Celina Jaitly Alleges Blackmail Forced Sex Abuse Against Husband Peter Haag ಬಾಲಿವುಡ್‌ ನಟಿ ಸೆಲಿನಾ ಜೇಟ್ಲಿ ತನ್ನ ಪತಿ ಹಾಗೂ ಉದ್ಯಮಿ ಪೀಟರ್ ಹಾಕ್‌ ವಿರುದ್ಧ ಶಾಕಿಂಗ್‌ ಆರೋಪ ಮಾಡಿದ್ದಾರೆ. ಈ ಕುರಿತು ಅವರು ತಮ್ಮ ದೂರಿನಲ್ಲಿಯೂ ವಿವರಿಸಿದ್ದಾರೆ. 

ಮುಂಬೈ (ನ.26): ಕೌಟುಂಬಿಕ ಹಿಂಸಾಚಾರ ಪ್ರಕರಣದಲ್ಲಿ ನಟಿ ಸೆಲಿನಾ ಜೇಟ್ಲಿ ತಮ್ಮ ಪತಿ ಪೀಟರ್ ಹಾಗ್ ವಿರುದ್ಧ ಶಾಕಿಂಗ್‌ ಆರೋಪಗಳನ್ನು ಮಾಡಿದ್ದಾರೆ. ಪೀಟರ್ ಹಾಗ್ ತನ್ನನ್ನು "ಅಸ್ವಾಭಾವಿಕ" ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗುವಂತೆ ಒತ್ತಾಯ ಮಾಡುತ್ತಿದ್ದ. ನನ್ನ ನಗ್ನ ಚಿತ್ರಗಳನ್ನು ತೆಗೆದುಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಹಾಗೂ ಇತರ ಪುರುಷರ ಜೊತೆ ಮಲಗಿಕೊಳ್ಳುವಂತೆ ನನಗೆ ಹೇಳುತ್ತಿದ್ದ ಎಂದು ಅವರು ಆರೋಪಿಸಿದ್ದಾರೆ.

ಪತಿಯ ವಿರುದ್ಧ ಸೆಲೀನಾ ಜೇಟ್ಲಿ ಆರೋಪ

ಮಂಗಳವಾರ, ಸೆಲೀನಾ ತನ್ನ ಪತಿಯ ವಿರುದ್ಧ ಕೌಟುಂಬಿಕ ಹಿಂಸೆ, ಕ್ರೌರ್ಯ ಮತ್ತು ಮ್ಯಾನಿಪ್ಯುಲೇಶನ್‌ ಆರೋಪ ಹೊರಿಸಿ ಪ್ರಕರಣ ದಾಖಲಿಸಿದ್ದಾರೆ ಎನ್ನುವುದು ಗೊತ್ತಾಗಿದೆ. ಹಿಂದೂಸ್ತಾನ್ ಟೈಮ್ಸ್ ಪಡೆದ ನ್ಯಾಯಾಲಯದ ದಾಖಲೆಗಳಲ್ಲಿ, ಸೆಲಿನಾ, ಪೀಟರ್ ವಿರುದ್ಧ ಆಘಾತಕಾರಿ ಆರೋಪಗಳ ಸರಣಿಯನ್ನು ಹೊರಿಸಿದ್ದಾರೆ.

ಸೆಲೀನಾ 2010 ರಲ್ಲಿ ಆಸ್ಟ್ರಿಯಾದ ಹೋಟೆಲ್ ಉದ್ಯಮಿ ಪೀಟರ್ ಅವರನ್ನು ವಿವಾಹವಾಗಿದ್ದರು. ಅವರಿಗೆ ಮೂವರು ಗಂಡು ಮಕ್ಕಳಿದ್ದಾರೆ.2012ರಲ್ಲಿ ಸೆಲಿನಾ ಜೇಟ್ಲಿ ಅವರು ವಿನ್ಸ್ಟನ್ ಮತ್ತು ವಿರಾಜ್ ಹೆಸರಿನ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದರು. ಆ ಬಳಿಕ 2017ರಲ್ಲೂ ಆರ್ಥರ್ ಹಾಗೂ ಶಂಶೇರ್‌ ಹೆಸರಿನ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಆದರೆ, ಶಂಶೇರ್‌ ಶಿಶುವಾಗಿದ್ದಾಗಲೇ ಹೃದಯಾಘಾತದಿಂದ ಸಾವು ಕಂಡಿದ್ದ.

