- Home
- Entertainment
- TV Talk
- ಜಗ್ಗೇಶ್ ಸಿನಿಮಾ ದೃಶ್ಯ ರೀಕ್ರಿಯೇಟ್ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡ ನಂದಗೋಕುಲ ಸೀರಿಯಲ್
ಜಗ್ಗೇಶ್ ಸಿನಿಮಾ ದೃಶ್ಯ ರೀಕ್ರಿಯೇಟ್ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡ ನಂದಗೋಕುಲ ಸೀರಿಯಲ್
'ನಂದಗೋಕುಲ' ಧಾರಾವಾಹಿಯಲ್ಲಿ ಜಗ್ಗೇಶ್ ಅಭಿನಯದ 'ಬೊಂಬಾಟ್ ಹುಡುಗ' ಚಿತ್ರದ ದೃಶ್ಯವನ್ನು ಮರುಸೃಷ್ಟಿಸಲಾಗಿದೆ. ಗಿರಿಜಾ ತನ್ನ ತಾಯಿಯೊಂದಿಗೆ ರಹಸ್ಯವಾಗಿ ಮಾತನಾಡುವ ಈ ದೃಶ್ಯವನ್ನು ಚಿತ್ರೀಕರಿಸುವಾಗ ಸೀರಿಯಲ್ ತಂಡ ಎಡವಟ್ಟು ಮಾಡಿಕೊಂಡಿದೆ ಎಂದು ನೆಟ್ಟಿಗರು ಟೀಕಿಸುತ್ತಿದ್ದಾರೆ.

ನಂದಗೋಕುಲ ಧಾರಾವಾಹಿ
ಕಲರ್ಸ್ ಕನ್ನಡ ವಾಹಿನಿ ನಂದಗೋಕುಲ ಧಾರಾವಾಹಿಯಲ್ಲಿ ನವರಸನಾಯಕ ಜಗ್ಗೇಶ್ ಅಭಿನಯದ ಸಿನಿಮಾದ ದೃಶ್ಯವೊಂದನ್ನು ಕ್ಲಿಕ್ ಮಾಡಲಾಗಿದೆ. 1993ರಲ್ಲಿ ಜಗ್ಗೇಶ್ ನಟನೆಯ 'ಬೊಂಬಾಟ್ ಹುಡುಗ' ಸಿನಿಮಾ ಬಿಡುಗಡೆಯಾಗಿತ್ತು. ಇದೀಗ ಈ ಚಿತ್ರದ ಪ್ರಮುಖ ದೃಶ್ಯವನ್ನು ನಂದಗೋಕುಲ ಧಾರಾವಾಹಿಯಲ್ಲಿ ಬಳಕೆ ಮಾಡಿಕೊಳ್ಳಲಾಗಿದೆ.
ತಾಯಿ ಜೊತೆ ಗಿರಿಜಾ
ಪ್ರೀತಿಸಿ ಮದುವೆಯಾಗಿರುವ ಕಾರಣ ಗಿರಿಜಾ ತವರಿನಿಂದ ದೂರವಾಗಿದ್ದಾಳೆ. ಎದುರಿನ ಮನೆಯಲ್ಲಿಯೇ ತಾಯಿ, ಅಣ್ಣ-ಅತ್ತಿಗೆ, ತಮ್ಮನಿದ್ರೂ ಗಿರಿಜಾಗೆ ಮಾತನಾಡಲು ಅವಕಾಶವಿಲ್ಲ. ಮದುವೆಯಾಗಿ 30 ವರ್ಷವಾದರೂ ತವರಿನ ಬಾಗಿಲು ತೆರೆದಿಲ್ಲ ಎಂದು ಸೊಸೆ ಮೀನಾ ಮುಂದೆ ಗಿರಿಜಾ ಕಣ್ಣೀರು ಹಾಕಿದ್ದಳು. ಆದ್ರೆ ದೂರದಿಂದಲೇ ಸನ್ನೆ ಮೂಲಕ ತಾಯಿ ಜೊತೆ ಗಿರಿಜಾ ಮಾತನಾಡೋದನ್ನು ಮೀನಾ ನೋಡಿದ್ದಳು.
ಗಿರಿಜಾ ಗುಟ್ಟು
ತಾಯಿ ಮತ್ತು ಅತ್ತಿಗೆ ಜೊತೆ ಗಿರಿಜಾ ರಹಸ್ಯವಾಗಿ ಮಾತನಾಡುವ ಗುಟ್ಟು ಮೀನಾ ಮುಂದೆ ಬಯಲಾಗಿದೆ. ಗಿರಿಜಾ ತನ್ನ ಅಡುಗೆಕೋಣೆಗೂ ಮತ್ತು ತವರಿನ ಮನೆಗೂ ಕೊಂಡಿಯೊಂದನ್ನು ಮಾಡಿಕೊಂಡಿದ್ದಾಳೆ. ಈ ಕೊಂಡಿ ಸನ್ನೆ ಮೂಲಕ ರಹಸ್ಯವಾಗಿ ತಾಯಿ ಮತ್ತು ಅತ್ತಿಗೆಯನ್ನು ಗಿರಿಜಾ ಭೇಟಿಯಾಗುತ್ತಿದ್ದಳು.
