- Home
- Entertainment
- TV Talk
- BBK 12: ಹೇಳಿದ್ದು ಸುಳ್ಳಾಯ್ತು, ಅಂದ್ಕೊಂಡಿದ್ದು ನಿಜ ಆಗಲಿ: ಈಡೇರುತ್ತಾ ಅಭಿಮಾನಿಗಳ ಆಸೆ? ಸುದೀಪ್ ಏನ್ ಮಾಡ್ತಾರೆ?
BBK 12: ಹೇಳಿದ್ದು ಸುಳ್ಳಾಯ್ತು, ಅಂದ್ಕೊಂಡಿದ್ದು ನಿಜ ಆಗಲಿ: ಈಡೇರುತ್ತಾ ಅಭಿಮಾನಿಗಳ ಆಸೆ? ಸುದೀಪ್ ಏನ್ ಮಾಡ್ತಾರೆ?
ಬಿಗ್‌ಬಾಸ್ ಸೀಸನ್ 12ರ 15ನೇ ವಾರದಲ್ಲಿ ಸ್ಪರ್ಧಿಗಳು ತಮ್ಮ ನೂರರಷ್ಟು ಶಕ್ತಿಯನ್ನು ಹಾಕಿ ಆಟದಲ್ಲಿ ಭಾಗವಹಿಸುತ್ತಿದ್ದಾರೆ. ಏನೇ ಆಗಲಿ ಫಿನಾಲೆ (Bigg Boss Finale) ವಾರಕ್ಕೆ ತಲಪುವ ಗುರಿಯೊಂದಿಗೆ ಎಲ್ಲಿಯೂ ತಪ್ಪುಗಳನ್ನ ಮಾಡಿಕೊಳ್ಳದೇ ಅತ್ಯಂತ ಎಚ್ಚರಿಕೆಯಿಂದ ಆಡುತ್ತಿದ್ದಾರೆ.

ಈ ವಾರದ ಆಟ
ಬಿಗ್‌ಬಾಸ್ ಸೀಸನ್ 12ರ (Bigg Boss Kannada 12) 15ನೇ ವಾರದಲ್ಲಿ ಎಲ್ಲಾ ಸ್ಪರ್ಧಿಗಳು ತಮ್ಮ ನೂರರಷ್ಟು ಶಕ್ತಿಯನ್ನು ಹಾಕಿ ಆಟದಲ್ಲಿ ಭಾಗವಹಿಸುತ್ತಿದ್ದಾರೆ. ಏನೇ ಆಗಲಿ ಫಿನಾಲೆ (Bigg Boss Finale) ವಾರಕ್ಕೆ ತಲಪುವ ಗುರಿಯೊಂದಿಗೆ ಎಲ್ಲಿಯೂ ತಪ್ಪುಗಳನ್ನ ಮಾಡಿಕೊಳ್ಳದೇ ಅತ್ಯಂತ ಎಚ್ಚರಿಕೆಯಿಂದ ಆಡುತ್ತಿದ್ದಾರೆ. ಈ ವಾರದ ಆಟ ನೋಡುತ್ತಿರುವ ವೀಕ್ಷಕರು, ಹೇಳಿದ್ದು ಸುಳ್ಳಾಯ್ತು, ಅಂದ್ಕೊಂಡಿದ್ದು ನಿಜ ಆಗಲಿ ಎಂದು ಬಯಸುತ್ತಿದ್ದಾರೆ.
ಕಿಚ್ಚನ ಚಪ್ಪಾಳೆ
ಹೌದು, ಬಿಗ್‌ಬಾಸ್ ಮನೆಯಲ್ಲಿರುವಾಗ ಕ್ಯಾಪ್ಟನ್ ಆಗುವುದು ಮತ್ತು ವಾರಂತ್ಯದ ಸಂಚಿಕೆಯಲ್ಲಿ ಸುದೀಪ್ ಅವರಿಂದ ಕಿಚ್ಚನ ಚಪ್ಪಾಳೆ ಪಡೆದುಕೊಳ್ಳುವುದು ಅತ್ಯಂತ ಮುಖ್ಯವಾಗಿರುತ್ತದೆ. ಇದುವರೆಗೂ ಕೇವಲ ಗಿಲ್ಲಿ ನಟ, ರಕ್ಷಿತಾ ಶೆಟ್ಟಿ, ಧನುಷ್ ಮತ್ತು ರಘು ಮಾತ್ರ ಕಿಚ್ಚನ ಚಪ್ಪಾಳೆ ಪಡೆದುಕೊಂಡಿದ್ದಾರೆ.
