- Home
- Entertainment
- TV Talk
- Bigg Boss ಮನೇಲಿ ಒನ್ ಮ್ಯಾನ್ ಶೋ; ಹೊರಗಡೆ Super Hit ಆದ ಗಿಲ್ಲಿ ನಟ! ಏನಿದು ಹೊಸ ಸ್ಟೋರಿ?
Bigg Boss ಮನೇಲಿ ಒನ್ ಮ್ಯಾನ್ ಶೋ; ಹೊರಗಡೆ Super Hit ಆದ ಗಿಲ್ಲಿ ನಟ! ಏನಿದು ಹೊಸ ಸ್ಟೋರಿ?
Super Hit Kannada Movie: ಬಿಗ್ ಬಾಸ್ ಮನೆಯಲ್ಲಿ ಒನ್ ಮ್ಯಾನ್ ಶೋ ಎನ್ನೋ ಥರ ಆಟ ಆಡುತ್ತಿರುವ ಗಿಲ್ಲಿ ನಟ ಅವರು ನಾಯಕನಾಗಿ ನಟಿಸಿರೋ `ಸೂಪರ್ ಹಿಟ್' ಟೀಸರ್ ಬಿಡುಗಡೆಯಾಗಿದೆ. ಗಿಲ್ಲಿ ನಟ ಅವರು ಬಿಗ್ ಬಾಸ್ ಮನೆಯಲ್ಲಿದ್ದು, ಈಗ ಅವರ ಸಿನಿಮಾ ರಿಲೀಸ್ ಆಗಿದೆ.

ಬಿಗ್ ಬಾಸ್ ಸ್ಪರ್ಧಿ
ಕಾಮಿಡಿ ಶೋಗಳ ಮೂಲಕ ಹಿಟ್ ಆಗಿ, ಗಿಲ್ಲಿ ನಟ ಅವರು ಇದೀಗ ಬಿಗ್ ಬಾಸ್ ಶೋನಲ್ಲಿಯೂ ಸ್ಪರ್ಧಿಯಾಗಿ ಮಿಂಚುತ್ತಿದ್ದಾರೆ. ಗಿಲ್ಲಿ ನಾಯಕನಾಗಿ ನಟಿಸಿರುವ ಸೂಪರ್ ಹಿಟ್ ಸಿನಿಮಾ ಈಗ ಬಿಡುಗಡೆಗೆ ತಯಾರಾಗಿ ನಿಂತಿದೆ. ವಿಜಯಾನಂದ್ ನಿರ್ದೇಶನದ ಸಿನಿಮಾವಿದು.
ಮತ್ತೊಂದು ಸಿನಿಮಾ
ಈಗ ಸಿನಿಮಾ ತಂಡವು ಸಿನಿಮಾದ ಬಗೆಗಿನ ಒಂದಷ್ಟು ಮಹತ್ವದ ವಿಚಾರಗಳನ್ನು ಹಂಚಿಕೊಂಡಿದೆ. ‘ಸು ಫ್ರಂ ಸೋ’ ಸಿನಿಮಾ ನಂತರದಲ್ಲಿ ಮತ್ತೊಂದು ಮಟ್ಟದ ಕಾಮಿಡಿಯ ಮೂಲಕ ಸಂಚಲನ ಸೃಷ್ಟಿಸುವ ಲಕ್ಷಣಗಳು ದಟ್ಟವಾಗಿ ಕಾಣಿಸುತ್ತಿವೆ.
ರನ್ನಿಂಗ್ ಸಕ್ಸಸ್‌ಫುಲಿ
ಸಿನಿಮಾವೊಂದು ಬಿಡುಗಡೆಯಾದ ನಂತರ ಸೂಪರ್ ಹಿಟ್ ಆಗಬಹುದು, ಆಗದೆ ಇರಬಹುದು. ಆದರೆ, ಈ ಸಿನಿಮಾದ ಶೀರ್ಷಿಕೆಯೇ ಸೂಪರ್ ಹಿಟ್. ರನ್ನಿಂಗ್ ಸಕ್ಸಸ್‌ಫುಲಿ ಎಂಬ ಟ್ಯಾಗ್ ಲೈನ್ ಕೂಡ ಈ ಸಿನಿಮಾಕ್ಕಿದೆ. ಹೀಗೆ ಶೀರ್ಷಿಕೆಯ ಮೂಲಕವೇ ಗಮನ ಸೆಳೆದಿದ್ದ ಈ ಸಿನಿಮಾದ ಟೈಟಟ್ ಹುಟ್ಟಿದ ಕಥೆಯನ್ನು ನಿರ್ದೇಶಕ ವಿಜಯಾನಂದ ಹೇಳಿದ್ದಾರೆ.
ಇದೇ ಟೈಟಲ್ ಯಾಕೆ?
ನಿರ್ಮಾಪಕ ಜಿ ಉಮೇಶ್ ಅವರು ಸೂಪರ್ ಹಿಟ್ ಸಿನಿಮಾವನ್ನು ನಿರ್ಮಾಣ ಮಾಡೋ ಕನಸು ಹೊಂದಿದ್ದಾರೆ. ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡಿದ್ದ ನಿರ್ದೇಶಕರು, ಕಥೆಗೂ ಹೊಂದಿಕೆ ಆಗೋದರಿಂದ ಅದನ್ನೇ ಶೀರ್ಷಿಕೆಯಾಗಿ ಇಟ್ಟಿರೋದಾಗಿ ಮಾಹಿತಿ ಹಂಚಿಕೊಂಡರು.
ಹಾಸ್ಯವೇ ಪ್ರಧಾನ
ಸು ಫ್ರಂ ಸೋ ಸಿನಿಮಾ ಥರ ಈ ಸಿನಿಮಾಕ್ಕೆ ಅಂಥದ್ದೇ ಬೆಂಬಲ ಸಿಗುವ ಆಶಯ, ಭರವಸೆ ಹೊಂದಿದ್ದಾರೆ. ಅಂದಹಾಗೆ, ಖ್ಯಾತ ಸಿನಿಮಾ ಸಾಹಿತಿ ನಾಗೇಂದ್ರ ಪ್ರಸಾದ್ ಅವರ ಸಹೋದರನಾಗಿರುವ ವಿಜಯಾನಂದ್ ಕಮರ್ಶಿಯಲ್ ಧಾಟಿಯಲ್ಲಿ, ಹಾಸ್ಯವನ್ನೇ ಪ್ರಧಾನವಾಗಿಟ್ಟುಕೊಂಡು ಈ ಸಿನಿಮಾವನ್ನು ರೂಪಿಸಿದ್ದಾರೆ. ಎಲ್ಲ ಕೆಲಸಗಳೂ ಮುಗಿದಿವೆ. ಒಂದೊಳ್ಳೆ ಸಮಯ ನೋಡಿ ಬಿಡುಗಡೆ ಮಾಡಲಿದ್ದೇವೆ ಎಂದಿದ್ದಾರೆ ವಿಜಯಾನಂದ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

