- Home
- Entertainment
- TV Talk
- Bigg Boss Kannada: ಕಿಚ್ಚನ ಚಪ್ಪಾಳೆ ಸಿಗ್ತಿದ್ದಂತೆ ಮಹಾ ಎಡವಟ್ಟು ಮಾಡ್ಕೊಂಡ ರಕ್ಷಿತಾ ಶೆಟ್ಟಿ!
Bigg Boss Kannada: ಕಿಚ್ಚನ ಚಪ್ಪಾಳೆ ಸಿಗ್ತಿದ್ದಂತೆ ಮಹಾ ಎಡವಟ್ಟು ಮಾಡ್ಕೊಂಡ ರಕ್ಷಿತಾ ಶೆಟ್ಟಿ!
ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ ಶೆಟ್ಟಿ ಅವರು, ತಾನು ಇಲ್ಲದ ಸಂದರ್ಭದಲ್ಲಿ ನಡೆದ ಮಾತುಕತೆಯನ್ನು ಆಧರಿಸಿ ಗಿಲ್ಲಿ ನಟ ಅವರನ್ನು ನಾಮಿನೇಟ್ ಮಾಡಿದ್ದಾರೆ. ತನಗೆ ಗೊತ್ತಿಲ್ಲದ ವಿಷಯವನ್ನು ಕಾರಣವನ್ನಾಗಿ ನೀಡಿದ್ದು ನೋಡುಗರಲ್ಲಿ ಅಚ್ಚರಿಯನ್ನು ಮೂಡಿಸಿದೆ.

ರಕ್ಷಿತಾ ಶೆಟ್ಟಿ
ರಕ್ಷಿತಾ ಶೆಟ್ಟಿ ಏನೇ ಮಾತನಾಡಿದ್ರೂ ಅದರಲ್ಲೊಂದು ತೂಕ ಇರುತ್ತೆ ಎಂಬ ಅಭಿಪ್ರಾಯವಿತ್ತು. ಆದರೆ ಈ ಅಭಿಪ್ರಾಯ ಬದಲಾದಂತೆ ನಿನ್ನೆಯ ಸಂಚಿಕೆಯಲ್ಲಿ ಕಂಡು ಬಂದಿದೆ. ತನಗೆ ಗೊತ್ತಿಲ್ಲದ ವಿಷಯವನ್ನು ಕಾರಣವನ್ನಾಗಿ ನೀಡಿದ್ದು ನೋಡುಗರಲ್ಲಿ ಅಚ್ಚರಿಯನ್ನು ಮೂಡಿಸಿದೆ
ನಾಮಿನೇಷನ್
ಯಾವುದೇ ಸ್ಪರ್ಧಿಯನ್ನು ನಾಮಿನೇಷನ್ ಮಾಡುವಾಗ ಸೂಕ್ತ ಕಾರಣಗಳನ್ನು ನೀಡಬೇಕಾಗುತ್ತದೆ. ವೀಕೆಂಡ್ ಸಂಚಿಕೆಯಲ್ಲಿಯೂ ಸುದೀಪ್, ನಾಮಿನೇಷನ್ ಅನ್ನೋದು ಎಷ್ಟು ಗಂಭೀರವಾದ ವಿಷಯ ಎಂಬುದನ್ನು ತಿಳಿ ಹೇಳಿದ್ದರು. 6ನೇ ವಾರದಲ್ಲಿ ಮಾಡಿಕೊಂಡ ಎಡವಟ್ಟನ್ನು ರಕ್ಷಿತಾ ಶೆಟ್ಟಿ ಮತ್ತೆ ಪುನರಾವರ್ತಿಸಿದ್ದಾರೆ.
