- Home
- Entertainment
- TV Talk
- ಸುತ್ತಿ ಬಳಸಿ ನನ್ ಬಳಿ ಬಂದ್ಲು ಮಾವನ ಮಗಳು, ಆಮೇಲೆ ಏನೆನೆನೋ ಆಗೋಯ್ತು- Rajath ಮುಂದೆ ಗಿಲ್ಲಿ ನಟ ಗುಟ್ಟು ರಿವೀಲ್
ಸುತ್ತಿ ಬಳಸಿ ನನ್ ಬಳಿ ಬಂದ್ಲು ಮಾವನ ಮಗಳು, ಆಮೇಲೆ ಏನೆನೆನೋ ಆಗೋಯ್ತು- Rajath ಮುಂದೆ ಗಿಲ್ಲಿ ನಟ ಗುಟ್ಟು ರಿವೀಲ್
ಬಿಗ್‌ಬಾಸ್ ಮನೆಯಲ್ಲಿ ತನ್ನ ಕಾಮಿಡಿಯಿಂದ ಜನಪ್ರಿಯರಾಗಿರುವ ಗಿಲ್ಲಿ ನಟ, ಸಹ ಸ್ಪರ್ಧಿ ಕಾವ್ಯಾ ಶೈವ ಜೊತೆಗಿನ ತಮ್ಮ ಜೋಡಿಯ ಬಗ್ಗೆ ತಮಾಷೆಯಾಗಿ ಮಾತನಾಡಿದ್ದಾರೆ. ತನ್ನ 'ಮಾವನ ಮಗಳು' ಎಂದು ಹೇಳಿಕೊಂಡು, ಜಂಟಿಯಾಗಿ ಮನೆಗೆ ಪ್ರವೇಶಿಸಿದ ಕಥೆಯನ್ನು ಹಾಸ್ಯಮಯವಾಗಿ ವಿವರಿಸಿದ್ದಾರೆ.

ಗಿಲ್ಲಿ ನಟ ಹವಾ
ಸದ್ಯ ಬಿಗ್‌ಬಾಸ್ (Bigg Boss 12) ಗಿಲ್ಲಿ ನಟನ ಹವಾ ಜೋರಾಗಿ ನಡೆಯುತ್ತಿದೆ. ಅದರಲ್ಲಿಯೂ ಅವರ ಕಾಮಿಡಿಯಿಂದಾಗಲೇ ಅಸಂಖ್ಯ ಫ್ಯಾನ್ಸ್ ಪಡೆದುಕೊಂಡಿದ್ದಾರೆ. ಇವರೇ ಈ ಬಾರಿಯ ಬಿಗ್‌ಬಾಸ್ ವಿನ್ನರ್ ಎಂದೂ ಸೋಷಿಯಲ್ ಮೀಡಿಯಾದಲ್ಲಿ ಹೇಳಲಾಗುತ್ತದೆ.
ಕಾಮಿಡಿ ಕಲಾವಿದ
ಗಿಲ್ಲಿ ನಟ ಎಲ್ಲರಿಗೂ ತಿಳಿದಿರುವಂತೆ, ಕಿರುತೆರೆಯ ಕಾಮಿಡಿ ಕಲಾವಿದರಾಗಿ ಗುರುತಿಸಿಕೊಂಡರು. ಕಾಮಿಡಿ ಕಿಲಾಡಿಗಳು, ಭರ್ಜರಿ ಬ್ಯಾಚುಲರ್ಸ್, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋನಲ್ಲಿ ಗಿಲ್ಲಿ ನಟ ಕಾಣಿಸಿಕೊಂಡಿದ್ದರು. ಇತ್ತೀಚೆಗೆ ಇವರ ಪ್ರಾಪರ್ಟಿ ಕಾಮಿಡಿ ಭಾರೀ ಸೌಂಡ್ ಮಾಡಿತ್ತು. ಪಕ್ಕಾ ಹಳ್ಳಿ ಪ್ರತಿಭೆಯಾಗಿರುವ ಗಿಲ್ಲಿ, ಮಾತನಾಡುವ ಶೈಲಿಯನ್ನೇ ಕಾಮಿಡಿಯಲ್ಲಿ ಬಳಸಿ ಜನಪ್ರಿಯರಾಗಿದ್ದಾರೆ.
