- Home
- Entertainment
- TV Talk
- Gowri Kannada Serial: ಗೌರಿ ಧಾರಾವಾಹಿಯಲ್ಲಿ ಸಡನ್ ಟ್ವಿಸ್ಟ್... ಬೆಚ್ಚಿ ಬಿದ್ದ ವೀಕ್ಷಕರು… ಅಂತದೇನಾಯ್ತು?
Gowri Kannada Serial: ಗೌರಿ ಧಾರಾವಾಹಿಯಲ್ಲಿ ಸಡನ್ ಟ್ವಿಸ್ಟ್... ಬೆಚ್ಚಿ ಬಿದ್ದ ವೀಕ್ಷಕರು… ಅಂತದೇನಾಯ್ತು?
Gowri Serial: ಜೀ ಪವರ್ ನಲ್ಲಿ ಪ್ರಸಾರವಾಗುತ್ತಿರುವ ಗೌರಿ ಧಾರಾವಾಹಿಯಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಕ್ಕಿದೆ. ಅಮ್ಮನ ಮಾತನ್ನು ಮೀರದ ಅಭಿಮನ್ಯು ಇದೀಗ ಗೌತಮಿಗೆ ತಾಳಿ ಕಟ್ಟಿದ್ದಾನೆ. ಫಸ್ಟ್ ನೈಟ್ ವೇಳೆ ಗೌತಮಿಯ ನಿಜ ರೂಪ ಬಯಲಾಗಿದೆ. ಆ ಮೂಲಕ ಧಾರಾವಾಹಿಯಲ್ಲಿ ಅನಿರೀಕ್ಷಿತ ತಿರುವು ಸಿಕ್ಕಿದೆ.

ಗೌರಿ ಧಾರಾವಾಹಿ
ಜೀ ಪವರ್ ನಲ್ಲಿ ಪ್ರಸಾರವಾಗುತ್ತಿರುವ ಅಕ್ಕ ತಂಗಿಯರ ಕಥೆಯನ್ನು ಹೊಂದಿರುವ ಗೌರಿ ಧಾರಾವಾಹಿಯಲ್ಲಿ ಮಹಾ ತಿರುವು ಎದುರಾಗಿದೆ. ಇಲ್ಲಿವರೆಗೆ ಇದು ಗೌರಿ ಅಕ್ಕ ಗೌತಮಿ ಹಣದ, ಆಸೆಯ ವ್ಯಾಮೋಹದ ಕಥೆ ಎಂದು ತಿಳಿದುಕೊಂಡಿದ್ದವರು, ಇದೀಗ ಪ್ರೋಮೋ ನೋಡಿ ಶಾಕ್ ಆಗಿದ್ದಾರೆ. ಅಂತದ್ದೇನಿದೆ ಪ್ರೊಮೋದಲ್ಲಿ.
ಸೀರಿಯಲ್ ಕಥೆ ಏನು?
ಇಲ್ಲಿವರೆಗೆ ಗೌರಿ ಸೀರಿಯಲ್ ನಲ್ಲಿ ಏನಾಗ್ತಿತ್ತು ಅಂದ್ರೆ, ಅಕ್ಕನ ಆಸೆಗಳನ್ನು ಪೂರೈಸಲು ತಂಗಿ ಗೌರಿ, ಊರಿನ ಹಿರಿಯರ ಮನೆಯಲ್ಲಿ ಕೆಲಸದವಳಾಗಿ ಸೇರಿಕೊಂಡಿದ್ದಾಳೆ. ಅಕ್ಕ ಗೌತಮಿ ಏರ್ ಹೋಸ್ಟೆಸ್ ಆಗಿ ಮನೆಗೆ ಪಿಡಿಗಾಸು ಕೊಡದೆ ಬಿಂದಾಸ್ ಜೀವ ನಡೆಸುತ್ತಾಳೆ. ಜೊತೆಗೆ ಶ್ರೀಮಂತ ಅಭಿಮನ್ಯು ವರ್ಧನ್ ನ್ನು ಹಣದ ಆಸೆಗಾಗಿ ಪ್ರೀತಿಯ ಬಲೆಯಲ್ಲಿ ಬೀಳಿಸಿ, ಇದೀಗ ಮದುವೆ ಕೂಡ ಆಗಿದ್ದಾಳೆ.
ಹಾರರ್ ತಿರುವು ಪಡೆದುಕೊಂಡ ಸೀರಿಯಲ್
ಇಲ್ಲಿವರೆಗೆ ಅಕ್ಕ ತಂಗಿಯರ ಸಾಮಾನ್ಯ ಕಥೆ ನಡೆಯುತ್ತಿತ್ತು, ಆದರೆ ಇದೀಗ ಕಥೆಯಲ್ಲಿ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಇನ್ನೇನು ಗೌತಮಿ ಮತ್ತು ಅಭಿಮನ್ಯು ಫಸ್ಟ್ ನೈಟ್ ನಡೆಯುತ್ತೆ ಎನ್ನುವಾಗಲೇ, ಗೌತಮಿ ಯಾರೆಂಬ ಸತ್ಯ ರಿವೀಲ್ ಆಗಿದೆ. ಹೊಸ ಹಾರರ್ ಕಥೆಯೊಂದು ಶೀಘ್ರದಲ್ಲಿ ತೆರೆದುಕೊಳ್ಳಲಿದೆ.
