- Home
- Entertainment
- TV Talk
- ಮುಂದಿನ ವಾರ Bigg Bossನಿಂದ ಹೊರಕ್ಕೆ ಬರುವವರು ಯಾರು? ಈಗ್ಲೇ ಹೆಸರು ಹೇಳಿದ Risha Gowda
ಮುಂದಿನ ವಾರ Bigg Bossನಿಂದ ಹೊರಕ್ಕೆ ಬರುವವರು ಯಾರು? ಈಗ್ಲೇ ಹೆಸರು ಹೇಳಿದ Risha Gowda
ವೈಲ್ಡ್ ಕಾರ್ಡ್ ಮೂಲಕ ಬಿಗ್ಬಾಸ್ ಮನೆಗೆ ಪ್ರವೇಶಿಸಿದ್ದ ರಿಷಾ ಗೌಡ ಇದೀಗ ಹೊರಬಂದಿದ್ದಾರೆ. ಮನೆಯಿಂದ ಹೊರಬಂದ ನಂತರ, ಮುಂದಿನ ವಾರ ಸ್ಪಂದನಾ ಎಲಿಮಿನೇಟ್ ಆಗುವ ಸಾಧ್ಯತೆಯಿದೆ ಎಂದು ಭವಿಷ್ಯ ನುಡಿದಿದ್ದು, ತಮ್ಮ ವಿಭಿನ್ನ ಎಲಿಮಿನೇಷನ್ ಬಗ್ಗೆಯೂ ಮಾತನಾಡಿದ್ದಾರೆ.

ಹೊರಕ್ಕೆ ಬಂದ ರಿಷಾ ಗೌಡ
ಬಿಗ್ಬಾಸ್ನಿಂದ (Bigg Boss 12 Kannada) ಈಗಲೇ ರಿಷಾ ಗೌಡ ಹೊರಕ್ಕೆ ಬಂದಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಎಂಟರ್ ಆಗಿದ್ದ ರಿಷಾ ಗೌಡ ಅರ್ಧದಲ್ಲಿಯೇ ವಾಪಸ್ ಆಗಿದ್ದಾರೆ.
ಬಿಗ್ಬಾಸ್ ಜರ್ನಿ
ತಮ್ಮ ಬಿಗ್ಬಾಸ್ ಜರ್ನಿ ಕುರಿತು ಹಲವು ಮಾಧ್ಯಮಗಳಲ್ಲಿ ಅವರು ಮಾತನಾಡುತ್ತಿದ್ದಾರೆ. ಬಿಗ್ಬಾಸ್ ಮನೆಯಲ್ಲಿ ತಮ್ಮ ಅನುಭವಗಳನ್ನು ತೆರೆದಿಡುತ್ತಿದ್ದಾರೆ.
ರಿಷಾ ಗೌಡ ರಿವೀಲ್
ಇದೀಗ ಅವರ ಮುಂದಿನ ವಾರ ಮನೆಯಿಂದ ಹೊರಕ್ಕೆ ಬರುವ ಸ್ಪರ್ಧಿ ಯಾರು ಎನ್ನುವ ಬಗ್ಗೆ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. ಇದಾಗಲೇ ರಿಷಾ ಗೌಡ ಟಾಪ್ 5 ಸ್ಪರ್ಧಿಗಳು ಯಾರು, ವಿನ್ನರ್ ಯಾರು ಎನ್ನುವ ಬಗ್ಗೆ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅದೇ ರೀತಿ ಈಗ ಮುಂದಿನ ವಾರ ಹೊರಕ್ಕೆ ಬರುವ ಸ್ಪರ್ಧಿಯ ಬಗ್ಗೆಯೂ ಹೇಳಿದ್ದಾರೆ.
ಮುಂದಿನ ಎಲಿಮಿನೇಷನ್ ಯಾರು?
