- Home
- Entertainment
- TV Talk
- 5 ಲಕ್ಷ ದುಡ್ಡು, ದುಬೈನಲ್ಲಿ ಕೆಲ್ಸ ಕೊಟ್ಟರೂ Bigg Bossಗೆ ಅದೇ ಹಳೆ ಬಟ್ಟೆ ಯಾಕಮ್ಮಾ ಕುಮಾರಿ? ನೆಟ್ಟಿಗರ ಪ್ರಶ್ನೆ
5 ಲಕ್ಷ ದುಡ್ಡು, ದುಬೈನಲ್ಲಿ ಕೆಲ್ಸ ಕೊಟ್ಟರೂ Bigg Bossಗೆ ಅದೇ ಹಳೆ ಬಟ್ಟೆ ಯಾಕಮ್ಮಾ ಕುಮಾರಿ? ನೆಟ್ಟಿಗರ ಪ್ರಶ್ನೆ
ಬಿಗ್‌ಬಾಸ್ 13ರ ಅಗ್ನಿಪರೀಕ್ಷೆಯಲ್ಲಿ ಅನಾರೋಗ್ಯದಿಂದ ಹೊರಗುಳಿದಿದ್ದ ಕುಮಾರಿ ಮತ್ತೆ ಶೋಗೆ ಎಂಟ್ರಿ ಕೊಟ್ಟಿದ್ದಾರೆ. 5 ಲಕ್ಷ ರೂ. ಆಫರ್ ಪಡೆದಿದ್ದರೂ, ಹಳೆಯ ಕಪ್ಪು ಬಟ್ಟೆಯಲ್ಲೇ ಮರಳಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.

ಬಿಗ್‌ಬಾಸ್ ಬಗ್ಗೆ ಪ್ರೇಮಿಗಳ ನೋವು
ಬಿಗ್‌ಬಾಸ್ 13 ಯಾಕೋ ಹಿಂದಿನ ಸೀಸನ್ನಂತೆ ವೀಕ್ಷಕರ ಮನಸ್ಸನ್ನು ಗೆಲ್ಲಲು ವಿಫಲವಾಗುತ್ತಿದೆ ಎಂದು ಬಿಗ್‌ಬಾಸ್ ಪ್ರೇಮಿಗಳು ಸೋಷಿಯಲ್ ಮೀಡಿಯಾದಲ್ಲಿ ಅಸಮಾಧಾನ ತೋಡಿಕೊಳ್ಳುತ್ತಿದ್ದಾರೆ. ಈ ಬಾರಿಯ ಬಿಗ್‌ಬಾಸ್ ಹವಾನೇ ಸೃಷ್ಟಿಸುತ್ತಿಲ್ಲ ಎನ್ನುವ ನೋವೂ ಇದರ ಪ್ರೇಮಿಗಳಲ್ಲಿ ಇದ್ದೇ ಇದೆ. ಹೆಚ್ಚು ಹೆಚ್ಚು ವೀಕ್ಷಕರನ್ನು ಆಕರ್ಷಿಸಲು ಇದಾಗಲೇ ಕೆಲವು ಉಪಾಯಗಳನ್ನು ಬಿಗ್‌ಬಾಸ್ ಮಾಡುತ್ತಿದೆ.
