- Home
- Entertainment
- TV Talk
- ಇಡೀ ಸೀಸನ್‌ಗೆ ಕಿಚ್ಚನ ಚಪ್ಪಾಳೆ ಪಡೆದು BBK 12 ಶೋಗೆ ಗುಡ್‌ಬೈ ಹೇಳಿದ Dhruvanth; ವೀಕ್ಷಕರಿಗೆ ಅದೇ ಡೌಟ್!
ಇಡೀ ಸೀಸನ್‌ಗೆ ಕಿಚ್ಚನ ಚಪ್ಪಾಳೆ ಪಡೆದು BBK 12 ಶೋಗೆ ಗುಡ್‌ಬೈ ಹೇಳಿದ Dhruvanth; ವೀಕ್ಷಕರಿಗೆ ಅದೇ ಡೌಟ್!
Bigg Boss Kannada 12 Elimination: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಟಾಪ್ 6 ಸ್ಪರ್ಧಿಗಳ ಆಯ್ಕೆ ಆಗಬೇಕು. ಹೀಗಿರುವಾಗ ಮಿಡ್ ವೀಕ್ ಎಲಿಮಿನೇಶನ್ ಆಗಿದೆ. ಧ್ರುವಂತ್ ಮನೆಯಿಂದ ಹೊರಬಂದಿದ್ದಾರೆ. ಹಾಗಾದರೆ ಯಾರದು?

ಯಾರು ಔಟ್ ಆಗ್ತಾರೆ?
ಹೌದು, ಧನುಷ್ ಗೌಡ ಈಗಾಗಲೇ ಟಾಪ್ 6 ಸ್ಥಾನಕ್ಕೆ ಅವಕಾಶ ಪಡೆದಿದ್ದರು. ಅಶ್ವಿನಿ ಗೌಡ, ಧ್ರುವಂತ್, ಗಿಲ್ಲಿ ನಟ, ರಘು, ರಕ್ಷಿತಾ ಶೆಟ್ಟಿ, ಕಾವ್ಯ ಶೈವ ಅವರ ಮಧ್ಯೆ ಯಾರು ಔಟ್ ಆಗುತ್ತಾರೆ ಎಂಬ ಪ್ರಶ್ನೆ ಇತ್ತು.
ಕಿಚ್ಚನ ಚಪ್ಪಾಳೆಗೆ ವಿರೋಧ
ಅಂದಹಾಗೆ ಧ್ರುವಂತ್ ಅವರು ಎಲಿಮಿನೇಟ್ ಆಗಿದ್ದಾರೆ. ಧ್ರುವಂತ್ ಅವರು ಇಡೀ ಸೀಸನ್‌ನಲ್ಲಿ ಮನರಂಜನೆ ನೀಡಿದ ಸ್ಪರ್ಧಿ ಎಂದು ಹೇಳಿ ಕಿಚ್ಚ ಸುದೀಪ್ ಅವರು ಇಡೀ ಸೀಸನ್‌ಗೆ ಕಿಚ್ಚನ ಚಪ್ಪಾಳೆ ನೀಡಿದ್ದರು. ಈ ಬಗ್ಗೆ ವ್ಯಾಪಕ ವಿರೋಧ ಬಂದಿತ್ತು.
ಇಡೀ ಸೀಸನ್‌ಗೆ ಸಂಬಂಧಪಟ್ಟಂತೆ ಚಪ್ಪಾಳೆ
ಧ್ರುವಂತ್ ಅವರಿಗೆ ಇಡೀ ಸೀಸನ್‌ಗೆ ಸಂಬಂಧಪಟ್ಟಂತೆ ಚಪ್ಪಾಳೆ ಕೊಡ್ತಿದ್ದಾರೆ, ಗಿಲ್ಲಿ ನಟನಿಗೆ ಸಿಗಬೇಕಿತ್ತು ಎಂದು ಅನೇಕರು ಹೇಳಿದ್ದುಂಟು. ಅಂದಹಾಗೆ ಧ್ರುವಂತ್ ಅವರು ಭ್ರಮೆಯಲ್ಲಿ ಬದುಕುತ್ತಿದ್ದಾರೆ ಎಂದು ರಾಶಿಕಾ ಹೇಳಿದ್ದರು.
ಒನ್ ಮ್ಯಾನ್ ಆರ್ಮಿಯಾಗಿ ಆಡಿದ್ದೇನೆ
ಇನ್ನು ಧ್ರುವಂತ್ ಅವರು ದೊಡ್ಮನೆಯೊಳಗಡೆ ಅಭಿಮಾನಿಗಳ ಜೊತೆ ಮಾತನಾಡಿದ್ದು ಕೂಡ ಟ್ರೋಲ್ ಆಗಿತ್ತು. “ಒನ್ ಮ್ಯಾನ್ ಆರ್ಮಿಯಾಗಿ ಆಡಿದ್ದೇನೆ, ನೀವೆಲ್ಲ ನನ್ನ ಮೇಲೆ ನಂಬಿಕೆ ಇಟ್ಟು ಇಲ್ಲಿಗೆ ಕಳಿಸಿದ್ದೀರಿ, ನಾನು ಆಟ ಆಡಿ, ಎಲ್ಲರನ್ನು ಹೊರಗಡೆ ಕಳಿಸಿದ್ದೇನೆ” ಎಂದು ಹೇಳಿದ್ದರು.
ಕಾವ್ಯ ಔಟ್ ಆಗಬೇಕಿತ್ತು
ಧ್ರುವಂತ್ ಅವರು ಅತಿಯಾಗಿ, ಆತ್ಮವಿಶ್ವಾಸದಿಂದ ಮಾತನಾಡಿದ್ದಾರೆ ಎಂದು ಅನೇಕರು ಹೇಳಿದ್ದರು. ಕಿಚ್ಚನ ಚಪ್ಪಾಳೆ ಪಡೆದವರು ಯಾಕೆ ದೊಡ್ಮನೆಯಲ್ಲಿ ಇಲ್ಲ ಎಂಬ ಪ್ರಶ್ನೆ ಕೂಡ ಕೇಳಿ ಬಂದಿದೆ. ಇನ್ನೂ ಕೆಲವರು ಕಾವ್ಯ ಅವರಿಗಿಂತ ಧ್ರುವಂತ್ ಅವರು ಆ ಮನೆಯಲ್ಲಿ ಇರಲು ಅರ್ಹರು ಎಂದು ಕೂಡ ಕಲರ್ಸ್ ಕನ್ನಡ ಪೇಜ್‌ನಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

