- Home
- Entertainment
- TV Talk
- ಗಿಲ್ಲಿ ಮೇಲೆ ರಿಷಾ ಗೌಡ ಹಲ್ಲೆ; ಬಿಗ್‌ಬಾಸ್‌ನಿಂದ ಬಂತು ಅಧಿಕೃತ ಸಂದೇಶ, ಕಾದಿದ್ಯಾ ಬಿಗ್ ಶಾಕ್?
ಗಿಲ್ಲಿ ಮೇಲೆ ರಿಷಾ ಗೌಡ ಹಲ್ಲೆ; ಬಿಗ್‌ಬಾಸ್‌ನಿಂದ ಬಂತು ಅಧಿಕೃತ ಸಂದೇಶ, ಕಾದಿದ್ಯಾ ಬಿಗ್ ಶಾಕ್?
Gill Nata Vs Risha Gowda: ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿ ನಟ ಮತ್ತು ರಿಷಾ ಗೌಡ ನಡುವಿನ ತಮಾಷೆ ಜಗಳ ವಿಕೋಪಕ್ಕೆ ತಿರುಗಿದ್ದು, ರಿಷಾ ಹಲ್ಲೆ ನಡೆಸಿದ್ದಾರೆ. ಈ ನಿಯಮ ಉಲ್ಲಂಘನೆಯ ಬಗ್ಗೆ ಬಿಗ್‌ಬಾಸ್ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದೆ.

ಗಿಲ್ಲಿ-ರಿಷಾ ಜಗಳ
ಸೋಮವಾರದ ಸಂಚಿಕೆಯಲ್ಲಿ ಗಿಲ್ಲಿ ನಟ ಅವರ ಮೇಲೆ ರಿಷಾ ಗೌಡ ಹಲ್ಲೆ ನಡೆಸುತ್ತಾರೆ. ಇಬ್ಬರ ನಡುವಿನ ತಮಾಷೆ ಜಗಳ ವಿಕೋಪಕ್ಕೆ ತಿರುಗಿತ್ತು. ಸ್ಪರ್ಧಿಗಳ ಪ್ರಕಾರ ಸುಮಾರು 45 ನಿಮಿಷ ಈ ವಿಷಯವನ್ನು ರಿಷಾ ಎಳೆದರು. ಸೋಮವಾರ ಬೆಳಗ್ಗೆ ಹಲ್ಲೆಯ ಪ್ರೋಮೋ ಬರುತ್ತಿದ್ದಂತೆ ರಿಷಾ ಅವರನ್ನು ಮನೆಯಿಂದ ಹೊರಗೆ ಕಳುಹಿಸಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದರು.
ಅಧಿಕೃತ ಹೇಳಿಕೆ
ರಿಷಾ ಗೌಡ ಮತ್ತು ಗಿಲ್ಲಿ ಜಗಳದಿಂದಾಗಿ ಸೋಮವಾರದ ಸಂಚಿಕೆ ತೀವ್ರ ಕುತೂಹಲ ಕೆರಳಿಸಿತ್ತು. ಸೋಮವಾರವೇ ರಿಷಾ ಮನೆಯಿಂದ ಹೊರಗೆ ಬರ್ತಾರೆ ಅಂದ್ಕೊಂಡವರ ಲೆಕ್ಕಾಚಾರ ಸುಳ್ಳಾಗಿತ್ತು. ಸಂಚಿಕೆಯ ಕೊನೆಯಲ್ಲಿ ಈ ಸಂಬಂಧ ಬಿಗ್‌ಬಾಸ್ ತಂಡದಿಂದ ಅಧಿಕೃತ ಹೇಳಿಕೆ ಬಂದಿದೆ. ಬಿಗ್‌ಬಾಸ್ ನೀಡಿದ ಹೇಳಿಕೆಯಲ್ಲಿ ಏನಿತ್ತು ಎಂದು ನೋಡೋಣ ಬನ್ನಿ.
ಬಿಗ್‌ಬಾಸ್ ಹೇಳಿದ್ದೇನು?
