ನಮ್ಮಿಬ್ಬರ ಪ್ರೀತಿ ರಿಯಾಲಿಟಿ ಶೋಗೆ ಸೀಮಿತವಾಗಿತ್ತು; ಸತ್ಯ ಒಪ್ಪಿಕೊಂಡ ಕಾಮಿಡಿಯನ್
ಜಬರ್ದಸ್ತ್ ಶೋ ಮೂಲಕ ಜನಪ್ರಿಯರಾದ ಸುಧೀರ್ ಮತ್ತು ರಶ್ಮಿ ಅವರ ಆನ್-ಸ್ಕ್ರೀನ್ ಕೆಮಿಸ್ಟ್ರಿ ಪ್ರೇಕ್ಷಕರನ್ನು ಮೋಡಿ ಮಾಡಿತ್ತು. ಇದೀಗ, ಸುಧೀರ್ ಅವರು ತಮ್ಮಿಬ್ಬರ ನಡುವಿನ ಲವ್ ಟ್ರ್ಯಾಕ್ ಕೇವಲ ಶೋಗಾಗಿ ಮಾತ್ರ ಸೀಮಿತವಾಗಿತ್ತು ಎಂದು ಸ್ಪಷ್ಟಪಡಿಸುವ ಮೂಲಕ ವರ್ಷಗಳ ಊಹಾಪೋಹಕ್ಕೆ ತೆರೆ ಎಳೆದಿದ್ದಾರೆ.

ಸುಧೀರ್-ರಶ್ಮಿ ಲವ್ ಟ್ರ್ಯಾಕ್
ಜಬರ್ದಸ್ತ್ ಶೋನಿಂದ ಹಲವರು ಸ್ಟಾರ್ ಆಗಿದ್ದಾರೆ. ಸುಧೀರ್-ರಶ್ಮಿ ಲವ್ ಟ್ರ್ಯಾಕ್ ಶೋಗೆ ದೊಡ್ಡ ಕ್ರೇಜ್ ತಂದುಕೊಟ್ಟಿತ್ತು. ಅವರಿಬ್ಬರು ದೂರವಾದ ಮೇಲೆ ಶೋನ ಟಿಆರ್‌ಪಿ ಕೂಡ ಕಡಿಮೆಯಾಗಿದೆ ಎಂದು ಹೇಳಲಾಗುತ್ತಿದೆ.
ರಶ್ಮಿ ಮತ್ತು ಸುಧೀರ್ ಕೆಮಿಸ್ಟ್ರಿ
ರಶ್ಮಿ ಮತ್ತು ಸುಧೀರ್ ಪ್ರತಿ ಸ್ಕಿಟ್‌ನಲ್ಲೂ ತಮ್ಮ ಕೆಮಿಸ್ಟ್ರಿಯಿಂದ ಪ್ರೇಕ್ಷಕರ ಗಮನ ಸೆಳೆದಿದ್ದರು. ಇವರಿಬ್ಬರ ಲವ್ ಟ್ರ್ಯಾಕ್ ನಿಜವೆಂದೇ ಎಲ್ಲರೂ ನಂಬಿದ್ದರು. ಇದರಿಂದಾಗಿ ಇವರಿಬ್ಬರಿಗೂ ದೊಡ್ಡ ಅಭಿಮಾನಿ ಬಳಗವೇ ಸೃಷ್ಟಿಯಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿಯೂ ರಶ್ಮಿ ಮತ್ತು ಸುಧೀರ್ ಜೊತೆಗಿನ ಕ್ಲಿಪ್‌ಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದವು.
