MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • 90s ಕಿಡ್ಸ್ ಹೃದಯ ಹಿಂಡಿದ ಕನ್ನಡದ ಸಿನಿಮಾಗಳು; Gen Zಗಳು ಮಿಸ್ ಮಾಡದೇ ನೋಡ್ಲೇಬೇಕು!

90s ಕಿಡ್ಸ್ ಹೃದಯ ಹಿಂಡಿದ ಕನ್ನಡದ ಸಿನಿಮಾಗಳು; Gen Zಗಳು ಮಿಸ್ ಮಾಡದೇ ನೋಡ್ಲೇಬೇಕು!

90ರ ದಶಕದ ಕೆಲವು ಕನ್ನಡ ಸಿನಿಮಾಗಳು ತಮ್ಮ ದುರಂತ ಅಂತ್ಯದಿಂದ ಪ್ರೇಕ್ಷಕರ ಹೃದಯವನ್ನು ಘಾಸಿಗೊಳಿಸಿದ್ದವು. ಈ ಸಿನಿಮಾಗಳು ಇಂದಿಗೂ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದಿದ್ದು, ಇಂದಿನ ಯುವ ಪೀಳಿಗೆಯೂ ನೋಡಲೇಬೇಕಾದ ಚಿತ್ರಗಳಾಗಿವೆ.

2 Min read
Author : Mahmad Rafik
Published : Mar 02 2026, 07:23 AM IST
Share this Photo Gallery
  • FB
  • TW
  • Linkdin
  • Whatsapp
16
 ಹೃದಯ ಘಾಸಿಗೊಳಿಸಿದ ಕನ್ನಡ ಸಿನಿಮಾಗಳು
Image Credit : Social Media

ಹೃದಯ ಘಾಸಿಗೊಳಿಸಿದ ಕನ್ನಡ ಸಿನಿಮಾಗಳು

90ರ ದಶಕದ ಕೆಲ ಸಿನಿಮಾಗಳು ನೋಡುಗರ ಹೃದಯವನ್ನ ಘಾಸಿಗೊಳಿಸಿದ್ದವು. ಸಿನಿಮಾ ನೋಡಿದ ನಂತರ ಇಡೀ ದಿನ ನಿಮ್ಮನ್ನು ಆವರಿಸುತ್ತವೆ. ಇಂತಹ ಹತಾಶೆಯಲ್ಲಿಯೂ ಒಂದೊಳ್ಳೆ ಸಿನಿಮಾ ನೋಡಿದ ತೃಪ್ತಿ ನಿಮ್ಮದಾಗುತ್ತವೆ. ಇಂದಿನ ಜೆನ್‌ ಜಿ ಯುವ ಸಮುದಾಯ ಈ ಸಿನಿಮಾಗಳನ್ನು ಮಿಸ್ ಮಾಡದೇ ನೋಡಲೇಬೇಕು.

26
ಕೃಷ್ಣನ ಲವ್ ಸ್ಟೋರಿ
Image Credit : Social Media

ಕೃಷ್ಣನ ಲವ್ ಸ್ಟೋರಿ

ಅಜೇಯ್ ರಾವ್ ಮತ್ತು ರಾಧಿಕಾ ಪಂಡಿತ್ ನಟನೆಯ ಕೃಷ್ಣನ ಲವ್ ಸ್ಟೋರಿ ಸಿನಿಮಾ ಸಹ ಕೊನೆಗೆ ಒಂಟಿ ಭಾವ ನಿಮ್ಮನ್ನು ಕಾಡುತ್ತದೆ. ಪ್ರೀತಿಯನ್ನು ದಿಕ್ಕರಿಸಿ ಹೋಗುವ ನಟಿಗೆ ಮತ್ತೆ ಹಳೇ ಪ್ರೇಮವೇ ಆಸರೆಯಾಗುತ್ತದೆ. 