ಪೀಟರ್ ತನ್ನನ್ನು ಮಕ್ಕಳ ಮುಂದೆ ವೇಶ್ಯೆ ಎಂದು ಕರೆದಿದ್ದಾನೆ ಎಂದು ಅವಳು ಹೇಳಿಕೊಂಡಿದ್ದಾಳೆ. ಮದುವೆಯ ಸಮಯದಲ್ಲಿ ದುಬಾರಿ ಉಡುಗೊರೆಗಳನ್ನು ಬೇಡಿಕೆ ಇಟ್ಟಿದ್ದಾಗಿಯೂ ಅವಳು ಹೇಳಿಕೊಂಡಿದ್ದಾರೆ.

ಪೀಟರ್ ವಿರುದ್ಧ ಸೆಲೀನಾ ಮಾಡಿರುವ 9 ಪ್ರಮುಖ ಆರೋಪಗಳು ಇಲ್ಲಿವೆ

ನಿಂದನೀಯ ಮದುವೆ

ದೂರಿನಲ್ಲಿ ಸೆಲೀನಾ, ಪೀಟರ್ ಅವರನ್ನು "ತನ್ನ ಹೆಂಡತಿ ಅಥವಾ ಮೂವರು ಮಕ್ಕಳ ಬಗ್ಗೆ ಯಾವುದೇ ಸಹಾನುಭೂತಿಯನ್ನು ತೋರಿಸದ ನಾರ್ಸಿಸಿಸ್ಟಿಕ್, ಸ್ವಾರ್ಥಿ ವ್ಯಕ್ತಿ" ಎಂದು ಬಣ್ಣಿಸಿದ್ದಾರೆ. ತನ್ನ ಗಂಡನ "ಕ್ಷುಲ್ಲಕ ಕೋಪ ಮತ್ತು ಮದ್ಯದ ಪ್ರವೃತ್ತಿ"ಯಿಂದಾಗಿ ತಾನು ನಿಂದನೀಯ ವಿವಾಹವನ್ನು ಸಹಿಸಿಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ. "ಅವರು ನನ್ನ ವ್ಯಕ್ತಿತ್ವವನ್ನು ವ್ಯವಸ್ಥಿತವಾಗಿ ಹಾಳು ಮಾಡಿದ್ದಾರೆ ಮತ್ತು ನನ್ನ ಆಸ್ತಿ ಮತ್ತು ಹಣಕಾಸಿನ ನಿಯಂತ್ರಣವನ್ನು ಅವರಿಗೆ ನೀಡುವಂತೆ ಉದ್ದೇಶಪೂರ್ವಕವಾಗಿ ವಂಚಿಸಿದ್ದಾರೆ" ಎಂದು ದಾಖಲೆಯಲ್ಲಿ ಹೇಳಲಾಗಿದೆ.

ದುಬಾರಿ ಗಿಫ್ಟ್‌ಗಳಿಗೆ ಬೇಡಿಕೆ

ಸೆಲೀನಾ ಮತ್ತು ಅವರ ಕುಟುಂಬದಿಂದ ಪೀಟರ್ ದುಬಾರಿ ಉಡುಗೊರೆಗಳನ್ನು ಬೇಡಿಕೆ ಇಟ್ಟಿದ್ದಾರೆ ಎಂದು ಕಾನೂನು ದೂರಿನಲ್ಲಿ ಹೇಳಲಾಗಿದೆ. ದಾಖಲೆಗಳ ಪ್ರಕಾರ, ಪೀಟರ್ ಸೆಲೀನಾಗೆ "ತನಗೆ ತಿಳಿದಿರುವ ಎಲ್ಲಾ ಭಾರತೀಯ ವರರು ವಧುವಿನ ಕುಟುಂಬದಿಂದ ಉದಾರ ಉಡುಗೊರೆಗಳನ್ನು ಪಡೆದಿದ್ದಾರೆ ಮತ್ತು ಐಷಾರಾಮಿ ಉಡುಪುಗಳು, ಕಫ್ಲಿಂಕ್‌ಗಳು ಮತ್ತು ಆಭರಣಗಳಿಗೆ ಬೇಡಿಕೆ ಇಟ್ಟಿದ್ದಾರೆ" ಎಂದು ಹೇಳಿದರು. ಸೆಲಿನಾ ಕುಟುಂಬವು ಪೀಟರ್‌ಗೆ ಸುಮಾರು ₹6,00,000 ಮೌಲ್ಯದ ಹಲವಾರು ಸೆಟ್ ಡಿಸೈನರ್ ಕಫ್ಲಿಂಕ್‌ಗಳು ಮತ್ತು ₹10,00,000 ಮೌಲ್ಯದ ಆಭರಣಗಳನ್ನು ನೀಡಿದೆ ಎಂದು ದೂರಿನಲ್ಲಿ ಹೇಳಲಾಗಿದೆ.