ಸೀಸನ್ 12 ಕೊನೆಯ ಪಂಚಾಯ್ತಿ
ಈ ವಾರದ ಪಂಚಾಯ್ತಿ ಸೀಸನ್ 12 ಕೊನೆಯ ಪಂಚಾಯ್ತಿ ಆಗಿರಲಿದೆ. ತಮ್ಮ ನೆಚ್ಚಿನ ಸ್ಪರ್ಧಿಗೆ ಕಿಚ್ಚನ ಚಪ್ಪಾಳೆ ಸಿಗಬೇಕೆಂದು ಅಭಿಮಾನಿಗಳು ಮನವಿ ಮಾಡಿಕೊಳ್ಳುತ್ತಿದ್ದಾರೆ. ಅಭಿಮಾನಿಗಳು ಮಾಡಿಕೊಳ್ಳುತ್ತಿರುವ ಮನವಿ ಏನು ಗೊತ್ತಾ?
ಸ್ಪರ್ಧಿ ಅಶ್ವಿನಿ ಗೌಡ
ಸ್ಪರ್ಧಿ ಅಶ್ವಿನಿ ಗೌಡ ಮನೆಯಲ್ಲಿ ಭಾಗಶಃ ಒಂಟಿಯಾಗಿದ್ದು, ತಮ್ಮ ಆಟವನ್ನು ಆಡುತ್ತಿದ್ದಾರೆ. ಆದ್ರೂ ಗಿಲ್ಲಿ ನಟ ಮಾತ್ರ ಸಮಯ ಸಿಕ್ಕಾಗೆಲ್ಲಾ ಅಜ್ಜಿ, ಹಲ್ಲುಸೆಟ್, ಕಿತಾಪತಿ ಹೆಂಗಸು ಎಂಬಿತ್ಯಾದಿ ಪದಗಳಿಂದ ನೋಯಿಸುವ ಕೆಲಸ ಮಾಡುತ್ತಿರುತ್ತಾರೆ. ಅಶ್ವಿನಿ ಅವರ ವಯಸ್ಸನ್ನು ಉಲ್ಲಂಘಿಸಿಯೇ ಗಿಲ್ಲಿ ಟಾಂಟ್ ಕೊಡುತ್ತಿರುತ್ತಾರೆ. ಇದೀಗ ಗಿಲ್ಲಿಯ ಈ ಎಲ್ಲಾ ಮಾತುಗಳಿಗೆ ಅಶ್ವಿನಿ ಗೌಡ ಟಕ್ಕರ್ ಕೊಟ್ಟಿದ್ದಾರೆ.
ಸಾಲು ಸಾಲು ಟಾಸ್ಕ್
ಈ ವಾರದ ಆರಂಭದಿಂದಲೂ ಅಶ್ವಿನಿ ಗೌಡ ಸಾಲು ಸಾಲು ಟಾಸ್ಕ್ ಆಡುತ್ತಾ ಗೆಲುವನ್ನ ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ಕಂಬ ಹಿಡಿದು ನಿಲ್ಲುವ ಟಾಸ್ಕ್‌ನಲ್ಲಂತೂ ಎದುರಾಳಿಗಳನ್ನೇ ಅಶ್ವಿನಿ ಗೌಡ ಚಕಿತಗೊಳಿಸಿದ್ದರು. ಆಟಗಳಲ್ಲಿ ದೈಹಿಕವಾಗಿ ಪ್ರಬಲವಾಗಿರುವ ರಾಶಿಕಾ ಮತ್ತು ರಘು ಅವರೇ ಅಶ್ವಿನಿ ಆಟ ನೋಡಿ ಮೂಗಿನ ಮೇಲೆ ಬೆರಳಿಟ್ಟುಕೊಂಡು ಗುಣಗಾನ ಮಾಡಿದ್ದರು. ಆಟದಲ್ಲಿ ಸೋತರು ಅಶ್ವಿನಿ ಗೌಡ ಅವರ ಆಟಕ್ಕೆ ಎಲ್ಲಾ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿ
ವಯಸ್ಸು ಮತ್ತು ನಿರೀಕ್ಷೆಗೂ ಮೀರಿದ ಪ್ರದರ್ಶನ
ವಯಸ್ಸು ಮತ್ತು ನಿರೀಕ್ಷೆಗೂ ಮೀರಿದ ಪ್ರದರ್ಶನವನ್ನು ಅಶ್ವಿನಿ ಗೌಡ ನೀಡುತ್ತಿದ್ದಾರೆ. ಹಾಗೆಯೇ ಸೋಶಿಯಲ್ ಮೀಡಿಯಾದಲ್ಲಿ ಅಶ್ವಿನಿ ಗೌಡ ಅವರ ಕೈ ಮೇಲೆ ಗಾಯಗಳಾಗಿರುವ ಫೋಟೋಗಳು ವೈರಲ್ ಆಗುತ್ತಿವೆ. ಧ್ರುವಂತ್ ಹೊರತುಪಡಿಸಿದ್ರೆ ಮನೆ ಮಂದಿಯೆಲ್ಲಾ ಅಶ್ವಿನಿ ಗೌಡ ಅವರನ್ನು ಮಾನಸಿಕವಾಗಿ ಕುಂದಿಸುವ ಕೆಲಸ ಮಾಡುತ್ತಿದ್ದರೂ, ಇದ್ಯಾವುದಕ್ಕೂ ಕುಗ್ಗದೇ ಜಗ್ಗದೇ ಗಟ್ಟಿಯಾಗಿ ನಿಂತಿದ್ದಾರೆ.
ಇದನ್ನೂ ಓದಿ: BBK 12: ಸೀಸನ್ 12ರ ಬಿಗ್‌ಬಾಸ್ ಸ್ಪರ್ಧಿಗಳಿಗೆ ಸಿಕ್ತು ಆಮಂತ್ರಣ ಪತ್ರಿಕೆ; ಮದುವೆಗೆ ಹೋಗ್ತಾರಾ?
ಅಭಿಮಾನಿಗಳ ಆಸೆಯನ್ನು ಸುದೀಪ್ ಈಡೇರಿಸುತ್ತಾರಾ?
ಅಶ್ವಿನಿ ಗೌಡ ಅವರಿಗೆ ಕ್ಯಾಪ್ಟನ್ ಆಗೋದಕ್ಕೆ ಆಗಿಲ್ಲ ಎಂಬದನ್ನೇ ದಾಳವಾಗಿ ಗಿಲ್ಲಿ ನಟ, ಕಾವ್ಯಾ, ರಾಶಿಕಾ ಬಳಸಿಕೊಳ್ಳುತ್ತಿದ್ದಾರೆ. ಈಗ ಆಟದಲ್ಲಿ ತಾವು ಹೇಗೆ ಎಂಬುದನ್ನು ಅಶ್ವಿನಿ ಗೌಡ ಸಾಬೀತು ಮಾಡಿಕೊಂಡಿದ್ದಾರೆ. ಈ ಎಲ್ಲಾ ಕಾರಣದಿಂದ ಕಿಚ್ಚನ ಚಪ್ಪಾಳೆ ಪಡೆದುಕೊಳ್ಳಲು ಅಶ್ವಿನಿ ಗೌಡ ಅರ್ಹ ಸ್ಪರ್ಧಿಯಾಗಿದ್ದಾರೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಅಭಿಮಾನಿಗಳ ಆಸೆಯನ್ನು ಸುದೀಪ್ ಈಡೇರಿಸುತ್ತಾರಾ ಎಂಬುವುದು ವೀಕೆಂಡ್‌ನಲ್ಲಿ ತಿಳಿಯಲಿದೆ.
ಇದನ್ನೂ ಓದಿ: BBK 12: ಬಿಗ್‌ಬಾಸ್ ಮಿಡ್‌ವೀಕ್ ಎಲಿಮಿನೇಷನ್ ಟ್ವಿಸ್ಟ್: ಆಟದಿಂದ ಹೊರಬಿದ್ದ ಪ್ರಬಲ ಸ್ಪರ್ಧಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

