- Home
- Entertainment
- TV Talk
- Amruthadhaare Serial: ಕೊನೆಗೂ ಅಪ್ಪನ ಬಗ್ಗೆ ವಿಚಾರಿಸಿಯೇಬಿಟ್ಟ ಆಕಾಶ್: ಆಗಬಾರದ್ದು ಆಗೋಯ್ತು! ಭೂಮಿಕಾ ನಡೆ ಏನು?
Amruthadhaare Serial: ಕೊನೆಗೂ ಅಪ್ಪನ ಬಗ್ಗೆ ವಿಚಾರಿಸಿಯೇಬಿಟ್ಟ ಆಕಾಶ್: ಆಗಬಾರದ್ದು ಆಗೋಯ್ತು! ಭೂಮಿಕಾ ನಡೆ ಏನು?
ಅಮೃತಧಾರೆ ಧಾರಾವಾಹಿಯಲ್ಲಿ, ಅಪ್ಪನ ಕುರಿತ ಹಾಡು ನೋಡುತ್ತಿದ್ದ ಮಗ ಆಕಾಶ್, ಕೊನೆಗೂ ತನ್ನ ತಂದೆ ಯಾರೆಂದು ಭೂಮಿಕಾಳನ್ನು ಪ್ರಶ್ನಿಸಿದ್ದಾನೆ. ಮಗನ ಅನಿರೀಕ್ಷಿತ ಪ್ರಶ್ನೆಯಿಂದ ತಬ್ಬಿಬ್ಬಾದ ಭೂಮಿಕಾ ಮುಂದೇನು ಮಾಡಲಿದ್ದಾಳೆ ಎನ್ನುವ ಕುತೂಹಲ ಮೂಡಿದೆ.

ಗೌತಮ್ಗೆ ವಾರ್ನಿಂಗ್
ಅಮೃತಧಾರೆ (Amruthadhaare) ಸೀರಿಯಲ್ನಲ್ಲಿ ಭೂಮಿಕಾ ಇದಾಗಲೇ ಗೌತಮ್ಗೆ ವಾರ್ನಿಂಗ್ ಕೊಟ್ಟಿದ್ದಾಳೆ. ಆಕಾಶ್ನಿಂದ ದೂರವಿರಿ, ಇಲ್ಲದಿದ್ದರೆ ಅವನಿಗೆ ಅಪ್ಪ ಎನ್ನುವ ಸತ್ಯ ಗೊತ್ತಾದರೆ ಸಮಸ್ಯೆಯಾಗುತ್ತದೆ ಎಂದಿದ್ದಾಳೆ.
ಬಾಯಿ ಬಿಡದ ಆಕಾಶ್-ಮಿಂಚು
ಅಷ್ಟಕ್ಕೂ ಇದಾಗಲೇ ಆಕಾಶ್ಗೆ ತನ್ನ ಅಪ್ಪ ಗೌತಮ್ ಎನ್ನುವ ಸತ್ಯ ತಿಳಿದಿದೆ ಎನ್ನುವುದು ಭೂಮಿಕಾಗೆ ಗೊತ್ತಿಲ್ಲ. ಆಕಾಶ್ ಆಗಲೀ, ಮಿಂಚು ಆಗಲೀ ಈ ಬಗ್ಗೆ ಬಾಯಿ ಬಿಟ್ಟಿಲ್ಲ.
ಸತ್ಯ ಮುಚ್ಚಿಟ್ಟಿದ್ದ ಭೂಮಿಕಾ
ಈ ಸತ್ಯವನ್ನು ಅಮ್ಮನ ಬಾಯಿಯಲ್ಲಿಯೇ ಕೇಳಿ ತಿಳಿದುಕೊಳ್ಳುವ ಹಂಬಲ ಆಕಾಶ್ಗೆ. ಆದರೆ ಇದುವರೆಗೂ ಆ ಸತ್ಯವನ್ನು ಆತ ಕೇಳಿರಲಿಲ್ಲ. ಭೂಮಿಕಾ ಕೂಡ ಆ ಬಗ್ಗೆ ಮಾತನಾಡಲಿಲ್ಲ.
ಟಿವಿ ಆಫ್
ಆದರೆ, ಇದೀಗ ಆ ಸನ್ನಿವೇಶ ಕೂಡ ಬಂದೇ ಬಿಟ್ಟಿದೆ. ಅಪ್ಪನ ಕುರಿತಾದ ಹಾಡನ್ನು ಟಿವಿಯಲ್ಲಿ ಆಕಾಶ್ ನೋಡುತ್ತಿದ್ದಾಗ ಅದನ್ನು ಆಫ್ ಮಾಡಿದ ಭೂಮಿಕಾ, ಮಗನಿಗೆ ಬೈದಿದ್ದಾಳೆ. ಪದೇ ಪದೇ ಇಂಥ ಹಾಡು ಯಾಕೆ ನೋಡ್ತಿ ಎಂದು ಪ್ರಶ್ನಿಸಿದ್ದಾಳೆ.
ಅಪ್ಪ ಯಾರು?
ಅದಕ್ಕೆ ಮಲ್ಲಿ, ಹಾಡು ನೋಡಿದ್ರೆ ಏನಾಯ್ತು? ಅವನೇನು ಅಪ್ಪನ ಬಗ್ಗೆ ಕೇಳಲಿಲ್ವಲ್ಲಾ ಎಂದಿದ್ದಾಳೆ. ಇದೇ ಸರಿಯಾದ ಸಮಯ ಎಂದುಕೊಂಡ ಆಕಾಶ್, ತನ್ನ ಅಪ್ಪ ಯಾರು ಎನ್ನುವ ಪ್ರಶ್ನೆ ಮಾಡಿಯೇ ಬಿಟ್ಟಿದ್ದಾನೆ.
ತಬ್ಬಿಬ್ಬಾದ ಭೂಮಿಕಾ
ಇದುವರೆಗೂ ನೀನು ಅಪ್ಪನ ಬಗ್ಗೆ ಏನೂ ಹೇಳಲಿಲ್ಲವಲ್ಲ, ಅಪ್ಪ ಯಾರು ಎಂದು ಭೂಮಿಕಾಳ ಬಳಿ ಕೇಳಿದಾಗ ಭೂಮಿಕಾ ತಬ್ಬಿಬ್ಬಾಗಿ ಹೋಗಿದ್ದಾಳೆ.
ಮುಂದಿನ ನಡೆ ಏನು
ಅಲ್ಲಿಗೆ ಈಗ ಅವಳಿಗೆ ಇರುವ ಆಯ್ಕೆ ಒಂದೇ. ಅದು ಆ ಮನೆ ಚೇಂಜ್ ಮಾಡುವುದು. ಆದರೆ ಇದಾಗಲೇ ಸತ್ಯ ಅರಿತಿರೋ ಆಕಾಶ್ ಅಂತೂ ಅದಕ್ಕೆ ಒಪ್ಪಲ್ಲ ಎನ್ನುವುದು ಅಷ್ಟೇ ಸತ್ಯ. ಭೂಮಿಕಾ ಮುಂದಿನ ನಡೆ ಏನು?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