ಹನಿಮೂನ್‌ನಲ್ಲಿ ಭಾರೀ ಸಿಟ್ಟು

ಮದುವೆಯ ಬಳಿಕ ಇಟಲಿಯಲ್ಲಿ ತಮ್ಮ ಹನಿಮೂನ್‌ ನಡೆದಿತ್ತು. ಈ ವೇಳೆ ನಾನು ಋತುಚಕ್ರದ ನೋವಿನಿಂದ ಬಳಲುತ್ತಿದ್ದೆ. ಹಾಗಿದ್ದರೂ ಆತ ನನ್ನ ಮೇಲೆ ಹಲ್ಲೆ ನಡೆಸಿದ್ದ ಎಂದು ಸೆಲಿನಾ ಆರೋಪ ಮಾಡಿದ್ದಾರೆ. 'ಋತುಚಕ್ರದ ನೋವು ಎಷ್ಟಿತ್ತೆಂದರೆ, ಇದಕ್ಕಾಗಿ ವೈದ್ಯರನ್ನು ಭೇಟಿಯಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ವೈದ್ಯರ ಬಳಿಕ ಕರೆದುಕೊಂಡು ಹೋಗುವಂತೆ ಪೀಟರ್‌ಗೆ ತಿಳಿಸಿದಾಗ ಆತ ನನ್ನ ಮೇಲೆ ಭಾರೀ ಸಿಟ್ಟು ಮಾಡಿಕೊಂಡಿದ್ದಲ್ಲದೆ, ಕಿರುಚಾಡಲು ಆರಂಭಿಸಿದ್ದ. ಕೈಯಲ್ಲಿ ಇದ್ದ ವೈನ್‌ ಗ್ಲಾಸ್‌ಅನ್ನು ಗೋಡೆಗೆ ಹೊಡೆದಿದ್ದ' ಎಂದು ದಾಖಲೆಯಲ್ಲಿ ತಿಳಿಸಲಾಗಿದೆ.

ನನ್ನನ್ನು ಮನೆಯಿಂದ ಹೊರಹಾಕಿದ್ದ

ಹಿಂದಿನ ಒಂದು ಪ್ರಕರಣವನ್ನು ದೂರಿನಲ್ಲಿ ತಿಳಿಸಿರುವ ಸೆಲಿನಾ ಜೇಟ್ಲಿ, ಸಿಸೇರಿಯನ್‌ನ ಹೊಲಿಗೆಗಳು ವಾಸಿ ಆಗುವವರೆಗೂ, ಮಕ್ಕಳನ್ನು ನೋಡಿಕೊಳ್ಳುವ ಸಲುವಾಗಿ ಪಿತೃತ್ವ ರಜೆ ತೆಗೆದುಕೊಳ್ಳುವಂತೆ ನಾನು ಪೀಟರ್‌ಗೆ ಹೇಳಿದ್ದೆ. ಅದರೆ, ಇದನ್ನು ಕೇಳಿದ ಆತ, ನನ್ನನ್ನು ಮನೆಯಿಂದ ಹೊರಹಾಕಿ ಬೀಗ ಹಾಕಿದ್ದ. ನಾನು ಅವಳಿ ಮಕ್ಕಳಿಗೆ ಜನ್ಮ ನೀಡಿದ ಮೂರು ವಾರದಲ್ಲಿ ಈ ಘಟನೆ ನಡೆದಿತ್ತು ಎಂದು ಸೆಲಿನಾ ದೂರಿನಲ್ಲಿ ತಿಳಿಸಿದ್ದಾರೆ.

'ನನ್ನ ಮೊಣಕೈಯನ್ನು ಹಿಡಿದುಕೊಂಡ ಆತ, ದೈಹಿಕ ಬಲ ಪ್ರದರ್ಶನ ಮಾಡಿ ಅಪಾರ್ಟ್‌ಮೆಂಟ್‌ನಿಂದ ಹೊರಗೆ ಹಾಕಿ, 'ನನ್ನ ಜೀವನದಿಂದ ಹೊರಹೋಗು' ಎಂದು ಕೂಗಿದ್ದ. ಈ ವೇಳೆ ನಾನು ತೀರಾ ಕನಿಷ್ಠ ಬಟ್ಟೆಯಲ್ಲಿ ಎದೆಹಾಲುಣಿಸುವ ಉಡುಪಿನಲ್ಲಿಯೇ ಕಾರಿಡಾರ್‌ನಲ್ಲಿ ನಿಂತಿದ್ದೆ. ಆಗ ನೆರೆಹೊರೆಯವರು ನನ್ನನ್ನು ನೋಡಿ ರಕ್ಷಣೆಗೆ ಧಾವಿಸಿದ್ದರು' ಎಂದು ತಿಳಿಸಲಾಗಿದೆ.

