- Home
- Entertainment
- TV Talk
- BBK 12: ಒಬ್ಬರಲ್ಲ, ಇಬ್ಬರಲ್ಲ ಬರೋಬ್ಬರಿ ನಾಲ್ವರು; ಇರೋವಾಗ ಕುತಂತ್ರ, ಹೋಗುವಾಗ ವೇದಾಂತ ಎಂದ ವೀಕ್ಷಕರು
BBK 12: ಒಬ್ಬರಲ್ಲ, ಇಬ್ಬರಲ್ಲ ಬರೋಬ್ಬರಿ ನಾಲ್ವರು; ಇರೋವಾಗ ಕುತಂತ್ರ, ಹೋಗುವಾಗ ವೇದಾಂತ ಎಂದ ವೀಕ್ಷಕರು
ಬಿಗ್‌ಬಾಸ್ ಮನೆಯಲ್ಲಿ ಈ ವಾರ ನಾಲ್ವರು ಸ್ಪರ್ಧಿಗಳು ಎಲಿಮಿನೇಷನ್‌ಗೆ ನಾಮಿನೇಟ್ ಆಗಿದ್ದಾರೆ. ರಿಷಾ ಗೌಡ, ರಘು, ಕಾಕ್ರೋಚ್ ಸುಧಿ ಮತ್ತು ಜಾನ್ವಿ ಮುಖ್ಯದ್ವಾರದ ಬಳಿ ನಿಂತಿದ್ದು, ವಿಶೇಷ ಪ್ರಕ್ರಿಯೆಯ ಮೂಲಕ ಒಬ್ಬರು ಮನೆಯಿಂದ ಹೊರನಡೆಯಲಿದ್ದಾರೆ.

ನಾಮಿನೇಷನ್ ತೂಗುಗತ್ತಿ
ಶನಿವಾರದ ಸಂಚಿಕೆಯಲ್ಲಿ ಅಶ್ವಿನಿ ಗೌಡ ಮತ್ತು ರಕ್ಷಿತಾ ಶೆಟ್ಟಿ ಸೇವ್ ಅಗಿದ್ದರು. ಇಂದು ಧ್ರುವಂತ್ ಸೇಫ್ ಆಗಿದ್ದು, ನಾಲ್ವರು ಮುಖ್ಯದ್ವಾರದಿಂದ ಹೊರಗೆ ನಿಂತಿದ್ದಾರೆ. ಎರಡನೇ ಬಾರಿ ಮನೆಯ ಕ್ಯಾಪ್ಟನ್ ಅಗಿರುವ ಮ್ಯೂಟಂಟ್ ರಘು ಅವರ ಮೇಲೆಯೂ ನಾಮಿನೇಷನ್ ತೂಗುಗತ್ತಿ ತೂಗಾಡುತ್ತಿದೆ.
ನಾಮಿನೇಟ್ ಸ್ಪರ್ಧಿಗಳು
ಈ ಬಾರಿಯ ನಾಮಿನೇಷನ್ ಪ್ರಕ್ರಿಯೆ ವಿಶೇಷವಾಗಿ ನಡೆಸಲಾಗಿದೆ. ನಾಮಿನೇಟ್ ಆಗಿರುವ ನಾಲ್ವರು ಸ್ಪರ್ಧಿಗಳನ್ನು ಮುಖ್ಯದ್ವಾರದ ಹೊರಗಡೆ ನಿಲ್ಲಿಸಲಾಗಿದೆ. ತಾವು ಏಕೆ ಉಳಿಯಬೇಕು ಮತ್ತು ಯಾಕೆ ಇಲ್ಲಿವರೆಗೆ ಬಂದಿದ್ದು ಎಂಬುದರ ಬಗ್ಗೆ ನಾಮಿನೇಟ್ ಸ್ಪರ್ಧಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಣ್ಣಿಗೆ ಬಟ್ಟೆ
ರಿಷಾ ಗೌಡ, ರಘು, ಕಾಕ್ರೋಚ್ ಸುಧಿ ಮತ್ತು ಜಾನ್ವಿ ನಾಮಿನೇಟ್ ಕೊನೆಯ ಹಂತದಲ್ಲಿ ನಿಂತಿದ್ದಾರೆ. ನಾಲ್ವರು ಸ್ಪರ್ಧಿಗಳ ಕಣ್ಣಿಗೆ ಬಟ್ಟೆಯನ್ನು ಕಟ್ಟಲಾಗಿದ್ದು, ಒಂದು ಬಾರಿ ಮುಖ್ಯದ್ವಾರ ಕ್ಲೋಸ್ ಆಗಲಿದೆ. ಮತ್ತೆ ಮುಖ್ಯದ್ವಾರ ತೆರೆದಾಗ ನಾಲ್ವರಲ್ಲಿ ಒಬ್ಬರು ಅಲ್ಲಿಂದ ಮತ್ತಷ್ಟು ಹೊರಗೆ ಹೋಗುತ್ತಾರೆ. ಬಾಗಿಲು ಓಪನ್ ಆಗುತ್ತಿದ್ದಂತೆ ಮನೆಯ ಸದಸ್ಯರೆಲ್ಲರೂ ಶಾಕ್ ಆಗಿದ್ದಾರೆ.
