- Home
- Entertainment
- TV Talk
- ಕಾವ್ಯ ಶೈವ ಜಾಗದಲ್ಲಿ ಬೇರೆ ಹುಡುಗಿ ಇದ್ದಿದ್ರೆ ಅಷ್ಟೇ ಕಥೆ...; ಅದೊಂದು ಪ್ರಶ್ನೆಗೆ ಉತ್ತರ ಕೊಟ್ಟ Gilli Nata
ಕಾವ್ಯ ಶೈವ ಜಾಗದಲ್ಲಿ ಬೇರೆ ಹುಡುಗಿ ಇದ್ದಿದ್ರೆ ಅಷ್ಟೇ ಕಥೆ...; ಅದೊಂದು ಪ್ರಶ್ನೆಗೆ ಉತ್ತರ ಕೊಟ್ಟ Gilli Nata
Bigg Boss Kannada Season 12: ಬಿಗ್ ಬಾಸ್ ಕನ್ನಡ ಸೀಸನ್ 12 ವಿಜೇತ ಗಿಲ್ಲಿ ನಟ ಹಾಗೂ ಕಾವ್ಯ ಶೈವ ಅವರು ಲವ್ ಮಾಡುತ್ತಿದ್ದಾರಾ? ಮದುವೆ ಆಗುತ್ತಾರಾ ಎಂಬ ಪ್ರಶ್ನೆಯೇ ಕೇಳಿ ಬರುತ್ತಿದೆ. ನಾನು ಮದುವೆ ಆಗೋದಿಲ್ಲ ಎಂದು ಕಾವ್ಯ ಅವರು ಹೇಳಿದ್ದಾರೆ. ಈಗ ಗಿಲ್ಲಿ ಅವರು ಉತ್ತರ ಕೊಟ್ಟಿದ್ದಾರೆ.

ಇರಿಟೇಟ್ ಮಾಡಿದೆ!
“ಭರ್ಜರಿ ಬ್ಯಾಚುಲರ್ಸ್ ಶೋನಲ್ಲಿ ಗಗನಾಗೆ ನಾನು ತುಂಬ ಇರಿಟೇಟ್ ಮಾಡಿದ್ದೀನಿ. ಕಾವ್ಯ ಶೈವಗಂತೂ ಇನ್ನಷ್ಟು ಇರಿಟೇಟ್ ಮಾಡಿದ್ದೀನಿ, ನಾನು ಬೇಕು ಅಂತ ಹೀಗೆ ಮಾಡಿರಲಿಲ್ಲ. ಆದರೆ ಸುಮ್ಮನೆ ಈ ಥರ ಬಂದಿರೋದು” ಎಂದು ಗಿಲ್ಲಿ ನಟ ಹೇಳಿದ್ದಾರೆ.
ಜನರು ಬೈತಾರೆ ಅಂದುಕೊಂಡೆ
“ಶೋನಲ್ಲಿ ಕೂಡ ಗಗನಾ ನನಗೆ ಒಳ್ಳೆಯ ಸ್ನೇಹಿತರು, ಹೊರಗಡೆ ಕೂಡ ಒಂದಷ್ಟು ಇವೆಂಟ್‌ಗಳಲ್ಲಿ ಭಾಗವಹಿಸಿದ್ದೆವು. ನಾನು ಇರಿಟೇಟ್ ಮಾಡೋದಕ್ಕೆ ಜನರು ಬೈತಾರೆ ಅಂದುಕೊಂಡಿದ್ದೆ, ಆದರೆ ಖುಷಿಪಟ್ಟಿರೋದು ಆಶ್ಚರ್ಯ ತಂದಿದೆ” ಎಂದು ಗಿಲ್ಲಿ ನಟ ಹೇಳಿದ್ದಾರೆ.
ರಂಪಾಟ ಮಾಡುತ್ತಿದ್ದರು
“ಕಾವ್ಯ ಶೈವ ಅವರು ಪದೇ ಪದೇ ಇರಿಟೇಟ್ ಮಾಡಬೇಡ ಎಂದು ಹೇಳಿದ್ದಳು. ಆದರೆ ಎಲ್ಲರ ಮುಂದೆ ಬೈದು, ಕೂಗಾಡಿ ಮಾಡಿರಲಿಲ್ಲ. ಈ ಹಿಂದೆ ಶೋ ಮಾಡಿದ್ದಕ್ಕೆ ನಾನು ಹೀಗೆ ಎಂದು ಗೊತ್ತಿದ್ದಕ್ಕೆ ಕಾವ್ಯ ಸುಮ್ಮನೆ ಇದ್ದರು. ಇದನ್ನು ಕೂಡ ಅವರು ಹೇಳಿದ್ದುಂಟು. ಕಾವ್ಯ ಶೈವ ಬದಲು ಬೇರೆ ಹುಡುಗಿ ಇದ್ದಿದ್ದರೆ ಕೂಗಾಡಿ, ರಂಪಾಟ ಮಾಡುತ್ತಿದ್ದರು” ಎಂದು ಗಿಲ್ಲಿ ನಟ ಹೇಳಿದ್ದಾರೆ.
ಎಲ್ಲರೂ ಫೇಮಸ್ ಆಗ್ತಾರೆ
ಗಿಲ್ಲಿ ನಟನ ಜೊತೆ ಶೋನಲ್ಲಿ ಯಾವ ನಟಿ ಕಾಣಿಸಿಕೊಳ್ತಾರೋ ಅವರೆಲ್ಲ ಫೇಮಸ್ ಆಗ್ತಾರೆ ಎಂದು ಪೋಸ್ಟ್ ಹರಿದಾಡುತ್ತಿತ್ತು. ಈ ಬಗ್ಗೆ ಮಾತನಾಡಿದ ಗಿಲ್ಲಿ ನಟ ಅವರು ಆ ನಟಿಯರಿಂದ ನಾನು ಫೇಮಸ್ ಆಗಿದ್ದೀನಿ ಎಂದು ಹೇಳಿದ್ದಾರೆ.
ಇಬ್ಬರೂ ಸ್ನೇಹಿತರು
ನಾನು ಕಾವ್ಯ ಸ್ನೇಹಿತರು, ಕೊನೆಯವರೆಗೂ ಸ್ನೇಹಿತರಾಗಿ ಉಳಿದುಕೊಳ್ತೀವಿ ಎಂದು ಗಿಲ್ಲಿ ನಟ ಹೇಳಿದ್ದಾರೆ. ಈ ಮೂಲಕ ಸ್ನೇಹ ಎಂದು ಮದುವೆ ಗಾಸಿಪ್‌ಗೆ ತೆರೆ ಎಳೆದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

