Nandagokula: ಪ್ರಿಯಾಗೆ ಇನ್ಮುಂದೆ ಉಳಿಗಾಲ ಇಲ್ಲ; ವಲ್ಲಭ, ಅಮೂಲ್ಯ ಬಳಿಕ ಮೀನಾ ರೆಬೆಲ್
ಕಲರ್ಸ್ ಕನ್ನಡದ ನಂದಗೋಕುಲ ಧಾರಾವಾಹಿಯಲ್ಲಿ, ಪ್ರಿಯಾ ತನ್ನ ಚಾಡಿ ಮಾತಿನಿಂದ ಮನೆಯಲ್ಲಿ ನೆಮ್ಮದಿ ಕೆಡಿಸಿದ್ದಾಳೆ. ಇದರಿಂದ ಕೋಪಗೊಂಡ ವಲ್ಲಭ, ಅಮೂಲ್ಯ ಮತ್ತು ಮೀನಾ, ಪ್ರಿಯಾಳನ್ನು ನೇರವಾಗಿ ಪ್ರಶ್ನಿಸಿ ಆಕೆಯ ಆಟಕ್ಕೆ ಅಂತ್ಯ ಹಾಡಲು ಮುಂದಾಗಿದ್ದಾರೆ.

ಪ್ರಿಯಾ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ನಂದಗೋಕುಲ ಸೀರಿಯಲ್ ಹಂತ ಹಂತವಾಗಿ ಪ್ರೇಕ್ಷಕರ ವರ್ಗವನ್ನು ಹೆಚ್ಚಿಸಿಕೊಳ್ಳುತ್ತಿದೆ. ಮಾಧವನ ಮಡದಿಯಾಗಿ ನಂದಗೋಕುಲಕ್ಕೆ ಬಂದ ಪ್ರಿಯಾ, ಮೊದಲ ದಿನದಿಂದಲೂ ಸುಂದರವಾದ ಸಂಸಾರದಲ್ಲಿ ಬೆಂಕಿ ಹಚ್ಚುವ ಕೆಲಸವನ್ನು ಮಾಡ್ತಿದ್ದಾಳೆ. ಇದೀಗ ಪ್ರಿಯಾ ವಿರುದ್ಧ ಮನೆಮಂದಿಯೆಲ್ಲಾ ತಿರುಗಿ ಬಿದ್ದಿದ್ದಾರೆ.
ಮೀನಾ-ಕೇಶವ ಜೊತೆಯಾಗಿ
ಹೌದು, ಬೇರೆಯವರ ವಿಷಯಗಳನ್ನು ತನಗೆ ಬೇಕಾದಂತೆ ಮಾವನ ಮುಂದೆ ಪ್ರಿಯಾ ಹೇಳುತ್ತಿದ್ದಳು. ಮೀನಾ-ಕೇಶವ ಜೊತೆಯಾಗಿ ಕಾಂಪಿಟೇಷನ್‌ಗೆ ಹೋಗಿದ್ದನ್ನು ಮಾವನ ಮುಂದೆ ಹೇಳಿದ್ದಳು. ಹಾಗೆಯೇ ಅಮೂಲ್ಯ ಟ್ಯೂಷನ್ ಮಾಡೋದನ್ನು ಮಾವನ ಕಿವಿಯಲ್ಲಿ ಪ್ರಿಯಾ ಊದಿದ್ದಳು. ಪ್ರಿಯಾ ಮಾಡ್ತಿರೋ ಈ ಕೆಲಸಗಳಿಂದ ನಂದಗೋಕುಲದಲ್ಲಿ ನೆಮ್ಮದಿ ಇಲ್ಲದಂತಾಗಿದೆ.
ಚಾಡಿ ಹೇಳಿದ ಪ್ರಿಯಾ
ಪ್ರಿಯಾ ಮಾತುಗಳೆಲ್ಲವೂ ಸತ್ಯ ಎಂದು ತಿಳಿದ ನಂದ, ಮಕ್ಕಳ ಮೇಲೆ ಕೂಗಾಡಿದ್ದಾನೆ. ಪ್ರಿಯಾ ವಿರುದ್ಧ ತಿರುಗಿ ಬಿದ್ದಿರುವ ವಲ್ಲಭ್, ಸರಳ ಮಾತುಗಳಲ್ಲಿಯೇ ಅತ್ತಿಗೆಯನ್ನು ಎಚ್ಚರಿಸುವ ಕೆಲಸ ಮಾಡಿದ್ದಾನೆ. ಈ ವಿಷಯವನ್ನು ಬಂದು ಗಂಡ ಮಾಧವನ ಮುಂದೆ ಚಾಡಿ ಹೇಳಿದ್ದಾಳೆ ಪ್ರಿಯಾ. ಆದ್ರೆ ತನ್ನ ಸೋದರ ಹೇಗೆ ಎಂಬ ಅರಿತ ಮಾಧವ, ಮಡದಿಯ ಮಾತುಗಳಿಗೆ ಸೊಪ್ಪು ಹಾಕಿಲ್ಲ.
