- Home
- Entertainment
- TV Talk
- ಸರಿ-ತಪ್ಪು ಏನೇ ಇರಲೀ, ಅಶ್ವಿನಿ ಗೌಡ ವಿಚಾರದಲ್ಲಿ ಮಾನವೀಯತೆ ಮೆರೆದ Bigg Boss Kannada 12!
ಸರಿ-ತಪ್ಪು ಏನೇ ಇರಲೀ, ಅಶ್ವಿನಿ ಗೌಡ ವಿಚಾರದಲ್ಲಿ ಮಾನವೀಯತೆ ಮೆರೆದ Bigg Boss Kannada 12!
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ರಘು ಅವರು ಅಶ್ವಿನಿ ಎಂದು ಕರೆದರು, ಏನು ಕಿತ್ತಾಕಿದ್ದೀರಾ ಅಂತ ಹೇಳಿದರು ಎಂದು ಬೇಸರ ಮಾಡಿಕೊಂಡ ಅಶ್ವಿನಿ ಗೌಡ ಅವರು ಎರಡು ದಿನಗಳ ಕಾಲ ಊಟ ಬಿಟ್ಟಿದ್ದರು. ಇವರ ವಿಚಾರದಲ್ಲಿ ಬಿಗ್ ಬಾಸ್ ಮಾನವೀಯತೆ ತೋರಿಸಿದೆ.

ಕನ್ಫೆಶನ್ ರೂಮ್‌ನಲ್ಲಿ ಏನಾಯ್ತು?
ಕನ್ಫೆಶನ್ ರೂಮ್‌ಗೆ ಹೋಗಿರುವ ಅಶ್ವಿನಿ ಗೌಡ ಅವರಿಗೆ ಬಿಗ್ ಬಾಸ್ ಏನಾಯ್ತು ಎಂದು ಪ್ರಶ್ನೆ ಮಾಡಿದ್ದಾರೆ. ಆಗ ಅಶ್ವಿನಿ ಮಾತನಾಡಿದ್ದಾರೆ.
“ಬಿಗ್ ಬಾಸ್ ಮನೆಯಲ್ಲಿ ಡಿಸ್‌ಕಂಫರ್ಟೇಬಲ್ ವಾತಾವರಣ ಇದೆ. ಪ್ರಚೋದನೆ ಮಾಡೋದು, ತೇಜೋವಥೆ ಮಾಡುತ್ತಾನೆ. ಬಂದಿದ ದಿನದಿಂದ ಇಲ್ಲಿಯವರೆಗೆ ಹಲವಾರು ಹೆಸರುಗಳನ್ನು ಇಟ್ಟಿದ್ದಾನೆ, ಎಲ್ಲ ವಿಷಯದಲ್ಲಿಯೂ ಮಾತನಾಡುತ್ತಾನೆ. ಇದು ಚೆನ್ನಾಗಿಲ್ಲ” ಎಂದು ಅಶ್ವಿನಿ ಗೌಡ ಹೇಳಿದ್ದಾರೆ.
ಅಶ್ವಿನಿ ಗೌಡ ಏನಂದ್ರು?
ಅಶ್ವಿನಿ ಗೌಡ ಮಾತನಾಡಿ, “ನನಗೆ ಬೆನ್ನು ನೋವಿದೆ, ಬೇರೆ ಕೆಲಸ ಕೊಡಿ ಎಂದು ಮನವಿ ಮಾಡಿಕೊಂಡಿರ್ತೀನಿ. ಜಾಹ್ನವಿ ಬಳಿ ನಾನು ಬೆನ್ನು ತುಳಿಸಿಕೊಂಡೆ. ಇದನ್ನು ಎಲ್ಲರೂ ನೋಡಿರ್ತಾರೆ ಎಂದುಕೊಳ್ತೀನಿ. ಯಾರ ಬಳಿಯೂ ಬೆರಳು ತೋರಿಸಿ ಮಾತನಾಡಿಸಿಕೊಳ್ಳಬಾರದು ಎಂದುಕೊಂಡೆ. ನಮ್ಮ ವಯಸ್ಸಿಗೆ, ನಮ್ಮ ಅನುಭವ ಏನು ಇದೆಯೋ ಅದಕ್ಕೆ ತಕ್ಕಂತೆ ನಡೆದುಕೊಳ್ಳುತ್ತೇವೆ” ಎಂದಿದ್ದಾರೆ.
ರಘು, ಗಿಲ್ಲಿ ನಟನ ಬಗ್ಗೆ ದೂರು
“ರಘು ಅವರು ಈ ಮನೆಗೆ ಬಂದ ಮೊದಲ ದಿನದಿಂದ ಟಾರ್ಗೆಟ್ ಮಾಡುತ್ತಿದ್ದಾರೆ. ಏಕವಚನದಲ್ಲಿ ಮಾತನಾಡುತ್ತಾರೆ, ಅವತ್ತು ಕೂಡ ನಾನು ಅವರಿಗೆ ಮಾತಾಡಬೇಡಿ ಎಂದು ಹೇಳಿದ್ದೇನೆ. ಕಪ್ ವಿಷಯದಿಂದ ಹಿಡಿದು, ಗಿಲ್ಲಿ ನಟನ ಪರವಾಗಿ ಮಾತನಾಡೋದನ್ನು ನೋಡಿದ್ದೇನೆ. ಗಿಲ್ಲಿ ನಟನ ಉದ್ಧಟತನ ಹೆಚ್ಚಾಯ್ತು” ಎಂದು ಅಶ್ವಿನಿ ಗೌಡ ಹೇಳಿದ್ದಾರೆ.