ಸಿಕ್ಕಾಪಟ್ಟೆ ಹವಾ
ಇದೀಗ, ಅಗ್ನಿ ಪರೀಕ್ಷೆಯ ಮೂಲಕ ಸಿಕ್ಕಾಪಟ್ಟೆ ಹವಾ ಸೃಷ್ಟಿಸಿದ್ದ ಕುಮಾರಿಯನ್ನು ಮತ್ತೆ ಕರೆಸಿದೆ. ಬಿಗ್‌ಬಾಸ್ ಅಗ್ನಿಪರೀಕ್ಷೆ (Bigg Boss Agni Pareekshe)ಯಲ್ಲಿ ಬಿಗ್‌ಬಾಸ್‌ಗೆ ಹೋಗುವ ಆಸೆಯಿಂದ ಲಕ್ಷಾಂತರ ಮಂದಿ ಅರ್ಜಿ ಸಲ್ಲಿಸಿದ್ದರು. ಅವರ ಪೈಕಿ 60 ಮಂದಿ ಫೈನಲ್ ಆಗಿ ಆಯ್ಕೆಯಾಗಿದ್ದರು. ಅವರಲ್ಲಿ ಕುಮಾರಿ ಕೂಡ ಆಯ್ಕೆ ಆಗುವುದರಲ್ಲಿದ್ದರು. ‘ನಾನು ಹಳ್ಳಿ ಹುಡುಗಿ ಕುಮಾರಿ’ ಅಂತ ಹೇಳಿಕೊಂಡು ಎಂಟ್ರಿ ಕೊಟ್ಟಿದ್ದರು ಲಾವಣ್ಯ ಕುಮಾರಿ. ರಕ್ಷಿತಾ ಶೆಟ್ಟಿ ಅವರನ್ನು ನೆನಪಿಸುವಂತೆ ಸಕತ್ ಜೋಕ್ ಮಾಡುತ್ತಿದ್ದರು ಕುಮಾರಿ. ಮುಗ್ಧವಾಗಿ ಮಾತನಾಡಿ ನಾಲ್ಕೂ ಜಡ್ಜಸ್ ಮನೆ ಗೆದ್ದಿದ್ದರು. ‘ಸ್ಟಾರ್ ಕಂಟೆಂಡರ್’ ಆಗಿ ಸೆಲೆಕ್ಟ್ ಕೂಡ ಆಗಿದ್ದರು.
ವೇದಿಕೆ ಮೇಲೆಯೇ ಕುಸಿದಿದ್ದ ಕುಮಾರಿ
ತಮ್ಮ ಮಾತಿನ ಶೈಲಿಯಿಂದಲೇ ಎಲ್ಲರ ಮನ ಗೆದ್ದಿದ್ದ ಯುವತಿ ಇನ್ನೇನು ಬಿಗ್‌ಬಾಸ್‌ಗೆ ಸೆಲೆಕ್ಟ್ ಆಗುತ್ತಾಳೆ ಎನ್ನುವಾಗಲೇ, ವೇದಿಕೆ ಮೇಲೆ ಕುಸಿದು ಬಿದ್ದಿದ್ದರು. ಕುಮಾರಿ ಅವರು ಬಿಗ್‌ಬಾಸ್ ಆಟ ಮುಂದುವರೆಸದಂತೆ ವೈದ್ಯರು ಸಲಹೆ ನೀಡಿದ್ದಾರೆ. ಅವರಿಗೆ ಆರೋಗ್ಯ ಸಮಸ್ಯೆ ಇದೆ. ಇದೇ ಕಾರಣಕ್ಕೆ, ವೈದ್ಯರ ಸಲಹೆ ಮೇರೆಗೆ ಬಿಗ್ಬಾಸ್ನಿಂದ ಹೊರಕ್ಕೆ ಹೋಗುತ್ತಿರುವುದಾಗಿ ತಿಳಿಸಿದ್ದಾರೆ. ಅಪ್ಪನಿಲ್ಲದೇ, ಅನಾರೋಗ್ಯಪೀಡಿತ ಅಮ್ಮನನ್ನು ನೋಡಿಕೊಳ್ಳುವ ಜವಾಬ್ದಾರಿಯಿಂದ ಬದುಕುತ್ತಿರುವ ಕುಮಾರಿಗೂ ಆರೋಗ್ಯ ಸರಿಯಿಲ್ಲ. ಟಾಸ್ಕ್ ಆಡುವಾಗ ಕುಸಿದಿದ್ದ ಕುಮಾರಿಯನ್ನು ಕಲರ್ಸ್ ತಂಡ ಆಸ್ಪತ್ರೆಗೆ ಕರೆದುಕೊಂಡು ಹೋಗಿತ್ತು. ಅಲ್ಲಿ ಚಿಕಿತ್ಸೆ ನೀಡಲಾಗಿತ್ತು. ಅದಕ್ಕೇ ಅನಿವಾರ್ಯವಾಗಿ ಬಿಗ್‌ಬಾಸ್ ಬಿಟ್ಟು ಹೋಗಬೇಕಿತ್ತು. ಆದರೆ ಈಗ ಸಪ್ಪೆಯಾಗಿರುವ ಬಿಗ್‌ಬಾಸ್‌ಗೆ ಚೈತನ್ಯ ತುಂಬಲು ಕುಮಾರಿಯನ್ನು ಕರೆಸಲಾಯಿತು.