ಕಿಸಕ್‌ನೇ ನಕ್ಕ ಪ್ರಿಯಾ
ಅದೇ ರೀತಿ ನಂದಗೋಕುಲದ ಕಿರಿ ಸೊಸೆ ಅಮೂಲ್ಯಾ ತನ್ನ ಅಸಮಾಧಾನವನ್ನು ನೇರವಾಗಿಯೇ ಪ್ರಿಯಾ ಮುಂದೆ ಹೊರಹಾಕಿದ್ದಾಳೆ. ನಿಮ್ಮ ಮಾತುಗಳಲ್ಲಿ ಒಳ್ಳೆಯ ಉದ್ದೇಶ ಇರಲ್ಲ. ನನಗಿಂತ ಮುಂಚೆಯೇ ಟ್ಯೂಷನ್ ಮಾಡೋ ವಿಷಯ ಮಾವನಿಗೆ ಹೇಳಿದ್ದು ತಪ್ಪು ಎಂದು ಪ್ರಿಯಾ ಮುಖಕ್ಕೆ ಹೊಡೆದಂತೆ ಅಮೂಲ್ಯ ಹೇಳಿದ್ದಳು. ಅಮೂಲ್ಯ ಬೈಯ್ಯುತ್ತಿದ್ದಂತೆ ಕಣ್ಣೀರು ಹಾಕುತ್ತಾ ಪ್ರಿಯಾ, ಇಬ್ಬರ ಜಗಳದಲ್ಲಿ ಅತ್ತೆಯನ್ನು ಎಳೆದು ತಂದ್ಳು. ಇದಕ್ಕೂ ಅಮೂಲ್ಯ ಆಕ್ಷೇಪ ವ್ಯಕ್ತಪಡಿಸಿದಳು.
ಇದನ್ನೂ ಓದಿ: ನಟನೆ ಬಿಟ್ಟು ಅಡುಗೆ ಮಾಡಲು ಶುರು ಮಾಡಿದ್ರು ‘ಸೀತಾ ರಾಮ’ ವಿಲನ್ ಭಾರ್ಗವಿ
ಪ್ರಿಯಾಳನ್ನು ಪ್ರಶ್ನೆ ಮಾಡಿದ ಮೀನಾ
ಇನ್ನು ಮಗ ಕೇಶವನಿಗೆ ನಂದ ಬೈಯ್ಯುತ್ತಿದ್ರೆ ಅದನ್ನು ನೋಡಿ ಪ್ರಿಯಾ ನಗುತ್ತಾಳೆ. ಮಾವನ ಮಾತುಗಳಿಗಿಂತ ಪ್ರಿಯಾ ವರ್ತನೆ ಮೀನಾ ಮತ್ತು ಅಮೂಲ್ಯ ಕೋಪವನ್ನುಂಟು ಮಾಡಿತ್ತು. ಇದೇ ವಿಷಯವನ್ನು ಪ್ರಿಯಾ ಮುಂದೆ ಮೀನಾ ಪ್ರಶ್ನೆ ಮಾಡಿ ಸಖತ್ ಆಗಿ ಕ್ಲಾಸ್ ತೆಗೆದುಕೊಂಡಿದ್ದಾಳೆ. ಮೊದಲು ಅತ್ತೆ ಗಿರಿಜಾ, ನಂತರ ವಲ್ಲಭ-ಅಮೂಲ್ಯ, ಇದೀಗ ಮೀನಾ ಸಖತ್ ಆಗಿ ಪ್ರಿಯಾಳಿಗೆ ಬೆವರಿಳಿಸುತ್ತಿದ್ದಾರೆ.
ಇದನ್ನೂ ಓದಿ: Nanda Gokula Serial: ತನ್ನ ಬೇಳೆ ಬೇಯಿಸಿಕೊಳ್ಳಲು, ಬಾಕಿಯವ್ರ ಖುಷಿಗೆ ಕೊಳ್ಳಿ ಇಟ್ಟ ಪ್ರಿಯಾ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

