- Home
- Entertainment
- TV Talk
- ಕಾವ್ಯ ಶೈವ, ರಕ್ಷಿತಾ ಶೆಟ್ಟಿ ಜೊತೆ ತ್ರಿಕೋನ ಪ್ರೇಮಕಥೆ; ಗ್ರೀನ್ ಸಿಗ್ನಲ್ ಕೊಟ್ಟ Gilli Nata
ಕಾವ್ಯ ಶೈವ, ರಕ್ಷಿತಾ ಶೆಟ್ಟಿ ಜೊತೆ ತ್ರಿಕೋನ ಪ್ರೇಮಕಥೆ; ಗ್ರೀನ್ ಸಿಗ್ನಲ್ ಕೊಟ್ಟ Gilli Nata
Bigg Boss Gilli Nata: ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ವಿಜೇತ ಗಿಲ್ಲಿ ನಟ ಅವರು ಸೂಪರ್ ಹಿಟ್ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಜಮೀನು ತಗೊಂಡಿದ್ದು, ತ್ರಿಕೊನ ಪ್ರೇಮಕಥೆ ಬಗ್ಗೆ ಕೂಡ ಅವರು ಮಾತನಾಡಿದ್ದಾರೆ.

ನಿಮ್ಮ ಸಿನಿಮಾ ಒಲವಿನ ಬಗ್ಗೆ ಹೇಳಿ
ನಿರ್ದೇಶನ ಮಾಡುವ ಆಸೆಯಿತ್ತು. ಆದರೆ ನಟನೆಯಿಂದ ಗುರುತಿಸಿಕೊಂಡಿದ್ದೇನೆ, ಹೀಗಾಗಿ ನಾನು ಸಿನಿಮಾ ಮಾಡುತ್ತಿದ್ದೇನೆ.
ಕ್ರೇಜ್ ಬಗ್ಗೆ ಹೇಳಿ
ಬಿಗ್ ಬಾಸ್ ಮುಗಿದು ಒಂದು ವಾರ ಕ್ರೇಜ್ ಇರುತ್ತದೆ, ಆಮೇಲೆ ನಾನು ಆರಾಮಾಗಿ ಓಡಾಡಿಕೊಂಡು ಇರಬಹುದು ಎಂದು ಅಂದುಕೊಂಡಿದ್ದೆ. ಆದರೆ ವಾರಕ್ಕೊಮ್ಮೆ ಏನಾದರೊಂದು ಆಗುತ್ತಿರುತ್ತದೆ, ಇದೆಲ್ಲ ನೋಡಿ ಖುಷಿ ಆಗುತ್ತದೆ. ನನ್ನಿಂದ ಬಿಗ್ ಬಾಸ್ ಆಯ್ತು, ಬಿಗ್ ಬಾಸ್ ಶೋ ನಾನೇ ಗೆದ್ದೆ ಎಂದುಕೊಳ್ಳೋದಿಲ್ಲ, ಅದೆಲ್ಲವೈ ಟೈಮ್ ಎಂದು ಭಾವಿಸ್ತೀನಿ.
ನಾನು ಯಾಕೆ ಸೈಲೆಂಟ್ ಆದೆ?
ಬಿಗ್ ಬಾಸ್ ಶೋನಿಂದ ಆಚೆ ಬಂದಮೇಲೆ ನಾನು ಯಾಕೆ ಸೈಲೆಂಟ್ ಆದೆ ಎಂದು ಅನೇಕರು ಕೇಳಿದರು. ಆದರೆ ವಾಸ್ತವಕ್ಕೆ ಬರಲು ಇನ್ನು ಸ್ವಲ್ಪ ಸಮಯ ಬೇಕು. ನಾನು ಹೊರಗಡೆ ಹೋದರೆ ಜನರು ಬರುತ್ತಾರೆ. ಹೀಗಾಗಿ ಮುಂದೆ ಏನು ಮಾಡಬೇಕು ಎಂದು ಯೋಚನೆ ಮಾಡುತ್ತಿದ್ದೇನೆ.
ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ದಾಖಲಾಯ್ತು
ನನ್ನನ್ನು ಜನರು ಇಷ್ಟಪಡ್ತಾರೆ, ಪ್ರೀತಿ ಕೊಡುತ್ತಾರೆ. ಆದರೆ ಅದೇ ಥರ ನನ್ನದು ತಪ್ಪಿದ್ದಾಗ ಅವರು ಮಾತನಾಡುವಾಗ, ಅದನ್ನು ಕೂಡ ಸ್ವೀಕರಿಸಬೇಕು. ಜನರ ಹೊಗಳಿಕೆಯನ್ನು ಸ್ವೀಕರಿಸಲು ರೆಡಿ ಇದ್ದಾಗ, ಬೈದಾಗ ಅದನ್ನು ಸ್ವೀಕರಿಸಬೇಕು.
ವೈಯಕ್ತಿಕ, ಕರಿಯರ್ ನಡುವೆ ಒತ್ತಡ ಇದೆಯಾ?
ಆ ಥರ ಒತ್ತಡ ಇಲ್ಲ. ಆದರೆ ಇವೆರಡನ್ನು ಬ್ಯಾಲೆನ್ಸ್ ಮಾಡೋದು ಸ್ವಲ್ಪ ಕಷ್ಟ ಆಗ್ತಿದೆ, ಮುಂದೆ ಹೆಜ್ಜೆ ಇಡುವಾಗ ಏನು ಮಾಡಬೇಕು ಎಂದು ಯೋಚನೆ ಮಾಡಬೇಕು.
ಜಮೀನು ತಗೊಂಡ್ರಂತೆ
ಬಿಗ್ ಬಾಸ್ ಶೋನ ಹಣ ಬರಲು ಒಂದಿಷ್ಟು ಸಮಯ ಬೇಕು. ನಾನು ಜಮೀನು ತಗೊಂಡಿರುವ ವಿಚಾರ ನನಗೆ ಗೊತ್ತಿಲ್ಲ.
ಕಾವ್ಯ ಹಾಗೂ ರಕ್ಷಿತಾ ಜೊತೆ ಲವ್ ಟ್ರೈ ಆಂಗಲ್ ಸಿನಿಮಾ ಮಾಡ್ತೀರಾ?
ತ್ರಿಕೋನ ಪ್ರೇಮಕಥೆ ಇರುವ ಕಥೆಗಳು ಹೆಚ್ಚು ಬರುತ್ತಿವೆ. ಶೋ ನೋಡಿ ಈ ರೀತಿ ಆಫರ್ ಬರುತ್ತಿರೋದು ತಪ್ಪಲ್ಲ. ಸೂರ್ಯವಂಶ ಸಿನಿಮಾ ಲಿಂಕ್ ಮಾಡಿ ಟ್ರೋಲ್ ಮಾಡಿದ್ದಾರೆ, ನಾನಂತೂ ಫುಲ್ ನಕ್ಕಿದ್ದೇನೆ.
ಅವಕಾಶಗಳು ಬರುತ್ತಿವೆಯಾ?
ಅವಕಾಶಗಳು ಬರುತ್ತಿದೆ. ಇನ್ನೂ ಹದಿನೈದು ದಿನ ಬಿಟ್ಟು ಯೋಚನೆ ಮಾಡ್ತೀನಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