ಜಬರ್ದಸ್ತ್ ಶೋ
ಮೂರು ವರ್ಷಗಳ ಹಿಂದೆ ಸುಧೀರ್ ಜಬರ್ದಸ್ತ್ ಶೋ ಬಿಟ್ಟಿದ್ದರು. ಈ ರಿಯಾಲಿಟಿ ಶೋ ಜೊತೆಯಲ್ಲಿಯೇ ರಶ್ಮಿ ಅವರಿಂದಲೂ ಸುಧೀರ್ ದೂರವಾಗಿದ್ದರು. ಅಂದಿನಿಂದ ಇಬ್ಬರು ಮತ್ತೆ ಒಂದಾಗಿಲ್ಲ. ರಶ್ಮಿ ಮತ್ತು ಸುಧೀರ್ ಅವರ ಪ್ರೀತಿ ನಿಜವೇ ಅಥವಾ ಶೋಗಾಗಿ ಮಾತ್ರವೇ ಎಂಬ ಸಸ್ಪೆನ್ಸ್ ಹಾಗೆಯೇ ಉಳಿದಿತ್ತು.
ಸುಧೀರ್ ಸ್ಪಷ್ಟನೆ
ರಶ್ಮಿ ಜೊತೆಗಿನ ಲವ್ ಸ್ಟೋರಿ ಮುಗಿದಿದೆ ಸುದೀರ್ ಸ್ಪಷ್ಟನೆ ನೀಡಿದ್ದಾರೆ. ತಮ್ಮ ನಡುವಿನ ಲವ್ ಟ್ರ್ಯಾಕ್ ಕೇವಲ ಶೋಗೆ ಮಾತ್ರ ಸೀಮಿತವಾಗಿತ್ತು ಎಂದು ಎಲ್ಲರ ಮುಂದೆ ಒಪ್ಪಿಕೊಂಡಿದ್ದಾರೆ. ತೆರೆಯ ಮೇಲೆ ಪ್ರೇಕ್ಷಕರನ್ನು ರಂಜಿಸವ ಉದ್ದೇಶದಿಂದ ತಮಾಷೆ ಮಾಡಲಾಗುತ್ತಿತ್ತು ಎಂದು ಸುಧೀರ್ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: BBK12: ರಕ್ಷಿತಾ ಹೇಳಿದ ಮೂರು ಬೇಡಿಕೆಗೆ ಕರುನಾಡಿನ ಜನತೆ ಫಿದಾ; ಇದು ಪ್ರಬುದ್ಧತೆ ಅಂದ್ರು!
ತಮಾಷೆಯ ವಿಡಿಯೋ
ಈ ಹಿಂದೆಯೂ ರಶ್ಮಿ ಮತ್ತು ಸುಧೀರ್ ಪ್ರತಿಕ್ರಿಯಿಸಿ, ತಾವು ಬೆಸ್ಟ್ ಫ್ರೆಂಡ್ಸ್ ಎಂದು ಹೇಳಿದ್ದರು. ತಮ್ಮ ಬಾಂಧವ್ಯ ತುಂಬಾ ವಿಶೇಷ ಎಂದಿದ್ದರು. ಈಗ ಸುಧೀರ್ ಕೂಡ ಅದೇ ಸ್ಪಷ್ಟನೆ ನೀಡಿದ್ದಾರೆ. ಒಟ್ಟಿನಲ್ಲಿ ಸುಧೀರ್ ಮತ್ತು ರಶ್ಮಿ ಲವ್ ಸ್ಟೋರಿ ಸಂಪೂರ್ಣವಾಗಿ ಮುಗಿದಿದೆ ಎಂಬುದು ಸ್ಪಷ್ಟವಾಗಿದೆ. ಆದ್ರೆ ಇಂದಿಗೂ ಇಬ್ಬರ ತಮಾಷೆಯ ವಿಡಿಯೋಗಳು ಮಾತ್ರ ವೈರಲ್ ಆಗುತ್ತಿರುತ್ತವೆ.
ಇದನ್ನೂ ಓದಿ: BBK 12: ಬಿಡುಗಡೆಯಾದ ಬಿಗ್‌ಬಾಸ್ ಪ್ರೋಮೋಗೆ 'ಇದಲ್ಲ, ಅದು' ಬೇಕೆಂದ ಫ್ಯಾನ್ಸ್; ಅಂತಿಮ ಸುತ್ತಿನ ಟ್ವಿಸ್ಟ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

