- Home
- Entertainment
- TV Talk
- Bigg Boss ಕಣ್ಣಿಗೆ ಮಣ್ಣೆರೆಚಿದ ಚಾಲಾಕಿ; ಎಲ್ಲರ ಮುಂದೆ Rakshita Shetty ಕಿತಾಪತಿ ಬಯಲಾಗೋಯ್ತು!
Bigg Boss ಕಣ್ಣಿಗೆ ಮಣ್ಣೆರೆಚಿದ ಚಾಲಾಕಿ; ಎಲ್ಲರ ಮುಂದೆ Rakshita Shetty ಕಿತಾಪತಿ ಬಯಲಾಗೋಯ್ತು!
BBK 12 Episode Update: ಬಿಗ್ ಬಾಸ್ ಮನೆಯಲ್ಲಿ ಎಲ್ಲ ಕಡೆ ಕ್ಯಾಮರಾ ಇರುತ್ತದೆ, ಪ್ರತಿ ಕ್ಯಾಮರಾವನ್ನು ಒಬ್ಬೊಬ್ಬರು ಹ್ಯಾಂಡಲ್ ಮಾಡುತ್ತಾರೆ. ಹೀಗಿದ್ದರೂ ಕೂಡ 24/7 ಕ್ಯಾಮರಾ ಇರುತ್ತದೆ ಎನ್ನೋದು ಮರೆತು ಹೋಗುತ್ತದೆ. ಒಂದಿನ/ ಎರಡು ದಿನ ಕ್ಯಾಮರಾ ಇರೋದು ನೆನಪಿರುತ್ತದೆ, ಎಲ್ಲವೂ ಮರೆತು ಹೋಗುವುದು.

ನಾನು ತಪ್ಪು ಮಾಡಿಲ್ಲ
ಕೆಲವೊಮ್ಮೆ ಸ್ಪರ್ಧಿಗಳು, ಸಹಸ್ಪರ್ಧಿಗಳಿಗೆ ಅಥವಾ ಬಿಗ್ ಬಾಸ್‌ಗೆ ಕಣ್ಣೆರಚಲು ಏನಾದರೊಂದು ಮಾಡುತ್ತಾರೆ. ಈಗ ರಕ್ಷಿತಾ ಶೆಟ್ಟಿ ಇದೇ ಕೆಲಸ ಮಾಡಿದ್ದಾರೆ. ಇದು ಗಿಲ್ಲಿ ನಟನ ಕಣ್ಣಿಗೆ ಬಿದ್ದಿದ್ದು, ಶಿಕ್ಷೆ ಕೂಡ ಸಿಕ್ಕಿದೆ. ಆಮೇಲೆ ನಾನು ತಪ್ಪು ಮಾಡಿಲ್ಲ ಎಂದಿದ್ದಾರೆ.
ನಿದ್ದೆ ಮಾಡೋಕೆ ಅವಕಾಶ ಕೊಡಿ
ಲೈಟ್ ಆನ್ ಆಗಿದ್ದಾಗ ನಿದ್ದೆ ಮಾಡುವ ಹಾಗಿಲ್ಲ. ಇದು ನಿಯಮ. ನಿದ್ದೆ ಮಾಡೋಕೆ ಅವಕಾಶ ಕೊಡಿ ಎಂದು ಸ್ಪರ್ಧಿಗಳು ಕೇಳಿಕೊಳ್ಳುತ್ತಾರೆ. ಆದರೆ ಬಿಗ್ ಬಾಸ್ ಮಾತ್ರ ಅವಕಾಶ ಕೊಡೋದಿಲ್ಲ. ಈಗ ರಕ್ಷಿತಾ ಶೆಟ್ಟಿ ಕೂಡ ಅಚ್ಚರಿಯದ ಕೆಲಸ ಮಾಡಿ ಸಿಕ್ಕಿ ಹಾಕಿಕೊಂಡಿದ್ದಾರೆ.
ರಕ್ಷಿತಾ ಶೆಟ್ಟಿ ಅಮಾಯಕಿ?
