- Home
- Entertainment
- TV Talk
- Bhagyalakshmi Serial: ಆ ಪ್ರಶ್ನೆಯನ್ನು ಆದಿಗೆ ಕೇಳಿ ಬಿರುಗಾಳಿ ಎಬ್ಬಿಸಿದ ಕುಸುಮಾ! ಫ್ಯಾನ್ಸ್ ಬೇಸರ
Bhagyalakshmi Serial: ಆ ಪ್ರಶ್ನೆಯನ್ನು ಆದಿಗೆ ಕೇಳಿ ಬಿರುಗಾಳಿ ಎಬ್ಬಿಸಿದ ಕುಸುಮಾ! ಫ್ಯಾನ್ಸ್ ಬೇಸರ
ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ, ಭಾಗ್ಯಳ ಸರಳ ಜೀವನದಿಂದ ಪ್ರೇರಿತನಾದ ಆದಿ ತನ್ನೆಲ್ಲಾ ಆಸ್ತಿ ತ್ಯಜಿಸಿ ಹೊಸ ಬದುಕು ಆರಂಭಿಸಿದ್ದಾನೆ. ಈ ನಡುವೆ, ಅತ್ತೆ ಕುಸುಮಾ ಇವರಿಬ್ಬರ ಮದುವೆಯ ಪ್ರಸ್ತಾಪವನ್ನು ಆದಿಯ ಮುಂದಿಟ್ಟಿದ್ದು, ಇದು ಆತನಿಗೆ ಆಘಾತ ನೀಡಿದೆ ಮತ್ತು ವೀಕ್ಷಕರಲ್ಲಿಯೂ ಚರ್ಚೆ ಹುಟ್ಟುಹಾಕಿದೆ.

ರೋಲ್ ಮಾಡೆಲ್
ಭಾಗ್ಯಲಕ್ಷ್ಮಿ (Bhagyalakshmi) ಸೀರಿಯಲ್‌ನಲ್ಲಿ ಸದ್ಯ ಆದಿ ತನ್ನ ಹಿಂದಿನ ನೋವನ್ನೆಲ್ಲಾ ಮರೆತು ಮುಂದುವರೆಯಲು ಇಷ್ಟಪಡುತ್ತಿದ್ದಾನೆ. ಭಾಗ್ಯಳೇ ಆತನಿಗೆ ರೋಲ್ ಮಾಡೆಲ್. ಆಕೆಯಂತೆಯೇ ಬದುಕುವ ಪಣ ತೊಟ್ಟಿದ್ದಾನೆ ಆದಿ!
ಸಿಂಪಲ್ ಲೈಫ್
ಭಾಗ್ಯಳಲ್ಲಿ ತನ್ನ ಸತ್ತುಹೋಗಿರುವ ಅಮ್ಮನ ಪ್ರೀತಿ ಕಾಣುತ್ತಿದ್ದಾನೆ ಆದಿ. ಆಕೆಯಂತೆಯೇ ಸ್ವಾವಲಂಬನೆಯ ಬದುಕು ನಡೆಸುವ ಇಚ್ಛೆ ವ್ಯಕ್ತಪಡಿಸಿದ್ದಾನೆ. ಇದೇ ಕಾರಣಕ್ಕೆ ಇದೀಗ ಬಹುದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾನೆ.
ಆಸ್ತಿ ಬಿಟ್ಟು...
ತನ್ನ ಸಾವಿರಾರು ಕೋಟಿ ರೂಪಾಯಿಗಳ ಕಂಪೆನಿಯನ್ನು ತಂಗಿ ಕನ್ನಿಕಾಗೆ ಬಿಟ್ಟುಕೊಟ್ಟು ಜೀರೋದಿಂದ ಹೀರೋ ಆಗುತ್ತೇನೆ ಎಂದು ಹೊರಟು ಈಗ ಭಾಗ್ಯಳ ರೀತಿಯಲ್ಲಿಯೇ ಸೀದಾ ಸಾದಾ ಜೀವನ ನಡೆಸುತ್ತಿದ್ದಾನೆ.