ಲೈಂಗಿಕ ಬೆದರಿಕೆ ಹಾಕಿದ್ದ ಪೀಟರ್‌

ದಾಖಲೆಯ ಪ್ರಕಾರ, 2012 ರ ಕುಖ್ಯಾತ ದೆಹಲಿ ಸಾಮೂಹಿಕ ಅ*ತ್ಯಾಚಾರದ ನಂತರ ಪೀಟರ್ ಸೆಲೀನಾಗೆ ಲೈಂಗಿಕ ಕಿರುಕುಳ ನೀಡುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ. 'ಗ್ಯಾಂಗ್‌ರೇ*ಪ್‌ನ ವಿವರಗಳ ಬಗ್ಗೆ ತಿಳಿದುಕೊಂಡ ಬಳಿಕ, ನಮ್ಮಿಬ್ಬರ ನಡುವೆ ಜಗಳವಾದಾಗಲೆಲ್ಲಾ ಪೀಟರ್‌, 'ಯೋನಿಯೊಳಗೆ ರಾಡ್‌ ತುರುಕುತ್ತೇನೆ' ಎಂದು ಬೆದರಿಸುತ್ತಿದ್ದ ಅಂಥಾ ಟ್ರೀಟ್‌ಮೆಂಟ್‌ಗೆ ನಾನು ಅರ್ಹ ಎಂದು ಹೇಳುವ ಮೂಲಕ ಬೆದರಿಕೆ ಹಾಕುತ್ತಿದ್ದ. ಈತನ ಈ ಬೆದರಿಕೆ ಕೇಳಿದಾಗಲೆಲ್ಲಾ ನನಗೆ ತುಂಬಾ ಭಯವಾಗುತ್ತಿತ್ತು. ಈ ವೇಳೆ ಆತನನ್ನು ಸಮಾಧಾನ ಮಾಡಲು ಪ್ರಯತ್ನ ಮಾಡುತ್ತಿದ್ದೆ ಎಂದು ತಿಳಿಸಿದ್ದಾರೆ.

ಇತರ ಪುರುಷನ ಜೊತೆ ಮಲಗುವಂತೆ ಹೇಳುತ್ತಿದ್ದ

ನನಗೆ ಲೈಂಗಿಕ ಸುಖವನ್ನು ಆತ ನಿರಾಕರಿಸುತ್ತಿದ್ದ ಎಂದು ಸೆಲಿನಾ ಹೇಳಿಕೊಂಡಿದ್ದಾಳೆ. 'ನನ್ನನ್ನು ಕೇವಲ ಲೈಂಗಿಕ ವಸ್ತು ಎನ್ನುವ ರೀತಿಯಲ್ಲಿ ಆತ ಮಾಡಿದ್ದ. 2014ರ ಕೊನೆಯಲ್ಲಿ ಮತ್ತು 2015ರ ಆರಂಭದಲ್ಲಿ ಆತ ಇದ್ದ ಕಂಪನಿಯ ನಿರ್ದೇಶಕರ ಮಂಡಳಿಯ ಸದಸ್ಯನ ಜೊತೆ ಲೈಂಗಿಕ ಸಂಬಂಧದಲ್ಲಿ ತೊಡಗಿಕೊಳ್ಳಬೇಕು ಎನ್ನುವ ಸೂಚನೆಯನ್ನು ನೀಡಲು ಆರಂಭಿಸಿದ್ದ. ಹಾಗೆ ಮಾಡಿದರೆ, ಕಂಪನಿಯನ್ನು ನನ್ನ ಸ್ಥಾನ ಇನ್ನಷ್ಟು ಉತ್ತಮವಾಗುತ್ತದೆ ಎಂದು ಹೇಳುತ್ತಿದ್ದ' ಎಂದಿದ್ದಾರೆ.