ನಾಲ್ವರಲ್ಲಿ ಯಾರು ಉಳಿತಾರೆ?
ಈ ಮನೆಯಲ್ಲಿ ನಾಮಿನೇಷನ್ ಅನ್ನೋದು ಅಳಿವು-ಉಳಿವಿನ ಪ್ರಶ್ನೆ. ಯಾವುದೋ ಜಿದ್ದಿಗೆ ನಾಮಿನೇಷನ್ ಮಾಡಬೇಡಿ ಎಂದು ಕಾಕ್ರೋಚ್ ಸುಧಿ ಹೇಳುತ್ತಾರೆ. ಈ ಮನೆಯಲ್ಲಿ ಖುಷಿ ಇರೋ ಕ್ಷಣಗಳನ್ನು ಕಳೆಯಬೇಕೆಂದುಕೊಂಡಿದ್ದೇನೆ ಎಂದು ರಿಷಾ ಹೇಳಿದ್ರೆ, ಸೇವ್ ಆಗಲು ನಾವು ಸಹ ಹಠ ಹಿಡಿಯಬೇಕಿತ್ತು ಎಂದು ಜಾನ್ವಿ ಹೇಳಿದ್ದಾರೆ. ಹಾಗಾಗಿ ನಾಲ್ವರಲ್ಲಿ ಯಾರು ಉಳಿತಾರೆ ಎಂಬುದರ ಬಗ್ಗೆ ಕುತೂಹಲ ಮೂಡಿದೆ.
ಇದನ್ನೂ ಓದಿ: Bigg Boss Kannada 12: ಸುದೀಪ್ ಮುಂದೆ ಮಾಡಿದ್ದ ತಪ್ಪು ಒಪ್ಪಿಕೊಂಡ ಅಶ್ವಿನಿ ಗೌಡ
ವೀಕ್ಷಕರು ಹೇಳಿದ್ದೇನು?
ಈ ಪ್ರೋಮೋಗೆ ಕಮೆಂಟ್ ಮಾಡಿರುವ ಬಿಗ್‌ಬಾಸ್ ವೀಕ್ಷಕರು, ರಘು ಸರ್ ಉಳಿಬೇಕು. ಅವರು ನಿಜವಾಗಲೂ ಬಿಗ್ ಬಾಸ್ ಫೈನಲಿಸ್ಟ್. ರಿಷಾ ಹೋಗ್ತಾರೆ ಹೋಗಲೇಬೇಕು. ಇರೋವಾಗ ಕುತಂತ್ರ, ಹೋಗುವಾಗ ವೇದಾಂತ. ರಘು ಹೋಗಬಾರದು ರಘು ಒಳ್ಳೆ ಆಟ ಆಡುತ್ತಿದ್ದಾರೆ ಅವರ ಕಡೆಯಿಂದನು ಎಂಟರ್ಟೈನ್ಮೆಂಟ್ ಬರ್ತಾ ಇದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: BBK 12: ಅಪ್ಪಿತಪ್ಪಿ ಗಿಲ್ಲಿ ಹೇಳಿದ್ದು ನಿಜ ಆದ್ರೆ ಏನ್ ಕಥೆ? ಇದು ಸ್ಪರ್ಧಿಯ ಕನಸಿನ ಕಥೆ