- Home
- Entertainment
- TV Talk
- BBK 12: ಬಿಡುಗಡೆಯಾದ ಬಿಗ್‌ಬಾಸ್ ಪ್ರೋಮೋಗೆ 'ಇದಲ್ಲ, ಅದು' ಬೇಕೆಂದ ಫ್ಯಾನ್ಸ್; ಅಂತಿಮ ಸುತ್ತಿನ ಟ್ವಿಸ್ಟ್
BBK 12: ಬಿಡುಗಡೆಯಾದ ಬಿಗ್‌ಬಾಸ್ ಪ್ರೋಮೋಗೆ 'ಇದಲ್ಲ, ಅದು' ಬೇಕೆಂದ ಫ್ಯಾನ್ಸ್; ಅಂತಿಮ ಸುತ್ತಿನ ಟ್ವಿಸ್ಟ್
ಬಿಗ್‌ಬಾಸ್ ಸೀಸನ್ 12ರ ಫಿನಾಲೆ ವಾರದಲ್ಲಿ ಸ್ಪರ್ಧಿಗಳು ತಮ್ಮ ಅಭಿಮಾನಿಗಳನ್ನು ಭೇಟಿಯಾಗಿದ್ದಾರೆ. ಈ ನಡುವೆ, ವೀಕ್ಷಕರು 'ಗಿಲ್ಲಿ' ನಟನ ಪರ ಧ್ವನಿ ಎತ್ತುತ್ತಿದ್ದರೆ, ಮತ್ತೊಂದೆಡೆ ಸಾಮಾನ್ಯ ಸ್ಪರ್ಧಿ ರಕ್ಷಿತಾ ಶೆಟ್ಟಿ ಅವರ ಜನಪರ ಕಾಳಜಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಹೊರಗಿನ ಜಗತ್ತು
ಬಿಗ್‌ಬಾಸ್ ಸೀಸನ್ 12ರ ಫಿನಾಲೆ ವಾರದಲ್ಲಿ ಒಟ್ಟು ಏಳು ಸ್ಪರ್ಧಿಗಳಿದ್ದು, ಕೊನೆ ಹಂತಕ್ಕೆ ಬರುತ್ತಿದ್ದಂತೆ ಜನರ ಅಭಿಪ್ರಾಯಗಳಲ್ಲಿಯೂ ಸಣ್ಣ ಬದಲಾವಣೆಗಳು ಕಂಡು ಬರುತ್ತಿವೆ. ಕಳೆದ ನೂರು ದಿನಗಳಿಂದ ಹೊರಗಿನ ಜಗತ್ತು ನೋಡದ ಸ್ಪರ್ಧಿಗಳು ಇವತ್ತು ತಮ್ಮ ಅಭಿಮಾನಿಗಳನ್ನು ನೇರವಾಗಿ ಭೇಟಿಯಾಗುವ ಅವಕಾಶವನ್ನು ನೀಡಲಾಗಿದೆ.
ಧ್ರುವಂತ್, ಧನುಷ್ ಮತ್ತು ಕಾವ್ಯಾ
ಗಾರ್ಡನ್ ಏರಿಯಾದಲ್ಲಿ ಸುಂದರವಾದ ವೇದಿಕೆ ನಿರ್ಮಿಸಲಾಗಿದ್ದು, ಇಲ್ಲಿಗೆ ಬಂದು ಸ್ಪರ್ಧಿಗಳು ಬಂದಿರುವ ಅಭಿಮಾನಿಗಳೊಂದಿಗೆ ಮುಕ್ತವಾಗಿ ಮಾತನಾಡಬಹುದು. ಇಂದಿನ ಪ್ರೋಮೋದಲ್ಲಿ ಧ್ರುವಂತ್, ಧನುಷ್ ಮತ್ತು ಕಾವ್ಯಾ ಅವರು ಅಭಿಮಾನಿಗಳ ಜೊತೆಗಿನ ಮಾತುಕತೆಯನ್ನು ತೋರಿಸಲಾಗಿದೆ.