ಬಿಗ್ ಬಾಸ್ ನೀಡಿದ ಸಲಹೆ ಏನು?
ಬಿಗ್ ಬಾಸ್ ಒಂದು ಸ್ಪರ್ಧೆ. ಸ್ಪರ್ಧೆಯಲ್ಲಿ ಸೋಲು, ಗೆಲುವು ಇರುತ್ತದೆ. ಜೀವನದಲ್ಲಿ ಇಂಥ ಏರುಪೇರುಗಳು ಸರ್ವೇ ಸಾಮಾನ್ಯ. ಈ ಕಾರಣಕ್ಕೆ ಊಟ ಬಿಟ್ಟು ಉಪವಾಸ ಇರೋದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಆಟದಲ್ಲಿ ಸ್ಪೋರ್ಟಿವ್ ಗುಣ ಇರಲಿ. ಚೆನ್ನಾಗಿ ಆಡುತ್ತಿದ್ದೀರಿ, ಇನ್ನಷ್ಟು ಉತ್ಸಾಹದಿಂದ ಆಡಿ ಎಂದು ಅಶ್ವಿನಿ ಗೌಡ ಅವರಿಗೆ ಬಿಗ್ ಬಾಸ್ ಸಲಹೆ ನೀಡಿದ್ದಾರೆ. ಒಂದು ಸ್ಪರ್ಧೆ. ಸ್ಪರ್ಧೆಯಲ್ಲಿ ಸೋಲು, ಗೆಲುವು ಇರುತ್ತದೆ. ಜೀವನದಲ್ಲಿ ಇಂಥ ಏರುಪೇರುಗಳು ಸರ್ವೇ ಸಾಮಾನ್ಯ. ಈ ಕಾರಣಕ್ಕೆ ಊಟ ಬಿಟ್ಟು ಉಪವಾಸ ಇರೋದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಆಟದಲ್ಲಿ ಸ್ಪೋರ್ಟಿವ್ ಗುಣ ಇರಲಿ. ಚೆನ್ನಾಗಿ ಆಡುತ್ತಿದ್ದೀರಿ, ಇನ್ನಷ್ಟು ಉತ್ಸಾಹದಿಂದ ಆಡಿ ಎಂದು ಅಶ್ವಿನಿ ಗೌಡ ಅವರಿಗೆ ಬಿಗ್ ಬಾಸ್ ಸಲಹೆ ನೀಡಿದ್ದಾರೆ.
ಮಾನವೀಯತೆ ಮೆರೆದರು
ಅಶ್ವಿನಿ ವಿಚಾರದಲ್ಲಿ ಬಿಗ್ ಬಾಸ್ ಮಾನವೀಯತೆ ತೋರಿಸಿದೆ. ಯಾರದ್ದೇ ತಪ್ಪಿರಲಿ, ಸರಿಯಿರಲೀ, ಹಠ ಮಾಡಿರಲಿ ಆರೋಗ್ಯದ ವಿಚಾರ ಎಂದು ಅವರು ಕನ್ಫೆಶನ್ ರೂಮ್‌ಗೆ ಅಶ್ವಿನಿಯನ್ನು ಕರೆಸಿಕೊಂಡಿದ್ದರು. ಅಷ್ಟೇ ಅಲ್ಲದೆ ಅಶ್ವಿನಿ ಬೇಸರಕ್ಕೆ ಕಾರಣ ತಿಳಿದುಕೊಂಡು ಹಾಲು ಕುಡಿಯಲು ಕೊಟ್ಟಿದ್ದರು.
ಸ್ಪರ್ಧಿಗಳ ಆರೋಗ್ಯದ ಬಗ್ಗೆ ಸದಾ ಕಾಳಜಿ
ಅಶ್ವಿನಿ ಹಾಲು ಕುಡಿದ ಬಳಿಕವೇ ಅವರು ಅಶ್ವಿನಿ ಮಾತು ಕೇಳಿಸಿಕೊಂಡರು. ಆಮೇಲೆ ಜ್ಯೂಸ್, ಒಆರ್‌ಎಸ್ ಕೂಡ ನೀಡಿದ್ದರು. ಆಟ ಏನೇ ಇರಲಿ, ಸ್ಪರ್ಧಿಗಳ ಆರೋಗ್ಯದ ಬಗ್ಗೆ ಸದಾ ಕಾಳಜಿ ಮಾಡಿರೋದು ಮತ್ತೊಮ್ಮೆ ಸಾಬೀತಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