ಭಾಗ್ಯ-ಆದಿಯ ಬಗ್ಗೆ ಕನಸು
ಮೊದಲಿನಿಂದಲೂ ಭಾಗ್ಯ ಮತ್ತು ಆದಿಯನ್ನು ಮದುವೆ ಮಾಡಿಸುವ ಯೋಚನೆ ಅತ್ತೆ ಕುಸುಮಾದ್ದು. ಇದಾಗಲೇ ಹಲವು ಬಾರಿ ಅವರಿಬ್ಬರೂ ಜೊತೆಯಾಗಿ ಡ್ಯುಯೆಟ್ ಹಾಡುವಂತೆ ಕನಸು ಕೂಡ ಕಂಡಿದ್ದಳು.
ಕುಸುಮಾ ಕನಸು
ತನ್ನ ಸೊಸೆಗೆ ಆದಿನೇ ಬೆಸ್ಟ್ ಸ್ನೇಹಿತ, ಗಂಡ ಎನ್ನುವುದು ಅವಳ ಅನಿಸಿಕೆ. ಇಷ್ಟು ದಿನ ಹೇಗೆ ಹೇಳಬೇಕೋ ಗೊತ್ತಾಗದೇ ತನ್ನ ಆಸೆಯನ್ನು ಮನಸ್ಸಿನಲ್ಲಿಯೇ ಇಟ್ಟುಕೊಂಡಿದ್ದಳು ಕುಸುಮಾ.
ಮನಸ್ಸಲ್ಲಿ ಬಿರುಗಾಳಿ
ಇದೀಗ ಅದನ್ನು ಕೇಳಿಯೇ ಬಿಟ್ಟಿದ್ದಾಳೆ. ನನ್ನ ಮಗಳಂತಿರುವ ಭಾಗ್ಯಳಿಗೆ ನೀನೇ ಸೂಕ್ತ ವ್ಯಕ್ತಿ. ನೀವಿಬ್ಬರೂ ಜೊತೆಯಾಗುತ್ತೀರಾ ಕೇಳಿದಾಗ ಆದಿಗೆ ಶಾಕ್ ಆಗಿದೆ. ಮನಸ್ಸಿನಲ್ಲಿ ಬಿರುಗಾಳಿ ಎದ್ದಿದೆ.
ಫ್ಯಾನ್ಸ್ ಬೇಸರ
ಭಾಗ್ಯ ಮತ್ತು ಆದಿ ಮದುವೆಯಾಗಬೇಕು ಎಂದು ಬಯಸುವವರು ಎಷ್ಟು ಮಂದಿ ವೀಕ್ಷಕರು ಇದ್ದಾರೋ, ಅಷ್ಟೇ ಮಂದಿ ಬೇಡ ಇವರಿಬ್ಬರೂ ಸ್ನೇಹಿತರಾಗಿದ್ದರೇ ಚೆನ್ನ ಎನ್ನುವವರೂ ಇದ್ದಾರೆ. ಪತಿ-ಪತ್ನಿಯಾದರೆ ಇಲ್ಲಸಲ್ಲದ ಕಷ್ಟ, ಜಗಳ, ವೈಮನಸ್ಸು ಬರುತ್ತದೆ. ಇವರಿಬ್ಬರೂ ಸ್ನೇಹಿತರಾಗಿಯೇ ಇರಬೇಕು. ಎಲ್ಲಾ ಸ್ನೇಹವೂ ಪ್ರೀತಿಯಲ್ಲ ಎನ್ನುವುದು ತೋರಿಸಬೇಕು ಎನ್ನುತ್ತಿದ್ದಾರೆ.
ಮಂದೇನು?
ಆದ್ದರಿಂದ ಭಾಗ್ಯ ಮತ್ತು ಆದಿ ಮದುವೆಯ ಪ್ರಸ್ತಾಪಕ್ಕೆ ಒಂದಷ್ಟು ಮಂದಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇವರಿಬ್ಬರನ್ನೂ ಸ್ನೇಹಿತರಾಗಿಯೇ ಇರಲು ಬಿಡಿ ಎನ್ನುತ್ತಿದ್ದಾರೆ. ಮುಂದೇನಾಗುತ್ತೋ ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