ಗಿಲ್ಲಿ ಎಂಟ್ರಿ
ಈ ಪ್ರೋಮೋ ನೋಡಿದ ವೀಕ್ಷಕರು, ನಮಗೆ ಇದಲ್ಲ ಅದು ಬೇಕೆಂದು ಕಮೆಂಟ್ ಮಾಡುತ್ತಿದ್ದಾರೆ. ನಮಗೆ ಗಿಲ್ಲಿ ನಟ ಅವರ ಎಂಟ್ರಿ ಹೇಗಿರುತ್ತೆ ಎಂಬುದನ್ನು ನೋಡುವ ಆಸೆಯಾಗಿದೆ. ಈ ಬಾರಿ ಗಿಲ್ಲಿಯೇ ಕಿಂಗ್, ಈ ವಾರದಲ್ಲಿ ಹೆಚ್ಚಾಗಿ ಗಿಲ್ಲಿಯನ್ನು ತೋರಿಸುತ್ತಿಲ್ಲ ಎಂದು ಕಮೆಂಟ್ ಮಾಡಿದ್ದಾರೆ.
ವೀಕ್ಷಕರಿಂದ ಮೆಚ್ಚುಗೆ
ಮತ್ತೊಂದೆಡೆ ರಕ್ಷಿತಾ ಶೆಟ್ಟಿ ಅವರ ಆಟದ ಬಗ್ಗೆಯೂ ವೀಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಯಾವುದೇ ಸೀರಿಯಲ್ ಸಿನಿಮಾ ರಿಯಾಲಿಟಿ ಶೋಯಿಂದ ಬಂದಿಲ್ಲ. ಆದ್ರೂ ಅವರಿಗೆಲ್ಲ ಉರಿ ಬರುವ ಹಾಗೆ ನೇರವಾಗಿ ಟಕ್ಕರ್ ಕೊಟ್ಟುಕೊಂಡು ಬಂದಿರುವ ಸಾಮಾನ್ಯ ವ್ಯಕ್ತಿ ರಕ್ಷಿತಾ ಗೆಲ್ಲಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜನರ ಕಷ್ಟವನ್ನು ಅರ್ಥ ಮಾಡಿಕೊಂಡಿರುವ ರಕ್ಷಿತಾ
ರಾಮ್ ಎಂಬವರು ಕಮೆಂಟ್ ಮಾಡಿ, ತಮ್ಮ ಆಸೆಯನ್ನು ಈಡೆರಿಸಿಕೊಳ್ಳುವವರ ಮಧ್ಯೆ ರಕ್ಷಿತಾ ಜನರ ಆಸೆಯನ್ನು ಈಡೆರಿಸುತ್ತಿದ್ದಾರೆ. ರಕ್ಷಿತಾ ಗೆ ಎಷ್ಟು ಒಳ್ಳೆಯ ಬುದ್ದಿ ನೋಡಿ ತನಗೋಸ್ಕರ ಏನು ಕೇಳದೆ ಕರಾವಳಿ ತೀರದ ಮೀನುಗಾರರ ಕಷ್ಷದ ಅನುಭವ ಹಂಚಿಕೊಳ್ಳಲು ಅವರು ಬಿಗ್‌ಬಾಸ್ ಮನೆಗೆ ಬರಬೇಕು. ಪಿಲಿಕುಳ ತಂಡದೊಂದಿಗೆ ಹುಲಿ ಡ್ಯಾನ್ಸ್ ಮಾಡಬೇಕು. ಕನ್ನಡ ನಾಟಕ ಮಾಡಬೇಕು. ಜನರ ಕಷ್ಟವನ್ನು ಅರ್ಥ ಮಾಡಿಕೊಂಡಿರುವ ರಕ್ಷಿತಾ ಗೆಲ್ಲಬೇಕೆಂದು ಕಮೆಂಟ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

