- Home
- Entertainment
- TV Talk
- 2 ವರ್ಷದ ಮಗು ಆರೈಕೆ ಮಾಡಬೇಕಿರೋ Bigg Boss ಸ್ಪರ್ಧಿಗೆ ಲಿವರ್‌ನಲ್ಲಿ ಗಡ್ಡೆ! ಕ್ಯಾನ್ಸರ್ ಆಗದಿರಲಪ್ಪಾ..!
2 ವರ್ಷದ ಮಗು ಆರೈಕೆ ಮಾಡಬೇಕಿರೋ Bigg Boss ಸ್ಪರ್ಧಿಗೆ ಲಿವರ್‌ನಲ್ಲಿ ಗಡ್ಡೆ! ಕ್ಯಾನ್ಸರ್ ಆಗದಿರಲಪ್ಪಾ..!
ಬಿಗ್ ಬಾಸ್ ಖ್ಯಾತಿಯ ನಟಿ ದೀಪಿಕಾ ಕಕ್ಕರ್‌ಗೆ 'ಟೆನಿಸ್ ಬಾಲ್ ಗಾತ್ರದ' ಲಿವರ್ ಟ್ಯೂಮರ್ ಇರುವುದು ಗೊತ್ತಾಗಿದೆ. ದೀಪಿಕಾ ಪತಿ, ನಟ ಶೋಯೆಬ್ ಇಬ್ರಾಹಿಂ ಈ ವಿಷಯವನ್ನು ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ದೀಪಿಕಾ ಅವರು ಶೀಘ್ರದಲ್ಲೇ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಲಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಶೋಯೆಬ್ ಈ ಸುದ್ದಿಯನ್ನು 'ನಿಮ್ಮ ಪ್ರಾರ್ಥನೆಗಳ ಅಗತ್ಯವಿದೆ' ಎಂಬ ಶೀರ್ಷಿಕೆಯ ಮೂಲಕ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ, ಅವರು ಕಷ್ಟದ ಸುದ್ದಿಯನ್ನು ಹಂಚಿಕೊಳ್ಳಲಿದ್ದೇನೆ ಎಂದು ತಿಳಿಸಿದ್ದಾರೆ.

ಶೋಯೆಬ್ ಅವರು ಮಾತನಾಡಿ, "ದೀಪಿಕಾಗೆ ಆರೋಗ್ಯ ಸಮಸ್ಯೆಯಿದೆ. ಹೊಟ್ಟೆಯಲ್ಲಿ ಗಂಭೀರ ಸಮಸ್ಯೆ ಇದೆ. ನಾನು ಚಂಡೀಗಢದಲ್ಲಿದ್ದಾಗ, ದೀಪಿಕಾಗೆ ಹೊಟ್ಟೆ ನೋವು ಶುರುವಾಯಿತು, ಮೊದಲು ಇದು ಅಸಿಡಿಟಿಯಿಂದ ಆಗಿರಬಹುದು ಅಂತ ಅಂದುಕೊಂಡೆವು. ಆದರೆ ನೋವು ಕಡಿಮೆಯಾಗದಿದ್ದಾಗ, ನಾವು ಫ್ಯಾಮಿಲಿ ಡಾಕ್ಟರ್ ಭೇಟಿ ಮಾಡಿದೆವು. ಆ ಡಾಕ್ಟರ್ ನನ್ನ ತಂದೆಗೂ ಚಿಕಿತ್ಸೆ ನೀಡಿದ್ದರು. ಡಾಕ್ಟರ್ ನಮಗೆ ಕೆಲವು ಆಂಟಿಬಯೋಟಿಕ್‌ಗಳನ್ನು ನೀಡಿ, ರಕ್ತ ಪರೀಕ್ಷೆ ಮಾಡಿಸಲು ಹೇಳಿದರು. ಮೇ 5 ರವರೆಗೆ ದೀಪಿಕಾ ಆಂಟಿಬಯೋಟಿಕ್‌ಗಳನ್ನು ತಗೊಂಡಿದ್ದಾಳೆ. ನನ್ನ ತಂದೆಯ ಜನ್ಮದಿನದ ನಂತರ, ಅವರಿಗೆ ಮತ್ತೆ ನೋವು ಶುರುವಾಗಿದೆ. ರಕ್ತ ಪರೀಕ್ಷೆ ಮಾಡಿದಾಗ ದೇಹದಲ್ಲಿ ಸೋಂಕು ಇರುವುದು ಗೊತ್ತಾಗಿದೆ” ಎಂದು ಹೇಳಿದ್ದಾರೆ.
ಹಲವಾರು ಪರೀಕ್ಷೆ ಮಾಡಿದ ಬಳಿಕ, ದೀಪಿಕಾಗೆ ಲಿವರ್‌ನಲ್ಲಿ ಟ್ಯೂಮರ್ ಇರುವುದು ಗೊತ್ತಾಗಿದೆ ಎಂದು ನಟ ಶೋಯೆಬ್ ಹೇಳಿದ್ದಾರೆ. "ವೈದ್ಯರು ನಮ್ಮನ್ನು ಮತ್ತೆ ಭೇಟಿ ಮಾಡಲು ಹೇಳಿದ್ದಾರೆ. ಆಮೇಲೆ ಸಿಟಿ ಸ್ಕ್ಯಾನ್ ಮಾಡಿಸಲು ಹೇಳಿದ್ದಾರೆ. ಆ ಸ್ಕ್ಯಾನ್‌ನಲ್ಲಿ ದೀಪಿಕಾಳ ಲಿವರ್‌ನಲ್ಲಿ ಎಡಭಾಗದ ಲೋಬ್‌ನಲ್ಲಿ ಗಡ್ಡೆ ಇರುವುದು ಗೊತ್ತಾಗಿದೆ. ಇದು ಟೆನಿಸ್ ಬಾಲ್ ಗಾತ್ರದಷ್ಟು ದೊಡ್ಡದಾಗಿದೆ. ಇದು ನಮಗೆ ತುಂಬಾ ಶಾಕ್ ಆಗಿತ್ತು” ಎಂದು ಹೇಳಿದ್ದರು.