ನಲ್ಲಿ ಮೂಳೆಯಿಂದ ಫೇಮಸ್
ಸಿನಿಮಾದಲ್ಲಿ ಸಾಧನೆ ಮಾಡುವ ಹಂಬಲದಿಂದ ಹಳ್ಳಿಯಿಂದ ಬೆಂಗಳೂರಿಗೆ ಬಂದವರು ಗಿಲ್ಲಿ. ಒಂದೆರಡು ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು, ಆರ್ಟ್ ಡಿಪಾರ್ಟ್‌ಮೆಂಟ್‌ನಲ್ಲಿಯೂ ಸೇವೆ ಸಲ್ಲಿಸಿದರು. ನಿರ್ದೇಶಕರಾಗುವ ಹಂಬಲ ಹುಟ್ಟಿತು. ಸಿನಿಮಾದಲ್ಲಿ ಅದು ಸಾಧ್ಯವಾಗದಿದ್ದರೂ ಯುಟ್ಯೂಬ್ ಮೂಲಕ ಸಕ್ಸಸ್ ಕಂಡರು. ಹಲವಾರು ವಿಡಿಯೋ ಮಾಡಿದ್ದು, ಅದರಲ್ಲಿ ನಲ್ಲಿ ಮೂಳೆ ಸ್ಕಿಟ್ನಿಂದ ಭಾರಿ ಜನಪ್ರಿಯತೆ ಪಡೆದುಕೊಂಡರು. ಇದೊಂದೇ ವಿಡಿಯೋ ಮಿಲಿಯನ್ಗಟ್ಟಲೆ ವ್ಯೂವ್ಸ್ ಪಡೆದುಕೊಂಡಿದೆ.
ಬಿಗ್ಬಾಸ್ಗೆ ಪ್ರವೇಶ
ಇದರ ಮೂಲಕವೇ ಬಿಗ್ಬಾಸ್ಗೆ ಪ್ರವೇಶ ಪಡೆದುಕೊಂಡರು. ಇದೀಗ ಬಿಗ್ಬಾಸ್ಗೆ ಆಫರ್ ಸಿಕ್ಕಿರೋ ಬಗ್ಗೆ ತಮ್ಮದೇ ಆದ ಜೋಕ್ ಶೈಲಿಯಲ್ಲಿ ರಜತ್ ಅವರಿಗೆ ಹೇಳಿರುವ ಪ್ರೊಮೋ ಒಂದನ್ನು ಕಲರ್ಸ್ ಕನ್ನಡ ವಾಹಿನಿ ಶೇರ್ ಮಾಡಿಕೊಂಡಿದೆ.
ಗಿಲ್ಲಿ-ಕಾವ್ಯಾ ಜೋಡಿ
ಗಿಲ್ಲಿ ನಟ ಮತ್ತು ಕಾವ್ಯಾ ಶೈವ (Bigg Boss Kavya Shaiva) ಜೋಡಿಯ ಬಗ್ಗೆ ಎಲ್ಲರೂ ತಮಾಷೆ ಮಾಡುವುದು ಗೊತ್ತೇ ಇದೆ. ಈಕೆಯ ಮೇಲೆ ಗಿಲ್ಲಿ ಹಲವು ಕವಿತೆಗಳನ್ನೇ ಬರೆದು ತಾವಿಬ್ಬರೂ ಲವರ್ ಎನ್ನುವಂತೆ ತಮಾಷೆ ಮಾಡುವ ಮೂಲಕ ಎಲ್ಲರನ್ನೂ ರಂಜಿಸುತ್ತಿದ್ದಾರೆ.
