivikram ಸೀರಿಯಸ್ ಪ್ರಶ್ನೆಗೆ Rakshita Shetty ಕೊಟ್ಟ ಉತ್ತರ ಮಾತ್ರ ಬೆಂಕಿ..
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

