- Home
- Entertainment
- TV Talk
- BBK 12: ಫಿನಾಲೆ ವಾರದಲ್ಲಿ ಗಿಲ್ಲಿಯ ಅಚ್ಚರಿ ನಡೆ; ಕಾವ್ಯಾಳನ್ನು ಬಿಟ್ಟುಕೊಟ್ಟು ಭಾವುಕನಾಗಿ ಮಾತಾಡಿದ ನಟ
BBK 12: ಫಿನಾಲೆ ವಾರದಲ್ಲಿ ಗಿಲ್ಲಿಯ ಅಚ್ಚರಿ ನಡೆ; ಕಾವ್ಯಾಳನ್ನು ಬಿಟ್ಟುಕೊಟ್ಟು ಭಾವುಕನಾಗಿ ಮಾತಾಡಿದ ನಟ
ಬಿಗ್‌ಬಾಸ್ ಕನ್ನಡ ಸೀಸನ್ 12ರ ಫಿನಾಲೆ ವಾರದಲ್ಲಿ, ಗಿಲ್ಲಿ ನಟ ಅಚ್ಚರಿಯ ಹೇಳಿಕೆ ನೀಡಿದ್ದಾರೆ. 'ಪವಿತ್ರ ಬಂಧನ' ತಂಡದ ಪ್ರಶ್ನೆಗೆ, ಕಾವ್ಯಾ ಬದಲು ತಾಯಿಯಂತೆ ಆರೈಕೆ ಮಾಡುವ ರಕ್ಷಿತಾ ಜೊತೆ ತನಗೆ ಪವಿತ್ರ ಬಂಧನವಿದೆ ಎಂದು ಗಿಲ್ಲಿ ಭಾವುಕರಾಗಿ ಹೇಳಿಕೊಂಡಿದ್ದಾರೆ.

ಗಿಲ್ಲಿ ನಟ-ಕಾವ್ಯಾ ಸ್ನೇಹ
ಈ ಬಾರಿಯ ಬಿಗ್‌ಬಾಸ್ ಕನ್ನಡ ಸೀಸನ್ 12ರ ಫಿನಾಲೆಗೆ ಬೆರಳಣಿಕೆಯ ದಿನಗಳು ಉಳಿದಿವೆ. ಇಷ್ಟು ದಿನ ಕಾವ್ಯಾ ಸುತ್ತವೇ ಗಿರಕಿ ಹೊಡೆಯುತ್ತಿದ್ದ ಗಿಲ್ಲಿ ನಟ ಫಿನಾಲೆ ವಾರದಲ್ಲಿ ಬದಲಾದಂತೆ ಕಂಡು ಬರುತ್ತಿದೆ. ವೀಕೆಂಡ್ ಸಂಚಿಕೆಯಲ್ಲಿ ಗಿಲ್ಲಿಯೇ ತನ್ನ ಸುತ್ತ ಸರ್ಕಲ್ ಎಳೆದಿದ್ದಾರೆ ಎಂದು ಕಾವ್ಯಾ ಹೇಳಿದ್ದರು.
ಪವಿತ್ರ ಬಂಧನ ಸೀರಿಯಲ್ ಕಲಾವಿದರು
ಸೋಮವಾರ ಪ್ರಸಾರವಾದ ಸಂಚಿಕೆಯಲ್ಲಿ ಗಿಲ್ಲಿ ನಟ ಹೇಳಿದ ಮಾತನ್ನು ಕೇಳಿ ಅಭಿಮಾನಿಗಳು ಆಶ್ಚರ್ಯಚಕಿತರಾಗಿದ್ದಾರೆ. ಸೋಮವಾರ ಬಿಗ್‌ಬಾಸ್ ಮನೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲು ಸಿದ್ಧವಾಗಿರುವ 'ಪವಿತ್ರ ಬಂಧನ' ಸೀರಿಯಲ್ ಕಲಾವಿದರು ಆಗಮಿಸಿದ್ದರು. ಇದೇ ಸೀಸನ್ 12ರ ಸ್ಪರ್ಧಿಯಾಗಿದ್ದ ಸೂರಜ್ ಈ ಧಾರಾವಾಹಿಯ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿದ್ದರು.
ಯಾರಿಗೆ ಯಾರ ಜೊತೆಯಲ್ಲಿ ಪವಿತ್ರ ಬಂಧನ?
