BBK 12: ಬಿಗ್‌ಬಾಸ್ ಮನೆಯಲ್ಲಿ ಇಬ್ಬರು ಕ್ಯಾಪ್ಟನ್: ಜೋಡಿ ಆಟದಲ್ಲಿ ಗಾಯಗೊಂಡ ಸ್ಪರ್ಧಿ
ಮುಂದಿನ ವಾರ ಬಿಗ್‌ಬಾಸ್ ಮನೆಯಲ್ಲಿ ಇಬ್ಬರು ಕ್ಯಾಪ್ಟನ್‌ಗಳು ಇರಲಿದ್ದು, ಇದಕ್ಕಾಗಿ ಜೋಡಿ ಟಾಸ್ಕ್ ನೀಡಲಾಗಿದೆ. ಈ ಆಟದ ವೇಳೆ ಸ್ಪರ್ಧಿಯೊಬ್ಬರ ಕಾಲಿಗೆ ಗಾಯವಾಗಿದ್ದು, ಅಶ್ವಿನಿ ಮತ್ತು ರಘು ಈ ವಾರ ನಾಮಿನೇಷನ್‌ನಿಂದ ಸೇಫ್ ಆಗಿದ್ದಾರೆ.

ಇಬ್ಬರು ಕ್ಯಾಪ್ಟನ್
ಬಿಗ್‌ಬಾಸ್ ಮನೆಯಲ್ಲಿ ಮುಂದಿನ ವಾರ ಇಬ್ಬರು ಕ್ಯಾಪ್ಟನ್‌ಗಳು ಇರಲಿದ್ದಾರೆ. ಹಾಗಾಗಿ ಈ ವಾರ ಸ್ಪರ್ಧಿಗಳು ಜೋಡಿಗಳಾಗಿ ಆಟವಾಡಬೇಕು. ಧ್ರುವಂತ್ ಅವರನ್ನು ಜೋಡಿಯನ್ನಾಗಿ ಮಾಡಿಕೊಳ್ಳಲು ಯಾವ ಮಹಿಳಾ ಸ್ಪರ್ಧಿಯೂ ಒಪ್ಪಂದ ಹಿನ್ನೆಲೆ ಒಂಟಿಯಾಗಿ, ಆಟದ ಉಸ್ತುವಾರಿ ಮಾಡುತ್ತಿದ್ದಾರೆ.
ಸದ್ಯ ಮನೆಯಲ್ಲಿ ರಚನೆಯಾಗಿರುವ ಜೋಡಿಗಳು ಈ ರೀತಿಯಾಗಿವೆ.
- ಕಾವ್ಯಾ ಶೈವ ಮತ್ತು ಗಿಲ್ಲಿ ನಟ
- ರಕ್ಷಿತಾ ಶೆಟ್ಟಿ ಮತ್ತು ಮಾಳು ನಿಪನಾಳ
- ರಾಶಿಕಾ ಶೆಟ್ಟಿ & ಸೂರಜ್ ಸಿಂಗ್
- ಅಭಿಷೇಕ್ ಶ್ರೀಕಾಂತ್ ಮತ್ತು ಸ್ಪಂದನಾ ಸೋಮಣ್ಣ
- ಚೈತ್ರಾ ಕುಂದಾಪುರ ಮತ್ತು ರಜತ್ ಕಿಶನ್
ಜೋಡಿ ಟಾಸ್ಕ್
ಜೋಡಿ ಸ್ಪರ್ಧಿಗಳು ಜೊತೆಯಾಗಿ ಒಂದು ಕಾಲಿಗೆ ದಾರ ಕಟ್ಟಿಕೊಂಡು ಮುಂದಿರುವ ಬಾಲ್‌ಗಳನ್ನು ಶೇಖರಿಸಬೇಕು. ಕಡಿಮೆ ಬಾಲ್ ಸಂಗ್ರಹಿಸುವ ಜೋಡಿ ಆಟದಿಂದ ಹೊರಗುಳಿಯುತ್ತದೆ. ಮೊದಲ ಸುತ್ತಿನಲ್ಲಿ ಚೈತ್ರಾ ಮತ್ತು ರಜತ್ ಆಟದಿಂದ ಹೊರಗೆ ಉಳಿದ್ರೆ, ರಕ್ಷಿತಾ-ಮಾಳು ಅತಿ ಹೆಚ್ಚು ಬಾಲ್ ಸಂಗ್ರಹಿಸಿದ್ದಾರೆ.
ಸ್ಪಂದನಾ ಅವರ ಕಾಲಿಗೆ ಏಟು
ಎರಡನೇ ಸುತ್ತಿನಲ್ಲಿ ಸ್ಪಂದನಾ ಅವರ ಕಾಲಿಗೆ ಏಟು ಆಗಿದ್ದರಿಂದ ಆಟ ಸ್ಥಗಿತಗೊಂಡಿದೆ. ಎರಡನೇ ಸುತ್ತಿನ ಆಟದ ಫಲಿತಾಂಶ ಈ ರೀತಿಯಾಗಿದೆ.
ಗಿಲ್ಲಿ & ಕಾವ್ಯಾ: 03
ರಕ್ಷಿತಾ & ಮಾಳು: 03
ಅಶ್ವಿನಿ & ರಘು: 01
ರಾಶಿಕಾ & ಸೂರಜ್: 02
ಸ್ಪಂದನೆ & ಅಭಿಷೇಕ್: 01
ಇದನ್ನೂ ಓದಿ: BBK 12: ಬೆನ್ನಿಗೆ ಚೂರಿ ಹಾಕಿದ್ರೂ ವಂಶದ ಕುಡಿ ರಕ್ಷಿತಾ ಶೆಟ್ಟಿಗೆ ಬುದ್ಧಿ ಹೇಳಿದ ಗಿಲ್ಲಿ ನಟ
ಸೇಫ್ ಆಗಿದ್ದಾರೆ ಅಶ್ವಿನಿ ಮತ್ತು ರಘು
ಈ ವಾರ ಅಶ್ವಿನಿ ಗೌಡ ಮತ್ತು ರಘು ನಾಮಿನೇಷನ್‌ನಿಂದ ಸೇಫ್ ಆಗಿದ್ದಾರೆ. ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿರುವ ಚೈತ್ರಾ ಕುಂದಾಪುರ ಮತ್ತು ರಜತ್ ಅವರನ್ನು ನಾಮಿನೇಟ್ ಮಾಡುವಂತಿರಲಿಲ್ಲ. ಇನ್ನುಳಿದ ಎಲ್ಲಾ ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ.
ಇದನ್ನೂ ಓದಿ: Bigg Boss 12ರ ವಿನ್ನರ್ ಬಗ್ಗೆ ಅಚ್ಚರಿಯ ಹೇಳಿಕೆ ಕೊಟ್ಟ ಜಾಹ್ನವಿ: ಯಾರೂ ಊಹಿಸದ ಟ್ವಿಸ್ಟ್ ಇದು!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

