- Home
- Entertainment
- TV Talk
- BBK 12: ಬಿಗ್‌ಬಾಸ್ ಮನೆಯಲ್ಲಿ ಅಶ್ವಿನಿ ಗೌಡಗೆ ಕಠಿಣ ಶಿಕ್ಷೆ; ಕಾಲ್ಮೇಲೆ ಕಾಲು ಹಾಕಿ ಕುಳಿತ ಗಿಲ್ಲಿ ನಟ
BBK 12: ಬಿಗ್‌ಬಾಸ್ ಮನೆಯಲ್ಲಿ ಅಶ್ವಿನಿ ಗೌಡಗೆ ಕಠಿಣ ಶಿಕ್ಷೆ; ಕಾಲ್ಮೇಲೆ ಕಾಲು ಹಾಕಿ ಕುಳಿತ ಗಿಲ್ಲಿ ನಟ
ಬಿಗ್‌ಬಾಸ್ ಮನೆಯ ನಿಯಮ ಉಲ್ಲಂಘಿಸಿದ್ದಕ್ಕೆ ಅಶ್ವಿನಿ ಗೌಡ ಅವರಿಗೆ ಶಿಕ್ಷೆಯಾಗುತ್ತದೆ. ಶಿಕ್ಷೆಯ ಭಾಗವಾಗಿ ಎಲ್ಲರ ಮುಂದೆ ಕ್ಷಮೆ ಕೇಳುವಾಗ, ಗಿಲ್ಲಿ ನಟ ಕಾಲ್ಮೇಲೆ ಕಾಲು ಹಾಕಿ ಕುಳಿತಿರುವುದು ಅಶ್ವಿನಿ ಕೋಪಕ್ಕೆ ಕಾರಣವಾಗಿ ಇಬ್ಬರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಗುತ್ತದೆ.

ಶಿಕ್ಷೆ ಕೊಟ್ರು ಬಿಗ್‌ಬಾಸ್
ಬಿಗ್‌ಬಾಸ್ ಮನೆಯಲ್ಲಿರುವ ಸ್ಪರ್ಧಿಗಳು ಕೆಲವೊಂದು ಮೂಲ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕಾಗುತ್ತದೆ. ಮೈಕ್ ಹಾಕಿಕೊಳ್ಳುವುದು, ಲೈಟ್ ಆಫ್ ಮಾಡಿದಾಗಲೇ ನಿದ್ದೆ ಮಾಡಬೇಕು, ಡ್ರೆಸ್ಸಿಂಗ್ ರೂಮ್ ನಲ್ಲಿ ಚರ್ಚೆ ಮಾಡಬಾರದು, ಮನೆಯಲ್ಲಿನ ವಸ್ತುಗಳಿಗೆ ಹಾನಿ ಮಾಡದಂತೆ, ಕನ್ನಡಕ್ಕೆ ಆದ್ಯತೆ ಸೇರಿದಂತೆ ಹಲವು ನಿಯಮಗಳನ್ನು ರೂಪಿಸಲಾಗಿರುತ್ತದೆ. ಮೂಲ ನಿಯಮಗಳ ಉಲ್ಲಂಘನೆಗೆ ಬಿಗ್‌ಬಾಸ್ ಶಿಕ್ಷೆ ನೀಡುತ್ತಾರೆ.
ಕಠಿಣ ಶಿಕ್ಷೆ ನೀಡುವಂತೆ ಗಿಲ್ಲಿ ನಟ ಮನವಿ
ಇಂದು ಬೆಳಗ್ಗೆ ಬಿಡುಗಡೆ ಮಾಡಲಾಗಿರುವ ಪ್ರೋಮೋದಲ್ಲಿ ಮೂಲ ನಿಯಮಗಳನ್ನು ಅತಿ ಹೆಚ್ಚು ಉಲ್ಲಂಘನೆ ಮಾಡೋರು ಯಾರು ಎಂದು ಕೇಳಲಾಗಿತ್ತು. ಕ್ಯಾಪ್ಟನ್ ರಘು, ರಾಶಿಕಾ ಶೆಟ್ಟಿ, ಗಿಲ್ಲಿ ನಟ ಸೇರಿದಂತೆ ಬಹುತೇಕರು ಅಶ್ವಿನಿ ಗೌಡ ಅವರ ಹೆಸರನ್ನು ತೆಗೆದುಕೊಂಡಿದ್ದಾರೆ. ನಿಯಮಗಳನ್ನು ಉಲ್ಲಂಘಿಸುವ ಅಶ್ವಿನಿ ಗೌಡ ಅವರಿಗೆ ಕಠಿಣವಾದ ಶಿಕ್ಷೆ ನೀಡಬೇಕೆಂದು ಗಿಲ್ಲಿ ನಟ ಬಿಗ್‌ಬಾಸ್ ಬಳಿ ಮನವಿ ಮಾಡಿಕೊಂಡಿದ್ದರು.