ಪವಿತ್ರ ಬಂಧನದಲ್ಲಿ ದೇವದತ್ ದೇಶಮುಖ್ ಪಾತ್ರದಲ್ಲಿ ಸೂರಜ್ ನಟನೆ ಮಾಡುತ್ತಿದ್ದರು. ತನ್ನ ಸೀರಿಯಲ್ ಕಲಾವಿದರೊಂದಿಗೆ ನಿಮಗೆ ಈ ಮನೆಯಲ್ಲಿ ಯಾರಿಗೆ ಯಾರ ಜೊತೆಯಲ್ಲಿ ಪವಿತ್ರ ಬಂಧನವಿದೆ ಎಂದು ಕೇಳುತ್ತಾರೆ. ನನಗೆ ಫ್ರೆಂಡ್ ಆಗಿ ಗಿಲ್ಲಿ ನಟ ಸಿಕ್ಕರು ಎಂದು ರಕ್ಷಿತಾ ಹೇಳುತ್ತಾರೆ. ಹಾಗೆಯೇ ರಘು ಮತ್ತು ಕಾವ್ಯಾ ಸಹ ಗಿಲ್ಲಿಯೊಂದಿಗೆ ಪವಿತ್ರವಾದ ಬಂಧನ ಉಂಟಾಗಿದೆ ಅಂತ ಹೇಳಿದರು.
ಕಾವ್ಯಾ ಹೆಸರು ಹೇಳದ ಗಿಲ್ಲಿ
ನಾನು ಮನೆಯಲ್ಲಿ ಊಟ ಮಾಡಿರುವ ತಟ್ಟೆಯನ್ನು ಸಹ ಎತ್ತಿಡದಂತಹ ವ್ಯಕ್ತಿ. ಈ ಮನೆಯಲ್ಲಿ ರಕ್ಷಿತಾ ನನಗೆ ಊಟದ ವಿಷಯದಲ್ಲಿ ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳಿದ್ದಾಳೆ. ಪ್ರತಿಯೊಂದು ವಿಷಯದಲ್ಲಿ ಕೇರ್ ಮಾಡುವ ರಕ್ಷಿತಾಳಲ್ಲಿ ನನ್ನ ತಾಯಿಯನ್ನು ಕಾಣುತ್ತಿದ್ದೇನೆ. ಈ ಮನೆಯಲ್ಲಿ ರಕ್ಷಿತಾ ಮತ್ತು ನನ್ನ ನಡುವೆ ಪವಿತ್ರ ಬಂಧನ ಉಂಟಾಗಿದೆ ಎಂದು ಗಿಲ್ಲಿ ನಟ ವಿವರಿಸಿದರು.
ಈ ಮಾತುಗಳನ್ನು ಹೇಳುವ ಸಂದರ್ಭದಲ್ಲಿ ಗಿಲ್ಲಿ ನಟ ತುಂಬಾನೇ ಸೀರಿಯಸ್ ಮತ್ತು ಭಾವುಕರಾಗಿರೋದನ್ನು ಅಭಿಮಾನಿಗಳು ಸೂಕ್ಷ್ಮವಾಗಿ ಗಮನಿಸಿದ್ದಾರೆ.
ಇದನ್ನೂ ಓದಿ: ನಮ್ಮಿಬ್ಬರ ಪ್ರೀತಿ ರಿಯಾಲಿಟಿ ಶೋಗೆ ಸೀಮಿತವಾಗಿತ್ತು; ಸತ್ಯ ಒಪ್ಪಿಕೊಂಡ ಕಾಮಿಡಿಯನ್
ಎಲ್ಲದಕ್ಕೂ ರಕ್ಷಿತಾಳೇ ಬೇಕು!
ಇನ್ನು ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿ ನಟ ಅವರಿಗೆ ಒಂದು ಗ್ಲಾಸ್ ನೀರು ಬೇಕಿದ್ರೂ ರಕ್ಷಿತಾ ಅವರನ್ನೇ ಕೇಳ್ತಾರೆ. ಆಮ್ಲೆಟ್ ಮಾಡಿಕೊಡುವಂತೆಯೂ ರಕ್ಷಿತಾ ಬಳಿಯೇ ಗಿಲ್ಲಿ ಕೇಳುತ್ತಾರೆ. ಕಳೆದ ವಾರ ಟಾಸ್ಕ್‌ನಲ್ಲಿ ಸುಸ್ತಾಗಿದ್ದ ಗಿಲ್ಲಿಗೇ ರಕ್ಷಿತಾ ಅವರೇ ಲೆಮೆನ್ ಜ್ಯೂಸ್ ಮಾಡಿಕೊಟ್ಟಿದ್ರು. ಹಾಗೆಯೇ ಗಿಲ್ಲಿಯ ಬಹುತೇಕ ಕೆಲಸಗಳನ್ನು ರಕ್ಷಿತಾ ಅವರೇ ಮಾಡಿರುತ್ತಾರೆ.
ಇದನ್ನೂ ಓದಿ: BBK 12: ಬಿಡುಗಡೆಯಾದ ಬಿಗ್‌ಬಾಸ್ ಪ್ರೋಮೋಗೆ 'ಇದಲ್ಲ, ಅದು' ಬೇಕೆಂದ ಫ್ಯಾನ್ಸ್; ಅಂತಿಮ ಸುತ್ತಿನ ಟ್ವಿಸ್ಟ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

