- Home
- Entertainment
- TV Talk
- Bigg Boss Kannada 12 ಮನೆಯಲ್ಲಿ ಮಾಳು ಅಬ್ಬರ: ತನ್ನ ವಾದವನ್ನು ಮುಂದಿಟ್ಟು ಹೊರಟ ರಕ್ಷಿತಾ
Bigg Boss Kannada 12 ಮನೆಯಲ್ಲಿ ಮಾಳು ಅಬ್ಬರ: ತನ್ನ ವಾದವನ್ನು ಮುಂದಿಟ್ಟು ಹೊರಟ ರಕ್ಷಿತಾ
ಬಿಬಿ ಪ್ಯಾಲೇಸ್ ಟಾಸ್ಕ್ ವೇಳೆ ಸಿಂಕ್‌ನಲ್ಲಿ ಟಿಶ್ಯೂ ಎಸೆದ ಧ್ರುವಂತ್, ರಕ್ಷಿತಾ ಮತ್ತು ಮಾಳು ಜೊತೆ ಜಗಳವಾಡಿದ್ದಾರೆ. ಮಾಳು ಧ್ವನಿ ಏರಿಸಿದ್ದಕ್ಕೆ ಧ್ರುವಂತ್ ಶಾಕ್ ಆಗಿದ್ದು, ಈ ಜಗಳ ಕ್ಯಾಪ್ಟನ್ ರೂಮ್‌ವರೆಗೂ ತಲುಪಿದೆ.

ಮಾಳು ಎಂಟ್ರಿ
ಬಿಬಿ ಪ್ಯಾಲೇಸ್ ಟಾಸ್ಕ್ ನಡುವೆಯೂ ಸ್ಪರ್ಧಿಗಳನ ನಡುವೆ ಜಗಳ ಏರ್ಪಟ್ಟಿದೆ. ಧ್ರುವಂತ್ ಮತ್ತು ರಕ್ಷಿತಾ ಶೆಟ್ಟಿ ನಡುವೆ ಜಗಳದಲ್ಲಿ ಮಾಳು ಎಂಟ್ರಿ ಕೊಟ್ಟಿದ್ದಾರೆ. ಮಾಳು ಅಬ್ಬರಕ್ಕೆ ಧ್ರುವಂತ್ ಒಂದು ಕ್ಷಣ ಶಾಕ್ ಆಗಿದ್ದಾರೆ. ಮಾಳು ಧ್ವನಿ ಏರಿಸುತ್ತಿದ್ದಂತೆ ರಕ್ಷಿತಾ ಶೆಟ್ಟಿ ಸಹ ಅಲ್ಲಿಗೆ ಬಂದು ವಾಗ್ದಾಳಿ ನಡೆಸುತ್ತಾರೆ.
ಇಬ್ಬರ ಮಧ್ಯೆ ಜಗಳಕ್ಕೆ ಕಾರಣ ಏನು?
ಬಿಬಿ ಪ್ಯಾಲೇಸ್ ಟಾಸ್ಕ್‌ನಲ್ಲಿ ರಕ್ಷಿತಾ ಶೆಟ್ಟಿ ಮತ್ತು ಮಾಳು ಮನೆಯ ಕ್ಲೀನಿಂಗ್ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ. ಲೈಟ್ ಆಫ್ ಆದ್ಮೇಲೆ ಎಲ್ಲಾ ಪಾತ್ರೆಗಳನ್ನು ತೊಳೆಯುತ್ತಿರುತ್ತಾರೆ. ಈ ವೇಳೆ ಅಲ್ಲಿಗೆ ಬಂದ ಧ್ರುವಂತ್, ಸಿಂಕ್‌ನಲ್ಲಿ ಟಿಶ್ಯೂ ಎಸೆಯುತ್ತಾರೆ. ಇದರಿಂದ ಕೋಪಗೊಂಡ ರಕ್ಷಿತಾ ಶೆಟ್ಟಿ, ಡಸ್ಟ್‌ಬಿನ್‌ನಲ್ಲಿ ಟಿಶ್ಯೂ ಪೇಪರ್ ಹಾಕಬೇಕು. ಇಲ್ಲಾವಾದ್ರೆ ಅಲ್ಲಿಡಿ ನಾನೇ ಡಸ್ಟ್‌ಬಿನ್‌ಗೆ ಹಾಕುವೆ. ಅದು ನನ್ನ ಕೆಲಸ ಎಂದು ಹೇಳುತ್ತಾರೆ.