ಎಲ್ಲವನ್ನೂ ಮರೆತು ಪ್ರೇಯಸಿಯನ್ನು ಒಪ್ಪಿಕೊಂಡರೂ, ನಟಿಗೆ ಮಾತ್ರ ತನ್ನ ತಪ್ಪು ಪದೇ ಪದೇ ಕಾಡುತ್ತಿರುತ್ತದೆ. ಮಿಡಲ್ ಕ್ಲಾಸ್ ಕುಟುಂಬದ ಕಥೆ ಜೊತೆ ನವೀರಾದ ಲವ್ ಸ್ಟೋರಿಯನ್ನು ಈ ಸಿನಿಮಾ ಹೊಂದಿದೆ.

Related Articles

Related image1
ಧರ್ಮ ತೊರೆದು ಮುಸ್ಲಿಂ ರಾಜಮನೆತನದ ಸೊಸೆಯಾದ ಬ್ರಾಹ್ಮಣ ಕುಟುಂಬದ ಖ್ಯಾತ ನಟಿ
Related image2
450 ಕೋಟಿ ಸುರಿದ್ರೂ ವೇಸ್ಟ್ ಆಯ್ತು; ಹಾಡಿಗಾಗಿಯೇ 75 ಕೋಟಿ ಹಣ ಖರ್ಚು; ಇದುವೇ 2025ರ ಫಸ್ಟ್ ಫ್ಲಾಪ್ ಸಿನಿಮಾ 
36
ಅಮೃತವರ್ಷಿಣಿ
Image Credit : Social Media

ಅಮೃತವರ್ಷಿಣಿ

ರಮೇಶ್ ಅರವಿಂದ್, ಶರತ್, ಸುಹಾಸಿನಿ ಮತ್ತು ನಿವೇದಿತಾ ಜೈನ್ ನಟನೆಯ ಅಮೃತಧಾರೆ ಸಿನಿಮಾ ಮ್ಯೂಸಿಕಲ್ ಹಿಟ್ ಅಗಿತ್ತು. ಪ್ರೇಯಸಿಯನ್ನು ಕಳೆದುಕೊಂಡು ಒಂಟಿಯಾಗಿರೋ ಹೀರೋ, ಆಪ್ತ ಗೆಳೆಯನ ಮನೆಗೆ ಬರುತ್ತಾನೆ. ಇಲ್ಲಿ ನಾಯಕನಿಗೆ ಗೆಳೆಯನ ಹೆಂಡ್ತಿ ಮೇಲೆ ಪ್ರೇಮಾಂಕುರವಾಗುತ್ತದೆ. ಇದಕ್ಕಾಗಿ ಗೆಳೆಯನನ್ನೇ ಕೊಲ್ಲುತ್ತಾನೆ. ನಂತರ ಆತನನ್ನು ಗೆಳೆಯನ ಹೆಂಡ್ತಿಯೂ ಒಪ್ಪಿಕೊಳ್ಳುತ್ತಾನೆ. ಕೊನೆಗೆ ಹೀರೋಯಿನ್ ಕೈಗೆ ಗಂಡನ ಕ್ಯಾಮೆರಾ ಸಿಗುತ್ತದೆ. ಇದರಿಂದ ಸಿನಿಮಾದ ಇಡೀ ಕಥೆಯೇ ಬದಲಾಗುತ್ತದೆ.

