ನಿತ್ಯಾಳ ಕೊನೆ ದಿನದ ಶೂಟಿಂಗ್; ಕುಂಬಳಕಾಯಿ, ನಿಂಬೆಯಿಂದ ದೃಷ್ಟಿ ತೆಗೆದು ಚಿತ್ರೀಕರಣ
ನಟಿ ನಮ್ರತಾ ಗೌಡ 'ಕರ್ಣ' ಧಾರಾವಾಹಿಯ ನಿತ್ಯಾ ಪಾತ್ರಕ್ಕೆ ಭಾವುಕ ವಿದಾಯ ಹೇಳಿದ್ದಾರೆ. ಪಾತ್ರದ ಪ್ರಾಮುಖ್ಯತೆ ಕಡಿಮೆಯಾದ ಕಾರಣ ಅವರು ಈ ನಿರ್ಧಾರ ತೆಗೆದುಕೊಂಡಿದ್ದು, ಧಾರಾವಾಹಿಯಲ್ಲಿ ನಿತ್ಯಾ ಪಾತ್ರ ಅಂತ್ಯಗೊಂಡಿದೆ.

ಭಾವುಕ ವಿದಾಯ ಹೇಳಿದ ನಮ್ರತಾ ಗೌಡ
ಒಂದು ಸೀರಿಯಲ್ ಮುಕ್ತಾಯವಾದ್ರೆ ಅಥವಾ ಅನಿವಾರ್ಯ ಕಾರಣಗಳಿಂದ ಧಾರಾವಾಹಿಯಿಂದ ಬರುವಾಗ ಕಲಾವಿದರು ಭಾವುಕರಾಗುತ್ತಾರೆ. ಇದೀಗ ನಟಿ ನಮ್ರತಾ ಗೌಡ ಅವರು ಕರ್ಣ ಸೀರಿಯಲ್ ತಂಡದಿಂದ ಹೊರಬಂದಿದ್ದು, ಭಾವುಕ ವಿದಾಯವನ್ನು ಹೇಳಿದ್ದಾರೆ.
ಕೊನೆಯಾಯ್ತು ನಿತ್ಯಾ ಪಾತ್ರ
ಕರ್ಣ ಸೀರಿಯಲ್ನಲ್ಲಿ ನಿತ್ಯಾ ಪಾತ್ರದಲ್ಲಿ ನಮ್ರತಾ ಗೌಡ ನಟಿಸುತ್ತಿದ್ದರು. ಸೀರಿಯಲ್ ಕೊನೆಯ ದಿನದಂದು ಕಲಾವಿದರು ಮತ್ತು ತಂತ್ರಜ್ಞರೊಂದಿಗೆ ಕ್ಲಿಕ್ಕಿಸಿಕೊಂಡಿರುವ ಫೋಟೋ ಮತ್ತು ವಿಡಿಯೋಗಳನ್ನು ನಮ್ರತಾ ಶೇರ್ ಮಾಡಿಕೊಂಡಿದ್ದಾರೆ. ಮಗುವಿಗೆ ಜನ್ಮ ನೀಡಿದ ಬಳಿಕ ನಿತ್ಯಾ ಪಾತ್ರ ಕೊನೆಗೊಂಡಿದೆ.
ಕೊನೆ ದಿನದ ಶೂಟಿಂಗ್
ನಿತ್ಯಾಳ ಅಂತ್ಯಕ್ರಿಯೆ ಶೂಟಿಂಗ್ ವೇಳೆ, ನಮ್ರತಾ ಅವರಿಗೆ ದೃಷ್ಟಿ ತೆಗೆಯಲಾಗಿದೆ. ಶೂಟಿಂಗ್ ಸಮಯದಲ್ಲಿ ಚಿತೆ ಮಲಗೋ ದೃಶ್ಯ ಬಂದಾಗ ಕೆಲವೊಂದು ವಿಧಿವಿಧಾನಗಳನ್ನು ಪಾಲನೆ ಮಾಡಲಾಗುತ್ತದೆ. ಹಾಗೆಯೇ ನಮ್ರತಾ ಅವರಿಗೆ ದೃಷ್ಟಿ ತೆಗೆಯಲಾಗಿದೆ. ಕೊನೆಯ ಶೂಟ್ ಮುಗಿದ್ಮೇಲೆ ಎಲ್ಲರಿಗೂ ನಮ್ರತಾ ಬೈ ಹೇಳಿದ್ದಾರೆ.
ನಿತ್ಯಾ ಪಾತ್ರ ಕೊನೆಯಾಗಿದ್ದು ಏಕೆ?
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ನಮ್ರತಾ ಗೌಡ, ಸೀರಿಯಲ್ನಲ್ಲಿ ತಮ್ಮ ಪಾತ್ರದ ಪ್ರಾಮುಖ್ಯತೆ ಕಡಿಮೆಯಾಗಿತ್ತು. ಮುಂಚೆ ಹೇಳಿದಂತೆ ಪಾತ್ರ ಬರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು. ಈ ಕಾರಣದಿಂದಲೇ ಧಾರಾವಾಹಿಯಿಂದ ಹೊರ ಬರಲು ನಿರ್ಧರಿಸಿದ್ದೆ ಎಂದಿದ್ದರು. ನಮ್ರತಾ ಗೌಡ ಸೀರಿಯಲ್ನಿಂದ ಹೊರ ಬರಲು ನಿರ್ಧರಿಸಿದ ಕಾರಣದಿಂದಲೇ ನಿತ್ಯಾ ಪಾತ್ರವನ್ನು ಕೊನೆ ಮಾಡಲಾಗಿದೆ.
ಕರ್ಣ ಸೀರಿಯಲ್ ಕಥೆ
ನಿತ್ಯಾಗೆ ಕರ್ಣನ ಜನ್ಮರಹಸ್ಯ ಮತ್ತು ತಂದೆ-ತಾಯಿಯ ಸಾವಿನ ಗುಟ್ಟು ತಿಳಿಯುತ್ತದೆ. ಇದಕ್ಕೆ ಕಾರಣವಾದ ತಾರಾಗೆ ಕಾಲ್ ಮಾಡಿ ನಿತ್ಯಾ ಸಿಟ್ಟು ಹೊರ ಹಾಕುತ್ತಾಳೆ. ತನ್ನ ರಹಸ್ಯ ತಿಳಿದ ನಿತ್ಯಾಳ ಪ್ರಾಣವನ್ನು ತಾರಾ ತೆಗೆದು, ಆರೋಪ ಕರ್ಣನ ಮೇಲೆ ಬರುವಂತೆ ಮಾಡಿದ್ದಾಳೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.