ಮತ್ತೆ ಅಶ್ವಿನಿ ಗೌಡ ಮತ್ತು ಗಿಲ್ಲಿ ನಟ ನಡುವೆ ಜಗಳ
ಮೂಲ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಕ್ಕೆ ಅಶ್ವಿನಿ ಗೌಡ ಅವರ ಕೊರಳಿಗೆ I am Sorry ಎಂಬ ಬೋರ್ಡ್ ಮತ್ತು Nominated ಎಂಬ ಹಣೆಪಟ್ಟಿಯನ್ನು ಹಚ್ಚಲಾಗಿದೆ. ನಂತರ ಎಲ್ಲಾ ಸದಸ್ಯರ ಮುಂದೆ ಹೋಗಿ ನಿಯಮ ಉಲ್ಲಂಘನೆಗೆ ಕ್ಷಮೆ ಕೇಳಿ, ಇನ್ಮುಂದೆ ರೂಲ್ಸ್ ಬ್ರೇಕ್ ಮಾಡಲ್ಲ ಎಂದು ಹೇಳಿ ಬಸ್ಕಿ ಹೊಡೆಯುವಂತೆ ಬಿಗ್‌ಬಾಸ್ ಆದೇಶಿಸಿದ್ದಾರೆ. ಬಿಗ್‌ಬಾಸ್ ಆದೇಶವನ್ನು ಪಾಲಿಸಲು ಮುಂದಾದ ಸಂದರ್ಭದಲ್ಲಿ ಮತ್ತೆ ಅಶ್ವಿನಿ ಗೌಡ ಮತ್ತು ಗಿಲ್ಲಿ ನಟ ನಡುವೆ ಜಗಳ ಉಂಟಾಗಿದೆ.
ಇಬ್ಬರ ಜಗಳಕ್ಕೆ ಕಾರಣ ಏನು?
ಅಶ್ವಿನಿ ಗೌಡ ತನ್ನ ಬಳಿಗೆ ಬರುತ್ತಿದ್ದಂತೆ ಕುರ್ಚಿ ಮೇಲೆ ಕುಳಿತಿದ್ದ ಗಿಲ್ಲಿ ನಟ, ಕಾಲ್ಮೇಲೆ ಕಾಲು ಹಾಕಿ ಕುಳಿತುಕೊಳ್ಳುತ್ತಾರೆ. ಗಿಲ್ಲಿ ಅವರ ಈ ನಡವಳಿಕೆ ಅಶ್ವಿನಿ ಗೌಡರಿಗೆ ಕೋಪ ತರಿಸುತ್ತಿದೆ. ಕಾಲು ಕೆಳಗೆ ಇಳಿಸುವಂತೆ ಅಶ್ವಿನಿ ಗೌಡ ಖಡಕ್ ಆಗಿ ಹೇಳುತ್ತಾರೆ. ಆದ್ರೆ ಗಿಲ್ಲಿ ನಟ ಮಾತ್ರ ಹಾಗೆಯೇ ಕುಳಿತಿರೋದನ್ನು ಕಾಣಬಹುದಾಗಿದೆ.
ಇದನ್ನೂ ಓದಿ: 'ಸುದೀಪ್ ಸರ್ ನಿಮ್ಮ ವರ್ತನೆ ತುಂಬಾ ಬೇಸರ ತರಿಸ್ತಿದೆ' ಎಂದ Bigg Boss ವೀಕ್ಷಕರು! ಈ ಪರಿ ಆಕ್ರೋಶ ಯಾಕೆ?
ಮುಂದೇನಾಯ್ತು?
ಕಾಲು ಕೆಳಗೆ ಇಳಿಸು, ತೀರಾ ಓವರ್ ಆಗಿ ಆಡಲು ಹೋಗಬೇಡ. ದವಲತ್ತು, ಧಿಮಾಕು ನನ್ನ ಹತ್ತಿರ ಇಟ್ಕೊಬೇಡ ಎಂದು ಅಶ್ವಿನಿ ಗೌಡ ಹೇಳುತ್ತಾರೆ. ಹೇಗಾದ್ರೂ ಕುಳಿತುಕೊಳ್ಳಬಹುದು ಎಂದು ಗಿಲ್ಲಿ ನಟ ಟಕ್ಕರ್ ಕೊಡ್ತಾರೆ. ಕಾಲ್ಮೇಲೆ ಕಾಲು ಹಾಕಿ ಕುಳಿತ ಗಿಲ್ಲಿ ಮುಂದೆ ಅಶ್ವಿನಿ ಗೌಡ ಬಸ್ಕಿ ಹೊಡೆದ್ರಾ ಅನ್ನೋದು ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ.
ಇದನ್ನೂ ಓದಿ: Bigg Boss: ಜಾಹ್ನವಿ ಮುಚ್ಚಿಟ್ಟಿದ್ದ ಸೀಕ್ರೆಟ್ ಎಲ್ಲರೆದುರೇ ರಟ್ಟು ಮಾಡಿದ ಸುದೀಪ್- ಬೇಕಿತ್ತಾ ಹಳ್ಳ ತೋಡಿಕೊಳ್ಳೋ ಕೆಲ್ಸ?