ನಂದಗೋಕುಲ ಸೀರಿಯಲ್ ಟೀಂ ಎಡವಟ್ಟು
ಇದೇ ರೀತಿಯ ದೃಶ್ಯ ಬೊಂಬಾಟ್ ಹುಡುಗ ಸಿನಿಮಾದಲ್ಲಿತ್ತು. ಆದ್ರೆ ಪ್ರೋಮೋದಲ್ಲಿ ನಂದಗೋಕುಲಕ್ಕೂ ಮತ್ತು ಗಿರಿಜಾ ತವರಿನ ಮನೆಯಲ್ಲಿರೋ ಗೆಜ್ಜೆ ಶಬ್ಧಕ್ಕೆ ಯಾವುದೇ ಲಿಂಕ್ ಇಲ್ಲ. ಆದ್ರೂ ಗಿರಿಜಾ ಮಾಡಿದ ಸದ್ದಿಗೆ ಅಲ್ಲಿಯ ಗಂಟೆ ಹೇಗೆ ಸೌಂಡ್ ಮಾಡಿದೆ ಎಂದು ನೆಟ್ಟಿಗರು ಪ್ರಶ್ನೆ ಮಾಡ್ತಿದ್ದಾರೆ. ಸೀನ್ ರಿಕ್ರಿಯೇಟ್ ಮಾಡೋಕೆ ಹೋಗಿ ನಂದಗೋಕುಲ ಸೀರಿಯಲ್ ಟೀಂ ಎಡವಟ್ಟು ಮಾಡಿಕೊಂಡಿದೆ.
ಇದನ್ನೂ ಓದಿ: 90s ಕಿಡ್ಸ್ ಹೃದಯ ಹಿಂಡಿದ ಕನ್ನಡದ ಸಿನಿಮಾಗಳು; Gen Zಗಳು ಮಿಸ್ ಮಾಡದೇ ನೋಡ್ಲೇಬೇಕು!
ಅಮೂಲ್ಯಾ ಒಡವೆ
ಮತ್ತೊಂದೆಡೆ ಸೀರಿಯಲ್‌ನಲ್ಲಿ ಅಮೂಲ್ಯಾ ಕೈಗೆ ತಾಯಿ ನೀಡಿದ ಒಡವೆ ಸೇರಿದೆ. ಅಮೂಲ್ಯ ತಾಯಿ ಒಡವೆ ಬಗ್ಗೆ ಕೇಳಿ ಸುಳ್ಳು ಹೇಳಿ ನಿಭಾಯಿಸಿದ್ದಾಳೆ. ಆದ್ರೆ ಈ ಒಡವೆ ಎಲ್ಲಿದೆ ಎಂಬುದನ್ನು ವಾರಗಿತ್ತಿ ಮನೆಯಲ್ಲೆಲ್ಲಾ ಹುಡುಕಾಡುತ್ತಿದ್ದಾಳೆ. ಒಡವೆ ರಹಸ್ಯ ಬಯಲಾಗುತ್ತಾ ಎಂಬುವುದು ಮುಂದಿನ ಸಂಚಿಕೆಯಲ್ಲಿ ತಿಳಿಯಲಿದೆ. ಇತ್ತ ಮಾಧವನ ಮಡದಿಯಾಗಿ ನಂದಗೋಕುಲಕ್ಕೆ ಬಂದಿರುವ ಪ್ರಿಯಾ ಬಗ್ಗೆ ವೀಕ್ಷಕರು ಅಸಮಾಧಾನ ಹೊರ ಹಾಕುತ್ತಿದ್ದಾರೆ. ಮಾವನಿಂದ ಭೇಷ್ ಅನ್ನಿಸಿಕೊಳ್ಳೋ ಭರದಲ್ಲಿ ಪ್ರಿಯಾ ಮಾಡ್ತಿರೋ ಕೆಲಸದ ಬಗ್ಗೆ ಗಿರಿಜಾ, ಅಮೂಲ್ಯ ಮತ್ತು ಮೀನಾಗೆ ಬೇಸರವಿದೆ.
ಇದನ್ನೂ ಓದಿ: ಕೃಷ್ಣ-ರುಕ್ಕು ಪಯಣಕ್ಕೆ ಮುಹೂರ್ತ; ಸೀರಿಯಲ್ ಆರಂಭಕ್ಕೂ ಮೊದಲೇ ನವೀನ್ ಸಜ್ಜು ಪಾತ್ರ ಮುಕ್ತಾಯ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

