- Home
- Entertainment
- TV Talk
- ಸದ್ದಿಲ್ಲದೇ ಎಂಗೇಜ್ಮೆಂಟ್ ಆದ ಗಿಚ್ಚಿ ಗಿಲಿಗಿಲಿ ಇನ್ನೊಂದು ಜೋಡಿ: ಮಾನಸಾ-ಶಿವು ಫೋಟೋಸ್ ಇಲ್ಲಿವೆ...
ಸದ್ದಿಲ್ಲದೇ ಎಂಗೇಜ್ಮೆಂಟ್ ಆದ ಗಿಚ್ಚಿ ಗಿಲಿಗಿಲಿ ಇನ್ನೊಂದು ಜೋಡಿ: ಮಾನಸಾ-ಶಿವು ಫೋಟೋಸ್ ಇಲ್ಲಿವೆ...
ಗಿಚ್ಚಿ ಗಿಲಿಗಿಲಿ ಹಾಗೂ ಮಜಾಭಾರತ ಖ್ಯಾತಿಯ ಹಾಸ್ಯ ಕಲಾವಿದರಾದ ಶಿವಕುಮಾರ್ ಮತ್ತು ಮಾನಸಾ ಗುರುಸ್ವಾಮಿ ಜೋಡಿ ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ರಿಯಾಲಿಟಿ ಷೋ ಜೋಡಿ
ಸಿನಿಮಾ ಮಾತ್ರವಲ್ಲದೇ ಸೀರಿಯಲ್, ರಿಯಾಲಿಟಿ ಷೋಗಳ ಜೋಡಿಗಳು ಮದುವೆಯಾಗುವುದು ಹೊಸ ವಿಷಯವೇನಲ್ಲ. ಇದಾಗಲೇ ಗಿಚ್ಚಿ ಗಿಲಿಗಿಲಿ ಷೋ, ಮಜಾಭಾರತ ರಿಯಾಲಿಟಿ ಷೋಗಳ ಜೋಡಿ ಜಗಪ್ಪ, ಸುಷ್ಮಿತಾ ಗೌಡ ಅವರ ಮದುವೆಯಾಗಿದೆ. ಸರಿಗಮಪ ಖ್ಯಾತಿಯ ಪೃಥ್ವಿ ಭಟ್, ಅಭಿಷೇಕ್... ಹೀಗೆ ಕೆಲವು ಜೋಡಿಗಳು ಮದುವೆಯಾಗಿದ್ದಿವೆ.
ಸದ್ದಿಲ್ಲದೇ ಎಂಗೇಜ್ಮೆಂಟ್
ಇದೀಗ ಗಿಚ್ಚಿಗಿಲಿಗಿಲಿ ಹಾಗೂ ಮಜಾಭಾರತ್ ಷೋನ ಇನ್ನೊಂದು ಜೋಡಿ ಸದ್ದಿಲ್ಲದೇ ಎಂಗೇಜ್ಮೆಂಟ್ ಆಗಿದೆ. ಅವರೇ ಹಾಸ್ಯ ಕಲಾವಿದ ಶಿವಕುಮಾರ್ ಮತ್ತು ಮಾನಸಾ ಗುರುಸ್ವಾಮಿ (Gicchi Giligili pair engagement) ಜೋಡಿ.
ಗಪ್ಚುಪ್ ಜೋಡಿ
ಇದಾಗಲೇ ಇವರಿಬ್ಬರೂ ಮದುವೆಯಾಗುತ್ತಾರೆ ಎನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದರೂ, ಇಬ್ಬರೂ ಗಪ್ಚುಪ್ ಇದ್ದರು. ಅದರ ಬಗ್ಗೆ ಏನೂ ಹೇಳಿರಲಿಲ್ಲ.
ಫೋಟೋ ವೈರಲ್
ಅವರ ಎಂಗೇಜ್ಮೆಂಟ್ ಎನ್ನಲಾದ ಫೋಟೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆದರೆ ಇದು ಹೇಳಿ-ಕೇಳಿ ಎಐ ಯುಗ. ಯಾವುದು ಸತ್ಯ, ಯಾವುದು ಸುಳ್ಳು ಎಂದು ತಿಳಿಯುವುದೇ ಕಷ್ಟ. ಆದ್ದರಿಂದ ಇದು ಕೂಡ ಕನ್ಫರ್ಮ್ ಇರಲಿಲ್ಲ. ಆದರೆ ಅದು ನಿಜವಾಗಿದೆ.
ಸೀರಿಯಲ್ನಲ್ಲಿ ನಟನೆ
ನೀ ಇರಲು ಜೊತೆಯಲಿ ಧಾರಾವಾಹಿಯಲ್ಲಿ ಮಾನಸಾ ಗುರುಸ್ವಾಮಿ ಅವರು ನಟಿಸುತ್ತಿದ್ದಾರೆ. ಈ ಹಿಂದೆ ಇವರು ಕೂಡ ಮಜಾಭಾರತ, ಗಿಚ್ಚಿ ಗಿಲಿಗಿಲಿ ಶೋನಲ್ಲಿ ಭಾಗವಹಿಸಿದ್ದರು. ಕಾಮಿಡಿ ಶೋನಲ್ಲಿಯೇ ಭಾಗವಹಿಸಿ ಹೆಸರು ಗಳಿಸಿದ್ದಾರೆ.
ಸೆಲೆಬ್ರಿಟಿಗಳ ಆಗಮನ
ಅಂದಹಾಗೆ ಇವರಿಬ್ಬರ ನಿಶ್ಚಿತಾರ್ಥ ಬೆಂಗಳೂರಿನ ರಾಜರಾಜೇಶ್ವರಿನಗರದಲ್ಲಿ ನಡೆದಿದೆ. ಕಾರ್ಯಕ್ರಮದಲ್ಲಿ ಹಲವಾರು ಸೆಲೆಬ್ರಿಟಿಗಳು ಆಗಮಿಸಿ ಆಶೀರ್ವದಿಸಿದ್ದಾರೆ. ನ್ಯೂಸ್ಬೀಟ್ ಕನ್ನಡ ಇವರ ಎಂಗೇಜ್ಮೆಂಟ್ ಫೋಟೋಗಳನ್ನು ಶೇರ್ ಮಾಡಿಕೊಂಡಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