ಸ್ಪರ್ಧಿಗಳು ಮನೆಯ ಮೂಲ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ. ಈ ಕುರಿತು ವೀಕೆಂಡ್ ಸಂಚಿಕೆಯಲ್ಲಿ ಸುದೀಪ್ ಮಾತನಾಡಲಿದ್ದಾರೆ ಎಂಬ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಸೋಮವಾರದ ಸಂಚಿಕೆ ಕೊನೆಗೆ ಡಿಸ್‌ಪ್ಲೇ ಮೇಲೆ ಈ ಸಾಲುಗಳನ್ನು ಪ್ರಕಟಿಸಲಾಯ್ತು. ಶನಿವಾರದ ಸಂಚಿಕೆಯಲ್ಲಿ ಈ ಬಗ್ಗೆ ಚರ್ಚೆಯಾಗಲಿದೆ.
ಸ್ಪರ್ಧಿಗಳಿಂದ ಬೇಸರ
ರಿಷಾ ಕಿರುಚಾಟಕ್ಕೆ ಸಹ ಸ್ಪರ್ಧಿಗಳು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಗಿಲ್ಲಿ ಮೇಲೆ ಹಲ್ಲೆ ನಡೆಸಿ ತಾವೇ ಅಳುತ್ತಾ ಆ ವಿಷಯವನ್ನು ಸುಮಾರು 45 ನಿಮಿಷ ಡ್ರ್ಯಾಗ್ ಮಾಡಿದರು. ಆ ಸಮಸ್ಯೆ ಅಲ್ಲಿಯೇ ಬಗೆಹರಿದ್ರೂ ಅನಾವಶ್ಯಕವಾಗಿ ಎಳೆದರು ಎಂದು ರಘು ಹೇಳಿದರು. ಇದೇ ವಿಷಯವಾಗಿ ಸೂರಜ್ ಸಹ ರಿಷಾ ವರ್ತನೆ ಬಗ್ಗೆ ಬೇಸರ ಹೊರಹಾಕಿದರು.
ಇದನ್ನೂ ಓದಿ: ಗಂಡೈಕ್ಳ ಕಣ್ಣಲ್ಲಿ ನೀರು ತರಿಸಿದ ಬಿಗ್‌ಬಾಸ್ ನೀಡಿದ ಟಾಸ್ಕ್; ತಪ್ಪು ಒಪ್ಪಿನ ಲೆಕ್ಕ ಇದಲ್ಲಾ?
ಗಿಲ್ಲಿ ನಟ ತಿರುಗೇಟು
ಮುಖಕ್ಕೆ ಮಸಿ ಬಳೆಯುವ ಪ್ರಕ್ರಿಯೆಯಲ್ಲಿ ರಿಷಾ ಗೌಡ, ಕ್ಯಾಮೆರಾ ತನ್ನನ್ನು ಫೋಕಸ್ ಮಾಡಲಿ ಎಂಬ ಉದ್ದೇಶದಿಂದ ಹೀಗೆಲ್ಲಾ ಮಾಡ್ತಾರೆ ಎಂಬ ಅಭಿಪ್ರಾಯಗಳು ವ್ಯಕ್ತವಾದವು. ಇದೇ ವೇಳೆ ನಾನು ನಿನಗೆ ಹೊಡೆದಿದ್ರೆ ನೀವು ಸುಮ್ಮನೇ ಇರ್ತಿದ್ದೀರಾ ಎಂದು ಗಿಲ್ಲಿ ನಟ ಪ್ರಶ್ನೆ ಮಾಡಿದರು. ಇದೇ ಕಾರಣಕ್ಕೆ ರಿಷಾ ಗೌಡ ಮನೆಯಿಂದ ಹೊರ ಹೋಗ್ತಾರಾ? ಸುದೀಪ್ ಈ ವಿಷಯವನ್ನು ಹೇಗೆ ಚರ್ಚಿಸಬಹುದು ಎಂಬುದರ ಬಗ್ಗೆ ಕುತೂಹಲ ಮನೆ ಮಾಡಿದೆ.
ಇದನ್ನೂ ಓದಿ: ಗಿಲ್ಲಿ ನಟ, ಧನುಷ್ ಸತ್ಯ ದರ್ಶನ ಮಾಡಿಸಿದ್ರೂ ಒಪ್ಪಿಕೊಳ್ತಿಲ್ಯಾಕೆ ಅಶ್ವಿನಿ ಗೌಡ? ರಕ್ಷಿತಾ ಚಪ್ಪಲಿ ತೋರಿಸಿದ್ದು ನಿಜವೇ?