ಗೌತಮಿ ದೆವ್ವ
ಗೌತಮಿಗಾಗಿ ಕಾಯುತ್ತಿದ್ದ ಅಭಿಮನ್ಯು, ಮೊದಲ ಬಾರಿಗೆ ಗೌತಮಿಯನ್ನು ಸೀರೆಯಲ್ಲಿ ನೋಡಿ ತುಂಬಾನೆ ಸುಂದರವಾಗಿ ಕಾಣಿಸುತ್ತಿರುವೆ ಎನ್ನುತ್ತಾನೆ. ಇದು ಕನಸೋ ನನಸೋ ಗೊತ್ತಾಗುತ್ತಿಲ್ಲ ಎನ್ನುತ್ತಾ, ಗೌತಮಿಯ ಕೈ ಹಿಡಿಯುವಾಗ, ಏನೋ ಬದಲಾವಣೆಯ ಅರಿವಾಗುತ್ತೆ, ಕೈ ನೋಡಬೇಕು ಅನ್ನುವಷ್ಟರಲ್ಲಿ ಕರೆಂಟ್ ಹೋಗುತ್ತೆ. ಇನ್ನೊಂದು ಕಡೆ ಗೌತಮಿಯ ಕರಾಳ ಮುಖದ ಅನಾವರಣವೂ ಆಗುತ್ತೆ.
ಸೇಡಿಯಲ್ಲಿ ಜ್ವಾಲೆಯಲ್ಲಿ ಗೌತಮಿ
ಅಭಿಮನ್ಯು ಕೋಣೆಯಿಂದ ಹೊರಹೋಗುತ್ತಿದ್ದಂತೆ, ದೆವ್ವದಂತೆ ಬದಲಾಗುವ ಗೌತಮಿ, ನಾನು ಮದುವೆಯಾಗಿ ಈ ಮನೆಗೆ ಬಂದಿರೋದು, ಈ ಮನೆಯಲ್ಲಿರೋದಕ್ಕೆ ಅಲ್ಲ, ಮನೆಯನ್ನು ನಾಶ ಮಾಡೋದಕ್ಕೆ ಎಂದಿದ್ದಾಳೆ. ಮನೆ ಮನೆಯಾಗಿ ಉಳಿದಿರೋದಿಲ್ಲ, ಸ್ಮಶಾನ ಆಗುತ್ತೆ ಎಂದು ಅಟ್ಟಹಾಸ ಬೀರುತ್ತಾಳೆ ಗೌತಮಿ. ಅಲ್ಲಿಗೆ ಈ ಧಾರಾವಾಹಿಯಲ್ಲಿ ಹೊಸದೊಂದು ಹಾರರ್ ಕಥೆ ತೆರೆದುಕೊಳ್ಳುತ್ತದೆ.
ಸಡನ್ ಟ್ವಿಸ್ಟ್ ನೋಡಿ ಬೆಚ್ಚಿ ಬಿದ್ದ ವೀಕ್ಷಕರು
ಇನ್ನು ಗೌರಿ ಸೀರಿಯಲ್ ನ ಪ್ರೊಮೋ ನೋಡಿ ವೀಕ್ಷಕರು ಬೆಚ್ಚಿ ಬಿದ್ದಿದ್ದಾರೆ. ಈ ಥರ ಒಂದು ಟ್ವಿಸ್ಟ್ ನಿರೀಕ್ಷೆಯೇ ಮಾಡಿರದ ವೀಕ್ಷಕರು, ಈ ಕಥೆಯಲ್ಲಿ ಅದು ಗೌತಮಿ, ದೆವ್ವ ಅನ್ನೋದು ನೋಡಿ ಥ್ರಿಲ್ ಆಗಿದ್ದಾರೆ. ಪ್ರೊಮೋ ಸೂಪರ್ ಆಗಿದೆ, ಇದೇ ರೀತಿ ಟ್ವಿಸ್ಟ್ ಮುಂದುವರೆಯಲಿ ಎಂದು ಹಾರೈಸಿದ್ದಾರೆ.
ಹಾರರ್ ಕಥೆ ಹೊಂದಿರುವ ಇತರ ಸೀರಿಯಲ್ ಗಳು
ಕನ್ನಡದಲ್ಲಿ ಸಡನ್ ಹಾರರ್ ಟ್ವಿಸ್ಟ್ ಕೊಟ್ಟು ಹಲವಾರು ಸೀರಿಯಲ್ ಗಳು ಬಂದಿವೆ, ‘ಅವನು ಮತ್ತು ಶ್ರಾವಣಿ’ ಧಾರಾವಾಹಿಯಲ್ಲೂ ಸಡನ್ ಆಗಿ ಹಾರರ್ ಕಥೆ ತೆರೆದುಕೊಂಡಿತ್ತು, ಇನ್ನು ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲೂ ಹಾರರ್ ಕಥೆ ಇತ್ತು. ಇದಲ್ಲದೇ ಈಗ ಪ್ರಸಾರವಾಗುತ್ತಿರುವ ನಾ ನಿನ್ನ ಬಿಡಲಾರೆ ಸೀರಿಯಲ್ ಸಹ ಹಾರರ್ ಕಥೆಯಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