5 ಲಕ್ಷದ ಆಫರ್
ಆದರೆ, ಕುಮಾರಿಯ ನಡೆ, ನುಡಿ, ಮಾತು ಎಲ್ಲವನ್ನೂ ಕೇಳಿದ್ದರಿಂದ ಬಿಗ್‌ಬಾಸ್ ಮನೆಯೊಳಕ್ಕೆ ಹೋಗದಿದ್ದರೂ ಕುಮಾರಿಗೆ ಭರ್ಜರಿ ಆಫರ್ ಕೊಟ್ಟಿದ್ರು. ಕಾರ್ಯಕ್ರಮದ ಪ್ರಾಯೋಜಕರಾದ ‘ಇಕೋ ಪ್ಲ್ಯಾನೆಟ್ ಎಲಿವೇಟರ್’ ಸಂಸ್ಥೆಯು ಕುಮಾರಿಗೆ 5 ಲಕ್ಷ ನಗದನ್ನು ಸಹಾಯವಾಗಿ ನೀಡಿತ್ತು. ಅಷ್ಟೇ ಅಲ್ಲದೆ, ಕುಮಾರಿಯ ಶಿಕ್ಷಣ ಪೂರ್ಣಗೊಂಡ ಬಳಿಕ ಸಂಸ್ಥೆಯ ವತಿಯಿಂದ ಮತ್ತೊಂದು ದೊಡ್ಡ ಅವಕಾಶವನ್ನೂ ಘೋಷಿಸಲಾಗಿತ್ತು, ಕರ್ನಾಟಕದಲ್ಲಿರುವ ಸಂಸ್ಥೆಯ ಯಾವುದೇ ಶಾಖೆಯಲ್ಲಿ ಅಥವಾ ದುಬೈನಲ್ಲಿರುವ ಸಂಸ್ಥೆಯ ಶಾಖೆಯಲ್ಲಿ ಉದ್ಯೋಗ ಪಡೆಯುವ ಅವಕಾಶವನ್ನು ಕುಮಾರಿಗೆ ನೀಡಲಾಗಿತ್ತು.
ಅದೇ ಡ್ರೆಸ್- ಟ್ರೋಲ್
ಇವೆಲ್ಲವುಗಳ ನಡುವೆ ಕುಮಾರಿ ಎಂಟ್ರಿಯಾಗಿದೆ. ಆದರೆ ಅದೇ ಹಳೆಯ ಕಪ್ಪು ಬಟ್ಟೆಯನ್ನೇ ಧರಿಸಿ ಕುಮಾರಿ ಎಂಟ್ರಿಕೊಟ್ಟಿರುವುದು ಈಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಜನರ ಅನುಕಂಪ ಗಳಿಸುವುದಕ್ಕಾಗಿ ಈ ಹಿಂದೆ ಬನಿಯನ್ ಮೇಲೆ ಇದ್ದರು, ಈಗ ಹಳೆಯಬಟ್ಟೆ ಮೇಲೆ ಇದ್ದಾಳೆ ಕುಮಾರಿ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. kalaburagi_adda_dosta ಎನ್ನುವ ಇನ್ಸ್ಟಾಗ್ರಾಮ್ ಪುಟದಲ್ಲಿ ಇದನ್ನು ಶೇರ್ ಮಾಡಲಾಗಿದ್ದು, ಥಹರೇವಾರಿ ಕಮೆಂಟ್ಸ್ ಬರುತ್ತಿವೆ.
ಕುಮಾರಿ ಪರ ನೆಟ್ಟಿಗರು
ಐದು ಲಕ್ಷ ರೂಪಾಯಿಕೊಟ್ಟರೂ ಹೊಸ ಬಟ್ಟೆ ತೆಗೆದುಕೊಳ್ಳಲು ಆಗಿಲ್ವಾ ಎಂದು ಕೆಲವರು ಕಾಲೆಳೆಯುತ್ತಿದ್ದರೆ, ಮತ್ತೆ ಕೆಲವರು ಕುಮಾರಿ ಪರವಾಗಿ ನಿಂತಿದ್ದಾರೆ. ಇದು ಅವರ ಲಕ್ಕಿ ಡ್ರೆಸ್. ಇದರಿಂದಲೇ ಈಕೆ ಕನ್ನಡಿಗರ ಮನಸ್ಸನ್ನು ಗೆದ್ದಿದ್ದಳು. ಆದ್ದರಿಂದ ಅದನ್ನೇ ಧರಿಸಿದರೆ ತಪ್ಪೇನು ಎಂದು ಪ್ರಶ್ನಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