ರಿಷಾ ಗೌಡ (Bigg Boss Risha Gowda) ಅವರು ಮುಂದಿನ ಎಲಿಮಿನೇಷನ್ ಬಗ್ಗೆ ಮಾತನಾಡುತ್ತಾ, ಸ್ಪಂದನಾ ಬರುತ್ತಾರೆ ಎನ್ನಿಸುತ್ತದೆ. ಈ ವಾರವೇ ಹೊರಕ್ಕೆ ಬರುತ್ತಾರೆ ಎಂದುಕೊಂಡಿದ್ದೆ. ಆಕೆ ಏನೂ ಗೇಮ್ ಆಡುತ್ತಿಲ್ಲ. ಅವರ ಬಗ್ಗೆ ಏನೂ ದ್ವೇಷ ಇಲ್ಲ, ಆದರೆ ಬಿಗ್ಬಾಸ್ ಮನೆಗೆ ಆಕೆಯ ಕಾಂಟ್ರಿಬ್ಯೂಷನ್ ಏನೂ ಇಲ್ಲ ಎಂದಿದ್ದಾರೆ.
ನಾನೇ ಅವರ ಟಾರ್ಗೆಟ್
ಇದರ ಜೊತೆ ಮಾಳು ಅವರೂ ಹೊರಕ್ಕೆ ಬರುವ ಛಾನ್ಸ್ ಇದೆ. ಏಕೆಂದ್ರೆ ಅವರು ಕೂಡ ಸೈಲೆಂಟ್ ಇದ್ದಾರೆ, ಆದರೆ ಈ ವಾರವೇ ಹೊರಕ್ಕೆ ಬರುವಷ್ಟು ಸೈಲೆಂಟ್ ಇಲ್ಲ. ಮೊದಲ ದಿನದಿಂದಲೂ ಮಾಳು ನನ್ನನ್ನು ಟಾರ್ಗೆಟ್ ಮಾಡುತ್ತಿದ್ದರು. ಪ್ರತಿಬಾರಿಯೂ ನನ್ನದೇ ಹೆಸರು ತೆಗೆದುಕೊಳ್ಳುತ್ತಿದ್ದರು ಎಂದಿದ್ದಾರೆ.
ರಿಷಾ ಎಲಿಮಿನೇಷನ್ ಕುರಿತು
ಇನ್ನು ರಿಷಾ ಗೌಡ ಅವರ ಎಲಿಮಿನೇಷನ್ ಕೂಡ ಸ್ವಲ್ಪ ಡಿಫರೆಂಟ್ ಆಗಿ ನಡೆದಿತ್ತು. ಸಾಮಾನ್ಯವಾಗಿ ಮನೆಯಿಂದ ಯಾವುದೇ ಸ್ಪರ್ಧಿ ಎಲಿಮಿನೇಟ್ ಆದ್ರೆ ಮುಖ್ಯದ್ವಾರದಿಂದಲೇ ಕಳುಹಿಸಿ ಕೊಡುತ್ತಾನೆ. ಬಳಿಕ ವೇದಿಕೆ ಮೇಲೆ ಕರೆಸಿ ಸುದೀಪ್ ಬೀಳ್ಕೊಡುತ್ತಾರೆ. ಆದ್ರೆ ರಿಷಾ ಅವರನ್ನು ಕನ್ಫೆಷನ್ ರೂಮ್ ಮೂಲಕ ಹೊರಗೆ ಕರೆಸಿಕೊಳ್ಳಲಾಗಿತ್ತು.
ಕನ್ಫೇಷನ್ ರೂಮ್
ಇದಕ್ಕೆ ಕಾರಣವೂ ಇದೆ. ಭಾನುವಾರದ ಸಂಚಿಕೆ ಕೊನೆಗೆ ಸ್ಪರ್ಧಿಗಳಿಗೆ ಗಾರ್ಡನ್ ಏರಿಯಾದಲ್ಲಿ ಟಾಸ್ಕ್ ನೀಡಲಾಗಿತ್ತು. ಗಾರ್ಡನ್ ಏರಿಯಾದಲ್ಲಿ ಯಾವುದೇ ಟಿವಿ ಇಲ್ಲದ ಕಾರಣ, ತಾತ್ಕಾಲಿಕವಾಗಿ ಮುಖ್ಯದ್ವಾರದ ಬಳಿಯಲ್ಲಿಯೇ ಎಲ್‌ಇಡಿ ಸ್ಕ್ರೀನ್ ಅಳವಡಿಸಲಾಗಿತ್ತು. ಆದ್ದರಿಂದ ಮುಖ್ಯದ್ವಾರ ತೆರೆಯೋದು ಸಾಧ್ಯವಾಗದೇ ಕನ್ಫೇಷನ್ ರೂಮ್ನಿಂದ ಕಳುಹಿಸಿಕೊಡಲಾಗಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

