Nanda Gokula Serial Priya: ನಂದಗೋಕುಲ ಧಾರಾವಾಹಿಯಲ್ಲಿ ಪ್ರಿಯಾ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ಅರ್ಪಿತಾ ಗೌಡ ಅವರು ಸ್ಲೀವ್‌ಲೆಸ್‌ ಬ್ಲೌಸ್‌, ಸೀರೆ ಉಟ್ಟು ಮಿಂಚಿದ್ದಾರೆ. ಈ ಫೋಟೋಗಳನ್ನು ನೋಡಿ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. 

ನಂದಗೋಕುಲ ಧಾರಾವಾಹಿಯಲ್ಲಿ ( Nandagokula Serial ) ನಂದಕುಮಾರ್‌ ಹಾಗೂ ಗಿರಿಜಾ ದಂಪತಿಯ ಮೂವರು ಗಂಡು ಮಕ್ಕಳಿಗೆ ಮದುವೆ ಆಗಿದೆ. ಲವ್‌ ಮ್ಯಾರೇಜ್‌ ಆದರೂ ಕೂಡ ನಂದಕುಮಾರ್‌ ಅವರ ಇಬ್ಬರು ಸೊಸೆಯಂದಿರು ಬಂಗಾರ. ಆದರೆ ಹಿರಿ ಮಗನ ಸೊಸೆ ಮಾತ್ರ ಈಗ ವಿಲನ್‌ ಆಗುವ ಹಾಗೆ ಕಾಣ್ತಿದೆ. ಅಂದಹಾಗೆ ಪ್ರಿಯಾ ಪಾತ್ರಧಾರಿ ಅರ್ಪಿತಾ ಗೌಡ ಅವರು ಹೊಸ ಲುಕ್‌ನಿಂದ ಗಮನಸೆಳೆದಿದ್ದಾರೆ.

Add Asianetnews Kannada as a Preferred SourcegooglePreferred

ಪ್ರಿಯಾ ಮನೆಯವರಿಂದ ಸುಳ್ಳಿನ ಮದುವೆ

ಮಾಧವನಿಗೆ ಪ್ರಿಯಾ ಎನ್ನುವ ಸಿಂಪಲ್‌ ಹುಡುಗಿ ಜೊತೆ ಮದುವೆ ಆಗಿದೆ. ಆದರೆ ಪ್ರಿಯಾ ತಾಯಿ-ತಂದೆಗೆ ಹಣದ ದಾಹ. ಮೋಸ ಮಾಡಿ, ಸುಳ್ಳು ಹೇಳಿ ಅವರು ಈ ಮದುವೆಯನ್ನು ಮಾಡಿಸಿದ್ದರು.

ಈಗ ಪ್ರಿಯಾಗೆ ಹೊಟ್ಟೆಕಿಚ್ಚು

ಈಗ ಪ್ರಿಯಾಗೆ ಮೀನಾ-ಅಮೂಲ್ಯ ಕಂಡರೆ ಇಷ್ಟವೇ ಇಲ್ಲ. ನಿತ್ಯವೂ ಅವಳು ಹೊಟ್ಟೆಕಿಚ್ಚಿನಿಂದ ಸಾಯುತ್ತಿದ್ದಾಳೆ. ಮದುವೆಗೆ ಮುಂಚೆ ಸರಿ-ತಪ್ಪು ಎಂದು ಹೇಳುತ್ತಿದ್ದ ಅವಳು ಈ ಬಾರಿ ಮಾತ್ರ ತಪ್ಪು ದಾರಿ ಹಿಡಿಯುತ್ತಿದ್ದಾಳೆ.

ಈ ಪ್ರಿಯಾ ಯಾರು?

ಪ್ರಿಯಾ ಪಾತ್ರದಲ್ಲಿ ನಟಿ ಅರ್ಪಿತಾ ಗೌಡ ಅವರು ನಟಿಸುತ್ತಿದ್ದಾರೆ. ಈ ಹಿಂದೆ ಅವರು ಕೆಲವು ಧಾರಾವಾಹಿಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದರು. ಈಗ ಅವರಿಗೆ ಈ ಬಾರಿ ನೆಗೆಟಿವ್‌ ಪಾತ್ರ ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ಹೇಗೆ ಕಥೆ ಸಾಗಲಿದೆ ಎಂದು ಕಾದು ನೋಡಬೇಕಿದೆ.

ಅರ್ಪಿತಾ ಗೌಡ ಫೋಟೋಶೂಟ್

ಅಂದಹಾಗೆ ಅರ್ಪಿತಾ ಗೌಡ ಅವರು ಸ್ಲೀವ್‌ಲೆಸ್‌ ಬ್ಲೌಸ್‌ ಹಾಕಿ, ಸೀರೆಯುಟ್ಟು ಫೋಟೋಶೂಟ್‌ ಮಾಡಿಸಿಕೊಂಡಿದ್ದಾರೆ. ಈ ಫೋಟೋಗಳನ್ನು ನೋಡಿ ಅನೇಕರು ವಾವ್‌ ಎಂದಿದ್ದಾರೆ. ರಿಯಲ್‌ ಆಗಿ ಮಾಡರ್ನ್‌, ರೀಲ್‌ನಲ್ಲಿ ಸಂಪ್ರದಾಯಸ್ಥೆ ಎಂದು ವೀಕ್ಷಕರು ಹೇಳುತ್ತಿದ್ದಾರೆ.

ಈ ಮನೆ ಹಾಳಾಗುತ್ತಾ?

ಮಕ್ಕಳು ಲವ್‌ ಮ್ಯಾರೇಜ್‌ ಮಾಡಿಕೊಳ್ಳಬಾರದು ಎಂದು ನಂದಕುಮಾರ್‌ ಹೇಳಿದ್ದನು. ತಾನು ಲವ್‌ ಮ್ಯಾರೇಜ್‌ ಆಗಿದ್ದಕ್ಕೆ ನನ್ನ ಪತ್ನಿ ಗಿರಿಜಾಗೆ ಕುಟುಂಬವೇ ಸಿಗದಂತಾಯಿತು. ಅದೇ ಥರ ನನ್ನ ಮಕ್ಕಳಿಗೂ ಆಗಬಾರದು ಎಂದು ಅವನು ಯೋಚಿಸಿದ್ದನು. ಇವನ ಮಾತನ್ನು ಮೀರಿ ಇಬ್ಬರು ಮಕ್ಕಳು ಲವ್‌ ಮ್ಯಾರೇಜ್‌ ಆದರು. ಅದರಲ್ಲಿ ಓರ್ವ ಮಗ ವಲ್ಲಭ ಮಾತ್ರ ತಾಯಿ ಹೇಳಿದಳು ಎಂದು ಅಮೂಲ್ಯಳನ್ನು ಮದುವೆಯಾದನು.

ಮೂರನೇ ಮಗನೂ ಹೀಗೆ ಮಾಡ್ತಾನಾ

ನಂದಕುಮಾರ್‌ಗೂ ಕೂಡ ಮೂರನೇ ಮಗ ಮಾಧವನೂ ಕೂಡ ಲವ್‌ ಮಾಡಿ ಮದುವೆ ಆಗ್ತಾನೆ ಎಂಬ ಭಯ ಇತ್ತು. ಆದರೆ ಆ ರೀತಿ ಆಗಿರಲಿಲ್ಲ.