- Home
- Entertainment
- TV Talk
- Bigg Boss Kannada 12: ಬಿಗ್ ಬಾಸ್ ಮನೆಯಿಂದ ಏಕಾಏಕಿ ಹೊರಬಂದ್ರಾ ಮಲ್ಲಮ್ಮ? ಸತ್ಯ ಏನು?
Bigg Boss Kannada 12: ಬಿಗ್ ಬಾಸ್ ಮನೆಯಿಂದ ಏಕಾಏಕಿ ಹೊರಬಂದ್ರಾ ಮಲ್ಲಮ್ಮ? ಸತ್ಯ ಏನು?
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಕಳೆದ ವಾರ ಎಲಿಮಿನೇಶನ್ ಇರಲಿಲ್ಲ, ಈ ಬಾರಿ ಯಾರು ಮನೆಯಿಂದ ಹೊರಗಡೆ ಹೋಗ್ತಾರೆ ಎಂಬ ಪ್ರಶ್ನೆ ಇತ್ತು. ಆದರೆ ವೀಕೆಂಡ್‌ವೊಳಗಡೆ, ವೀಕ್ ಆರಂಭದಲ್ಲಿ ಒಂದು ಎಲಿಮಿನೇಶನ್ ಆಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಕೂಡ ಚರ್ಚೆ
ಹೌದು, ಮಲ್ಲಮ್ಮ ಅವರು ದೊಡ್ಮನೆಯಿಂದ ಹೊರಗಡೆ ಬಂದಿದ್ದಾರೆ ಎನ್ನಲಾಗಿದೆ. ಹೀಗೆಂದು ಊಹಾಪೋಹಗಳು ಶುರುವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಚರ್ಚೆ ನಡೆಯುತ್ತಿದೆ. ಹಾಗಾದರೆ ನಿಜಕ್ಕೂ ಇವರು ಹೊರಗಡೆ ಬಂದ್ರಾ?
ಮಲ್ಲಮ್ಮ ಹೊರಬಂದಿದ್ಯಾಕೆ?
ಮಲ್ಲಮ್ಮ ಅವರ ಕುಟುಂಬದಲ್ಲಿ ಒಬ್ಬರಿಗೆ ಮಗು ಜನಿಸಿದೆ. ಹೀಗಾಗಿ ಅವರು ಶೋನಿಂದ ಹೊರಗಡೆ ಬಂದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ವಾಹಿನಿಯಾಗಲೀ, ಮಲ್ಲಮ್ಮ ಕುಟುಂಬಸ್ಥರಾಗಲೀ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಆಟವನ್ನೇ ಶುರು ಮಾಡಿರಲಿಲ್ಲ
ಮಲ್ಲಮ್ಮ ಅವರು ಬಿಗ್ ಬಾಸ್ ಮನೆಯಲ್ಲಿ ಇನ್ನೂ ಆಟವನ್ನೇ ಶುರು ಮಾಡಿರಲಿಲ್ಲ. ಉಳಿದವರು ಕೂಡ ಮಲ್ಲಮ್ಮ ವಯಸ್ಸಾದವರು ಎಂದು ಯಾವುದೇ ಕೆಲಸವನ್ನು ಕೂಡ ಕೊಡುತ್ತಿರಲಿಲ್ಲ, ಏನೂ ಹೇಳುತ್ತಿರಲಿಲ್ಲ. ಅವರ ಆಟವನ್ನು ಆಡಲು ಬಿಡಿ ಎಂದು ಕಿಚ್ಚ ಸುದೀಪ್ ಹೇಳಿದ್ದರು.
ಮಲ್ಲಮ್ಮ ಎಲ್ಲಿಯವರು?
ಮಲ್ಲಮ್ಮ ಅವರು ಯಾದಗಿರಿಯವರು. ಬೆಂಗಳೂರಿನ ಬ್ಯೂಟಿಕ್‌ವೊಂದರಲ್ಲಿ ಟೇಲರಿಂಗ್ ಮಾಡುತ್ತಾರೆ. ಅಂದಹಾಗೆ ಇವರ ಮಕ್ಕಳು ಕೂಡ ಟೇಲರಿಂಗ್ ಮಾಡ್ತಾರೆ. ಮಲ್ಲಮ್ಮ ಅವರು ಮುಗ್ಧ ವಯಸ್ಸಿನವರು. ದೊಡ್ಮನೆಯ ನಿಯಮಗಳು, ತಂತ್ರಗಳು ಅವರಿಗೆ ಅರ್ಥ ಆಗೋದಿಲ್ಲ.
ಮಲ್ಲಮ್ಮ - ಧ್ರುವಂತ ಒಡನಾಟ
ಮಲ್ಲಮ್ಮ ಅವರು ಆಗಾಗ ಬಿಗ್ ಬಾಸ್ ಮನೆಯಲ್ಲಿ ಆಗಾಗ ಧ್ವನಿ ಎತ್ತಿ ಮಾತನಾಡಿದ್ದುಂಟು. ಅವರು ಯಾವಾಗಲೂ ಧ್ರುವಂತ್ ಜೊತೆಗೆ ಇರುತ್ತಾರೆ ಎಂದು ಆರೋಪವಿತ್ತು. ಧ್ರುವಂತ್ ಬಕೆಟ್ ಹಿಡಿಯುತ್ತಿದ್ದು, ಮಲ್ಲಮ್ಮ ಕೂಡ ಅವರನ್ನು ಮೆಚ್ಚಿಕೊಂಡಿದ್ದರು ಎಂದು ಸ್ಪರ್ಧಿಗಳು ಹೇಳಿದ್ದರು. ಈಗ ಮಲ್ಲಮ್ಮ ಹೊರಗಡೆ ಬಂದಿರೋದು ನಿಜವಾದರೆ ವೀಕ್ಷಕರಿಗೆ ಬೇಸರ ತಂದಿದೆ.