ಶೋಯೆಬ್ ಮಾತನಾಡಿ “ದೀಪಿಕಾಳನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಹೊಸ ಪರೀಕ್ಷೆಗಳನ್ನು ಮಾಡಲಾಗಿದೆ, ಗಡ್ಡೆ ಕ್ಯಾನ್ಸರ್ ಆಗಿರಬಹುದೇ ಎಂದು ಪರಿಶೀಲಿಸಲಾಗಿದೆ. ಈಗ ದೀಪಿಕಾ ಮನೆಗೆ ಬಂದಿದ್ದಾರೆ, ಆದರೆ ಶೀಘ್ರದಲ್ಲೇ ಶಸ್ತ್ರಚಿಕಿತ್ಸೆಗಾಗಿ ಆಗಲಿದೆ. ಹೀಗಾಗಿ ಆಸ್ಪತ್ರೆಗೆ ಹೋಗಬೇಕು. ಸಾಕಷ್ಟು ರಿಪೋರ್ಟ್ಸ್ ಈಗ ಗಡ್ಡೆ ಕ್ಯಾನ್ಸರ್ ಅಲ್ಲ ಎಂದು ಹೇಳಿದೆ, ಆದರೆ ಇನ್ನೂ ಕೆಲವು ರಿಸಲ್ಟ್‌ಗೋಸ್ಕರ ಕಾಯುತ್ತಿದ್ದೇವೆ. ಈ ವಾರಾಂತ್ಯ ಒಂದು ಪ್ರಮುಖ ಪರೀಕ್ಷೆಯ ವರದಿ ಬರಲಿದೆ. ದೀಪಿಕಾಳ ಲಿವರ್‌ನಿಂದ ಗಡ್ಡೆಯನ್ನು ತೆಗೆಯಲು ಶಸ್ತ್ರಚಿಕಿತ್ಸೆ ಮಾಡಲಾಗುವುದು” ಎಂದು ಶೋಯೆಬ್ ತಿಳಿಸಿದ್ದಾರೆ.
ದೀಪಿಕಾ ಹಾಗೂ ಶೋಯೆಬ್ ಅವರು ಮಗ ರುಹಾನ್ ಬಗ್ಗೆ ತುಂಬಾ ಚಿಂತೆ ಮಾಡುತ್ತಿದ್ದಾರೆ. ಮಗ ರುಹಾನ್ ದೀಪಿಕಾ ಬಿಟ್ಟು ತುಂಬ ಟೈಮ್ ದೂರ ಇರೋದಿಲ್ಲ ಎಂದು ಅವರು ಹೇಳಿದ್ದಾರೆ. "ರಿಪೋರ್ಟ್ ಬಂದಾಗ ದೀಪಿಕಾಳಿಗೆ ಮಗನೇ ಮೊದಲ ಚಿಂತೆ ಆಗಿತ್ತು. ಆದ್ದರಿಂದ ಅವಳು ಅಳೋಕೆ ಶುರುಮಾಡಿದಳು. ದಯವಿಟ್ಟು ನಮಗಾಗಿ ಪ್ರಾರ್ಥಿಸಿ. ನಮ್ಮ ವಿರೋಧಿಗಳಿಗೂ ವಿನಂತಿ ಮಾಡ್ತೀನಿ. ನೀವು ನಮ್ಮನ್ನು ದ್ವೇಷಿಸಬಹುದು, ನಿಂದಿಸಬಹುದು. ಆದರೆ ಈಗ ನಮಗಾಗಿ ದಯವಿಟ್ಟು ಪ್ರಾರ್ಥಿಸಿ" ಎಂದು ಬೇಡಿಕೊಂಡಿದ್ದಾರೆ.
ದೀಪಿಕಾ ಮೊದಲು ರೌನಕ್ ಸ್ಯಾಮ್ಸನ್‌ರನ್ನು ವಿವಾಹವಾಗಿದ್ದರು, ಆದರೆ 2015ರಲ್ಲಿ ಡಿವೋರ್ಸ್ ಪಡೆದರು. ಆಮೇಲೆ ಶೋಯೆಬ್ ಇಬ್ರಾಹಿಂ, ದೀಪಿಕಾ ಅವರು 'ಸಸುರಾಲ್ ಸಿಮರ್ ಕಾ' ಶೂಟಿಂಗ್ ಸೆಟ್‌ನಲ್ಲಿ ಭೇಟಿಯಾದರು. ಈ ಜೋಡಿ 2018ರಲ್ಲಿ ಮದುವೆಯಾಗಿ, 2023ರಲ್ಲಿ ಮೊದಲ ಮಗು ರುಹಾನ್‌ಗೆ ಬರಮಾಡಿಕೊಂಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