ಕ್ಯಾಪ್ಟನ್ ರೂಮ್‌ನಲ್ಲಿ ಚರ್ಚೆ
ಚಿಕ್ಕ ವಿಷಯವನ್ನು ದೊಡ್ಡದಾಗಿ ಮಾಡ್ತಿದ್ದೀಯಾ ಎಂದು ಆರೋಪಿ ಧ್ರುವಂತ್ ಧ್ವನಿ ಏರಿಸುತ್ತಾರೆ. ಈ ವೇಳೆ ಅಲ್ಲಿಗೆ ಬಂದ ಕ್ಯಾಪ್ಟನ್ ಅಭಿಷೇಕ್ ಅವರಿಗೆ ನಡೆದ ಘಟನೆಯನ್ನು ವಿವರಿಸಲು ಮಾಳು ಮುಂದಾಗುತ್ತಾರೆ. ಅವಳ ಪರವಾಗಿ ಮಾತನಾಡಬೇಡಿ ಎಂದು ಮಾಳು ಅವರನ್ನು ತಡೆಯಲು ಧ್ರುವಂತ್ ಮುಂದಾಗುತ್ತಾರೆ. ಅತಿಥಿಗಳು ಮಲಗಿದ್ದರಿಂದ ಅಭಿಷೇಕ್ ಇಬ್ಬರನ್ನು ಕ್ಯಾಪ್ಟನ್ ರೂಮ್‌ಗೆ ಕರೆದುಕೊಂಡು ಹೋಗುತ್ತಾರೆ.
ಉರೀತಾ ಇದೆಯಾ?
ರಕ್ಷಿತಾ ಶೆಟ್ಟಿ ಅವರಿಗೆ ನಿನಗೆ ಉರೀತಾ ಇದೆಯಾ ಅಂತ ಪದ ಬಳಕೆ ಮಾಡಿದ್ದು ತಪ್ಪು ಎಂದು ಮಾಳು ಹೇಳುತ್ತಾರೆ. ಅಲ್ಲಿಗೆ ಬಂದ ರಕ್ಷಿತಾ ಶೆಟ್ಟಿ, ಅಲ್ಲಿದ್ದ ಎಲ್ಲಾ ಪಾತ್ರೆಗಳನ್ನು ತೊಳೆದ ನಂತರ ಟಿಶ್ಯೂ ಪೇಪರ್ ತುಂಬಿರೋ ಪಾತ್ರೆಗಳನ್ನು ಬೇಸಿನ್‌ಗೆ ಹಾಕ್ತಾರೆ. ಪ್ಲೇಟ್ ತಂದಿಡೋಡು ನಿಮ್ಮ ಕೆಲಸ. ಕ್ಲೀನ್ ಮಾಡುವ ಕೆಲಸ ನನ್ನದು. ನನ್ನ ಕೆಲಸವನ್ನು ನೀವು ಮಾಡೋದು ಬೇಡ ಎಂದು ರಕ್ಷಿತಾ ಶೆಟ್ಟಿ ಹೇಳುತ್ತಾರೆ.
ಇದನ್ನೂ ಓದಿ: ಹುಡುಗಿಯರ ಬ*ಲಿ ಕೊಡೋ ನಿಂಗೆ ಯೋಗ್ಯತೆ ಇದ್ಯಾ? Bigg Boss ಗಿಲ್ಲಿ ನಟನ ವಿರುದ್ಧ ಉಗ್ರಂ ಮಂಜು ಭಾವಿ ಪತ್ನಿ ಗರಂ
ಧ್ರುವಂತ್ ಕೋಪ
ರಕ್ಷಿತಾ ಮಾತುಗಳಿಂದ ಧ್ರುವಂತ್ ಕೋಪಗೊಳ್ಳುತ್ತಾರೆ. ರಕ್ಷಿತಾ ಅವರಂತೆ ಅನುಕರಣೆ ಮಾಡಲು ಧ್ರುವಂತ್ ಮುಂದಾಗುತ್ತಾರೆ. ಇತ್ತ ಸಿಂಕ್‌ನಲ್ಲಿ ಟಿಶ್ಯೂ ಪೇಪರ್ ಸಿಲುಕಿ ನೀರು ಬ್ಲಾಕ್ ಆಗುತ್ತಿದೆ. ಪಾತ್ರೆ ತೊಳೆಯುವ ನಮಗೆ ಸಮಸ್ಯೆ ಆಗುತ್ತದೆ ಎಂದು ಕ್ಯಾಪ್ಟನ್‌ಗೆ ಮಾಳು ದೂರು ನೀಡಿದ್ದಾರೆ. ಧ್ರುವಂತ್ ಮಾಡಿದ ಅನುಕರಣೆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ: BBK 12: ಚೈತ್ರಾ ಕುಂದಾಪುರ ಮಾತಿನಿಂದ ಬಯಲಾಯ್ತು ಅತಿಥಿಗಳ ರಹಸ್ಯ! ಇದೇನಾ ಐವರ ಸೀಕ್ರೆಟ್?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