46
ತಾಜ್‌ ಮಹಲ್
Image Credit : Social Media

ತಾಜ್‌ ಮಹಲ್

ಅಜೇಯ್ ರಾವ್ ಮತ್ತು ಪೂಜಾ ಗಾಂಧಿ ನಟನೆಯ ಸುಂದರವಾದ ದುರಂತ ಪ್ರೇಮಕಥೆಯೇ ತಾಜ್ ಮಹಲ್. ಹಳ್ಳಿಯಿಂದ ಓದಲು ಸಿಟಿಗೆ ಬರುವ ಹೀರೋಗೆ ತನ್ನದೇ ಕಾಲೇಜಿನಲ್ಲಿ ಓದುತ್ತಿರುವ ನಾಯಕಿ ಮೇಲೆ ಪ್ರೇಮವಾಗುತ್ತದೆ. ಆಕೆಗಾಗಿ ಸುಳ್ಳು ಫೋನ್ ಕಾಲ್ ಮೇಲೆ ಗೆಳೆಯನಾಗುತ್ತಾನೆ. ಅಪ್ಪ-ಅಮ್ಮ ಜಮೀನು ಮಾರಿ ಹಣ ಕಳುಹಿಸುತ್ತಿದ್ರೆ ಹೀರೋ ಇದ್ಯಾವುದರ ಪರಿವೇ ಇಲ್ಲದೇ ಎಂಜಾಯ್ ಮಾಡುತ್ತಿರುತ್ತಾರೆ. 

ಪ್ರೇಯಸಿಗಾಗಿ ಪರೀಕ್ಷೆ ಬರೆಯದೇ ಕಾಲೇಜಿನಿಂದ ಹೊರ ಬೀಳುತ್ತಾನೆ. ತಪ್ಪು ತಿದ್ದಿಕೊಂಡು ಊರಿಗೆ ಹೋದ ನಾಯಕನಿಗೆ ವಿಧಿ ಬದುಕುವ ಅವಕಾಶವನ್ನೇ ನೀಡಲ್ಲ. ಸತ್ಯ ತಿಳಿದು ಓಡೋಡಿ ಬರೋ ನಾಯಕಿಗೂ ದೊಡ್ಡದೊಂದು ಆಘಾತ ಕಾದಿರುತ್ತದೆ.

56
ಮುಂಗಾರುಮಳೆ
Image Credit : Social Media

ಮುಂಗಾರುಮಳೆ

ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಮಳೆ ಹುಡುಗಿ ಪೂಜಾ ಗಾಂಧಿ ನಟನೆಯ ಮುಂಗಾರುಮಳೆ ಕನ್ನಡದ ಎವರ್‌ಗ್ರೀನ್ ಸಿನಿಮಾಗಳಲ್ಲಿ ಒಂದಾಗಿದೆ. ಹೀರೋಯಿನ್ ನಂದಿನಿ ಮದುವೆಗೆ ಬರುವ ಹೀರೋಗೆ ವಧುವಿನ ಮೇಲೆ ಪ್ರೇಮಾಂಕುರವಾಗಿರುತ್ತದೆ. ಮದುವೆ ಸಂಭ್ರಮದಲ್ಲಿರುವ ನಂದಿನಿಗೆ ಪ್ರೀತಮ್ ಮೇಲೆ ಪ್ರೀತಿಯುಂಟಾಗುತ್ತದೆ. ಇನ್ನೇನು ಮದುವೆ ಮನೆಯಿಂದ ಓಡಿ ಹೋಗುವಷ್ಟರಲ್ಲಿ ಅಮ್ಮನಿಂದ ವಿರೋಧ ವ್ಯಕ್ತವಾಗುತ್ತದೆ. 

ಕುಟುಂಬದಲ್ಲಿನ ಸಮಸ್ಯೆಗಳು ನಂದಿನಿ ಮತ್ತು ಪ್ರೀತಮ್ ಪ್ರೀತಿಯನ್ನು ಸೋಲಿಸುತ್ತದೆ. ಕುಟುಂಬಕ್ಕಾಗಿ ನಾಯಕ ನಟ ಪ್ರೀತಿಯನ್ನೇ ತ್ಯಾಗ ಮಾಡ್ತಾನೆ.

