- Home
- Entertainment
- TV Talk
- Brahmagantu Serial: ಶೂಟಿಂಗ್ ಮಧ್ಯೆಯೇ ವಿಡಿಯೋ ಮಾಡಿ ನೋವು ಹಂಚಿಕೊಂಡ ಬ್ರಹ್ಮಗಂಟು ಅರ್ಚನಾ
Brahmagantu Serial: ಶೂಟಿಂಗ್ ಮಧ್ಯೆಯೇ ವಿಡಿಯೋ ಮಾಡಿ ನೋವು ಹಂಚಿಕೊಂಡ ಬ್ರಹ್ಮಗಂಟು ಅರ್ಚನಾ
ಬ್ರಹ್ಮಗಂಟು ಧಾರಾವಾಹಿ ನಟಿಯರಾದ ಸನ್ಮಿತಾ ಮತ್ತು ಶ್ವೇತಾ ರಾವ್, ಶೂಟಿಂಗ್ ಬಿಡುವಿನಲ್ಲಿ ಮಾಡಿದ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಂ ಫಿಲ್ಟರ್ ಬಳಸಿ, ಗಂಭೀರ ಸಂಭಾಷಣೆಗಳನ್ನು ತಮಾಷೆಯಾಗಿ ಹೇಳುವ ಮೂಲಕ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದೆ.

ಬ್ರಹ್ಮಗಂಟು ಸೀರಿಯಲ್ ಅರ್ಚನಾ
ಜೀ ಕನ್ನಡ ವಾಹಿನಿಯ ಬ್ರಹ್ಮಗಂಟು ಸೀರಿಯಲ್ ಅರ್ಚನಾ ಪಾತ್ರಧಾರಿ ನಟಿ ಸನ್ಮಿತಾ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಶೂಟಿಂಗ್ ಬಿಡುವಿನ ಮಧ್ಯೆಯೇ ಈ ವಿಡಿಯೋ ಮಾಡಿರೋದಾಗಿ ಶ್ವೇತಾ ರಾವ್ ಹೇಳಿಕೊಂಡಿದ್ದಾರೆ. ಸನ್ಮಿತಾ ಅವರಿಗೆ ಶ್ವೇತಾರಾವ್ ಕಲೋಸೆ ಸಾಥ್ ನೀಡಿದ್ದಾರೆ
ಶ್ವೇತಾ ಮತ್ತು ಸನ್ಮಿತಾ
ಶೂಟಿಂಗ್ ಅಲ್ಲಿ ಬ್ರೇಕ್ ಸಿಕ್ಕುದ್ರೆ ಇದೆ ನಮ್ಮ ಕೆಲಸ ಖುಷಿಯಾಗಿರೋದು ಎಂಬ ಶೀರ್ಷಿಕೆಯಡಿಯಲ್ಲಿ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ ಶ್ವೇತಾ ಮತ್ತು ಸನ್ಮಿತಾ ಏನು ಹೇಳಿದ್ದಾರೆ ಎಂದು ನೋಡೋಣ ಬನ್ನಿ.
ವಿಡಿಯೋ
ಇವತ್ತು ನಮ್ಮ ಅಜ್ಜಿ ತುಂಬಾ ನೋವಾಗುವ ರೀತಿಯಲ್ಲಿ ಮಾತನಾಡಿದರು. ನಿನ್ನ ಗಂಡ ಬಡ ಮೇಷ್ಟ್ರು ಅಂತ ಅಂದ್ರು. ಅಷ್ಟೇ ಅಲ್ಲ ನಮ್ಮ ಚಿಕ್ಕಮ್ಮಗೂ ಬೆನ್ನು ನೋವು ಅಂತ ಹೇಳಿದರು. ಅದನ್ನು ಚಿಕ್ಕಮ್ಮ ಹೇಳ್ತಾರೆ ನೋಡಿ ಎಂದು ಕ್ಯಾಮೆರಾ ತಿರುಗಿಸುತ್ತಾರೆ. ಕ್ಯಾಮೆರಾ ಬರುತ್ತಿದ್ದಂತೆ ಚಿಕ್ಕಮ್ಮ ಸಹ, ನನಗೆ ಬೆನ್ನುನೋವು ಇದೆಯಾ ಅಂದ್ರು ಫ್ರೆಂಡ್ಸ್ ಅಂತ ಹೇಳ್ತಾರೆ.
ತಮಾಷೆ ವಿಡಿಯೋ
ಈ ವಿಡಿಯೋವನ್ನು ಇಬ್ಬರು ಕಲಾವಿದರು ತಮಾಷೆಯಾಗಿ ಮಾಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿನ ಫೀಚರ್ಸ್ ಬಳಸಿ ಮುಖವನ್ನು ತಮಾಷೆಯಾಗಿ ತೋರಿಸಿಕೊಂಡಿದ್ದಾರೆ. ತಮಾಷೆ ಮುಖಕ್ಕೆ ಸೀರಿಯಸ್ ಆಗಿ ಡೈಲಾಗ್ ಹೇಳುವ ಪ್ರಯತ್ನವನ್ನು ಮಾಡಿದ್ದಾರೆ. ಮೊಬೈಲ್‌ನಲ್ಲಿ ತಮ್ಮ ಮುಖ ನೋಡಿ ಸನ್ಮಿತಾ ಮತ್ತು ಶ್ವೇತಾರಾವ್ ನಕ್ಕಿದ್ದಾರೆ.
ವೈರಲ್ ವಿಡಿಯೋ ನೋಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://www.instagram.com/p/DRhFiblCc1B/
ಇದನ್ನೂ ಓದಿ: Brahmagantu: ದೀಪಾ ಮುಚ್ಚಿಟ್ಟ ಸೀಕ್ರೇಟ್ ದುರ್ಗಾ ಮುಂದೆ ಬಯಲಾಗೋಯ್ತು! ಮುಂದಾದದ್ದೇ ಬೇರೆ
ಬ್ರಹ್ಮಗಂಟು ಸೀರಿಯಲ್
ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 10 ಗಂಟೆಗೆ ಬ್ರಹ್ಮಗಂಟು ಸೀರಿಯಲ್ ಪ್ರಸಾರವಾಗುತ್ತದೆ. ಸೀರಿಯಲ್ ನಾಯಕಿ ದೀಪಾ ಇದೀಗ ದಿಶಾ ಆಗಿ ಬದಲಾಗಿದ್ದಾರೆ. ಸೌಂದರ್ಯ ಬಚ್ಚಿಟ್ಟ ರಹಸ್ಯ ಮುನ್ನಲೆಗೆ ಬರುತ್ತದೆ.
ಇದನ್ನೂ ಓದಿ: Brahmagantu: ದೀಪಾಗೆ ಅಗ್ನಿ ಪರೀಕ್ಷೆ! ಅವಳೇ ದಿಶಾ ಎನ್ನೋ ಗುಟ್ಟು ಸೌಂದರ್ಯಾಗೆ ತಿಳಿದುಹೋಯ್ತಾ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