ರಕ್ಷಿತಾ ಶೆಟ್ಟಿ ಅಮಾಯಕಿ ಥರ ಕಾಣ್ತಾಳೆ, ಅಮಾಯಕಿ ಥರ ಮಾಡ್ತಾಳೆ. ಆದರೆ ಅವಳು ಅಮಾಯಕಿ ಅಲ್ಲ ಎಂದು ಸ್ಪಂದನಾ ಸೋಮಣ್ಣ, ಕಾವ್ಯ ಶೈವ ಮಾತನಾಡಿಕೊಂಡಿದ್ದಾರೆ. ಅಂದಹಾಗೆ ಕಳೆದ ವಾರ ರಕ್ಷಿತಾ ಅವರು ಯಾರ ಮಾತು ಕೇಳದೆ, ಕೂಗಾಡೋದು, ಇರಿಟೇಟ್ ಮಾಡೋದು ವೀಕ್ಷಕರಿಗೆ ಬೇಸರ ತರಿಸಿದೆ.
ವಯಸ್ಸಿಗೂ ಮೀರಿದ ಪ್ರೌಢಿಮೆ
ರಕ್ಷಿತಾ ಶೆಟ್ಟಿ ಅವರು ಮುಗ್ಧೆ, ಹಾಗೆಯೇ ವಯಸ್ಸಿಗೂ ಮೀರಿದ ಪ್ರೌಢಿಮೆ ಎಂದು ವೀಕ್ಷಕರು ಅಭಿಪ್ರಾಯಪಟ್ಟಿದ್ದರು. ರಕ್ಷಿತಾ ಅತಿಯಾಗಿ ಆಡಿದಾಗ ಕಿಚ್ಚ ಸುದೀಪ್ ಅವರು
ಬಟ್ಟೆ ಬದಲಾಯಿಸುವೆ ಎಂದು ಹೋಗಿ ರಕ್ಷಿತಾ ಶೆಟ್ಟಿ ನಿದ್ದೆ ಮಾಡುತ್ತಾರಂತೆ. ಇನ್ನು ಟಾಯ್ಲೆಟ್‌ಗೆ ಹೋಗಿ ಕೂಡ ಅಲ್ಲಿ ಕೂಡ ಅವರು ನಿದ್ದೆ ಮಾಡಿದ್ದಾರೆ.
ಟಾಯ್ಲೆಟ್‌ನಲ್ಲಿ ನಿದ್ದೆ
ರಜತ್ ಅವರು ಸ್ನಾನ ಮಾಡಿಕೊಂಡು ಬಂದರೂ ಕೂಡ ರಕ್ಷಿತಾ ಮಾತ್ರ ಬೇಗ ಹೊರಗಡೆ ಬಂದಿಲ್ಲ. ಹೀಗಾಗಿ ಬಿಗ್ ಬಾಸ್ ನಾಯಿ ಬೊಗಳುವ ಸೌಂಡ್ ಹಾಕಿದ್ದು, ಕ್ಯಾಪ್ಟನ್ ಧನುಷ್ ಅವರು ಸ್ವಿಮ್ಮಿಂಗ್ ಫೂಲ್‌ಗೆ ಬೀಳಿ ಎಂದು ಶಿಕ್ಷೆ ಕೊಟ್ಟಿದ್ದರು. ಆಮೇಲೆ ಸೂರಜ್ ಜೊತೆ ಮಾತನಾಡಿದ ರಕ್ಷಿತಾ, “ನಾನು ನಿದ್ದೆ ಮಾಡುತ್ತಿರಲಿಲ್ಲ. ಟಾಯ್ಲೆಟ್‌ಗೆ ಹೋಗಿ ಸುಮಾರು ಹೊತ್ತಾದರೆ ಏನಾದರೂ ಸೌಂಡ್ ಮಾಡಿ, ಇಲ್ಲ ಅಂದ್ರೆ ಬಿಗ್ ಬಾಸ್ ನಿದ್ದೆ ಮಾಡ್ತೀರಾ ಅಂತ ಸೌಂಡ್ ಹಾಕ್ತಾರೆ” ಎಂದಿದ್ದಾರೆ. ಆಗ ಸೂರಜ್ ಅವರು, “ನಾನು ಟಾಯ್ಲೆಟ್ ಹೋಗಿ ನಿದ್ದೆ ಮಾಡಲ್ಲ” ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