ಅಸ್ವಾಭಿಕ ಸೆ*ಕ್ಸ್‌ಗೆ ಒತ್ತಾಯ

ಪೀಟರ್‌ ತಾನು ಅಂದುಕೊಂಡ ಹಾಗೆ ತನ್ನಿಷ್ಟದಂತೆ ಲೈಂಗಿಕ ಸಂಬಂಧವನ್ನು ಒತ್ತಾಯಿಸುತ್ತಿದ್ದ ಎಂದು ಸೆಲಿನಾ ಆರೋಪಿಸಿದ್ದಾರೆ. ಆಕೆಯನ್ನು ನಿಯಮಿತವಾಗಿ ಮನೆಯ ಮೇಲಿರುವ ಸ್ಟಡಿ ರೂಮ್‌ಗೆ ಕರೆಯುತ್ತಿದ್ದ. ಅಲ್ಲಿ ಪೀಟರ್‌ ತನ್ನ ಆಸೆಗಳಿಗೆ ಅನುಗುಣವಾಗಿ, ಗುದ ಸಂಭೋಗದಂತಹ ಅಸ್ವಾಭಾವಿಕ ಲೈಂಗಿಕ ಕ್ರಿಯೆಗಳಿಗೆ ಒಳಗಾಗುವಂತೆ ಒತ್ತಾಯಿಸಿದ್ದ.ಆದರೆ ಭಾವನಾತ್ಮಕ ಅನ್ಯೋನ್ಯತೆ ಅಥವಾ ಪ್ರೀತಿಯನ್ನು ನಿರಾಕರಿಸುತ್ತಿದ್ದ ಎಂದು ತಿಳಿಸಲಾಗಿದೆ.

ನಗ್ನ ಚಿತ್ರ ತೆಗೆದುಕೊಂಡಿದ್ದ

ಮತ್ತೊಂದು ಆಘಾತಕಾರಿ ಆರೋಪದಲ್ಲಿ, ಸೆಲೀನಾ, ಪೀಟರ್ ತನ್ನ ಆನಂದವನ್ನು ಪೂರೈಸಲು ತನ್ನ ನಗ್ನ ಛಾಯಾಚಿತ್ರಗಳನ್ನು ತೆಗೆದುಕೊಂಡಿದ್ದಾನೆ ಮತ್ತು ನಂತರ ಅವುಗಳನ್ನು ಬಳಸಿಕೊಂಡು ಅವಳನ್ನು ಬ್ಲ್ಯಾಕ್‌ಮೇಲ್ ಮಾಡಿದ್ದಾನೆ ಎಂದು ಹೇಳಿಕೊಂಡಿದ್ದಾರೆ. 'ಪೀಟರ್‌ ಸೆಲಿನಾಳ ಬೆತ್ತಲೆ ಚಿತ್ರಗಳನ್ನು ತೆಗೆದುಕೊಂಡಿದ್ದಲ್ಲದೆ, ತನ್ನ ಲೈಂಗಿಕ ಬೇಡಿಕೆಗಳನ್ನು ಪೂರೈಸದೇ ಇದ್ದಲ್ಲಿ ಈ ಚಿತ್ರಗಳನ್ನು ಮೀಡಿಯಾಗೆ ನೀಡುವುದಾಗಿ ಬೆದರಿಕೆ ಹಾಕಿದ್ದ. ಆಕೆ ಹೆದರಿಕೆಯಿಂದ ಇದನ್ನು ಒಪ್ಪಿಕೊಳ್ಳುತ್ತಿದ್ದಳು. ತನ್ನ ಕೆಲಸ ಆದ ಬಳಿಕ ಆಕೆಯ ಜೊತೆ ಎಂದಿನ ಸಂಬಂಧ ಆರಂಭಿಸುತ್ತಿದ್ದ' ಎಂದು ಕೋರ್ಟ್‌ ದಾಖಲೆಯಲ್ಲಿ ತಿಳಿಸಿದ್ದಾರೆ.

ಮಕ್ಕಳ ಎದುರು ಅವಾಚ್ಯ ಶಬ್ದಗಳಿಂದ ನಿಂದನೆ

ಮಕ್ಕಳ ಸಮ್ಮುಖದಲ್ಲಿ ಪೀಟರ್ 'f**king bitch', 'wh**e' ಮತ್ತು 'sl*t' ನಂತಹ ಅವಮಾನಕರ ಪದಗಳನ್ನು ಬಳಸಿದ್ದಾರೆ ಎಂದು ಸೆಲೀನಾ ಹೇಳಿಕೊಂಡಿದ್ದಾರೆ. "ಸೆಲೀನಾ ತುಂಬಾ ನೊಂದಿದ್ದರು ಮತ್ತು ಸಾಮಾನ್ಯ ಸಂಭಾಷಣೆಯ ಸಮಯದಲ್ಲಿ ನಿಂದನೀಯ ಪದಗಳನ್ನು ಬಳಸದಂತೆ ಪೀಟರ್‌ಗೆ ಪತ್ರ ಬರೆದು ಇಮೇಲ್ ಮಾಡಿದ್ದಾರೆ" ಎಂದು ದೂರಿನಲ್ಲಿ ತಿಳಿಸಲಾಗಿದೆ.