- Home
- Entertainment
- TV Talk
- ನಲ್ಲಿಮೂಳೆ ತಿಂದ ಗಿಲ್ಲಿ ನಟ ಆರೋಗ್ಯದಲ್ಲಿ ಏರುಪೇರು; ನನ್ನ ಕೈಯಲ್ಲಿ ಆಗ್ತಾಯಿಲ್ಲ ಅಂತ ಗೋಳಾಟ
ನಲ್ಲಿಮೂಳೆ ತಿಂದ ಗಿಲ್ಲಿ ನಟ ಆರೋಗ್ಯದಲ್ಲಿ ಏರುಪೇರು; ನನ್ನ ಕೈಯಲ್ಲಿ ಆಗ್ತಾಯಿಲ್ಲ ಅಂತ ಗೋಳಾಟ
ಬಿಗ್‌ಬಾಸ್ ಫಿನಾಲೆ ಅಭ್ಯರ್ಥಿ ಗಿಲ್ಲಿ ನಟ, ತಮ್ಮ ಆಸೆಯಂತೆ ದೊಡ್ಡ ತಟ್ಟೆ ತುಂಬಾ ನಲ್ಲಿಮೂಳೆ ತಿಂದ ನಂತರ ಆರೋಗ್ಯದಲ್ಲಿ ಏರುಪೇರು ಅನುಭವಿಸಿದ್ದಾರೆ. ಅತಿಯಾಗಿ ಮಸಾಲೆಯುಕ್ತ ಆಹಾರ ಸೇವಿಸಿದ್ದರಿಂದ ಹೊಟ್ಟೆನೋವು ಕಾಣಿಸಿಕೊಂಡಿದ್ದು, ಸಹ ಸ್ಪರ್ಧಿಗಳು ಈ ಬಗ್ಗೆ ಚರ್ಚಿಸಿದ್ದಾರೆ.

ದೊಡ್ಡತಟ್ಟೆ ತುಂಬಾ ನಲ್ಲಿಮೂಳೆ
ತಮ್ಮ ಆಸೆಯಂತೆಯೇ ದೊಡ್ಡತಟ್ಟೆ ತುಂಬಾ ನಲ್ಲಿಮೂಳೆ ತಿಂದಿದ್ದ ಬಿಗ್‌ಬಾಸ್ ಫಿನಾಲೆ ಅಭ್ಯರ್ಥಿ ಗಿಲ್ಲಿ ನಟ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಫಿನಾಲೆ ಅಭ್ಯರ್ಥಿಗಳಿಗೆ ಮೂರು ಆಸೆಗಳನ್ನು ಹೇಳಿಕೊಳ್ಳುವಂತೆ ಬಿಗ್‌ಬಾಸ್ ಸೂಚಿಸಿದ್ದರು. ಮೂರರಲ್ಲಿ ಒಂದನ್ನು ಈಡೇರಿಸುವ ಭರವಸೆಯನ್ನು ಬಿಗ್‌ಬಾಸ್ ನೀಡಿದ್ದರು
ಕುಟ್ಟಿ ಕುಟ್ಟಿ ತಿನ್ನಬೇಕು
ಅದೇ ರೀತಿ ಗಿಲ್ಲಿ ನಟ ಅವರ ಮೂರು ಆಸೆಗಳ ಪೈಕಿ ನಲ್ಲಿಮೂಳೆಯ ಆಸೆಯನ್ನು ಬಿಗ್‌ಬಾಸ್ ನೆರವೇರಿಸಿದ್ದರು. ಹೊಟ್ಟೆ ತುಂಬಾ ನಲ್ಲಿಮೂಳೆಯನ್ನು ಕುಟ್ಟಿ ಕುಟ್ಟಿ ತಿನ್ನಬೇಕು ಮತ್ತು ಕಣ್ತುಂಬ ನಿದ್ದೆ ಮಾಡಬೇಕು ಎಂದು ಗಿಲ್ಲಿ ಕೇಳಿಕೊಂಡಿದ್ದರು. ನಂತರ ನಲ್ಲಿಮೂಳೆ ತಿಂದು ಗಡದ್ ಆಗಿ ಗಿಲ್ಲಿ ನಟ ನಿದ್ದೆ ಮಾಡಿದ್ದರು. ಇದಾದ ಬಳಿಕ ಗಿಲ್ಲಿ ನಟ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ.
ನನ್ನ ಕೈಯಲ್ಲಿ ಆಗ್ತಾಯಿಲ್ಲಾ ಅಣ್ಣಾ?