6ನೇ ವಾರ
ಹೌದು, 6ನೇ ವಾರದಲ್ಲಿ ಕಾರಣವಿಲ್ಲದೇ ರಘು ಅವರನ್ನು ರಕ್ಷಿತಾ ಶೆಟ್ಟಿ ನಾಮಿನೇಟ್ ಆಗುವಂತೆ ಮಾಡಿದ್ದರು. ಇದೀಗ ಬೇರೆಯೊಬ್ಬರು ನೀಡಿದ ಕಾರಣವನ್ನೀಡಿ ಗಿಲ್ಲಿ ನಟ ಅವರನ್ನು ನಾಮಿನೇಟ್ ಮಾಡಿದ್ದಾರೆ. ಇದನ್ನು ಸ್ವತಃ ರಕ್ಷಿತಾ ಶೆಟ್ಟಿಯೇ ಒಪ್ಪಿಕೊಂಡಿದ್ದಾರೆ. ರಕ್ಷಿತಾ ಶೆಟ್ಟಿ ನೀಡಿದ ಕಾರಣವನ್ನು ಸಹ ಗಿಲ್ಲಿ ನಟ ತೀವ್ರವಾಗಿ ಖಂಡಿಸಿದ್ದಾರೆ.
ನಿರೂಪಣೆ ವೃತ್ತಿ
ನಿರೂಪಣೆ ವೃತ್ತಿಯನ್ನು ಚಿಕ್ಕದು ಎಂದು ಗಿಲ್ಲಿ ನಟ ಹೇಳುತ್ಥಾರೆ ಎಂಬ ಕಾರಣವನ್ನು ಜಾನ್ವಿ ನೀಡಿದ್ದರು. ನಿರೂಪಣೆ ಸಂಬಂಧ ಮಾತುಕತೆ ವೇಳೆ ರಕ್ಷಿತಾ ಶೆಟ್ಟಿ ಅಲ್ಲಿ ಇರಲಿಲ್ಲ. ಆದರೆ ಜಾನ್ವಿ ನೀಡಿದ ಕಾರಣವನ್ನು ರಕ್ಷಿತಾ ಶೆಟ್ಟಿ ಸಂಪೂರ್ಣವಾಗಿ ಸತ್ಯ ಎಂದು ತಿಳಿದು ಗಿಲ್ಲಿ ನಟ ಅವರನ್ನು ನಾಮಿನೇಟ್ ಮಾಡಿದ್ದರು. ಯಾವುದೇ ಕೆಲಸ ಚಿಕ್ಕದು ಅಥವಾ ದೊಡ್ಡದು ಅಂತಿರಲ್ಲ ಎಂದು ರಕ್ಷಿತಾ ಶೆಟ್ಟಿ ಹೇಳಿದ್ದರು.
ಇದನ್ನೂ ಓದಿ: Bigg Boss ಅಶ್ವಿನಿ ಗೌಡ ಹುಟ್ಟುಹಬ್ಬಕ್ಕೆ ಧ್ರುವಂತ್ ಕೇಕ್ ಆಂಜನೇಯ? ಜಾತಲಾಣದಲ್ಲಿ ವಿಡಿಯೋ ಸಕತ್ ವೈರಲ್
ಗಿಲ್ಲಿ ನಟ ಅಸಮಾಧಾನ
ಜಾನ್ವಿ ಮತ್ತು ನನ್ನ ನಡುವೆ ನಿರೂಪಣೆಯ ಮಾತುಕತೆ ನಡೆದಾಗ ನೀನು ಅಲ್ಲಿರಲಿಲ್ಲ. ಹಾಗಾಗಿ ಆ ಕಾರಣ ನೀನು ಕೊಡುತ್ತಿರೋದು ತಪ್ಪು. ಹಾಗಂತ ಜಾನ್ವಿ ಹೇಳಿದೆಲ್ಲಾ ಸತ್ಯ ಎಂದು ನೀನು ನಂಬ್ತಿಯಾ? ಕಾರಣಗಳನ್ನು ನೀಡಲು ಬರಲ್ಲ ಎಂದು ರಕ್ಷಿತಾ ವಿರುದ್ಧ ಗಿಲ್ಲಿ ನಟ ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: Bigg Boss ಮನೆಯಲ್ಲಿ ಮದ್ವೆ! ಲೇಡೀಸ್ ಮೇಕಪ್ರೂಮ್ಗೆ ನುಗ್ಗಿ ಹೀಗೆಲ್ಲಾ ಸೀಕ್ರೇಟ್ ರಿವೀಲ್ ಮಾಡೋದಾ ಗಿಲ್ಲಿ ನಟ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

