- Home
- Entertainment
- TV Talk
- Amruthadhaare: ಇತ್ತ ಸುನಿಲ್ ಮೋಸ, ಅತ್ತ ಡಿವೋರ್ಸ್ಗೆ ಜೈದೇವ ಹೊಸ ಷರತ್ತು! ಅಪ್ಪನ ಸಮಾಧಿ ಮೇಲೆ ಕಣ್ಣು: ಏನಾಗ್ತಿದೆ?
Amruthadhaare: ಇತ್ತ ಸುನಿಲ್ ಮೋಸ, ಅತ್ತ ಡಿವೋರ್ಸ್ಗೆ ಜೈದೇವ ಹೊಸ ಷರತ್ತು! ಅಪ್ಪನ ಸಮಾಧಿ ಮೇಲೆ ಕಣ್ಣು: ಏನಾಗ್ತಿದೆ?
ಅಮೃತಧಾರೆ ಧಾರಾವಾಹಿಯು ರೋಚಕ ಹಂತ ತಲುಪಿದ್ದು, ಜೈದೇವನ ಕುತಂತ್ರದಿಂದ ಸುನಿಲ್ ಮಲ್ಲಿಯನ್ನು ಮದುವೆಯಾಗಲು ಒಪ್ಪಿಕೊಂಡಿದ್ದಾನೆ. ಅಪ್ಪನ ಸಮಾಧಿ ಜಾಗವನ್ನು ಪಡೆದು, ಮಲ್ಲಿಗೆ ವಿಚ್ಛೇದನ ನೀಡದೆ ಆಟವಾಡಿಸುವುದು ಜೈದೇವನ ಹೊಸ ಯೋಜನೆಯಾಗಿದ್ದು, ಮಲ್ಲಿಯ ಜೀವನದಲ್ಲಿ ಮತ್ತೊಮ್ಮೆ ಮೋಸದ ಕರಿಛಾಯೆ ಮೂಡಿದೆ.

ರೋಚಕ ಹಂತ
ಅಮೃತಧಾರೆ ಸೀರಿಯಲ್ (Amruthadhaare Serial) ಇದೀಗ ರೋಚಕ ಹಂತ ತಲುಪಿದೆ. ಎಲ್ಲವೂ ಸರಿಯಾಗಿದೆ ಎಂದುಕೊಳ್ಳುವಾಗಲೇ ಮಲ್ಲಿಯ ಲೈಫ್ನಲ್ಲಿ ಅತಿದೊಡ್ಡ ಮೋಸ ಆಗ್ತಿರೋದು ತಿಳಿಯುತ್ತಿದೆ.
ಜೈದೇವ್ ಕುತಂತ್ರ
ಸುನಿಲ್ ಮಲ್ಲಿಯನ್ನು ಮನಸಾರೆ ಪ್ರೀತಿಸ್ತಾ ಇರೋದು ನಿಜವಾದರೂ, ಈಗ ಆತ ಮಲ್ಲಿಯನ್ನು ಮದುವೆಯಾಗಲು ಒಪ್ಪಿಕೊಂಡಿರುವುದು ಜೈದೇವ್ನ ಕುತಂತ್ರದಿಂದ.
ತಪ್ಪಿನ ಅರಿವು
ಸುನಿಲ್ ಹುಟ್ಟುಹಬ್ಬಕ್ಕೆ ಮಲ್ಲಿ ಕೇಕ್ ಕಟ್ ಮಾಡಿದಾಗ, ಸುನಿಲ್ಗೆ ತಾನು ಮೋಸ ಮಾಡಿ ತಪ್ಪು ಮಾಡ್ತಿದ್ದೇನೆ ಎಂದು ತಿಳಿಯುತ್ತಿದೆ. ಆದರೆ, ಜೈದೇವನ ಮುಂದೆ ಆತ ಕೈಗೊಂಬೆಯಾಗಿದ್ದಾನೆ. ಯಾವುದೇ ಕಾರಣಕ್ಕೂ ಮೂರು ಗಂಟು ಹಾಕಿಸಬೇಡಿ ಎನ್ನುತ್ತಿದ್ದಾನೆ.
ಜೈದೇವ್ ಹೊಸ ಷರತ್ತು
ಅದೇ ಇನ್ನೊಂದೆಡೆ, ಆನಂದ್ ಬಂದು ಮಲ್ಲಿಗೆ ಮದುವೆ ಮಾಡಿಸುತ್ತಿದ್ದೇವೆ. ಎಲ್ಲಾ ಆಸ್ತಿ ಸಿಕ್ಕಿದ್ಯಲ್ಲಾ, ಮಲ್ಲಿಗೆ ಡಿವೋರ್ಸ್ ಕೊಡು ಎಂದಾಗ, ಜೈದೇವ ಹೊಸ ಷರತ್ತನ್ನು ವಿಧಿಸಿದ್ದಾನೆ.
ಅಪ್ಪನ ಸಮಾಧಿ
ಅದು, ಅಪ್ಪನ ಸಮಾಧಿ ಜಾಗ ತನ್ನ ಹೆಸರಿಗೆ ಬೇಕು ಎನ್ನುವುದು. ಸುನಿಲ್ ಮಲ್ಲಿಯನ್ನು ಬಲೆಗೆ ಬೀಳಿಸಿಕೊಂಡಿರೋದು ತಿಳಿಯುತ್ತಲೇ, ಅಪ್ಪನ ಸಮಾಧಿ ಜಾಗವನ್ನೂ ಪಡೆದು ಮಲ್ಲಿಗೆ ಡಿವೋರ್ಸ್ ಕೊಡದೇ ಆಡಿಸಬೇಕು ಎನ್ನುವುದು ಆತನ ಲೆಕ್ಕಾಚಾರ.
ಮಲ್ಲಿಗೆ ಮತ್ತೆ ಮೋಸ?
ಒಟ್ಟಿನಲ್ಲಿ ಮಲ್ಲಿಗೆ ಮತ್ತೊಮ್ಮೆ ಮೋಸ ಆಗ್ತಿದ್ಯಾ ಎನ್ನುವ ಬೇಸರದಲ್ಲಿ ಅಭಿಮಾನಿಗಳು ಇದ್ದಾರೆ. ಹಾಗೆ ಆಗದೇ ಇರಲಪ್ಪ ಎನ್ನುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