ಒಂದೇ ವೇಳೆಗೆ ಅಷ್ಟೊಂದು ನಲ್ಲಿಮೂಳೆ ತಿಂದ ಪರಿಣಾಮ ಗಿಲ್ಲಿ ಹೊಟ್ಟೆಯಲ್ಲಿ ತಳಮಳ ಶುರುವಾಗಿತ್ತು. ರಘು ಮುಂದೆ, ನನ್ನ ಕೈಯಲ್ಲಿ ಆಗ್ತಾಯಿಲ್ಲಾ ಅಣ್ಣಾ. ಹೊಟ್ಟೆಯೊಳಗೆ ಗುಡುಗುಡು ಆಗ್ತಿದೆ ಎಂದು ತಮ್ಮ ನೋವನ್ನು ಗಿಲ್ಲಿ ನಟ ಹೇಳಿಕೊಂಡಿದ್ದಾರೆ. ಅಷ್ಟು ಮಸಾಲೆಯುಕ್ತ ನಲ್ಲಿಮೂಳೆ ತಿಂದಿದ್ದರಿಂದ ಜೀರ್ಣಕ್ರಿಯೆಗೆ ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ರಘು ಸಲಹೆ ನೀಡಿದ್ದಾರೆ.
ಮಾತ್ರೆ ಕಳುಹಿಸುವಂತೆ ರಘು ಮನವಿ
ಮೊದಲಿಗೆ ಒಂದೆರಡು ಪೀಸ್ ತಿಂದು, ಎತ್ತಿಟ್ಟುಕೊಂಡು ನಂತರ ತಿಂದಿದ್ರೆ ಹೀಗೆಲ್ಲಾ ಆಗ್ತಾ ಇರಲಿಲ್ಲ. ಬಿಗ್‌ಬಾಸ್ ಗಿಲ್ಲಿಗೆ ಮಾತ್ರೆ ಕಳುಹಿಸಿ ಎಂದು ರಘು ಮನವಿ ಮಾಡಿಕೊಳ್ಳುತ್ತಾರೆ. ನಂತರ ಹೌದು, ಹಾಗೆ ತಿನ್ನಬಾರದಿತ್ತು ಎಂದು ಗಿಲ್ಲಿ ನಟ ಸಹ ಹೇಳುತ್ತಾರೆ.
ತಮಾಷೆಯಾದ್ರೆ ಹೀಗೆಯೇ ಲೂಸ್ ಮೋಷನ್
ಗಿಲ್ಲಿಯ ಗೋಳಾಟ ನೋಡಿದ ಧ್ರುವಂತ್ ಆ ಆಹಾರವನ್ನು ಹೇಗೆ ಸಂಭ್ರಮಿಸುತ್ತಾ ಸೇವಿಸಬಹುದಿತ್ತು ಎಂಬುದನ್ನು ವಿಶ್ಲೇಷಣೆ ಮಾಡುತ್ತಾರೆ. ಎಲ್ಲಾ ವಿಷಯದಲ್ಲಿಯೂ ತಮಾಷೆಯಾದ್ರೆ ಹೀಗೆಯೇ ಲೂಸ್ ಮೋಷನ್ ಆಗೋದು ಎಂದು ಧ್ರುವಂತ್ ಹೇಳುತ್ತಾರೆ. ಧ್ರುವಂತ್ ಮಾತಿಗೆ ಅಶ್ವಿನಿ ಗೌಡ ಹೌದು ಎಂದು ತಲೆಯಾಡಿಸುತ್ತಾರೆ.
ಇದನ್ನೂ ಓದಿ: BBK 12: ಫಿನಾಲೆ ಹೊತ್ತಲ್ಲೇ ಸುದೀಪ್ ಮನೆಗೆ ನಾರಾಯಣ ಗೌಡ ಹೋಗಿದ್ಯಾಕೆ? ಬಿಸಿ ಬಿಸಿ ಚರ್ಚೆ
ಗೇಟ್ ಓಪನ್ ಆಗಿದೆ
ಬಂದಿರೋದು ಊಟ. ಬಿಗ್‌ಬಾಸ್‌ಗೆ ಥ್ಯಾಂಕ್ಸ್ ಹೇಳಿ, ಊಟಕ್ಕೊಂದು ಕೈ ಮುಗಿದು. ಮನೆಯಲ್ಲಿ ನಾನ್ ವೆಜ್ ತಿನ್ನೋರಿಗೆ ರುಚಿ ನೋಡಲು ಒಂದೊಂದು ಪೀಸ್ ಕೊಟ್ಟು ಆಹಾರವನ್ನು ಆನಂದದಿಂದ ಅನುಭವಿಸಬಹುದಿತ್ತು. ಅದನ್ನು ಬಿಟ್ಟು ಸ್ವಿಮ್ಮಿಂಗ್ ಪೂಲ್ ಹತ್ರ ಹೋಗಿ ಕುಳಿತು ಎಲ್ಲರ ಮುಂದೆ ಹಾಗೆ ತಿಂದಿದ್ದರಿಂದ ಈಗ ಗೇಟ್ ಓಪನ್ ಆಗಿದೆ ಎಂದು ಹೇಳುತ್ತಾರೆ.
ಇದನ್ನೂ ಓದಿ: ತಾಳಿ ಕಟ್ಟಲು ಒಪ್ಪದ ತೇಜಸ್; ಇತ್ತ ನಿತ್ಯಾ ಮಾತುಗಳನ್ನು ಕೇಳಿ ದಿಗಿಲುಬಿದ್ದ ಕರ್ಣ-ನಿಧಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

