- Home
- Entertainment
- TV Talk
- ಕಲರ್ಸ್ ಜನಮೆಚ್ಚಿದ ಮಂಥರೆ ಇದೀಗ ಜೀ ಕನ್ನಡ ವಾಹಿನಿಯ ಲಕ್ಷ್ಮೀ ನಿವಾಸ ಸೀರಿಯಲ್‌ಗೆ ಖಳನಾಯಕಿ
ಕಲರ್ಸ್ ಜನಮೆಚ್ಚಿದ ಮಂಥರೆ ಇದೀಗ ಜೀ ಕನ್ನಡ ವಾಹಿನಿಯ ಲಕ್ಷ್ಮೀ ನಿವಾಸ ಸೀರಿಯಲ್‌ಗೆ ಖಳನಾಯಕಿ
ಜೀ ಕನ್ನಡದ 'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ ನೀಲು ಪಾತ್ರಕ್ಕೆ ಬದಲಾವಣೆಯಾಗಿದೆ. ಗರ್ಭಿಣಿ ಮಾನಸ ಮನೋಹರ್ ಪಾತ್ರದಿಂದ ಹೊರನಡೆದಿದ್ದು, ಅವರ ಜಾಗಕ್ಕೆ 'ಲಕ್ಷ್ಮೀ ಬಾರಮ್ಮ' ಖ್ಯಾತಿಯ ನಟಿ ಬಂದಿದ್ದಾರೆ.

ಲಕ್ಷ್ಮೀ ನಿವಾಸ ಸೀರಿಯಲ್
ಕಲರ್ಸ್ ಜನಮೆಚ್ಚಿದ ಮಂಥರೆ ಖ್ಯಾತಿಯ ನಟಿ ಇದೀಗ ಜೀ ಕನ್ನಡ ವಾಹಿನಿಯ ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಖಳನಾಯಕಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆ ಕಲರ್ಸ್ ಕನ್ನಡದ ಜನಪ್ರಿಯ ಧಾರವಾಹಿ ಸೀರಿಯಲ್‌ನಲ್ಲಿ ನಟಿಸಿದ್ದಾರೆ.
ನೀಲು ಪಾತ್ರ
ಲಕ್ಷ್ಮೀ ನಿವಾಸ ಸೀರಿಯಲ್‌ನ ನೀಲು ಪಾತ್ರದಲ್ಲಿ ಮಾನಸ ಮನೋಹರ್ ನಟಿಸುತ್ತಿದ್ದರು. ಗರ್ಭಿಣಿಯಾಗಿರುವ ಮಾನಸ ಸದ್ಯ ಧಾರಾವಾಹಿಯಿಂದ ಹೊರಗೆ ಬಂದಿದ್ದಾರೆ. ಹಾಗಾಗಿ ನೀಲು ಪಾತ್ರಕ್ಕೆ ಸೀರಿಯಲ್ ತಂಡ ಪ್ರತಿಭಾನ್ವಿತ ನಟಿ ಅನಿಕಾ ಅವರನ್ನು ಆಯ್ಕೆ ಮಾಡಿಕೊಂಡಿದೆ. ಮಾನಸಾ ಅವರು ನೀಲು ಪಾತ್ರಕ್ಕೆ ಜೀವ ತುಂಬಿದ್ದರು. ಹಾಗಾಗಿ ಅನಿಕಾ ಅವರ ಮೇಲೆ ಪಾತ್ರ ನಿರ್ವಹಣೆಯ ಜವಾಬ್ದಾರಿ ಹೆಚ್ಚಿದೆ.
ಅನಿಕಾ
ಮರೀಗೌಡನ ಮುದ್ದಿನ ಮಡದಿ, ಜವರೇಗೌಡರ ನೆಚ್ಚಿನ ಸೊಸೆ ನೀಲು ಪಾತ್ರದಲ್ಲಿ ಅನಿಕಾ ವೀಕ್ಷಕರ ಮುಂದೆ ಬರಲಿದ್ದಾರೆ. ಇಂದಿಗೂ ಲಕ್ಷ್ಮೀ ಬಾರಮ್ಮಾ ಸೀರಿಯಲ್ ಚಿಕ್ಕಿಯಾಗಿ ಕಾಣಿಸಿಕೊಂಡಿದ್ದ ಅನಿಕಾ ಅವರನ್ನು ಜನರು ಮರೆತಿಲ್ಲ.
ಭಾವುಕ ವಿದಾಯ
ಇನ್ನು ಮಾನಸಾ ಲಕ್ಷ್ಮೀ ನಿವಾಸ ಸೀರಿಯಲ್‌ನಿಂದ ಹೊರ ಬರುತ್ತಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಪಾತ್ರದ ಹೆಸರು ನೀಲು ಆಗಿರುವ ಕಾರಣ ಕೊನೆ ದಿನದ ಶೂಟಿಂಗ್ ವೇಳೆ ನೀಲಿ ಬಣ್ಣದ ಸೀರೆಯನ್ನು ಧರಿಸಿದ್ದರು. ಈ ನೀಲಿ ಬಣ್ಣದ ಸೀರೆ ಈ ಹಿಂದೆ ಅತ್ತೆ ಪಾತ್ರದಲ್ಲಿ ನಟಿಸುತ್ತಿದ್ದ ಅಂಜಲಿ ಮತ್ತೊಂದು ಸೀರೆಯನ್ನು ತಮ್ಮ ಮತ್ತೋರ್ವ ಸಹದ್ಯೋಗಿ ನೀಡಿದ್ದರು ಎಂಬ ವಿಷಯವನ್ನು ಹಂಚಿಕೊಂಡಿದ್ದರು.
ಇದನ್ನೂ ಓದಿ: ಕೃಷ್ಣ-ರುಕ್ಕು ಪಯಣಕ್ಕೆ ಮುಹೂರ್ತ; ಸೀರಿಯಲ್ ಆರಂಭಕ್ಕೂ ಮೊದಲೇ ನವೀನ್ ಸಜ್ಜು ಪಾತ್ರ ಮುಕ್ತಾಯ
ರವಿ-ಸೌಪರ್ಣಿಕಾ ಪಾತ್ರ ಮುಕ್ತಾಯ
ಸದ್ಯ ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ರವಿಶಂಕರ್ ಮತ್ತು ಸೌಪರ್ಣಿಕಾ ಪಾತ್ರಕ್ಕೆ ಭಾಗಶಃ ಅಂತ್ಯ ಹಾಡಲಾಗಿದೆ. ಸಿದ್ದೇಗೌಡ ಜೈಲಿನಿಂದ ಹೊರ ಬಂದಿದ್ದಾನೆ. ಮತ್ತೊಂದೆಡೆ ವಿಶ್ವನ ತಾಯಿ ಪಾತ್ರವೂ ಕೊನೆಯಾಗಿದೆ. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8.30ಕ್ಕೆ ಲಕ್ಷ್ಮೀ ನಿವಾಸ ಸೀರಿಯಲ್ ಪ್ರಸಾರವಾಗುತ್ತದೆ.
ಇದನ್ನೂ ಓದಿ: 90s ಕಿಡ್ಸ್ ಹೃದಯ ಹಿಂಡಿದ ಕನ್ನಡದ ಸಿನಿಮಾಗಳು; Gen Zಗಳು ಮಿಸ್ ಮಾಡದೇ ನೋಡ್ಲೇಬೇಕು!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