ಬಿಗ್‌ಬಾಸ್ ಆಫರ್ ಬಂತು
ಇದೀಗ ಅವರು ಇದೇ ವಿಷಯ ಇಟ್ಟುಕೊಂಡು ನನ್ನ ಮಾವನ ಮಗಳ ವಿಷ್ಯ ಹೇಳ್ತೇನೆ ಕೇಳಿ ಎಂದಿದ್ದಾರೆ. ನಾನು ಡಿಪ್ರೆಷನ್ನಲ್ಲಿ ಇದ್ದೆ. ಬಿಗ್ಬಾಸ್ನಿಂದ ಆಫರ್ ಬಂತು. ಹೋಗೋಣ ಎಂದುಕೊಂಡು ಬಂದೆ. ಆಗ ಸುದೀಪ್ ಸರ್ ನನ್ನನ್ನು ಕರೆದು ನೀವು ಜಂಟಿಯಾಗಿ ಹೋಗಬೇಕು ಎಂದರು. ಯಾರಪ್ಪಾ ನನಗೆ ಸಿಗೋರು ಎಂದುಕೊಂಡಿದ್ದೆ ಎಂದಿದ್ದಾರೆ.
ಮಾವನ ಮಗಳು
ಆಮೇಲೆ ನೋಡಿದ್ರೆ ಅಲ್ಲಿ ಇವಳು ಇದ್ದಳು. ದೂರದಿಂದ ಯಾರು ಎಂದು ಗೊತ್ತಾಗಲಿಲ್ಲ. ಆಮೇಲೆ ಹತ್ತಿರ ಬಂದಾಗ ಮಾವನ ಮಗಳು ಎಂದು ಗೊತ್ತಾಯ್ತು. ಹುಡುಗರು ನನಗೆ ಅಷ್ಟಕ್ಕಷ್ಟೇ. ಅದಕ್ಕೇ ಜಂಟಿಯಾಗಿ ಹೋಗಲು ಹುಡುಗಿನೇ ಸಿಕ್ಕಾಗ ಖುಷಿಯಾಯ್ತು ಎಂದು ತಮಾಷೆ ಮಾಡಿದ್ದಾರೆ.
ಏನೇನೋ ಆಗೋಯ್ತು
ಹತ್ತಿರ ಬಂದು ನೋಡಿದಾಗ ಇವಳು ಇದ್ದಳು. ಅಯ್ಯೋ ದೇವ್ರೇ ಸುತ್ತಿ ಸುತ್ತಿ ಇವಳು ನಂಗೇ ಸಿಕ್ತಾಳಲ್ಲಪ್ಪಾ ಎಂದುಕೊಂಡೆ. ಈ ಮಾವನ ಮಗಳು ನೋಡಿದ್ಮೇಲೆ ಅಯ್ಯಯ್ಯೋ ಎಂದುಕೊಂಡೆ. ಆಮೇಲೆ ಜಂಟಿಯಾಗಿ ಒಳಗೆ ಹೋದೆ. ಕೊನೆಗೆ ಏನೋ ಆಗಿ, ಇನ್ನೇನೋ ಆಗಿ ಏನೇನೋ ಆಗೋಯ್ತು ಎಂದಿದ್ದಾರೆ.
ಮುಖ ತಿರುಗಿಸಿದ ಕಾವ್ಯಾ
ಆಗ ಅಲ್ಲಿಯೇ ಇದ್ದ ಕಾವ್ಯಾ ಶೈವ ಈ ಮಾತನ್ನು ಕೇಳಿ ಅತ್ತ ಕಡೆ ಮುಖ ತಿರುಗಿಸಿಕೊಂಡಿದ್ದಾರೆ. ಆರಂಭದಲ್ಲಿ ಗಿಲ್ಲಿ ನಟ ಯಾರ ಬಗ್ಗೆ ಮಾತಾಡ್ತಾರೆ ಎಂದು ಅವರಿಗೆ ಕ್ಯೂರಿಯೋಸಿಟಿ ಇತ್ತು. ಬಳಿಕ ತಮ್ಮದೇ ವಿಷ್ಯ ಎಂದು ತಿಳಿದು ಅದನ್ನು ಕೇಳಿಸಿಕೊಳ್ಳದವರ ಹಾಗೆ ಮುಖ ತಿರುಗಿಸಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

