- Home
- Entertainment
- TV Talk
- Kannada Film Director Dies on Set: ಕನ್ನಡ ಸಿನಿಮಾ ಶೂಟಿಂಗ್ ಮಾಡುವಾಗಲೇ ಹೃದಯಾಘಾತ; ನಿರ್ದೇಶಕ ವಿಧಿವಶ
Kannada Film Director Dies on Set: ಕನ್ನಡ ಸಿನಿಮಾ ಶೂಟಿಂಗ್ ಮಾಡುವಾಗಲೇ ಹೃದಯಾಘಾತ; ನಿರ್ದೇಶಕ ವಿಧಿವಶ
ಯಾರಿಗೆ ಯಾವಾಗ ಹೃದಯಾಘಾತ ಆಗುವುದು ಎಂದು ಗೊತ್ತಾಗದಂತೆ ಆಗಿದೆ. ಬಸ್ ಡ್ರೈವ್ ಮಾಡುವಾಗ, ಕೂತಲ್ಲೇ ಅಥವಾ ಊಟ ಮಾಡುವಾಗಲೋ ಇನ್ಯಾವುದೋ ಸಂದರ್ಭದಲ್ಲಿ ಹೃದಯಾಘಾತ ಆದ ಸಾಕಷ್ಟು ಉದಾಹರಣೆ ಇದೆ.

ಹೃದಯಾಘಾತದಿಂದ ನಿಧನ
ಅಂದಹಾಗೆ ಚಿಕ್ಕ ಮಕ್ಕಳಿಗೂ ಕೂಡ ಹೃದಯಾಘಾತ ಆಗುವುದು. ಸಿನಿಮಾ ಶೂಟಿಂಗ್ ಮಾಡುವಾಗಲೇ ನಿರ್ದೇಶಕರೊಬ್ಬರಿಗೆ ಹೃದಯಾಘಾತ ಆಗಿ, ನಿಧನರಾಗಿದ್ದಾರೆ. ಸಂಗೀತ್ ಸಾಗರ್ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ.
ಪಾತ್ರಧಾರಿ ಸಿನಿಮಾ ಶೂಟಿಂಗ್
ನಿನ್ನೆ ( ಡಿಸೆಂಬರ್ 3) ರಂದು ಶಿವಮೊಗ್ಗದ ಹರಿಹರಪುರದಲ್ಲಿ ಪಾತ್ರಧಾರಿ ಸಿನಿಮಾ ಶೂಟಿಂಗ್ ಮಾಡುತ್ತಿದ್ದರು. ಆಗ ಹೃದಯಾಘಾತ ಆಗಿದೆ ತಕ್ಷಣ ಕೊಪ್ಪ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ರು
ಚಿಕಿತ್ಸೆ ಫಲಿಸಲಿಲ್ಲ
ಆದ್ರೂ ಚಿಕಿತ್ಸೆ ಫಲಿಸದೆ ಸಂಗೀತ್ ಸಾಗರ್ ಅವರು ನಿಧಾನ ಹೊಂದಿದ್ದಾರೆ. ಹಾಸ್ಯ ಕಲಾವಿದ ಸಂಜು ಬಸಯ್ಯ ಅವರಿಗೆ ಆಕ್ಷನ್ ಹೇಳಿದ್ದು, ಅದಾದ ಬಳಿಕ ಕುಸಿದು ಬಿದ್ದಿದ್ದರು.
ಕನ್ನಡ ಸಿನಿಮಾ ನಿರ್ದೇಶನ
ಈಗಾಗಲೇ ಸಿನಿಮಾಕ್ಕೆ ನಿರ್ದೇಶನ, ಸಂಗೀತ ನಿರ್ದೇಶನ ಮಾಡುತ್ತಿದ್ದರು. ಅಂದಹಾಗೆ ಎಂಟಕ್ಕೂ ಹೆಚ್ಚು ಕನ್ನಡ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ.
ಎಲ್ಲಿಯವರು?
ಇವರು ಮೂಲತಃ ಸಕಲೇಶಪುರದ ದೊಡ್ಡನಾಗರ ಮೂಲದವರು. 20 ದಿನಗಳಿಂದ ತೀರ್ಥಹಳ್ಳಿ, ಹರಿಹರ ಸುತ್ತ ಶೂಟಿಂಗ್ ನಡೆಯುತ್ತಿತ್ತು. ಇಂದು ಸಿನಿಮಾದ ಕೊನೆ ದಿನದ ಶೂಟಿಂಗ್ ಮಾಡಿ ಕುಂಬಳಕಾಯಿ ಒಡೆಯಬೇಕಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