ಇದನ್ನೂ ಓದಿ: ಫ್ಲಾಪ್ ನಟನಿಗೆ ಸೂಪರ್​ ಹೀರೋ ಪಟ್ಟ ಪಾಕಿಸ್ತಾನದ ಚಿತ್ರ: ನಂತರ ಕನ್ನಡಕ್ಕೂ ರಿಮೇಕ್ ಆಯ್ತ

66
ಚೆಲುವಿನ ಚಿತ್ತಾರ
Image Credit : Social Media

ಚೆಲುವಿನ ಚಿತ್ತಾರ

ಗಣೇಶ್ ಮತ್ತು ಅಮೂಲ್ಯ ನಟನೆಯ ಚೆಲುವಿನ ಚಿತ್ತಾರ ಇಡೀ ಚಿತ್ರರಂಗದಲ್ಲಿಯೇ ಹಲ್-ಚಲ್ ಸೃಷ್ಟಿಸಿತ್ತು. ಶ್ರೀಮಂತ ಕುಟುಂಬದ ಹೈಸ್ಕೂಲ್ ಹುಡುಗಿಗೆ ಊರಿನಲ್ಲಿರುವ ಬಡ ಮತ್ತು ಪೆದ್ದ ಮೆಕ್ಯಾನಿಕ್ ಮಾದೇಶನ ಮೇಲೆ ಲವ್ ಆಗುತ್ತದೆ. ಮ್ಯೂಸಿಕಲ್ ಹಿಟ್ ಸಿನಿಮಾ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಾ ಕೊನೆಯವರೆಗೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ. ಶ್ರೀಮಂತಿಕೆ ಹೇಗೆ ಒಂದು ಶುದ್ಧ ಪ್ರೀತಿಯನ್ನು ದೂರ ಮಾಡುತ್ತೆ ಅನ್ನೋದು ಸಿನಿಮಾದ ಒನ್ ಲೈನ್ ಕಥೆ.

ಇದನ್ನೂ ಓದಿ: 131 ಕೋಟಿಯ ಈ ಸಿನಿಮಾ ಆಯ್ತು ಬಾಕ್ಸ್‌ ಆಫಿಸ್‌ನ ಮಹಾಫ್ಲಾಪ್; 29 ಹಾಡುಗಳಿದ್ರೂ ಸೋಲು

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಸ್ಯಾಂಡಲ್ವುಡ್ ಫಿಲ್ಮ್
ಸ್ಯಾಂಡಲ್‌ವುಡ್
ಸಿನಿಮಾ
ಮನರಂಜನಾ ಸುದ್ದಿ

Latest Videos
Recommended Stories
Recommended image1
ಸಿಂಧೂರ, ಮಂಗಳಸೂತ್ರ ಎಲ್ಲಿ? ಟ್ರೋಲ್ ಆದ ರಶ್ಮಿಕಾ ಮಂದಣ್ಣ ಪರ ಬ್ಯಾಟಿಂಗ್ ಮಾಡಿದ ಸೌತ್ ಫ್ಯಾನ್ಸ್
Recommended image2
ಏಂಜಲಿನಾ ಜೋಲಿ, ಹಾಗೊಂದು ಕಿಸ್‌ ಮಾಡಿದ್ದೇ ತಪ್ಪಾ ?
Recommended image3
ಮದುವೆಯಂತೆ ವಿಶೇಷ ರೀತಿಯಲ್ಲಿ ವಿರೋಶ್ ರೆಸೆಪ್ಶನ್ ಆಯೋಜನೆ, ಅಭಿಮಾನಿಗಳಲ್ಲಿ ವಿಶೇಷ ಮನವಿ
Related Stories
Recommended image1
ಧರ್ಮ ತೊರೆದು ಮುಸ್ಲಿಂ ರಾಜಮನೆತನದ ಸೊಸೆಯಾದ ಬ್ರಾಹ್ಮಣ ಕುಟುಂಬದ ಖ್ಯಾತ ನಟಿ
Recommended image2
450 ಕೋಟಿ ಸುರಿದ್ರೂ ವೇಸ್ಟ್ ಆಯ್ತು; ಹಾಡಿಗಾಗಿಯೇ 75 ಕೋಟಿ ಹಣ ಖರ್ಚು; ಇದುವೇ 2025ರ ಫಸ್ಟ್ ಫ್ಲಾಪ್ ಸಿನಿಮಾ 
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved